ದೇವರೇ ಜನರ ಜೀವ
ಕಿತ್ತುಕೊಳ್ಳುವ ದುಷ್ಟನಗಿರುವಾಗ
ಜನರು ದುಷ್ಟರಂತೆ
ವರ್ತಿಸುವುದರಲ್ಲಿ ತಪ್ಪೇನಿದೆ
ಅಂಗವಿಕಲರೆಂದು
ಹಿಯಾಳಿಸಿ ಜರಿಯ ಬೇಡ
ನೀ ದೇವರೆಂದು ಪೂಜಿಸುವ
ದೇವರು ಕೂಡ ಅಂಗವಿಕಲನಯ್ಯ
ಅಂಗವಿಕಲರ ಜರಿದರೆ
ನೀ ದೇವರನ್ನ ಜರಿದಂತೆ ಮನುಜ
ಒಂದೇ ದೇಹಕ್ಕೆ
ಹತ್ತಾರು ತಲೆ ಕೈಗಳು ಮಾತ್ರ
ಇರುವುದಯ್ಯ ದೇವರಿಗೆ
ಹತ್ತಾರು ಕಾಲು ಕಣ್ಣುಗಳು
ಇಲ್ಲದ ಅಂಗವಿಕಲನಯ್ಯ
ಈ ನಿಮ್ಮ ದೇವರಯ್ಯ
ದೇವರಿಗೆ ಯಾಕೆ ಬೇಕಯ್ಯ
ಹತ್ತಾರು ತಲೆ ಕೈ ಕಾಲುಗಳು
ತಲೆ ಕೈ ಕಾಲು ಇಲ್ಲದವರಿಗೆ
ತನ್ನ ತಲೆ ಕೈ ಕಾಲು ಕಣ್ಣು ಕೊಟ್ಟು
ಕಾಯಲಾರದಷ್ಟು ಸ್ವಾರ್ಥಿಯೇ
ನಿಮ್ಮ ಅಂಗವಿಕಲ ದೇವರಯ್ಯ
ಚಂದವೋ ಚಂದವೋ ನನ್ನೆಯ ನಾಡು
ನಾ ಹುಟ್ಟಿ ಬೆಳೆದ ನನ್ನ ತಾಯಿ ನಾಡು
ಜನರ ಜೀವ ನದಿ ಹುಟ್ಟಿ ಹರಿಯುವ
ಕಾವೇರಿ ತಾಯಿಯ ತವರೂರು
ಅಣ್ಣ ಬಸವಣ್ಣ ಅಕ್ಕ ಮಹಾದೇವಿ
ಮಡಿವಾಳ ಮಾಚಯ್ಯ ಮದಿಗಾರ ಚೆನ್ನಯ
ಅಂಬಿಗರ ಚೌಡಯ್ಯ ಕನಕದಾಸರು
ಪುರಂದರದಾಸರು ಶರಣ ಸಂತರ ಕರುನಾಡು
ರಾಜ ಮಹಾರಾಜರ ಬೀಡು
ಕೃಷ್ಣರಾಜ ಒಡೆಯರ ಬಂಗಾರದ ನಾಡು
ಟಿಪ್ಪು ಸುಲ್ತಾನ್ ವೀರ ಮದಕರಿ
ಶೂರ ಧೀರರ ಕೆಚ್ಚೆದೆಯ ಗಂಡುಗಲಿಗಳ ನಾಡು
ಒನಕೆ ಓಬವ್ವ ಕಿತ್ತೂರ ರಾಣಿ ಚನ್ನಮ್ಮ
ರಾಣಿ ಅಬ್ಬಕ್ಕ ವೀರ ವನಿತೆಯರ ತವರೂರು
ಗಾನ ಕೋಗಿಲೆಗಳ ಸಂಗೀತದ ಸೂರು
ಚೆಲುವು ತುಂಬಿದ ಶ್ರೀಗಂಧದ ನಾಡು
ನಮ್ಮ ಚೆಲುವ ಕನ್ನಡ ನಾಡು
ನಮ್ಮ ನಾಡು ನುಡಿ ನಮ್ಮ ಕರುನಾಡು ಕನ್ನಡ
ನಮ್ಮ ನೆಲ ಜಲ ಜನ ಭಾಷೆ
ನಮ್ಮ ಉಸಿರು ನಮ್ಮ ಜೀವನ ನಮ್ಮ ಬದುಕು
ಚಂದವೋ ಚಂದವೋ ನನ್ನೆಯ ನಾಡು
ಮನುಷ್ಯನ
ರುಂಡ ಮುಂಡವ ಕತ್ತರಿಸಿ ತಂದು
ಸತ್ತವನ ಹೆಣಕ್ಕೆ ಇಟ್ಟರು
ಮತ್ತೆ ಮರಳಿ ಬಾರದಯ್ಯಾ
ಬಡಪಾಯಿ ಜೀವಾ
ಆನೆಯ ರುಂಡವ ಕತ್ತರಿಸಿ ತಂದು
ಮನುಷ್ಯನ ದೇಹಕ್ಕೆ ಇಟ್ಟು
ಹೋದ ಜೀವವ ಮತ್ತೆ ತುಂಬಿದನಂತೆ
ಇವನ್ಯಾರೋ ಇವನ್ಯಾರೋ
ಚಂಡ ಪ್ರಚಂಡನೇ ಇರಬೇಕು
ನಾಯಿ ತಲೆಯ ಕತ್ತರಿಸಿ
ಕೋಳಿ ಮುಂಡಕ್ಕೆ ಇಟ್ಟರೇ
ಬದುಕುಳಿಯುವುದೇ
ಸತ್ತ ಕೋಳಿ ಬದುಕಿ ಕೂಗುವುದೇ
ಕೋಕೋ ಕೋಳಿ
ದೇವರು ಇರುವನೆಂದು ಕಟ್ಟು ಕಥೆ
ಬರೆದವನು ನಿಜವಾಗಿಯೂ
ಚಂಡರಿಗೆ ಚಂಡ ಪ್ರಚಂಡ ಮಹಾ
ಪ್ರಚಂಡನೇ ಆಗಿರಬೇಕಯ್ಯ
ಅರ್ಥ ಮಾಡಿಕೊಂಡವರಿಗೆ
ಅರ್ಥವಾಗುವುದಯ್ಯ
ಸುಳ್ಳಿನ ಗುಟ್ಟು ಸತ್ಯದ ಬೆಲೆ
********ರಾಜು ಹಾಸನ*********
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಲ್ಲು ಕಂಡರೆ ಕೈ ಮುಗಿಯುವರು
ಖಾವಿ ಕಂಡರೆ ಕಾಲಿಗೆ ಬೀಳುವರು
ಕಲ್ಲ ನಾಗರ ಕಂಡರೆ ಹೇದರುವುದಿಲ್ಲ
ನಿಜ ನಗರ ಕಂಡರೆ ಬೆಚ್ಚಬೀಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ದುಡ್ಡು ಕಂಡರೆ ಬಿಡುವುದಿಲ್ಲ
ಹೆಂಡ ಕಂಡರೆ ಹಿಗ್ಗಿಬಿಡುವರು
ಸಿಹಿ ಕಂಡರೆ ಮುತ್ತುಕೋಳ್ಳುವರು
ಖಂಡ ತುಂಡು ಕಂಡರೆ ನುಂಗಿಕೊಳ್ಳುವರು
ನನ್ನ ಜನ ಒಳ್ಳೆ ಜನ
ತಳುಕು ಬಳುಕು ಇಲ್ಲದ ಮುಗ್ದ ಜನ
ಕಾಣದ ಗೆಳತಿಯೇ ಕೇಳೆ
ನಾ ನಿನಗಾಗಿ ಬರೆದಿರುವೆ
ಒಂದು ಓಲೆ
ಕಾಣೆ ಎಂಬ ಕಾರಣಕ್ಕೆ
ನೀ ಮರೆಯದಿರು ನನ್ನ
ಪ್ರತಿ ಉಸಿರಲು ನಾ ನಿನ್ನ
ನೆನೆಯುವೆ
ಈ ಕಾಲಿ ಹೃದಯದಲಿ ನಿನಗಾಗಿ
ಕಟ್ಟಿರುವೆ ಒಂದು ಚಿಕ್ಕ ಮನೆಯ
ದಯಮಾಡಿ ನೀ ಬಂದು ಸೇರು
ನನ್ನ ಈ ಮನದ ಮನೆಯ.
ನಗುವ ಮೊಗವು ಒಂದಾದರೆ ಅದರೊಳಗಿನ ಅರ್ಥವೇ ಇನೊಂದಾಗಿರುವುದು. ಮೌನಕ್ಕೆ ಸಾವಿರಾರು ಅರ್ಥಗಳಿಹುವುದು ಆದ್ರೂ ಮೌನದ ಮಾತನ್ನು ಅರಿತವರಿಗಷ್ಟೇ ಅದರ ಅರ್ಥ ತಿಳಿಯುವುದು ಅಲ್ವಾ? ಮಾತನಾಡುವ ನಾಲಿಗೆಗೆ ಇರೋ ಬೆಲೆ ಮನುಷ್ಯನ ಮನಸಿಗಿಲ್ಲ..
ಸುಮ್ಮನೆ ಕುಂತಿದ್ದರು
ಬಿಡಲಿಲ್ಲ ಎಳೆದು ತಂದು
ಕುಕ್ಕುರು ಬಡಿಸಿ
ಗುಡಿಯ ಮೇಲೆ ಗುಡಿ ಕಟ್ಟಿ
ಪೂಜಿಸಿದರಯ್ಯ
ಈ ಮೂರ್ಖ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ನಾ ಕರೆದು ಹೇಳಲು ಇಲ್ಲ
ನಾ ಹೋಗಿ ಕೇಳಲು ಇಲ್ಲ
ತಮಗೆ ತಾವೆ ಬಂದು
ಬಾಯಿ ತುಂಬಾ ಹೊಗಳಿ
ಬಾಯಿಗೆ ಬಂದಂತೆ
ಸುಮ್ಮ ಸುಮ್ಮನೇ
ಬೈಯುವರಯ್ಯ
ಈ ಬಾಯಿ ಬಡುಕ ಜನರು
ಇದು ಯಾವ ಧರ್ಮವೂ
ನನಗೆ ಒದಗಿದ ಕರ್ಮವೋ
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು
ಕೇಳಿದ್ದನ್ನು ಕೊಡಲು
ನಾನೇನು ಜಾದೂಗಾರನಲ್ಲ
ನಾನೊಂದು ಜೀವವಿಲ್ಲದ
ಮರದ ಕಲ್ಲಿನ ಗೊಂಬೆ
ಮಣ್ಣಿನ ಮುದ್ದೆ ನಾನಯ್ಯ
ನನ್ನನ್ನೆ ದೇವರೆಂದು
ಪೂಜಿಸುವರಯ್ಯ
ಈ ದಂಡ ಪಿಂಡ ಜನರು
ನಾ ಎಲ್ಲೂ ಕಾಣೆ
ಎಲ್ಲೂ ಕಾಣೆನು