Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ ನೀ ಯಾಕೆ ಈ ರೀತಿ

ಕಾಣದ ಕುತೂಹಲ ಮನದ ಕದ ತಟ್ಟಿ ದಾಗ
ಕಣ್ಣ ಕಡಲಲ್ಲಿ ಆಸೆಯ ಚಿಲುಮೆ ಉಕ್ಕಿದಾಗಾ
ಕಣ್ಮುಚಿದರು ಕಾಡುವ ನೋಟ ನೀಡಿದಾಗ

ಪ್ರೀತಿ ನೀ ಯಾಕೆ ಈ ರೀತಿ ......

- Kempu

14 Oct 2020, 08:46 pm

@ಕಲಿಸೋಣ ಬನ್ನಿ@

ಕಲಿಯುತ ನಾವು ಕಲಿಸೋಣ ಬನ್ನಿ
ಅಕ್ಷರಗಳ ಬೀಜಗಳ ಬಿತ್ತೋಣ ಬನ್ನಿ
ಸಾಕ್ಷರತೆ ಜ್ಞಾನವ ಬೆಳಗಿಸೋಣ ಬನ್ನಿ.

ಕಲಿಯಲು ಬಂದಿಹವು ಸಂತಸ ತಂದಿಹವು
ಹರುಷ ಮನದಿ ಕಲರವಗೈಯುತಿಹವು
ಮಕ್ಕಳಲ್ಲಿ ಕಲಿಕೆಯ ಜಪಿಸೋಣ ಬನ್ನಿ.

ಮಕ್ಕಳಲ್ಲಿ ಅಕ್ಕರೆಯ ನೀಡಿ
ಆತ್ಮೀಯತೆ ಬೆಳೆಸೋಣ
ಸಾಕ್ಷರತೆಯ ಹೆಚ್ಚಿಸೋಣ
ಮೌಲ್ಯಗಳ ಕಲಿಸೋಣ
ಭವ್ಯ ಭಾರತಕ್ಕೆ ಪ್ರಜೆಗಳ ನಿರ್ಮಿಸೋಣ.

ಕಲಿಯುತ್ತಾ ನಾವು ಕಲಿಸೋಣ ಬನ್ನಿ
ಸುಸಂಸ್ಕೃತ ಸಮಾಜವ ಕಟ್ಟೋಣ ಬನ್ನಿ.
✍️ ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 11:00 pm

@ಮೌನವೇ ಲೇಸು@

ಮಾತು ಮಾತುಗಳನ್ನಾಡಿ
ಜನರ ಬಾಯ್ ಸೋತಿವೆ
ಮಾತುಗಳಿಗೆ ಇಲ್ಲವಾಗಿದೆ
ಮತ ಮೌಲ್ಯದ ತೂಕ.

ಎತ್ತನೋಡಿದರತ್ತ
ಮಾತನಾಡುವವರೇ,
ಎಲ್ಲರ ಮಾತಿನಲ್ಲಿ
ನಾನೆಂಬ ಅಹಂಭಾವ,
ಯಾರು ಯಾರದು
ಮಾತು ಕೇಳುವವರಿಲ್ಲ.

ಮಾತು ಕೇಳಿ ಅರಗಿಸಿಕೊಳ್ಳುವವರಿಲ್ಲ
ಮಾತುಗಳನ್ನೇ ಆದರ್ಶವಾಗಿಸಿ ಕೊಳ್ಳುವವರಿಲ್ಲ,
ಮಾತುಗಳನ್ನು ಅನುಷ್ಠಾನ ಮಾಡುವವರಿಲ್ಲ,
ಮಾತು ಮೋಡಗಳಂತೆ ಚದುರುತಿಹುದು
ಗುಡುಗು-ಸಿಡಿಲುಗಳಂತೆ ಕರ್ಕಶವೆನಿಸುತಿಹವು,
ಮಾತುಗಳ ಮಾರ್ದನಿಯಲ್ಲಿ
ಮಾತುಗಳಿಗಿಂತ ಮೌನವೇ ಲೇಸೆನಿಸುತ್ತದೆ.
✍️ ಮಹೇಶ -ಶಿಕ್ಷಕರು

- MAHESH.हिन्दीशिक्षक

13 Oct 2020, 10:51 pm

@ಅಕ್ಷರದ ಆತಂಕ@

ಅಕ್ಷರ ಕಲಿಯಿತು ಜನ ಅಸಂಖ್ಯಾತದಲ್ಲಿ
ಸಾಕ್ಷರ ರಾಯಿತು ಸಾಗರದಲ್ಲಿ
ಸಾಧನೆ ಮಾಡಿತು ಸಾವಿರದಲ್ಲಿ.

ಸಾಧನೆ ಮಾಡುವ ಶರವೇಗದಲ್ಲಿ
ಸಾಹಸ ಮಾಡುವ ಸಡಗರದಲ್ಲಿ
ವೈಭವದ ಬದುಕು ನೀಗಿಸುವಲ್ಲಿ
ಸ್ವೇಚ್ಛೆಯ ಸಂಭ್ರಮದಲ್ಲಿ
ಮಾನವೀಯ ಮೌಲ್ಯ ಮರೆಯಾಯಿತು
ಮನುಷ್ಯನಲ್ಲಿ ಅನುದಿನದಿ.

ಅಕ್ಷರದಿಂದ ಅಕ್ಕರೆ ಸಿಗಲಿಲ್ಲ
ಹಣದಿಂದಲೇ ಆತ್ಮೀಯತೆ ಹರಿಯಲಿಲ್ಲ
ಅಂತಸ್ತು ಗಳಿಂದ ಅಂತಃಕರಣ ಬರಲಿಲ್ಲ
ಬಂಗಲೆಗಳಿಂದ ಬಾಂಧವ್ಯ ಬೆಸೆಯಲಿಲ್ಲ
ವೈಭೋಗದಲ್ಲಿ ವಾಸ್ತವತೆ ಕಾಣಲಿಲ್ಲ
ಅಕ್ಷರವು ಮನುಷ್ಯನಲ್ಲಿ ದ್ವೇಷ ವೈಷಮ್ಯ,
ವೈರುಧ್ಯಗಳನ್ನು ಸೃಷ್ಟಿಸಿತು,
ಮನುಷ್ಯನಲ್ಲಿ ಮಾನವೀಯತೆಯನ್ನು
ಕೊಂದಿತು ಆಧುನಿಕತೆಯ ದಿನಗಳಲ್ಲಿ.
✍️ ಮಹೇಶ್. ಶಿಕ್ಷಕರು

- MAHESH.हिन्दीशिक्षक

13 Oct 2020, 10:44 pm

@ನನ್ನ ಬದುಕು@

ಎಂಥದೋ ಬದುಕದು
ಬಡತನ ಬವಣೆಯ ಆಗರವದು
ಪ್ರೀತಿ ವಾತ್ಸಲ್ಯಗಳ ಕಳೆದುಕೊಂಡು
ಕೊರಗುತಾ ದಿನಗಳೆದ ಬದುಕದು.

ಕೊರತೆಗಳನ್ನು ಅನುಭವಿಸಿ
ಸಮಸ್ಯೆಗಳಲ್ಲಿ ಸುಳಿದಾಡಿ
ಬಸವಳಿದ ದಾರಿದ್ರ್ಯ ದ ದಿನಗಳದು.
ನಿತ್ಯ ನಿರ್ಲಕ್ಷ್ಯತನದ ಬದುಕಿ
ಸೋಲುಗಳ ಸರಪಳಿ ಹೊತ್ತುಕೊಂಡು
ಅವಮಾನಗಳ ಸಹಿಸಿಕೊಂಡು
ಮೌನ ರೋಧಿಸಿದ ದಿನಗಳದು.

ಇನ್ನೊಬ್ಬ ಹಂಗಿನಲಿ ಬದುಕಿ
ಜನರ ನಿಂದೆ ಗಳ ಸಹಿಸಿ
ಅವಮಾನ ಪ್ರಶ್ನಿಸದೆ ಮೌನ ದೇನಿಸಿದ ದಿನಗಳದು.

ಗುರಿಯಿಲ್ಲದ ಜೀವನ
ವಾಸ್ತವದ ಕಲ್ಪನೆ
ಸ್ಪಷ್ಟ ನಿಖರತೆ ಇಲ್ಲದ
ಗಮ್ಯವೀರದ ವ್ಯರ್ಥ ದಿನಗಳದು.

ಆತಂಕಗಳ ತೂಗುಯ್ಯಾಲೆಯಲ್ಲಿ
ಕಂಡ ಕನಸುಗಳ ಬೆನ್ನತ್ತಿ
ಬಸವಳಿದ ಬರ್ಬರ ಬದುಕದು
ಕನಸುಗಳು ಕೈ ತಪ್ಪಿದಾಗ
ಕೊರಗಿದ ಕನಿಕರದ ದಿನಗಳದು.

ತುಳಿದ ಸೋಲುಗಳ ಮೆಟ್ಟಿಲನು
ಅರಳಿದ ಕನಸುಗಳ ತೊಟ್ಟಿಲನು
ಬೆಂಬಿಡದೆ ಬೆನ್ನತ್ತಿ ಬರಸೆಳೆದು
ಅನುಭವದಿ ಧೃಡವಾಗಿ ಕಟ್ಟಿದ
ವಾಸ್ತವದ ಈ ನನ್ನ ಬದುಕದು.
✍️ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 08:35 pm

ಮಳೆಹನಿ

ಮೊದಲ ಮಳೆಯ ಹನಿಯ ಸ್ಪರ್ಶಕ್ಕೆ
ಇಳೆಯ ಜನರ ಮನ ಕಾಯ್ದಿದೆ
ಆಗಸದ ರವಿಯ ಬಿಸಿಲಿನಾಟಕೆ
ಭೂಮಿಯು ಬಾಯಿ ತೆರೆದಿದೆ
ಬಿಸಿಲ ರೌದ್ರವ ಸಹಿಸದೇ
ಜಗದ ಜಾನುವಾರು ಬಸವಳಿದಿದೆ.

ಕಾನನದಿ ಚೈತ್ರದ ಚಿಗುರು ಒಡಮೂಡಿದೆ
ಮರದ ಬೇರು ವರ್ಷದ ಧಾರೆಗೆ ಒಡಲಾಡಿದೆ.
ರೈತನ ಮನ ಮಳೆಯ ಹನಿಗೆ ಕಾಯ್ದಿದೆ
ನಿಸರ್ಗದಲ್ಲಿ ಮೌನದ ಮೆರವಣಿಗೆ ನಡೆದಿದೆ
ನಿಸರ್ಗದ ಮೌನ ವರ್ಷಧಾರೆಯ ನಿರೀಕ್ಷೆಯಲ್ಲಿದೆ.
ಆಗಸದಿ ವರ್ಷದಾರೆ ಹರಿದುಬರಲಿ
ಜಗದ ಮೌನಕೆ ಜನರ ಮನಕ್ಕೆ
ನಿಸರ್ಗದ ನೀರವತೆಗೆ ತಂಪು ತರಲಿ
ಸುಳಿವ ತಂಗಾಳಿಯು ಜನರ ಮನಕೆ ಹರುಷ ತರಲಿ.
ಮಹೇಶ್ ಶಿಕ್ಷಕರು

- MAHESH.हिन्दीशिक्षक

13 Oct 2020, 08:15 pm

@ಮಗು@

ಮುದ್ದುಮುಖದ ಕಂಗಳಿವು
ಏನು ಅರಿಯದ ಹಸುಗೂಸುಗಳು ಕುತೂಹಲ ನಿರೀಕ್ಷೆಗಳ
ಉತ್ಸಾಹದ ಚಿಲುಮೆಗಳಿವು
ಸಂತಸದಿ ದಿನಗಳಯುತ
ಬಾಂಗಳದಿ ಕನಸುಗಳ ಚಿತ್ತಾರ ಬಿಡಿಸುತ್ತಾ
ಸೃಷ್ಟಿ ವೈಚಿತ್ರ್ಯವನ್ನು ಗಮನಿಸುವವು
ಇನ್ನೊಬ್ಬರ ನಗುವಿನ. ನಿರೀಕ್ಷೆಯನ್ನು ತಣಿಸುವವು
ಸರ್ವರಲ್ಲಿ ಪ್ರೀತಿಯ ಬುಗ್ಗೆ ಉಕ್ಕಿಸುವವು
ಎಲ್ಲರಲ್ಲಿಯೂ ಸಂತೋಷವನ್ನು ಹಂಚುತ್ತಾ
ಮನುಷ್ಯತ್ವದ ಸಂದೇಶ ನೀಡುತಿಹವು.
✍️ಮಹೇಶ್.ಶಿಕ್ಷಕರು, (ಬಾ,ಸ,ಪ್ರೌ,ಶಾ, ಮಸ್ಕಿ)

- MAHESH.हिन्दीशिक्षक

13 Oct 2020, 08:06 pm

ಜೀವನ

ಜೀವನ ಸಾವಿನೆಡೆಗಿನ ಓಟ
ಅದನ್ನು ಮರೆತು ನಡುವೆ ಕೋಪದಲಿ ಹಾರಾಟ
ದುಃಖದಲಿ ನರಳಾಟ
ಮತ್ಸರದಿ ಮನದುರಿಯೂತ
ಆಗಾಗ ಸ್ನೇಹದ ಸುಖದೂಟ
ಸುತ್ತಲಿನವರ ಪ್ರೀತಿಗಾಗಿ ಪರದಾಟ

ಉಸಿರ ಕೊನೆತನಕ ಆಸೆಗಳ ಆರ್ಭಟ
ಸೋಲು ಗೆಲುವೆಂಬ ಭಾವನೆಗಳು ಕಲಿಸೋ ಪಾಠ
ಖುಷಿಗಾಗಿ ಬೆಳೆಸಿಕೊಂಡ ಹಲವಾರು ಚಟ
ಯೌವ್ವನದಲಿ ಹೇಳಿಕೊಳ್ಳಲಾಗದ ಮನ್ಮಥನ ಆಟ

ಜೀವನ ಹೇಗೆಂಬುದನ್ನು ತಿಳಿಸಿಕೊಡಲಾಗದ ಆಂಕಗಳಿಗಾಗಿ ತಯಾರಾಗಿರೊ ಪಠ್ಯದ ಪಾಠ
ಓದಿದ ನಂತರ ಕೆಲಸಕ್ಕಾಗಿ ಪರದಾಟ
ಕೆಲಸ ಸಿಗದಾಗ ಸುತ್ತಲಿನವರ ನೋವುಂಟು ಮಾಡೋ ಮಾತಿನ ಹೊಡೆತ

ಕೆಲಸ ಸಿಕ್ಕರೆ ಮದುವೆಯ ಮಾತು
ಇಲ್ಲದಿದ್ದರೆ ಮದುವೆ ಕನಸಿನ ಮಾತು
ಮದುವೆಯಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಅವರಿಗಾಗಿ ಹಣ ಕೂಡಿಡುವ ಚಿಂತೆ
ಎಲ್ಲ ಮುಗಿದ ಮೇಲೆ ಮುಪ್ಪಿನ ಚಿಂತೆ
ಇನ್ನೇನುಳಿದಿದೆ ಎನ್ನುವಷ್ಟರಲ್ಲಿ ಏರಲೆ ಬೇಕು ಮಸಣದಿ ಚಿತೆ

ಜೀವನ ಚಕ್ರ ಒಂತರಾ ವಿಚಿತ್ರ
*ತಿಳಿದವರಾರು ಸೃಷ್ಟಿಯ ಚಿತ್ತ*
ದೀರ್ಘಾಲೋಚನೆ ಎಂದಿಗೂ ಬೇಡ
*ಜೀವನ ಇಷ್ಟೆ ಚಿಂತೆಯು ಬೇಡ*☺️

________________*ದೇವಪೂರ್ಣ*

- DevakumarBK Dev

13 Oct 2020, 07:01 pm

ಪುಟ್ಟ ಮಲ್ಲಿ

ಕೋಳಿ ಜಡೆಯ
ತುಂಡು ಲಂಗದ
ಪುಟ್ಟ ಮಲ್ಲಿ
ಪುಟ್ಟ ಪುಟ್ಟ ಕೈ
ಪುಟ್ಟ ಪುಟ್ಟ ಮಾತು
ಪುಟ್ಟ ಪುಟ್ಟ ಹೆಜ್ಜೆ
ಪುಟ್ಟ ಪುಟ್ಟ ಗೆಜ್ಜೆ
ಪುಟ್ಟ ಪುಟ್ಟ ಹೃದಯ
ಪುಟ್ಟ ಪುಟ್ಟ ಕಂದ
ಬಿದ್ದು ಹೊರಳಾಡುವಳು
ನನ್ನೆದೆಯ ಗುಡಿಯ ಮೇಲೆ

ಪುಟ್ಟ ಪುಟ್ಟ ಕಂದನ
ಪುಟ್ಟ ತೊದಲು ಮಾತು
ಕೇಳಲು ಬಲು
ಅಂದ ಚಂದವಯ್ಯ
ಅವಳು ನಕ್ಕರೆ
ಬಲು ಸೊಗಸು
ಅವಳ ಮಾತೇ
ಮುತ್ತಿನ ಹನಿ ಜೇನಿನ ಹನಿ
ಅವಳ ಖುಷಿಯೇ
ನನ್ನ ಉಸಿರು ನನ್ನ ಬದುಕು

- ರಾಜು ಹಾಸನ

13 Oct 2020, 03:25 pm

ಜನ ಸೇವೆ

ಕಾಡಿ ಬೇಡಿ ಭಿಕ್ಷೆ ಬೇಡಿ
ಕೈ ಕಾಲು ಹಿಡಿದು
ಬರುವರು ಗುಲಾಮರು
ಜನರ ಸೇವೆಗೆಂದು
ಗೆದ್ದ ಮೇಲೆ
ಮಾಡಿಸಿಕೊಳ್ಳುವರು
ಜನರಿಂದಲೇ
ತಮ್ಮ ತಮ್ಮ ಸೇವೆ

ಜನರಿಗೆ ಕೊಡುವರು
ಸುಳ್ಳು ಆಶ್ವಾಸನೆ
ಬಗೆಹರಿಯದು ಸಮಸ್ಯೆ
ಬಾರದಿರುವುದು ಪರಿಹಾರ
ನಾವು ಕೊಡಬೇಕಾಗಿದೆ
ಏಟಿಗೆ ಏಟು ತಿರುಗೇಟು
ಇಲ್ಲದಿದ್ದರೆ ಗುಡಿಸಿ
ಗುಂಡಾಂತರ ಮಾಡಿ
ತಿಪ್ಪೆ ಸಾರಿಸಿ
ಪರಾರಿಯಾಗುವರು
ಮನೆಯ ಮುಂದೆ
ರಂಗೋಲಿ ಬಿಡಿಸಿ

- ರಾಜು ಹಾಸನ

12 Oct 2020, 05:06 pm