Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಳ್ಳಿಚೆಲುವೆ

ಮುಂಜಾನೆ ಮಬ್ಬಿನಲಿ
ಇಬ್ಬನಿಯ ರತ್ನಗಂಬಳಿಯಾಸಿನಲಿ
ಹಾಲ್ಗನ್ನೆಯ ನಿಷ್ಕಲ್ಮಶೆ ಮುಗುಳ್ನಗುತ
ಬುಟ್ಟಿಯ ತಾನೊತ್ತು ನಡೆದುಬರುತ್ತಿರಲು
ಮನಸೋತ ಕಬ್ಮೇಘನು
ನಿದ್ರಾರತಿಯ ಸೆರಗಿನಿಂದ ಕೆಮ್ಮೊಗನ ಹೊರದೂಡಿಹನು
ಹಳ್ಳಿ ಹೂವಿಗೆ
ದಾರಿಬೆಳಕಾಗಲು
ಕಬ್ಮೇಘನು ಸ್ನೇಹ ಅಣತಿಯನ್ನ ಶಿರಸಾವಹಿಸಿ
ಗಿರಿ ಶಿಖರಗಳನ್ನೇರಿ
ಹೊನ್ಬೆಳಕು ಚಲ್ಲುತಿಹನು ನೇಸರನು (ಕೆಮ್ಮೊಗ) ಹಳ್ಳಿ ಮಿಂಚುಳ್ಳಿ ಯ ಬುಟ್ಟಯನ್ನೇರಿ
ದಿಗಂತಗಳಾಚೆಗುಾ ಮೀರಿ
ರೈತನ ಬದುಕನ್ನ ಅಸನಾಗಿಸಲು

- HarishKumarm

14 Dec 2020, 07:13 pm

ಕುತಂತ್ರ

ಎಚ್ಚರ ಎಚ್ಚರ
‌‌ ಎಚ್ಚರವಿರಲಿ
ಮೈ ಮರೆತು
ಮಲಗಬೇಡಿ
ಕುರಬೇಡಿ
ಮನುವಾದಿಗಳ
ಷಡ್ಯಂತ್ರವಿದೆ
ಜಾತಿ ಧರ್ಮದ
ಕುತಂತ್ರವಿದೆ
ದೀನ ದಲಿತರ
ಬಗ್ಗುಬಡಿಯುವ
ಹುನ್ನಾರವಿದೆ

ಏಳಿರಿ ಏಳಿರಿ
ಎದ್ದೇಳಿರಿ
ನಿಲ್ಲಿರಿ ನಿಲ್ಲಿರಿ
ಮೈ ಕೊಡವಿ
ಎದ್ದು ನಿಲ್ಲಿರಿ
ಹೆದರಬೇಡಿ
ಭಯಪಡಬೇಡಿ
ನಿಟ್ಟುಸಿರು ಬಿಡಬೇಡಿ
ಮನುವಾದಿಗಳ
ದಂಡು ದಂಡು
ದಂಡು ದಾಳಿಯೇ
ಬಂದರು ಬಗ್ಗಬೆಡಿ
ಜಗ್ಗಬೇಡಿ ಕುಗ್ಗಬೆಡಿ
ಚಿಂತಿಸಬೇಡ

ನಿನ್ನೊಂದಿಗೆ
ನಿಮ್ಮೊಂದಿಗೆ
ಬಾಬಾ ಸಾಹೇಬರ
ಬಲ ಛಲವಿದೆ
ಸಂವಿಧಾನದ
ಬೆಳಕಿದೆ
ಆರ್ಭಟಿಸು
ಆರ್ಭಟಿಸಿ
ಘರ್ಜಸಿ
ಮುನ್ನುಗ್ಗಿ ನಡೆ
ಧೂಳಿಪಟವಾಗುವುದು
ಮನುವಾದಿಗಳ ಪಡೆ

- ರಾಜು ಹಾಸನ

14 Dec 2020, 02:24 pm

ಸಾಧನೆ

ತೆಗಳಿಕೆಗೆ
ಒಳಗಾಗಿ
ತಗ್ಗಿ ಕುಗ್ಗಿ
ಕುರಬೇಡ
ನಡೆ ನಡೆ
ಸಾಧನೆಯ
ಮೆಟ್ಟಿ ನಡೆ
ಓಡೋಡಿ
ಬರುವುದು
ಹೊಗಳಿಕೆಯ
ಹೂವು ಮಾಲೆ
ನಿನ್ನ ಹಿಂದೆ ಹಿಂದೆ
****ರಾಜು ಹಾಸನ****

- ರಾಜು ಹಾಸನ

14 Dec 2020, 12:07 pm

ದಾರಿ

ಕಷ್ಟವೇ ಇರಲಿ
ಸುಖವೇ ಇರಲಿ
ಹಸಿವೇ ಇರಲಿ
ಬಡತನವೇ ಇರಲಿ
ಗುರಿ ಮುಟ್ಟುವ
ಛಲ ನಿನ್ನಲ್ಲಿರಲಿ
ಯಾರೇ ಏನೇ
ಅಡ್ಡಡ್ಡ ಉದ್ದುದ್ದ
ಅಡ್ಡ ಬಂದರು
ಮುನ್ನುಗ್ಗಿ ನಡೆ
ಬದಿಲಿಸಬೇಡ
ನಿನ್ನ ನಡೆ ನುಡಿ
ಗುರಿ ಮುಟ್ಟುವ
ದಾರಿ ಒಂದೇ ಆಗಿರಲಿ
******ರಾಜು ಹಾಸನ******

- ರಾಜು ಹಾಸನ

14 Dec 2020, 08:48 am

ನನ್ನ ಒಡೆಯ

ತಂದೆ ತಾಯಿಗೆ
ಅನ್ನ ಕೊಡದ ಮಕ್ಕಳು
ಜನರ ಕಷ್ಟ
ಆಲಿಸಿದ ನಾಯಕರು
ಇದ್ದರೂ ಒಂದೇ
ಮಣ್ಣಲ್ಲಿ ಮಣ್ಣಾದರು ಒಂದೇ

ಇದ್ದಷ್ಟು ದಿನ ಇರಬೇಕು
ಎಲ್ಲಾರು ಒಂದೇ ಎಂದು
ಇಲ್ಲದಿದ್ದರೆ ಸತ್ತು
ಸಮಾಧಿಯಾಗಬೇಕು
ಮಸಣದ ಹೆಣವಾಗಿ
ಹಾಗೆ ಸುಮ್ಮನೆ

ಜಾತಿ ಧರ್ಮದ
ನಾಲ್ಕು ಗೋಡೆಗಳ
ಮಧ್ಯೆ ನಿಂತು
ನೀ ನಿನ್ನ ಸಮಾಜ
ಜನ ಸಮುದಾಯದ
ನಾಲ್ಕೇ ನಾಲ್ಕು ಜನರಿಗೆ
ನೀ ನಾಯಕನಾದರು
ಇಡೀ ದೇಶ ವಿಶ್ವಕ್ಕೆ
ಎಲ್ಲಾ ಸಮಾಜದ
ಜನ ಸಮುದಾಯದ
ನಾಯಕ ಮಹಾನಾಯಕ
ನನ್ನ ಒಡೆಯ ಭೀಮರಾವ್

- ರಾಜು ಹಾಸನ

13 Dec 2020, 11:51 pm

ಇಂತಿ ನಿನ್ನ ಗಳೆಯಕಣೆ

ನನ್ನ ಮುದ್ದುಕಣೆ
ನೀನೇ ನನ್ನ ಗೆಳತಿಕಣೆ
ನನ್ನ ಚಲುವೆಕಣೆ
ನೀನೇ ನನ್ನ ಜೀವಾಕಣೆ
ನನ್ನ ಕನಸುಕಣೆ
ನೀನೇ ನನ್ನ ನಗುವುಕಣೆ
ನನ್ನ ಮನಸುಕಣೆ
ನೀನೇ ನನ್ನ ಹೃದಯದ
ಪ್ರತಿ ಬಡಿತಕಣೆ
ನನ್ನ ಉಸಿರುಕಣೆ
ನೀನೇ ನನ್ನ
ಪ್ರೀತಿಕಣೆ
ಬೇಡವೇ ಬೇಡಕಣೆ
ಈ ಕೋಪ ತಾಪ ಮುನಿಸು
ನಿನಗೆ ಬೇಡಕಣೆ
ಮನ್ನಿಸಿ ಬಾ ಅಪ್ಪಿಕೋ ಬಾ
ಹಗಲಿರುಳು
ನಿನ್ನ ಪ್ರೀತಿಯ ನೆನೆದು
ಕಣ್ಣೀರಿಡುವ
ಪಾರಿಜಾತ ನಾನುಕಣೆ
ಇಂತಿ ನಿನ್ನ ಪ್ರೀತಿಯ
ಗೆಳೆಯಕಣೆ
********ರಾಜು ಹಾಸನ*********

- ರಾಜು ಹಾಸನ

12 Dec 2020, 11:55 pm

ಓ ಹೆಣ್ಣೆ

ಓ ಹೆಣ್ಣೆ ನೀನೇಕೆ ಮೌನವಾಗಿ
ಮಾತನಾಡುತ್ತಿರುವೆ
ಮನಬಿಚ್ಚಿ ಮಾತನಾಡದೆ
ನಿನ್ನೊಳಗೆ ನೀನೆ

ನಿನ್ನಾಶಭಾವನೆಗಳ ಮರೆಮಾಚುತ
ತಿರುಗಿಯನ್ನೆಡೆಗೆ ಕುಡಿನೋಟ ಬೀರುತ
ಏನ್ನನ್ನೇಳಲು ಹೋರಟಿರುವೆ
ಮುಗುಳ್ನಗುತ
ನಿನ್ನ ರೂಪಲಾವಣ್ಯವ ನನ್ನೆದುರು ಬಿಂಬಿಸುತ

ಈ ನಿನ್ನ ತೀಕ್ಷಣನೋಟದೊಳಾರ್ಥವ ನಾ ತಿಳಿಯೆ
ನೀ ನನ್ನೇಕೆ ಕಾಡುತ್ತಿರುವೆ ಹೀಗೆ ಅನುಕ್ಷಣವು
ನಾನ್ನಾವರಿಸುತ್ತಿದೆ ಸಹಿಸಲಾಗದ ನೋವು
ಹೀಗಲಾದರು ಮನಬಿಚ್ಚಿ ಮಾತನಾಡಬಾರದೆ ಅರೆಗಳಿಗೆ

- HarishKumarm

12 Dec 2020, 08:43 pm

ಎಲ್ಲರೂ ಒಂದೇ

ದೇವರು ದೇವರು
ದೇವರ ಮುಂದೆ
ಯಾರು ಯಾರು
ಶ್ರೇಷ್ಠ ಸಮಾನರೋ
ಗೊತ್ತಿಲ್ಲ ಆದರೆ
ಬಾಬಾ ಸಾಹೇಬರು
ಬರೆದ ಭಾರತದ
ಸಂವಿಧಾನದ ಮುಂದೆ
ಎಲ್ಲರೂ ಒಂದೇ
ಎಲ್ಲರೂ ಸಮಾನರು

- ರಾಜು ಹಾಸನ

12 Dec 2020, 02:40 pm

ಮನುವಾದಿಗಳು

ಮಾಂಸ ಮಾಂಸ
ತಿನ್ನುವವರು ನಾವು
ಮಾಂಸ ತಿನ್ನುವ
ಮಾನವರು ನಾವು
ಅಂಜಿಕೆ ಏಕೆ
ನಾಚಿಕೆ ಏಕೆ
ತಿನ್ನುವ ಊಟಕ್ಕೆ
ಇಲ್ಲ ಬೆಧ ಬಾವ
ನಿಮಗೆಕೆ ಈ
ಪೀಕಲಾಟ
ಮಾಂಸವಾ ಸಿಗಿದು
ತಿನ್ನುವುದು ಉಂಟು
ನಿಮಗೆಕೆ ಹೊಟ್ಟೆ ಉರಿ
ಮನುವಾದಿ ಕುನ್ನಿಗಳೆ

ಸಿಕ್ಕ ಸಿಕ್ಕ ಪ್ರಾಣಿಗಳ
ಮಲ ಮೂತ್ರವಾ ಕುಡಿದು
ತಿನ್ನುವ ನೀಚರು ನಿವು
ಜನರ ರಕ್ತ‌ ಹೀರುವ
ನರ ಅಂತಕರು ನಿವು
ಮಾನವರನ್ನೆ ಕಿತ್ತು ತಿನ್ನುವ
ರಣ ಹದ್ದುಗಳು ನಿವು
ಜನ ಜನರನ್ನ ಕೊಂದು ತಿನ್ನುವ
ನರಭಕ್ಷಕರು ನಿವು
ಮನುವಾದಿ ಕುನ್ನಿಗಳೆ

ತಿನ್ನಬಾರದ ತಿಂದು
ಕುಡಿಯಬಾರದ ಕುಡಿದು
ಶ್ರೇಷ್ಠ ಶ್ರೇಷ್ಠವೆಂದು
ಬೀಗುವರಯ್ಯಾ ಶ್ರೇಷ್ಠವಂತರು
ಆಚಾರವಂತರು
ಜಾತಿ ಧರ್ಮದ ನಿಷ್ಠಾವಂತರು
ಸತ್ಯವಂತರು
ಮನುವಾದಿ ಕುನ್ನಿಗಳು

ಜಾತಿ ಮತ
ಧರ್ಮದ
ಆಚಾರವಂತರು
ಶ್ರೇಷ್ಠವಂತರು
ನಿಷ್ಠಾವಂತರು
ಸತ್ಯವಂತರು
ಪ್ರಾಣಿಗಳ
ಮಲ ಮೂತ್ರ
ಕುಡಿದು ತಿನ್ನುವ
ನೀಚವಂತರು
ಈ ಮನುವಾದಿ
ಕುನ್ನಿ ಮರಿಗಳು

- ರಾಜು ಹಾಸನ

11 Dec 2020, 11:11 pm

ಜ್ಞಾನದ ಕಿಚ್ಚು

ಕೋಟಿಗಟ್ಟಲೆ
ಹಣ ಕಾಸು ಬೇಡ
ಜನ ಬಲ ಬೇಡ

ನಿನ್ನ ಎದೆಯಲ್ಲಿ
ಜ್ಞಾನದ ಕಿಚ್ಚು
ಛಲದ ಮನಸಿದ್ದರೆ ಸಾಕು

ನೀ ಮುಟ್ಟುವ ಗುರಿ
ನಿನ್ನ ಅಂಗೈಯಲ್ಲಿರುವುದು
ತಿಳಿಯೋ ಮಂಕುತಿಮ್ಮ

*******ರಾಜು ಹಾಸನ********

- ರಾಜು ಹಾಸನ

11 Dec 2020, 04:13 pm