Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಗ್ಗತ್ತಲು

ಬದುಕಬೇಕು
ಬಾಳಬೇಕು
ದುಡಿಯುವ
ಛಲವಿರಬೇಕು
ತಲೆಯಲ್ಲಿ ಜ್ಞಾನದ
ಬೆಳಕಿರಬೇಕು
ಸಂವಿಧಾನದ
ಅರಿವು ಇರಬೇಕು
ಬಾಬಾ ಸಾಹೇಬರ
ನೆನಪಿರಬೇಕು
ಇಲ್ಲದಿದ್ದರೆ ಜೀವನ
ಖಾಲಿ ಖಾಲಿ
ಕತ್ತಲು ತುಂಬಿದ
ಕಗ್ಗತ್ತಲು

- ರಾಜು ಹಾಸನ

11 Dec 2020, 02:41 pm

ಕಾರ್ಮಿಕರು

ಕಾರ್ಮಿಕರು
ನಾವು ಕಾರ್ಮಿಕರು
ಕೂಲಿ ನಾಲಿ
ಮಾಡುವ ಶ್ರಮಿಕರು ನಾವು
ಸ್ವಾಭಿಮಾನದ
ಕಲಿಗಳು ನಾವು
ಸಿರಿವಂತರ
ಏಳಿಗೆಯ ನಾವಿಕರು ನಾವು
ಕಷ್ಟವೇ ಇರಲಿ
ಸುಖವೇ ಇರಲಿ
ದುಡಿದು ತಿನ್ನುವ
ಶ್ರಮ ಜೀವಿಗಳು ನಾವು
ಹಗಲು ರಾತ್ರಿ
ಎನ್ನದೆ ದುಡಿಯುವ
ಕೆಚ್ಚೆದೆಯ
ಕಿಡಿಗಳು ನಾವು
ಯಾರ ನಂಬಿ
ನಡೆಯದ ಕುಂತು ಕುರದೆ
ಬದುಕಿ ಬಾಳುವ
ಸ್ವಾವಲಂಬಿಗಳು ನಾವು
ಕಾಯಕವೇ
ಕೈಲಾಸವೆಂದು
ನಂಬಿ ನೆಡೆಯುವ
ಕಾಯಕ ವಾಸಿಗಳು ನಾವು


ದುಡಿಯುವವನ
ಬಾಳು ಬಂಗಾರ
ದುಡಿಯದೇ
ಇದ್ದವನ ಬಾಳು
ನರಕ ನರಕ
ತಿಳಿಯೋ ಮನುಜ

- ರಾಜು ಹಾಸನ

10 Dec 2020, 11:26 pm

ಮರೆಯ ಬೇಡ

ನೀ ಎಷ್ಟೇ
ಎತ್ತರಕ್ಕೆ ಬೆಳೆದರು
ಲಕ್ಷಧಿಪತಿ
ಕೋಟ್ಯಾಧಿಪತಿಯಾದರೂ
ತಮ್ಮ ಜೀವವನ್ನೇ
ತೊಯ್ದು ಬದುಕನ್ನೇ
ಮುಡಿಪಾಗಿಟ್ಟು
ಜೀವಾ ಜೀವನದ
ಭಿಕ್ಷೆ ಕೊಟ್ಟ
ಬಾಬಾ ಸಾಹೇಬರ ಮರೆತು
ನೀ ಭೀಗಾ ಬೇಡ
ನಿನ್ನ ಬದುಕು ಬಾಳು
ನಿಂತಿರುವುದು
ಸಂವಿಧಾನದ ಸೂರಿನಡಿ
ಸಂವಿಧಾನವೇ ಕುಸಿದರೆ
ನಿನ್ನ ಬದುಕು ಕುಸಿದು
ಅಲ್ಲೋಲ
ಕಲ್ಲೋಲವಾಗುವುದು
ತಿಳಿಯೋ ಬಾಳು
ಓ ಮನುಜ ವಿಶ್ವ ಮನುಜ

- ರಾಜು ಹಾಸನ

10 Dec 2020, 06:28 pm

ಭದ್ರತೆ

ಪುಂಡ ಪುಢಾರಿ
ಕಳ್ಳ ಸುಳ್ಳ ರಾಜಕಾರಣಿ
ತಳಕು ಬಳುಕಿನ
ನಟ ನಟಿಯರಿಗೆ
ಇರುವುದಯ್ಯ
ಎ ಟು ಝಡ್ ಭದ್ರತೆ
ಸಾಯುವ ತನಕ
ದುಡಿದು ಇಡೀ ದೇಶಕ್ಕೆ
ಅನ್ನವ ಕೊಡುವ
ರೈತನಿಗಿಲ್ಲಾ ಒಂದೇ
ಒಂದು ಭದ್ರತೆ
ಒಂದೇ ಒಂದು ರಕ್ಷಣೆ

- ರಾಜು ಹಾಸನ

09 Dec 2020, 11:34 pm

ಶ್ರಮದ ಪಾಲು

ನೆರಳಲ್ಲಿ ಕುಳಿತು
ಘಂಟೆ ಜಾಗಟೆ ಬಾರಿಸಿ
ಜನರ ಹಣೆಗೆ
ಪಂಗನಾಮ ಹಾಕಿ
ಪುಂಗಿ ಊದುವ
ಪುಂಗಿ ದಾಸ
ಪೂಜಾರಿಗೆ
ಕೂಡುವರಯ್ಯಾ
ದಿನದ ದಕ್ಷಿಣೆ
ತಿಂಗಳ ಸಂಬಳ
ಹೊತ್ತು ಗೊತ್ತಿಲ್ಲದೆ
ದಿನನಿತ್ಯ ದುಡಿಯುವ
ರೈತನಿಗಿಲ್ಲಾ
ಒಂದು ಹೊತ್ತಿನ
ಊಟದ ಸಂಬಳ
ದಿನ ನಿತ್ಯದ
ಕೂಲಿ ಸಂಬಳ
ತಿಂಗಳ ಸಂಬಳ

ಅಂತೂ ಇಂತೂ
ವರ್ಷಕೊಮ್ಮೆ
ಕೊಡುವರಯ್ಯಾ
ಬರ ಪರಿಹಾರ
ಬೆಳೆ ಪರಿಹಾರ
ಅದರಲ್ಲು ಸಣ್ಣ
ಪುಟ್ಟ ದೊಡ್ಡ
ತಿಮಿಂಗಿಲ ನೀಲಿ
ತಿಮಿಂಗಿಲಗಳು
ತಿಂದು ಮಿಕ್ಕಿದ
ಅಳಿದು ಉಳಿದ
ಚಿಲ್ಲರೆ ಕಾಸು
ಬಂದರು ಆಯ್ತು
ಹೋದರು ಆಯ್ತು
ಕಂಡವರ ಕೈ
ಪಾಲಾದರು ಆಯ್ತು
ತಿಂದವನ ಬಾಯಿ
ಪಾಲಾದರು ಆಯ್ತು
ಕೊನೆಗು ಸಿಗಲಿಲ್ಲ
ರೈತನ ಶ್ರಮದ ಪಾಲು

- ರಾಜು ಹಾಸನ

09 Dec 2020, 02:50 pm

ರೈತ ದೇವರು

ರೈತ ರೈತ ರೈತರು
ದೇಶಕ್ಕೆ ಅನ್ನ
ಕೊಟ್ಟ ದೇವರು
ಎಲ್ಲಾ ಜನರ
ಹಸಿವು ನೀಗಿಸಿದ
ಅನ್ನದಾತರು
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ
ಬರಗಾಲ ಬಂದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಜಾತಿ ಧರ್ಮದ
ಭಿನ್ನ ಬೇಧ
ಭಾವವಿಲ್ಲದೆ
ಯಾರ ಹಂಗು
ಹೋಂಗಿಲ್ಲದೆ
ದುಡಿದು ದೇಶಕ್ಕೆ
ಅನ್ನವನಿಟ್ಟ ಒಡೆಯರು
ಬಂಗಾರದ
ಮನುಷ್ಯರು

ರೈತ ಬೆಳೆದ
ಬಗೆ ಬಗೆಯ
ಅನ್ನವ ತಿಂದು
ತಿರುಗಿ ಬೊಗಳುವ
ನಾಯಿ ನರಿಗಳು
ಹೆದರಿಕೆ ಬೆದರಿಕೆ
ಒಡ್ಡುವ ಕುನ್ನಿಗಳು
ಹಸಿದ ಹೊಟ್ಟೆಗೆ
ತಿನ್ನುವರೇ
ಮಣ್ಣು ಇಲ್ಲ
ಹಾದಿ ಬೀದಿಯಲ್ಲಿ
ಬಿದ್ದಿರುವ ಕಸವೋ

ನಿಂತು ನಿಲ್ಲದೆ
ಕುಂತು ಕುರದೆ
ಬಿಸಿಲು ಬೆಂಕಿ
ಎನ್ನದೇ ದುಡಿಯುವ
ರೈತರ ಕಷ್ಟ
ನೆರಳಲ್ಲಿ ಕುಂತು
ನಿಂತು ತಿನ್ನುವ
ಜನರಿಗೆನು ಗೊತ್ತು
ಭೂಮಿಗೆ
ಬಂದು ದುಡಿಯಲ್ಲಿ
ತಿಳಿಯುವುದು
ರೈತರ ಕಷ್ಟ

ರೈತರ ಗತ್ತು
ಗಮ್ಮತ್ತು ತಾಕತ್ತು
ಇಡೀ ಜಗತ್ತಿಗೆ ಗೊತ್ತು

- ರಾಜು ಹಾಸನ

08 Dec 2020, 09:26 pm

ಜಾಗರಣೆ

ಪ್ರಾಣಿ ಪಕ್ಷಿಗಳಿಗೆ
ಇಲ್ಲದ ಜಾತಿ ಧರ್ಮ
ನೆಲ ಜಲ ಗಾಳಿಗೆ
ಇಲ್ಲದ ಮಡಿ ಮೈಲಿಗೆ
ಜನರ ಜನರ
ನಡುವೆ ಇರುವುದಯ್ಯ
ನೂರೆಂಟು
ಜಾತಿ ಧರ್ಮದ
ಮಡಿ ಮೈಲಿಗೆಯ
ಕೊಚ್ಚೆ ಗುಂಡಿ

ಮುಟ್ಟಿದರೆ
ಮಾಡಿ ಮೈಲಿಗೆ
ಎನ್ನುವ ಜನ
ಹೊಟ್ಟೆ ತುಂಬಾ
ರಾಶಿ ರಾಶಿ ರಾಶಿ
ಮಲ ಮೂತ್ರ
ತುಂಬಿಕೊಂಡು
ಅಜಗಜಾಂತರ
ದೂರ ಸರಿದು
ನಿಲ್ಲುವರಯ್ಯಾ
ನಿಂತು ಕುಂತು
ಇಡುವರೇ
ಬಂಗಾರದ ಮೊಟ್ಟೆ
ಚಿನ್ನದ ಮೊಟ್ಟೆ

ಹೊಟ್ಟೆ ತುಂಬಾ
ಹೊಲಸು ತುಂಬಿಕೊಂಡು
ಮಡಿ ಮೈಲಿಗೆ ಎಂದು
ಮೈ ಮೇಲೆ ತಣ್ಣೀರು
ಸುರಿದು ಕೊಂಡರೆ
ಹೋಗುವುದೇ
ಹೊಟ್ಟೆ ಒಳಗಿನ
ಕಸದ ಹೊಲಸು

ಇದು ಎಂತಹ
ಕಳ್ಳ ಖದೀಮರ
ಸುಳ್ಳ ನೀಚರ
ಆಚಾರಣೆನೋ
ಮೂಢನಂಬಿಕೆಯ
ಜಾಗರಣೆನೋ
******ರಾಜು ಹಾಸನ*******

- ರಾಜು ಹಾಸನ

08 Dec 2020, 12:49 am

ಹೆತ್ತವರು

ಹೆತ್ತು ಹೊತ್ತು
ಕೈ ತುತ್ತು ತಿನ್ನಿಸಿ
ಹೊತ್ತು ಗೊತ್ತು
ಸಾಕಿ ಸಲಹಿ
ಆಟ ಪಾಠ
ಜೀವನ ಪಾಠ ಕಲಿಸಿ
ಏಳು ಬೀಳಿನ
ಓಟ ಓಡಿಸಿ
ಉಳಿಸಿ ಬೆಳೆಸಿ
ಕಾಪಾಡಿದ ದೇವರು
ತಂದೆ ತಾಯಿಗೆ
ನಾ ಚಿರಋಣಿ

- ರಾಜು ಹಾಸನ

07 Dec 2020, 03:32 pm

ಲಂಚ

ಹಣ್ಣು ಕಾಯಿ
ಹೋಳಿಗೆ ತುಪ್ಪ
ಹೂವು ಕಡ್ಡಿ
ಗಂಧದ ಕಡ್ಡಿ
ಒಡವೆ ವೈಢೂರ್ಯ
ಬಂಗಾರದ ಒಡವೆ
ಕಾಸು ಗಿಸು
ಚಿಲ್ಲರೆ ನೋಟು
ಲಂಚ ಗಿಂಚ
ಮಂಚ ಇಲ್ಲದೆ
ಒಲಿಯುವುದಿಲ್ಲ
ಚಿತ್ರ ವಿಚಿತ್ರವಾದ
ಗೊಂಬೆ ದೇವರು
ಲಂಚ ಗಿಂಚ
ಮಂಚ ಕೊಟ್ಟರೆ
ಒಲಿಯುವುದೇ
ಕಳ್ಳ ದೇವರು
ಲಂಚ ದೇವರು

ಹಣ್ಣು ಕಾಯಿ ಇಲ್ಲದೆ
ದೇವರು ಒಲಿಯುವುದಿಲ್ಲ
ಚಿಲ್ಲರೆ ದಕ್ಷಿಣೆ ಇಲ್ಲಿದೆ
ಪೂಜೆ ಪುನಸ್ಕಾರವಿಲ್ಲ
ಲಂಚ ಮಂಚವಿಲ್ಲದೆ
ಅಧಿಕಾರವಿಲ್ಲ

- ರಾಜು ಹಾಸನ

07 Dec 2020, 02:13 pm

ಕಿಲಾಡಿ ದೇವರು

ದೇವರು ದೇವರು
ಇದು ಎಂತಾ ಯಾವ
ಸೀಮೆಯ ದೇವರೋ
ಆರು ಮೂರು ಕಾಸಿಗೆ
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ ಎನ್ನದೇ
ದುಡಿದು ಕೂಡಿಟ್ಟು
ಮುಚ್ಚಿಟ್ಟು ಅಡವಿಟ್ಟು
ಮಾಡುವರಯ್ಯ
ಹತ್ತಾರು ಕಾಸಿನ
ಮನೆ ಮುರುಕ
ದೇವರ ಹಬ್ಬ

ನೀ ಎಷ್ಟೇ ಏನೇ
ಜಾತ್ರೆ ಪಾತ್ರೆ
ಹಬ್ಬ ಹರಿದಿನ
ಮಾಡಿದರು
ಬರುವುದಿಲ್ಲ
ಬಂದು ಕಟ್ಟುವುದಿಲ್ಲ
ನಿನಗೊಂದು ಗುಡಿ
ನೀನೇ ದುಡಿದು
ಕಟ್ಟಬೇಕು
ಗುಡಿಯ ಮೇಲೆ ಗುಡಿ
ದೇವರಿಗೊಂದು
ದೇವರ ಗುಡಿ

ಬಿದ್ದು ಬೆಡಿದರು
ಉರುಳಿ ಹೊರಳಾಡಿ
ಜಪ ತಪ ಮಾಡಿ
ಉಪವಾಸ ಬಿದ್ದರು
ತುಂಬುವುದಿಲ್ಲ
ನಿನ್ನ ಜೇಬು ಚಡ್ಡಿ ಜೇಬು
ನೀನೇ ತುಂಬಿಸಬೇಕು
ಕೂಲಿ ನಾಲಿ ಮಾಡಿ
ದೇವರ ಮುಂದಿನ
ದೇವರ ಹುಂಡಿ

ಹೇಳಿ ಕೇಳಿ ಬಂದು
ಕೊಡುವುದಿಲ್ಲ
ಕುಡಿಯಲು ತಿನ್ನಲು
ಅನ್ನ ನೀರು ಹಣ್ಣು
ನೀನೇ ಹೋಗಿ
ಕೊಡಬೇಕು
ದೇವರಿಗೆ ಹಣ್ಣು
ಕಾಯಿ ನೀರು

ಬೆಳಗು ಬಾ
ಬೆಳಗು ಬಾ
ನನ್ನ ಮನೆ
ಮಠವಾ ತೊಳೆದು
ಹಚ್ಚು ಬಾ ದೀಪ
ಎಂದರು ಅಂದರು
ಬಂದು ಹಚ್ಚುವುದಿಲ್ಲ
ನಿನ್ನ ಮನೆಯ ದೀಪ
ನೀನೇ ಹೋಗಿ
ತೊಳೆದು ಹಚ್ಚಬೇಕು
ದೇವರ ಮನೆಯ ದೀಪ
ದೇವರು ದೇವರು
ಇದು ಯಾವ ಎಂತಾ
ಸೀಮೆಯ ದೇವರೋ

- ರಾಜು ಹಾಸನ

07 Dec 2020, 08:46 am