ಕೇಳುವವನು
ಹೇಳುವವನು
ಒಬ್ಬನೇ ಆದರೂ
ಕಂಡ ಕಂಡಲ್ಲಿ
ಹೊಗಳಿ ತೆಗಳಿ
ಮಾತನಾಡಿ ಮರುಳು
ಮಾಡುವವರು
ಹಲವು ಜನ
ಹತ್ತಾರು ಜನ
ಹತ್ತಾರು ತರ
ನೂರಾರು ಜನ
ನೂರಾರು ತರ
ಮಾತನಾಡುವರೇ
ಹೋರೆತು
ಯಾರು ಕೂಡ
ಒಂದೇ ತರ
ಒಂದೇ ರೀತಿ
ಯೋಚಿಸಿ
ಆಲೋಚಸಿ
ಮಾತನಾಡುವ
ನಿಸ್ವಾರ್ಥಿಗಳ
ಪ್ರಪಂಚವಲ್ಲ
ಇದು ಸ್ವಾರ್ಥಿಗಳೆ
ತುಂಬಿರುವ
ಸ್ವಾರ್ಥಿಗಳ
ಕೆಟ್ಟ ಪ್ರಪಂಚ
ಯಾರೇ ಏನೇ ಎಷ್ಟೇ
ಮಾತನಾಡಿದರೂ
ನಿನ್ನ ನಡೆ ನುಡಿ
ಬದಲಾಯಿಸಿಕೊಳ್ಳದೆ
ಮುನ್ನುಗ್ಗಿ ನಡೆ
ನಿನ್ನ ದಾರಿಯ ಕಡೆ
ನೀ ಎದೆಗುಂದದೆ
ಬದುಕಿ ಬಾಳು
ಮುಗಿಲೆತ್ತರಕ್ಕೆ
ನೀ ಮಾನವನಾಗಿ
ನಿಸ್ವಾರ್ಥಿಯಾಗಿ
ಓ ಮನುಜ
ದುಡಿಮೆಯೇ
ಜೀವನವಲ್ಲ
ಜೀವನವೇ
ದುಡಿಮೆಯಾದರೆ
ನಿನ್ನ ಬಾಳೆ
ಬಂಗಾರ ಸಿಂಗಾರ
ಯಾರ ಯಾವ
ಹಂಗು ಹೋಂಗಿನ
ಮೇಲೇರುವ
ಏಣಿ ಬೇಕಿಲ್ಲ
ನಿನ್ನ ದುಡಿಮೆಯೇ
ನಿನ್ನ ಗುರಿ ದಡ
ಮುಟ್ಟುವ ಏಣಿ
ತಿಳಿಯೋ ಓ ಮನುಜ
ನಿನ್ನ ಗುರಿ ನೀ ಮರೆತು
ಕುಂತು ಕುಂತಲ್ಲಿಯೇ
ವಾಲಾಡಿ ತೂಕಡಿಸಿ
ಮಲಗ ಬೇಡ ಮರುಳ
ಜೀವನವೆಂಬ
ಅನಂತ ಪಯಣದಲ್ಲಿ
ಜೀವವು ಕ್ಷಣಿಕವಾದರು
ದುಡಿಮೆ ಇರಲಿ ನಿರಂತರ
ಇಲ್ಲದಿದ್ದರೆ ನೀ
ಆಗುವೇ ಕಂಡ ಕಂಡವರ
ಕಾಲ ಕಸ ಕಡ್ಡಿಯ ಹುಳ
ತಿಳಿಯೋ ಓ ಮನುಜ
ಹೇಳಿ ಕೇಳಿ
ಹುಟ್ಟುವುದಿಲ್ಲ
ಪ್ರೀತಿಯ ಮುತ್ತು
ಹೊತ್ತು ಗೊತ್ತಿಲ್ಲದೆ
ಬರುವುದು ಆಪತ್ತು
ಹಾಗಾಗಿ ಆಗಬೇಕು
ಮನುಷ್ಯ ಮನುಷ್ಯನಿಗೆ
ಒತ್ತು ಒತ್ತು
ಇಲ್ಲದಿದ್ದರೆ ಕಾದಿರುವುದು
ಮಾನವ ಕುಲಕ್ಕೆ
ಕುತ್ತು ಕುತ್ತು
ವಿಪತ್ತು ವಿಪತ್ತು
ಮಾನವನಾಗಿ
ಹುಟ್ಟಿ ಬೆಳೆದು
ನಾಗರಿಕನಾಗಿ ಬದುಕಿ
ಸಾಯುವ ಮಧ್ಯ
ಜಾತಿ ಧರ್ಮದ
ಬಿಂಕ ಬಿನ್ನಾಣವೇಕೆ
ಅನಾಗರಿಕನಾಗಿ ನೂರೆಂಟು
ಮುಖವಾಡ ಕಟ್ಟಿಕೊಂಡು
ಮೂಢನಂಬಿಕೆಯ
ತಲೆಗೆ ಸುತ್ತಿಕೊಂಡು
ಮನದಲ್ಲಿ ದ್ವೇಷ
ಅಸೂಯೆ ತುಂಬಿಕೊಂಡು
ಘರನೆ ಘರಘರನೆ
ಸುತ್ತಿ ತಿರುಗುವ ಹುಚ್ಚು
ಮನಸ್ಸು ನಿನಗೇಕೆ
ಓ ಮನುಜ ವಿಶ್ವ ಮನುಜ
ಹುಟ್ಟಿದಾಗ ಯಾವ
ಜಾತಿ ಧರ್ಮದ ಅರಿವಿಲ್ಲ
ಸತ್ತಾಗ ಯಾವ
ಜಾತಿ ಧರ್ಮದ ಹಣೆಪಟ್ಟಿಯು
ಯಾರ ಹಣೆ ಯಾರು
ಎದೆಯ ಮೇಲು ಬರೆದಿಲ್ಲ
ಬದುಕಿದ್ದಾಗ ಮಾತ್ರ
ನೂರೆಂಟು ಜಾತಿ ಧರ್ಮವ
ಕಟ್ಟಿಕೊಂಡು ಹೊಡೆದಾಡಿ
ಬಡಿದಾಡಿ ಸಾಯುವಿರಿ ಏಕೆ
ಓ ಮೂಢ ಜನಗಳೇ
ಎಲ್ಲರೂ ಬದುಕು ಬಾಳಿರಿ
ಒಂದೇ ತಾಯಿಯ ಮಕ್ಕಳಂತೆ
ಓ ಮನುಜ ವಿಶ್ವ ಮನುಜ
ಕಂಡವರ ಹೆಂಡತಿಯರ
ಚುಡಾಯಿಸಿದರೆ
ಚುಚ್ಚಿಬಿಡುವರು
ಕೊಚ್ಚಿ ಬಿಡುವರು
ಉಸಿರಾಡದ ಹಾಗೆ
ಈ ಮೂಢ ಜನರು
ಪೂಜಿಸುವರಯ್ಯ
ಪರಸ್ತ್ರೀಯರ ಪೀಡಿಸುವ
ನೀಚನನ್ನು ಪರಮಾತ್ಮನೆಂದು
ಎಂತಹ ಕರ್ಮಕಾಂಡವಯ್ಯ
ಕಂಡವರ ಹೆಂಡತಿಗೆ
ಘಳ ಹಾಕುವ ನಮರ್ದ
ನಪುಂಸಕ ಶಂಡ ದೇವರು
ಪರಮಾತ್ಮನಂತೆ
ಏನು ಕರ್ಮವೂ
ಎಂತಹ ಧರ್ಮವೂ
ಪ್ರೀತಿಸಿ ಮದುವೆಯಾಗಲು
ಎದೆ ಗುಂಡಿಗೆಯಲ್ಲಿ ತಾಕತ್ತು
ನರವಿಲ್ಲದ ಪೀಡೆಯು
ಮೋಸ ಮಾಡಿ ಸುತ್ತುತ್ತಿದೆ
ಗಾಳಿ ನಾಯಿಯಂತೆ
ಪರ ಪತ್ನಿಯರ ಬೆನ್ನ ಹಿಂದೆ
ಇದು ಒಂದು ದೇವರಂತೆ
ಇದು ಎಂತಹ ದೇವರೋ
ಯಾವ ಸೀಮೆಯ ದೇವರೋ
ನಾ ಎಲ್ಲೂ ಕಾಣೆನು
ಈ ಕರ್ಮಕಾಂಡವ
ಅಂಧ ಭಕ್ತರ ಅಂಧಭಕ್ತಿಯ