Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೀಪಾವಳಿ

ದೀಪ ಬೆಳಗುವಂತ ದೀಪಾವಳಿ
ಕತ್ತಲೆ ಕಳೆಯುವಂತ ದೀಪಾವಳಿ
ಅಜ್ಞಾನ ಅಳಿಸುವಂತ ದೀಪಾವಳಿ
ಸುಜ್ಞಾನ ದರ್ಶನದ ದೀಪಾವಳಿ

ಶೃಂಗರಿಸಿ ತಳಿರು ತೋರಣ ದಿಂದ
ಬಣ್ಣದ ಆಕಾಶ ಬುಟ್ಟಿಯನು ಕಟ್ಟಿ
ಸಿಹಿ ತಿಂಡಿ ಹೋಳಿಗೆ ಹೂರಣವಿಟ್ಟು
ದೀಪವನು ಬೆಳಗಿಸುವ ದೀಪಾವಳಿ

ಹೂವುಗಳ ಸಾಲಲ್ಲಿ ಸುಗಂಧ ಸೂಸಿ
ಧೂಪ ದೀಪಗಳನ್ನು ಜಗಮಗಿಸುವ
ಕರ್ಪೂರ ಕಾಯಿ ಮೊಂಬತ್ತಿ ಅರ್ಪಿಸಿ
ಪೂಜಿಸುವ ನಮ್ಮ ಹಬ್ಬ ದೀಪಾವಳಿ

ಹೊಸ ಉಡುಗೆ ಹೊಸ ನಡಿಗೆ ಇಂದ
ಹೊಸ ಮಾತು ಹೊಸ ಬೆಸುಗೆಗಳಾಗಿ
ತುಸು ಆಸೆ ಇಂದ ತಾಯೆ ಕಾಯೆಂದು
ಲಕುಮಿಯ ಪಾರ್ಥಿಸುವ ದೀಪಾವಳಿ

ಮಗಳನ್ನು ಕರೆಸಿ ಅಳಿಯನಿಗೆ ತಿನಿಸಿ
ಮೊಮ್ಮಕಳ ಜೊತೆಗೆ ಆಡ್ವ ದೀಪಾವಳಿ
ತವರು ಮನೆ ಪ್ರೀತಿ ಹಬ್ಬದಲಿ ಕಣ್ತುಂಬಿ
ಒಂದಾಗಿ ಆಚರಿಸುವ ಹಬ್ಬ ದೀಪಾವಳಿ


ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

16 Nov 2020, 05:26 pm

ಕುಬೇರ

ಬದುಕಿನಲ್ಲಿ
ಹಣ ಅಂತಸ್ತು ಇಲ್ಲದ
ಬಡವನು ನಾನಾದರೂ
ಅಪ್ಪ ಅಮ್ಮನ ಪ್ರೀತಿಯಲ್ಲಿ
ನಾ ಶ್ರೀಮಂತ
ಕುಬೇರ ಕುಬೇರನಯ್ಯ

ಅಪ್ಪ ಅಮ್ಮನ
ಪ್ರೀತಿಯ ಮುಂದೆ
ಕರಗಿ ನೀರಾಗುವ
ಸಿರಿ ಸಂಪತ್ತು ಇಲ್ಲದಿದ್ದರೂ
ಚಿಂತೆಯಿಲ್ಲ ನನಗೆ
ಅಪ್ಪ ಅಮ್ಮನ ನಗು
ಖುಷಿ ಒಂದೇ
ನನಗೆ ಸಿರಿ ಸಂಪತ್ತು

ಹಣ ಬಲ
ಜನ ಬಲ ಇಲ್ಲದಿದ್ದರೂ
ನನ್ನ ತೋಳ್ ಬಲ
ಉಸಿರು ಇರುವ ತನಕ
ಸೇವೆ ಮಾಡುವೆನು
ನನ್ನ ಹಡೆದವರ ನನ್ನೆದೆಯ
ಗುಡಿಯಲ್ಲಿಟ್ಟು
ಪೂಜಿಸಿ ಆರಾಧಿಸುವೆನು

- ರಾಜು ಹಾಸನ

15 Nov 2020, 11:55 pm

ಬಾಬಾಸಾಹೇಬರು

ಆಡು ಮುಟ್ಟದ ಸೊಪ್ಪಿಲ್ಲ
ಜನರು ಮುಟ್ಟದ ಅನ್ನವಿಲ್ಲ
ಗಾಳಿ ಮುಟ್ಟದ ಜಗತ್ತಿಲ್ಲ
ಪ್ರೀತಿ ಮುಟ್ಟದ ಮನವಿಲ್ಲ
ಸೂರ್ಯ ಚಂದ್ರರು
ಇಲ್ಲದ ಭೂಮಿ ಇಲ್ಲ
ಬಾಬಾಸಾಹೇಬರು
ಓದದೆ ಇರುವ ಪುಸ್ತಕವಿಲ್ಲ
ಬಾಬಾಸಾಹೇಬರು
ಇಲ್ಲದೆ ಸಂವಿಧಾನವಿಲ್ಲ
ಸಂವಿಧಾನವಿಲ್ಲದೆ
ಈ ದೇಶ ನಾವು ನಿವು
ಯಾರು ಇಲ್ಲ
ಯಾರೂ ಇರೋದು ಇಲ್ಲ

- ರಾಜು ಹಾಸನ

14 Nov 2020, 11:17 pm

ಎಲ್ಲಿದೆ ನ್ಯಾಯ ನೀತಿ ಧರ್ಮ

ಎಲ್ಲಿದೆ ಧರ್ಮ
ಎಲ್ಲಿದೆ ನ್ಯಾಯ ನೀತಿ
ಉಳ್ಳವರ
ಕಂಡರೆ ಜೈಕಾರ
ಇಲ್ಲದವರ
ಕಂಡರೆ ಧಿಕ್ಕಾರ
ಬಡವರ
ಕಂಡರೆ ತಿರಸ್ಕಾರ

ಉಳ್ಳವರಿಗೆ
‌ ಇಲ್ಲ ಒಂದೇ ಒಂದು
ನೀತಿ ನಿಯಮ
ಜನ ಸಾಮಾನ್ಯರಿಗೆ
ಇರುವುದು ನೂರೆಂಟು
ನೀತಿ ನಿಯಮಗಳು

ನೀತಿ ನಿಯಮ
ಪಾಲಿಸದೆ ಇರುವ
ಜನ ಪ್ರತಿನಿಧಿಗೆ ಕಟ್ಟುವರು
ನಾಯಕನ ಹಣೆಪಟ್ಟಿ

ಭ್ರಷ್ಟಾಚಾರಿಗಳ
ಭ್ರಷ್ಟಾಚಾರದ ವಿರುದ್ಧ
ಧ್ವನಿ ಎತ್ತುವ
ನೀತಿ ನಿಯಮ ಪಾಲಿಸುವ
ಜನ ಸಾಮಾನ್ಯರಿಗೆ
ಕಟ್ಟುವರು ನಾಡ ದ್ರೋಹಿ
ದೇಶ ದ್ರೋಹಿ
ಧರ್ಮ ದ್ರೋಹಿ ಹಣೆಪಟ್ಟಿ

ಇವರು ಎಂತಾ
ಕೆಟ್ಟ ಸಮಾಜದ
ಎಂತಾ ಕೆಟ್ಟ ಜನರಯ್ಯ
ಅಧರ್ಮವೇ ತುಂಬಿ
ತುಳುಕುವ
ಈ ಕೆಟ್ಟ ಸಮಾಜದಲ್ಲಿ
ಎಲ್ಲಿದೆ ಧರ್ಮ
ಎಲ್ಲಿದೆ ನ್ಯಾಯ ನೀತಿ
*******ರಾಜು ಹಾಸನ******

- ರಾಜು ಹಾಸನ

14 Nov 2020, 02:46 pm

ಹಬ್ಬ

ಉಳ್ಳವರಿಗೆ
ದೀಪಗಳ ಹಬ್ಬ
ಬೆಳಕಿನ ಹಬ್ಬ
ಹರುಷದ ಹಬ್ಬ

ಬಡವರಿಗೆ
ಹಸಿವಿನ ಹಬ್ಬ
ಕತ್ತಲ ಹಬ್ಬ
ಕಣ್ಣೀರ ಹಬ್ಬ

ಹಬ್ಬ ಹರಿದಿನವೆಂದು
ಕುಣಿದು ಕುಪ್ಪಳಿಸಿ
ಮೋಜು ಮಸ್ತಿ
ಮಾಡುವ ಬದಲು
ಕಣ್ಣೀರ ಒರೆಸಿ
ಹಸಿದ ಹೊಟ್ಟೆಗೆ
ಅನ್ನ ಕೊಟ್ಟರೆ
ಬದುಕುಳಿಯುವುದು
ಬಡಪಾಯಿ ಜೀವಾ
ನಗು ನಗುತಾ ಬಾಳುವುದು
ನೊಂದು ಬೆಂದ ಜೀವಾ
ದೊರಕುವುದಯ್ಯ
ನಿನಗೆ ಮುಕುತಿ
ಬರುವುದಯ್ಯ ಪುಣ್ಯ
ಸಿಗುವುದಯ್ಯ
ಜನರ ಆಶಿರ್ವಾದ

ಹಬ್ಬ ಹರಿದಿನಗಳ
ಆಚರಣೆಯಿಂದ ಸಿಗುವ
ಖುಷಿ ಸಂತೋಷಕ್ಕಿಂತ
ಜನರ ಸೇವೆ ಮಾಡಿದಾಗ
ಸಿಗುವ ಖುಷಿ ನೆಮ್ಮದಿಯೇ
ನನಗೆ ಶ್ರೇಷ್ಠ ಮಿಗಿಲಯ್ಯ
*******ರಾಜು ಹಾಸನ*******

- ರಾಜು ಹಾಸನ

14 Nov 2020, 12:02 am

ಜನನಾಯಕ

ಬರಗಾಲ ಜಲ ಪ್ರವಾಹ
ಬಂದರೆ ಕಾಸಿಲ್ಲ ದುಡ್ಡಿಲ್ಲ
ಜನ ನಾಯಕರ
ಕಳ್ಳ ಖಜಾನೆಯಲ್ಲಿ
ಕುರ್ಚಿಗಾಗಿ ಖರ್ಚು
ಮಾಡುವರು ಕೋಟಿಗಟ್ಟಲೆ
ಪಟ್ಟಾಭಿಷೇಕಕ್ಕೆ
ಸುರಿದು ಎರಚುವರು
ಕಳ್ಳ ಖದೀಮರು
ಕಳ್ಳ ಕಣಜದ ಕಾಸಿನ ರಾಶಿ

ಜನ ಸಾಮಾನ್ಯರಿಗೆ
ಯಾವ ಭದ್ರತೆಯು ಇಲ್ಲ
ಕಳ್ಳ ಸುಳ್ಳ ನಾಯಕರಿಗೆ
ಇರುವುದು ಎ ಬಿ ಸಿ ಡಿ ಭದ್ರತೆ
ವರ್ಷವಿಡಿ ಅನ್ನ ಹಾಕುವ
ರೈತನಿಗಿಲ್ಲ ಒಂದಿಷ್ಟು ಗೌರವ
ಜನರಿಂದಲೇ
ಜನನಾಯಕರ
ಪಟ್ಟ ಕಟ್ಟಿಕೊಂಡು
ಜನರನ್ನೆ ಕಿತ್ತು ತಿನ್ನುವ
ನೀಚರಿಗೆ ಇರುವುದು
ಸಕಾಲ ಸತ್ಕಾರ ಗೌರವ
ಇದು ಏನು ಧರ್ಮವೂ
ಎಂತಹ ಮರ್ಮವೂ

- ರಾಜು ಹಾಸನ

13 Nov 2020, 11:02 pm

ಮಲೆನಾಡ ಮನೆ

ಬೆಟ್ಟಗುಡ್ಡಗಳ ನಾಡು
ಅದುವೇ ನಮ್ಮ ಮಲೆನಾಡು
ಮಲೆಗಳ ಆವರಿಸಿದ ಮಳೆಕಾಡು
ಇದು ಅಂದದ ಚೆಂದದ ಬೀಡು.

ಒಮ್ಮೆ ಇಲ್ಲಿ ಬಂದು ನೋಡು
ಆದರೆ ಕೊಂಚ ದಿನ ನೆಲೆಸಿಬಿಡು
ಇದು ಸೊಬಗಿನ ಹಾರುಗಗಳ ಗೂಡು
ಇದು ಹಸಿರಿನ ಉಸುರಿನ ಕಾಡು.

ತಣ್ಣನೆ ಗಾಳಿ ಬೀಸಿ ತೂಗುವ ತೊಟ್ಟಿಲು
ಹೆಮ್ಮರಗಳು ಕೈ ಚಾಚಿವೆ
ಬಾನನು ಮುಟ್ಟಲು..
ಕಗ್ಗಾಡು ತುಂಬಿಹುದು ಸುತ್ತಮುತ್ತಲು..


ಗುಡುಗು ಸಿಡಿಲಿಗೆ ಇಣುಕುವ ಅಣಬೆ
ಮಳೆ ಹೊಳೆ ತುಂಬಲು ಹತ್ತುವ ಮೀನು
ದೊಡ್ಡಬ್ಬ ಮುಗಿದರೆ ಹೊರಡುವರು
ಸೋಬೇಟೆಗೆ..
ಹಂದಿ, ಕಡವೆ, ಕಾಡು ಕುರಿ ಬ್ಯಾಟೆಗೆ..

ಎಂತಹ ಪುಣ್ಯವಂತರಣ್ಣ ಇಲ್ಲಿನ ಮಂದಿ
ಸ್ವರ್ಗದ ತುಣುಕನ್ನು ತಾವೇ ಹೊಂದಿ
ಊರಿಗೊಂದು ಮನೆ ಕಟ್ಟಿ
ಮಾರಿಗೊಂದು ಅಡಿಕೆಯ ನೆಟ್ಟಿ..
ಇದು ಸೃಷ್ಟಿಯ ಸೊಬಗಿನ ಮಡಿಲು
ಇದ್ದರೆ ಸಾಕಿಲ್ಲೊಂದು ಪುಟ್ಟ ಗುಡಿಸಲು..

- ಶ್ರೀಗೋ.

13 Nov 2020, 10:37 am

ಅ-ನಾಗರಿಕ

ವಿದ್ಯಾವಂತ ನಾಗರಿಕರಲ್ಲದ
ಪ್ರಕೃತಿ ಆರಾಧಕರಾದ
ಆದಿವಾಸಿಗಳು ತಾವು
ಹುಟ್ಟಿ ಬೆಳೆದ ಪರಿಸರವನ್ನೆ
ದೇವರೆಂದು ಪೂಜಿಸುವರು
ಆರಾಧಿಸುವರು ಎಲ್ಲಾರು ಒಗ್ಗುಡಿ
ವಿದ್ಯಾವಂತ ನಾಗರಿಕರೆಂದು
ಹಿಗ್ಗಿ ಕುಣಿದಾಡುವ ಮೂಢರು
ಮೇಲು ಕೀಳೆಂಬ
ಹಗ್ಗವ ಕಟ್ಟಿಕೊಂಡು
ಹಗ್ಗ ಜಗ್ಗಾಟವಡುವರು
ಕುಲ ಕುಲವೆಂದು ಹೊಡೆದಾಡಿ
ಮನೆ ಮನೆಗೊಂದು
ಬೀದಿ ಬೀದಿಗೊಂದು
ಊರು ಕೇರಿಗೊಂದು
ಗುಡಿಯ ಕಟ್ಟಿಕೊಂಡು
ತಾವೇ ಸೃಷ್ಟಿಸಿದ ಗೊಂಬೆಗೆ
ಚಿತ್ರಿಸಿ ಬರೆದ ಚಿತ್ರಪಟಕ್ಕೆ
ದೇವರ ಪಟ್ಟ ಕಟ್ಟಿ
ಪೂಜಿಸುವರಯ್ಯ ಇವರು
ಎಂತಹ ಮೂರ್ಖ ನಾಗರಿಕ
ನಾಡಿನ ಅನಾಗರಿಕ ಜನರಯ್ಯ
*********ರಾಜು ಹಾಸನ*******

- ರಾಜು ಹಾಸನ

13 Nov 2020, 12:19 am

ನಾ ಕಂಡ ಹಂಪಿ

ಬೀದಿಯಲಿ ಹೆಣವಾಗಿ ಬಿದ್ದ ಕಲ್ಲುಗಳು
ಕೊರೆದ ಕಂಬಗಳನು ಮುರಿದ ನೋವು
ಎದೆಸೀಳಿ ನಿಲ್ಲಿಸಿದ ಬಯಲು ಆಲಯ
ನೆತ್ತಿಯೋಡೆದು ಉರುಳಿಸಿದ ಗೋಪುರ

ಇಡಿಗಲ್ಲು ಕಡೆದು ಕೆತ್ತಿದ ಕಲಾಕೃತಿಗಳನ್ನು
ಸಾಹಿತ್ಯ ವಿಜ್ಞಾನ ಕಲೆ ಸಂಸ್ಕೃತಿಗಳ ನಾಶ
ಕಣ್ಣೀರು ಕರಗಿ ಕರೆಯೊಂದು ತೋರುತಲಿ
ಅಳಿದುಳಿದ ಕಥೆ ಹೇಳ್ತಾ ನಿಂತದ್ದು ಕಂಡೆ

ಸುತ್ತ ಸುಲ್ತಾನರ ನಡುವೆ ದಿಟ್ಟ ಧೈರ್ಯದಿ
ಹೊನ್ನ ಸೂಸುವ ವಿಜಯ ಸಾಮ್ರಾಜ್ಯ ಕಟ್ಟಿ
ದುಷ್ಟರನು ಸೆದೆಬಡಿದು ತಲೆ ಎತ್ತಿ ನಿಂತದ್ದು ದುಷ್ಕೃತ್ಯಕೆ ಬಲಿಯಾಗಿ ಬರಿದಾದ್ದ ಕಂಡೆ

ಮತ್ತೆ ಕಟ್ಟುವರೆಂದು ಮರಗುತ್ತ ಕೊರಗುತ್ತಾ ಕಲ್ಲಿನಲಿ ಹೊನ್ನ ಕಥೆ ಹೇಳ್ತಾ ನಿಂತಿಹವು
ಸಪ್ತ ಸಾಗರದಾಚೆ ಪಸರಿಸಿದ ಕೀರ್ತಿಯನು
ಹೊಂಚಾಕಿ ಚಿವುಟಿ ಹಾಳು ಗೆಡುಹಿದ ಕಂಡೆ

ಬಂದರೊಬ್ಬ ಯೋಗಿ ಬಿಷ್ಟಪ್ಪಯ್ಯ ನವರು
ಹಂಪಿಯ ವಿರೂಪಾಕ್ಷ ನಿಗೆ ಗೋಪುರ ಕಟ್ಟಿ
ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಿ
ಜನಸಾಗರದ ಜಾತ್ರೆಯ ಮಾಡಿದ್ದು ಕಂಡೆ

ಕಲ್ಮೇಶ ಬಡಿಗೇರ
..........ಬಾದಾಮಿ......

- Kalmesh Badiger

11 Nov 2020, 01:00 pm

ಭಕುತಿ

ದೇಶ ಭಕ್ತಿ
ಧರ್ಮ ಭಕ್ತಿ
ಜಾತಿ ಭಕ್ತಿ
ಪಕ್ಷ ಭಕ್ತಿಗಿಂತ
ದೊಡ್ಡದಯ್ಯ
ಆತ್ಮಸಾಕ್ಷಿ
ಮನಃಸಾಕ್ಷಿ
ಮಾನವ ಭಕುತಿ

ಮನುಷ್ಯನ ಮನುಷ್ಯನಾಗಿ
ನೋಡದ ಮುಟ್ಟದ
ಮಾನವಿಯತೆ ಇಲ್ಲದ ಜನರು
ದೇಶ ಧರ್ಮ ಜಾತಿ ಭಕ್ತಿಯ
ಹಣೆಪಟ್ಟಿ ಕಟ್ಟಿಕೊಂಡು
ಊರು ತುಂಬಾ
ಸುತ್ತಿದರೇನು ಬಂತು
ಎಲ್ಲಾ ಭಕ್ತಿಗಳಿಗಿಂತ ಮಿಗಿಲಯ್ಯ
ಈ ಮಾನವ ಭಕುತಿ
ಜನರನ್ನ ಜನರ ತರ
ನೋಡಿದೆ ಮುಟ್ಟದೆ
ಪ್ರಾಣಿಗಳ ತರ ನೋಡುವ
ದೂರವಿಡುವ ಧರ್ಮವು
ಧರ್ಮವೇ ಅಲ್ಲ

- ರಾಜು ಹಾಸನ

10 Nov 2020, 11:37 pm