Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು

ಕಾಣುವುದು ಹಲವಾರು ಕನಸು
ಆಗುವುದು ಬೇರೆಯೆದ್ದೆ ನನಸು
ಕನಸು ನನಸುಗಳ ಮರೆಯಲ್ಲಿ
ವಿದಿಯಾಟ ಸೂತ್ರ ಹಿಡಿದಿಹುದು

ಅಪ್ಪನು ದುಡಿವಾಗ ಆಟದ ಕನಸು
ಓದುವ ಹಠದಲ್ಲಿ ಪ್ರೀತಿಯ ಕನಸು
ಮದುವೆ ಮಕ್ಕಳ ಕನಸ ಕಾಣುತ್ತಾ
ವೃದ್ಧಾಶ್ರಮ ಸೇರಿಕೊಂಡ ಕನಸು

ಹಣ ಗಳಿಸುವ ಆಸೆಯ ಕನಸು
ಗಳಿಸಿದ ಹಣವ ಕೂಡಿಡುವ ಕನಸು
ಕದ್ದೋದ ಕಳ್ಳನಿಗೆ ಶಫಿಸುವ ಕನಸು
ದೇವರಲ್ಲಿ ಮೊರೆಯಿಟ್ಟು ಕೇಳ್ದ ಕನಸು

ಆಹ್ಹಾ ಅದೆಂತೆಂತಾ ಕನಸು ಕಾಣುತ್ತಾ
ಎಳುತ್ತ ಬೀಳುತ್ತಾ ಸಾಗುವ ಕನಸು
ಆದರೂ ಭಂಡ ರಾಗಿ ನಡೆವ ಕನಸು
ಬಿದ್ದರು ನಗೆಬೀರಿ ನಡೆವ ಕನಸು

ಕತ್ತಲಲಿ ಕಾಣುವುದು ಒಂದು ಕನಸು
ಬೆಳಕಿನಲಿ ಹೇಳುವುದು ಒಂದು ಕನಸು
ಜೀವನದ ಸೂತ್ರಧಾರನ ಮುಂದೆಯೇ
ಸುಳ್ಳೆಂಬ ಈ ನಾಟಕದ ಕನಸೋ ಕನಸು

ಕಲ್ಮೇಶ ಬಡಿಗೇರ
. ಬಾದಾಮಿ

- Kalmesh Badiger

10 Nov 2020, 05:58 pm

ಹೃದಯ

ಮರಳಿ ಬಂದರು ಬಂದು ಬಿಡು ಗೆಳಯ
ನನ್ನ ಹೃದಯದ ಅರಮನೆಯಲ್ಲಿ
ಪುಟ್ಟದೊಂದು ಗುಡಿಯ ಕಟ್ಟಿ
ಪೂಜಿಸುವೆನು.....
ನಿನ್ನ ದೇವತೆಯ ಹುಡುಗಿ....

""".... """

- Supriya C

10 Nov 2020, 01:19 pm

ಹೃದಯ

ಹೃದಯ ಅರಮನೆಯ ಹೆಬ್ಬಾಗಿಲು ತೆರೆದು.....
ಪ್ರೀತಿ,,, ಭಾವನೆ,, ಕವನಗಳ,, ಬರಿಯುತಾ....
ಕನಸುಗಳ ಸರಮಾಲೆಯನ್ನು ಪೋಣಿಸುತ್ತಾ.....
ಕಾದಿರುವೆ ನನ್ನ ಮುದ್ದು ಮನವೇ ❤️....
ಪ್ರೇಮದ ಪಲ್ಲಕ್ಕಿಯಲ್ಲಿ ಬರುವ ನಿನಗೆ
ಸ್ವಾಗತ ಹೇಳಲೂ ಕಾಯುತ್ತಿರುವೆ.......
ನನ್ನ ಹೃದಯದಲ್ಲಿ ಪ್ರೇಮಜ್ಯೋತಿ ಬೆಳಗಿಸಲು ಬಾ

ನನ್ನ ಮುದ್ದು ಮನವೇ....

"""""....... my dreem boy...... """"""

- Supriya C

10 Nov 2020, 01:17 pm

ಸತ್ಯ ಸತ್ಯ

ಶ್ರಮವಿಲ್ಲದ ದುಡುಮೆ ಇಲ್ಲ
ಕಾಲಚಕ್ರವಿಲ್ಲದ ಜಗತ್ತಿಲ್ಲ
ಖರ್ಚು ವೆಚ್ಚವಿಲ್ಲದ ವ್ಯವಹಾರವಿಲ್ಲ
ಯತ್ನ ಪ್ರಯತ್ನಗಳಿಲ್ಲದ ಗೆಲುವಿಲ್ಲ
ನೋವು ನಲಿವಿಲ್ಲದ ಬದುಕಿಲ್ಲ
ಏಳು ಬೀಳು ಇಲ್ಲದ ಸಾಧನೆಯಿಲ್ಲ

- ರಾಜು ಹಾಸನ

09 Nov 2020, 11:42 am

ಹುಡುಗಾಟ

ಮನಸ್ಸೆಂಬ
ಮಾಯಾ ಜಿಂಕೆ
ಮರಕೋತಿ
ಆಟವಾಡುತ್ತಿದೆ
ಯೌವ್ವನದ
ಬಾಲ ಕಟ್ಟಿ

ಯೌವ್ವನ ಕಳಚಿ
ಮುಪ್ಪು ಬಂದರೆ
ಅರಳಿದ ತಾವರೆ
ಮುದುಡಿದ
ತಾವರೆಯಾಗುವುದು
ಯಾವ ಮಾಯಾ
ಜಿಂಕೆಯು ಇಲ್ಲ
ಯಾವ ಮರಕೋತಿ
ಆಟವು ಇಲ್ಲ
ಯಾವ ವಿಧಿ
ಆಟವು ಇಲ್ಲ
ಎಲ್ಲಾ ವಯಸ್ಸಿನ ಆಟ

- ರಾಜು ಹಾಸನ

09 Nov 2020, 11:34 am

ಸೊಗಸು

ಆಸೆ ಇಷ್ಟ
ಮಾತು‌ ಸುಲಭ
ಕನಸು ಚಂದ
ನನಸು ಕಷ್ಟ

ಬಯಸಿದ ಆಸೆಗಳು
ಕಂಡ ಕನಸುಗಳು
ಕೊಟ್ಟ ಮಾತು
ಪಯಣದ ದಾರಿಯಲ್ಲಿ
ನನಸಾದರೆ
ಚಂದವಯ್ಯ ಚಂದ

ಆಸೆಗಳು ಕನಸಾಗಿ
ಕನಸುಗಳು ನನಸಾಗದಿದ್ದರೆ
ಆಡಿದ ಮಾತು ಪಟ ಪಾಡು
ಯತ್ನ ಪ್ರಯತ್ನಗಳು
ವ್ಯರ್ಥವಯ್ಯ ವ್ಯರ್ಥ

ಮನದ ಆಸೆಗಳು ಸಾವಿರರು
ಕಂಡ ಕನಸುಗಳು ನೂರಾರು
ಆಡಿದ ಮಾತು ಹತ್ತಾರು
ಪಯಣದ ಹಾದಿ ಹಲವರಿದ್ದರು
ಗುರಿ ಮುಟ್ಟುವ ದಾರಿ
ಒಂದೇ ಒಂದೇ ಆಗಿರಲಿ

- ರಾಜು ಹಾಸನ

09 Nov 2020, 11:22 am

ನೆನಪಿನಂಗಳ

ಸುಂದರ ಹೂವಿನ ಹಂದರದೊಳಗೆ
ಮರೆಯಲಿ ನಾಚುತ ಕಿರು ನಗೆ ಚಲ್ಲಿ
ಪರದೆಯ ಮರೆಯಲಿ ಜಾರುತ ನಿಂತ
ಕುಸುಮವೆ ಕಾಡಿದೆ ನಿನ್ನಯ ನೆನಪು //ಪ//

ಪ್ರೇಮ ಪಯಣದ ದಾರಿಯ ತೋರಿ
ಪ್ರೀತಿಯ ಅಮೃತ ಬಳ್ಳಿಯ ಬೆಳೆಸಿ
ಸುಮಧುರ ಇಂಪಿನ ಕಂಪನು ಬೀರಿದ
ಕೋಮಲ ಸುಮವೆ ನಿನ್ನಯ ನೆನಪು //ಚ//೧//

ಕಣ್ಣಿನ ಸನ್ನೆಯ ಸುಳಿಯಲಿ ಸಿಲುಕಿಸಿ
ಸುಮ್ಮನೆ ನಗುತಲಿ ನೆನಪಲಿ ಉಳಿದೆ
ಒಲವಿನ ಮುತ್ತಿನ ಮಾತಿನ ಒಗಟಿನ
ಹೋಳಿಗೆ ನೀಡಿದ ನಿನ್ನಯ ನೆನಪು //೨//

ಸಾಗರದಲೆಯ ತಂಗಾಳಿಯ ಹಾಗೆ
ಮನದಲಿ ಮೂಡಿದೆ ಮಲ್ಲಿಗೆಯಂತೆ
ಕಾಲ್ಗಳ ಗೆಜ್ಜೆಯ ಕುಣಿತಕೆ ಕರಗಿದ
ನನ್ನಯ ಹೃದಯದಿ ನಿನ್ನಯ ನೆನಪು //೩//

ಜೀವ ಭಾವಗಳ ಸಂಗಮಗೊಳಿಸಿ
ಸುಂದರ ಬದುಕಿಗೆ ಮುನ್ನುಡಿ ಬರೆದ
ಸಂಗಾತಿ ಯಾಗುವ ಕನಸನು ಕಂಡು
ಉಸಿರಲಿ ನೇನೆಸುವ ನಿನ್ನ ನೆನಪು //೪//

ಕಲ್ಮೇಶ ಬಡಿಗೇರ
........ಬಾದಾಮಿ.....

- Kalmesh Badiger

08 Nov 2020, 09:05 am

ಭೀಮ ಘರ್ಜನೆ

ಸಿಂಹ ಘರ್ಜನೆ ಭೀಮ ಘರ್ಜನೆ
ಮನುವಾದಿಗಳ ಹುಟ್ಟಡಗಿಸಿದ
ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ದುಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿ
ಮನುವಾದಿಗಳ ನಿದ್ದೆಗೆಡಿಸಿ
ಸಿಂಹ ಸ್ವಪ್ನವಾಗಿ ಕಾಡಿದ
ಭೀಮರಾವ್ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಚಡ್ಡಿ ಉದುರಿದರು ಚಡ್ಡಿ ಹಿಡಿದು
ಹಳ್ಳ ಕೊಳ್ಳ ಬಿದ್ದು ಓಡಿದರು
ಮನುವಾದಿ ಕುನ್ನಿಗಳು
ದೀನ ದಲಿತರ ಸೂರ್ಯ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಮನು ಸ್ಮೃತಿಯ ಸುಟ್ಟು
ಸ್ತ್ರೀ ಬಡವರ ಮಕ್ಕಳ ರಕ್ಷಿಸಿ
ಬೊಗಳುವ ಮನುವಾದಿಗಳ ಸದ್ದಡಗಿಸಿದ
ಭಾರತ ರತ್ನ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ಕುನ್ನಿ ಕುತಂತ್ರಿ ಕಂತ್ರಿ
ಕುಲದವರ ಮೈ ಬೆವರು ಇಳಿಸಿ
ಮನುವಾದಿಗಳ ಎಡೆಮುರಿ ಕಟ್ಟಿದ
ವಿಶ್ವ ರತ್ನ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

ದಂಡು ದಂಡಾಗಿ ಹಿಂಡೇ
ಅಡ್ಡಿ ಬಂದರೂ ಲೆಕ್ಕಿಸದೆ
ಅಂಜದೆ ಅಳುಕದೆ ಹೆದರದೆ ಬೆದರದೆ
ಏಕಾಂಗಿಯಾಗಿ ಸೆದೆಬಡಿದು
ಹಿಮ್ಮೆಟ್ಟಿಸಿದ ಒಂಟಿಸಲಗ
ಜ್ಞಾನ ಜ್ಯೋತಿ ಬಾಬಾಸಾಹೇಬರ
ಸಿಂಹ ಘರ್ಜನೆ ಭೀಮ ಘರ್ಜನೆ

- ರಾಜು ಹಾಸನ

07 Nov 2020, 11:58 pm

ನಿನ್ನ ನಗುವ

ನಿನ್ನ ನಗುವಿನ ಅಲೆಯಲ್ಲಿ ಕಳೆದೋದೆನು ಚೆಲುವ,
ನೋಡುತ್ತಾ ಕುಳಿತರೆ ನನ್ನೇ ನಾ ಮರೆಯುವೆ
ನಿನ್ನ ನಗುವ,

ನಿನ್ನ ನೋಡಿದ ಮೊದಲ ಕ್ಷಣವೇ ಹುಟ್ಟಿತು ನನ್ನಲ್ಲಿ ಪ್ರೀತಿ,
ತಿಳಿಯಲಾರೇನು ನಿನ್ನ ಮುಂದೆ ಹೇಳುವ ರೀತಿ,

ಕನಸುಗಳು ಚಿಗುರೊಡೆದಿವೆ ನಿನ್ನ ನೆನಪಲಿ,
ಅದೆಷ್ಟು ಕವನಗಳ ಬರೆದೆ ನಿನ್ನ ಗುಂಗಲಿ.

- Veena

07 Nov 2020, 09:42 am

ಸರಳ ಜೀವನ

ಮನಸ್ಸು ನಿಮ೯ಲವಾಗಿದ್ದರೆ
ಅದೇ ಸಾಕ್ಷಾತ್ಕಾರ
ಮಾತು ಮೃದುವಾಗಿದ್ದರೆ
ಅದೇ ಚಮಾತ್ಕಾರ
ನಡತೆ ಶುದ್ಧವಾಗಿದ್ಧರೆ
ಅದೇ ಪುರಸ್ಕಾರ
ಬದುಕು ಸರಳವಾಗಿದ್ದರೆ
ಅವರಿಗೊಂದು ನಮಸ್ಕಾರ

- Mahesh Lakkur

07 Nov 2020, 07:51 am