Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಕಾಶ ಪ್ರೀತಿ

ನನ್ನ ಮನಸ್ಸೆಲ್ಲ ತುಂಬಿತ್ತು ಕಗ್ಗತ್ತಲೆ
ಕಿರುನೋಟದಲ್ಲಿ ಕೆಣಕಿದಲು ಆ ಬಾಲೆ
ಪಿಸು ನಗೆಯಲ್ಲಿ ಹೆಬ್ಬಿಸಿದಲು ಅಲೆ

ಮೊಗ ಸಿರಿಯದು ಅದು ನೈದಿಲೆ
ವರ್ಣಿಸಲು ಪದಗಳಿಗೆ ಬಾರದು ಬೆಲೆ
ನಿನ್ನ ಕಂಡ ಕ್ಷಣವೇ ಮರೆಯಾದೆ ನನ್ನಲೆ

ನಿಜ ಪ್ರೇಮಿ ಆಗೊ ಆಸೆ ಆಗಲೆ
ಅಮರವಾದೆ ನಿನು ನನ್ನ ಮನದಲೆ
ಹೇಗೆ ಹಾಕಿದಿಯೊ ಮನಸ್ಸಿಗೆ ಬಲೆ
ತುಸು ನಗೆಯಲ್ಲೆ ಕೊಂದೆಯ ಒ ನನ್ನ ನಲ್ಲೆ

ನಿತ್ಯ ಕಳೆಯುವೆನೂ ನಿನ್ನ ಗುಗ್ಗಲೆ
ಭಾವನೆಗಳು ಮೂಡಿರುವವು ಕನಸ್ಸಿನಲೆ
ಬದುಕಿನ ಬವಣೆ ಅದು ನಿನ್ನ ನೆನಪಿನಲೆ

- Shivakumara S

18 Dec 2020, 09:59 pm

ಹೋಗವಲ್ಲೆ

ಓ ನನ್ನ ಮನದ ನಲ್ಲೆ
ಪ್ರೀತಿ ತುಂಬಿದ
ಹೃದಯ‌ ಬಿಟ್ಟು
ಹೊರಟಿರುವೆ ಎಲ್ಲಿಗೆ
ಬಿಟ್ಟಿರವಲ್ಲೇ ಬಿಟ್ಟಿರವಲ್ಲೆ
ನಿನ್ನ ಪ್ರೀತಿ ಪ್ರೇಮವ
ಬಿಟ್ಟು ಬದುಕಿರವಲ್ಲೆ
ನೀ ಎಲ್ಲಿಗೆ ನಡೆವಲ್ಲಿಗೆ
ನಡೆವಲ್ಲೆ ನಡೆವಲ್ಲೆ
ನಿನ್ನ ಹಿಂದೆ ಬಾರವಲ್ಲೆ
ನಗವಲ್ಲೇ ನಗವಲ್ಲೇ
ನನಿಷ್ಟಕೆ ನಾ ಅಳವಲ್ಲೇ
ಮನದ ಕಣ್ಣೀರು
ಕಡಲದರು ಕುರವಲ್ಲೇ
ಕುರವಲ್ಲೇ ನಿನ್ನ ಕಂಡು
ಕಣ್ಣೀರು ಹಾಕವಲ್ಲೆ
ಬಿಡವಲ್ಲೆ ಬಿಡವಲ್ಲೇ
ನಿನ್ನ ಪ್ರೀತಿಯ ಬಿಡವಲೇ
ಸಾಯವಲ್ಲೇ ಸಾಯವಲ್ಲೆ
ನಿನ್ನ ಮರೆತು ಸಾಯವಲ್ಲೆ
ನಾಗವಲ್ಲಿ ನಾಗವಲ್ಲಿ
ನೀನೇ ನನ್ನ ಹೂ ಮಲ್ಲಿ
ಬಾ ನಲ್ಲೆ ಬಾ ನಲ್ಲೆ
ನಿನ್ನ ಬಿಟ್ಟು ನಾ ಹೋಗವಲ್ಲೆ
**********ರಾಜು ಹಾಸನ**********

- ರಾಜು ಹಾಸನ

18 Dec 2020, 03:28 pm

ಸತ್ಯಕ್ಕೆ ಬೆಲೆ ಇಲ್ಲ

ದೇವರು ಇದ್ದಿದ್ದರೆ
ನಿನಗೆಕೆ ಬೇಕಿತ್ತು
ಸಂಸಾರದ ಹೊಣೆ
ದೇವರು ಸರ್ವಾಂತರ್ಯಾಮಿ
ಆಗಿದ್ದಾರೆ ನೀ ಏಕೆ ಸುತ್ತುತ್ತಿದೆ
ಆ ಕ್ಷೇತ್ರ ಈ ಕ್ಷೇತ್ರ ಪುಣ್ಯ ಕ್ಷೇತ್ರ
ದೇವರು ನಿನ್ನ ತಾನು ಮನ
ಧನ ಕಾಯುವುದೇ ಆಗಿದ್ದಾರೆ
ನೀನೇಕೆ ಕಾಯುತ್ತಿದೆ
ಗುಡಿಯ ಮೇಲೆ ಗುಡಿ ಕಟ್ಟಿ
ದೇವರ ಹುಂಡಿ
ಹಸಿದ ಹೊಟ್ಟೆಗೆ ಅನ್ನವ
ದೇವರೇ ದುಡಿದು
ಕೊಡುವುದಾದರೆ
ನೀನೇಕೆ ದುಡುಯುತ್ತಿದೆ
ಬಿಸಿಲು ಬೆಂಕಿ ಎನ್ನದೇ
ದೇವರೇ ಬಂದು ಕಾಯಿಲೆ
ಕಸಲೆಗೆ ಮದ್ದು ಕೊಡುವುದಾದರೆ
ಮದ್ದು ಚುಚ್ಚುಮದ್ದು
ಕೊಡುವ ವೈದ್ಯರು ಏಕೆ ಬೇಕಿತ್ತು
ಏನನ್ನು ಕೊಡದ ನೀಡದ
ಪರಿಹಾರಿಸದ ಕಲ್ಲನ್ನು ದೇವರೆಂದು
ಪೂಜಿಸುವುದು ಏತಕೆ
ಆರಾಧಿಸುವುದು ಏತಕೆ ಮೂಢರೇ

- ರಾಜು ಹಾಸನ

17 Dec 2020, 11:04 pm

ಲೇಖನಿ

ಮನುವಾದಿಗಳ
ಆಯುಧ ಕತ್ತಿ ಕೊಡ್ಲಿ
ದೊಣ್ಣೆಯಾದರೇ
ನನ್ನ ಆಯುಧ
ಒಂದೇ ಒಂದೇ
ಬಾಬಾ ಸಾಹೇಬರು
ಕೊಟ್ಟ ಓದು ಬರಹ
ಲೇಖನಿ ಲೇಖನಿ

ಮಾನುವಾದಿಗಳ
ಏಟು ಮೈಮೇಲಿನ
ಗಾಯ ಬಾಸುಂಡೆ
ಕ್ಷಣಿಕವಾದರೂ
ನಾ ಬರೆದ ಲೇಖನಿ
ಮನುವಾದಿಗಳ ಜೀವಕ್ಕೆ
ಉರುಳಗುವುದು
ಜೀವನ ಪರಿಯಂತಾ
*******ರಾಜು ಹಾಸನ*******

- ರಾಜು ಹಾಸನ

17 Dec 2020, 02:29 pm

ನಿಜಾಂಶ

ಸಂಸಾರದ ಗಾಳಿ
ಗಂಧವೇ ತಿಳಿಯದ
ಬಡತನದ ಕಷ್ಟ ಅರಿಯದ
ರೈತರ ಗೋಳು ಕೇಳದ
ಸಮಾಜಕ್ಕೆ ಉತ್ತಮ
ಸಂದೇಶ ಕೊಡುಗೆ ಕೊಡದ
ದ್ವೇಷ ಅಸೂಯೆಯ
ಬೇಧ ಭಾವದ ಬೆಂಕಿ ಹಚ್ಚಿ
ಸಮಾಜವನ್ನೇ ಕಿತ್ತು
ತಿನ್ನುವ ಗುಲಾಮರು
ತಮ್ಮ ತಮ್ಮ ಕಳ್ಳ
ಖಜಾನೆಯ ತುಂಬಿಸಿಕೊಂಡು
ತಮ್ಮ ತಮ್ಮವರ ಏಳಿಗೆಗಾಗಿ
ಪರರ ಅಪರಾಧಿ ಮಾಡುವ
ರಣ ಹದ್ದು ನಾಲಾಯಕ್
ಸ್ವಾರ್ಥದ ಜನ ನಾಯಕರು
ದೇಶದ ಜನರ ಕಷ್ಟ ಸುಖ
ನೋವು ನಲಿವು ಏಳು
ಬೀಳು ತಿಳಿಯಲು ಸಾಧ್ಯವೇ
ಎಲ್ಲಾ ಜನ ಸಮುದಾಯದ
ಏಳಿಗೆ ಬಯಸುವರೇ
ಸಹಿಸಿ ಬಾಳುವರೇ.....?
********ರಾಜು ಹಾಸನ*********

- ರಾಜು ಹಾಸನ

16 Dec 2020, 11:47 pm

ಶರಣಾಗುವೇ

ಮನುವಾದಿಗಳೆ
ಕೇಳಿರಿ ಕೇಳಿರಿ
ಆರ್ಥಿಕ ರಾಜಕೀಯ
ಸಾಮಾಜಿಕ ಧಾರ್ಮಿಕ
ನ್ಯಾಯ ನೀತಿ
ನಿಯಮ ಬಡವ ಬಲ್ಲಿದ
ಸ್ತ್ರೀ ಶೋಷಿತರ ಮಕ್ಕಳ
ಹಕ್ಕುಗಳಿಗಾಗಿ ರಕ್ಷಣೆಗಾಗಿ
ಸಮಾನತೆಗಾಗಿ
ತಮ್ಮ ಜೀವನವನ್ನೇ
ಮುಡಿಪಾಗಿಟ್ಟ
ಏಕೈಕ ವ್ಯಕ್ತಿ ಬಾಬಾ ಸಾಹೇಬ್
ಭೀಮ್ ರಾವ್ ರವರನ್ನು
ಬಿಟ್ಟು ಇಡೀ ಜಗತ್ತಿನಲ್ಲಿ
ಮತ್ತೊಬ್ಬರು ಇದ್ದರೆ ತಿಳಿಸಿ
ಇಂದೆ ಈ ಕ್ಷಣವೇ ನಾ ಶರಣಾಗುವೇ
*********ರಾಜು ಹಾಸನ*********

- ರಾಜು ಹಾಸನ

16 Dec 2020, 02:30 pm

ಖಚಿತ

ಜಾತಿ ಧರ್ಮದಲ್ಲಿ
ನೀ ಮೇಲಾದರೂ
ನಾ ಕೀಳದರು
ನೀ ತಿನ್ನಬೇಕು
ನಾ ದುಡಿದು
ಬೆಳೆದು ಕೊಟ್ಟ ಅನ್ನ
ಇಲ್ಲದಿದ್ದರೆ ನೀ
ಹಸಿವಿನಿಂದ
ಬಾಳಲಿ ಬಾಳಲಿ
ನರಳಿ ನರಳಿ
ಸಾಯುವುದು
ಖಚಿತ ನಿಶ್ಚಿತ
*******ರಾಜು ಹಾಸನ*******

- ರಾಜು ಹಾಸನ

15 Dec 2020, 11:45 pm

ಬಂಗಾರದ ಮನುಷ್ಯ

ನಾ ಹೆಚ್ಚು ನಾ ಹೆಚ್ಚು
ನಾ ಮೇಲು ಮೇಲೆಂದು
ಗುದ್ದಾಡಿ ಕಿತ್ತಾಡಿ
ಕಚ್ಚಾಡಿ ಹೊಡೆದಾಡುವ
ಜಾತಿ ಧರ್ಮದ
ಮನುವಾದಿಗಳೇ
ಕೇಳಿರಿ ಕೇಳಿರಿ
ನಿವು ಏನೇ ಎಷ್ಟೇ
ಅರುಚಡಿ ಕಿರುಚಾಡಿ
ಕೂಗಾಡಿ ಪರದಾಡಿ
ಪರರ ಕೈ ಕಾಲಿಗೆ ಬಿದ್ದು
ತಿಪ್ಪರಲಾಗ ಹೊಡೆದು
ಮುಗಿಲೆತ್ತರಕ್ಕೆ ಬೆಳೆದು
ದೊಡ್ಡವರಾದರು
ವಿಶ್ವವೇ ಮೆಚ್ಚಿ ಒಪ್ಪಿ
ಅಪ್ಪಿ ಕೊಂಡಾಡಿದ
ಜಗ ಮೆಚ್ಚಿದ ಮಗ
ಬಂಗಾರದ ಮನುಷ್ಯ
ಬಾಬಾ ಸಾಹೇಬರ
ಕಾಲ ಧೂಳಿಗು ಸಮವಿಲ್ಲಾ
ಮತಾಂಧ ಮೂಢ
ಮನುವಾದಿಗಳೆ
ತಗ್ಗಿಸಬೇಕು ತಲೆ
ಬಾಬಾಸಾಹೇಬರ ಪಾದಕ್ಕೆ
*********ರಾಜು ಹಾಸನ*********

- ರಾಜು ಹಾಸನ

15 Dec 2020, 11:34 pm

ಬೇಡ ಬೇಕು

ದೇವರನ್ನ ಧಿಕ್ಕರಿಸಿ
ಬಾಬಾ ಸಾಹೇಬರನ್ನ
ಆರಾಧಿಸಿ ಪೂಜಿಸಿ
ಪುಂಗಿ ಪುರಾಣ
ಗ್ರಂಥ ಬೇಡ
ಸಂವಿಧಾನ ಗ್ರಂಥ
ಒಂದೇ ಸಾಕು
ಸಂವಿಧಾನ ಬೆಳೆಸಿ
ಜನರನ್ನ ಉಳಿಸಿ
ಜಾತಿ ಧರ್ಮವ ಕೊಂದು
ಜನರನ್ನ ರಕ್ಷಿಸಿ
ಮೂಢ ನಂಬಿಕೆಯ ಒದ್ದು
ನ್ಯಾಯ ನೀತಿಯ
ಒಪ್ಪಿ ಅಪ್ಪಿಕೊ

ಜಾತಿ ಧರ್ಮವ
ದ್ವೇಷಿಸು ಶಿಕ್ಷಿಸು
ಜನರ ಜನರನ್ನ
ಗೌರವಿಸು ಪ್ರೀತಿಸು
ಅಂಧ ಭಕ್ತಿ ಕಡೆಗಣಿಸಿ
ಮಾನವ ಭಕ್ತಿ ಪರಿಗಣಿಸಿ
ಆಚಾರ ತಿರಸ್ಕರಿಸಿ
ವಿಚಾರ ಸ್ವೀಕರಿಸಿ
ಮೇಲು ಕೀಳು ಬೇಡ
ಜಾತಿ ಭೇದ ಬೇಡ
ಎಲ್ಲಾರು ಒಂದೇ
ಎಂದು ಬದುಕಿ ಬಾಳಿ

- ರಾಜು ಹಾಸನ

15 Dec 2020, 09:33 am

ದೇಶ ಭಕ್ತಿ

ದೇಶ ಭಕ್ತಿ
ದೇಶ ಭಕ್ತಿ
ಜನರ ಜನರ
ಹೋಡೆದಾಳುವ
ದ್ವೇಷ ಭಕ್ತಿ
ದೇಶವನ್ನೇ ಕೊಳ್ಳೆ
ಹೊಡೆಯುವ
ಕಳ್ಳ ಖದೀಮರ
ಅಂಧ ಭಕ್ತಿ
ಜನರ ಜನರ
ನಡುವೇ
ಜಾತಿ ಧರ್ಮದ
ಬೆಂಕಿ ಹಚ್ಚಿ
ತಮ್ಮ ತಮ್ಮ ಬೆಳೆ
ಬೇಯಿಸಿಕೊಳ್ಳುವ
ಜನ ನಾಯಕರ
ಬೂಟು
ಬೂಟಾಟಿಕೆ ಭಕ್ತಿ
ಜಾತಿ ಧರ್ಮವ
ಎತ್ತಿ ಕಟ್ಟಿ ದೇಶವನ್ನೇ
ಅಲ್ಲೋಲ
ಕಲ್ಲೋಲ ಮಾಡಿ
ಸಮಾಜವನ್ನೆ
ಭುಗಿಲೆಬ್ಬಿಸುವ
ದುಷ್ಟ ಜನರ
ದುಷ್ಟ ಭಕ್ತಿ

- ರಾಜು ಹಾಸನ

14 Dec 2020, 09:54 pm