ನಾವು ಆಡುವ
ಮಾತು ಬಲು ಚಂದವೆಂದು
ಆಡದಿರಿ ಹಸಿ ಸುಳ್ಳು
ಚುಚ್ಚದಿರಲಿ ಮಾತು ಮುಳ್ಳಾಗಿ
ಕೊಲ್ಲದಿರಲಿ ಮೌನವಾಗಿ
ಮಾತು ಹಿತವಾಗಿರಲಿ
ಮೌನ ಮಿತವಾಗಿರಲಿ
ಇಲ್ಲವಾದಲ್ಲಿ ಮಾತು
ಮುಳ್ಳಾಗುವುದು
ಮೌನ ವಿಷವಾಗುವುದು
ಎಚ್ಚರವಿರಲಿ
ನಾವು ಆಡುವ ಮಾತಿನಲ್ಲಿ
ಹಿಡಿತವಿರಲಿ
ನಮ್ಮ ನಡೆ ನುಡಿಯಲ್ಲಿ
ದೇಶ ಕಾಯೊ ಯೋಧನಿಗೆ ಸಿಗೊ ಗೌರವ
ಈ ನಮ್ಮ ದೇಶದಲ್ಲಿ ಒಬ್ಬ ರಾಜಕಾರಣಿಗೂ ಇಲ್ಲ ಒಬ್ಬ ಅಧಿಕಾರಿಗೂ ಇಲ್ಲ
ಯಾಕೆಂದ್ರೆ
ಒಬ್ಬ ತಪ್ಪು ಹೆಜ್ಜೆ ಇಟ್ಟರೆ ಇಡಿ ಖಾಂದನಕ್ಕೆ ಗೆಜ್ಜೆ ಕಟ್ಟತ್ತಾರೆ
ಯಾಕೆ ಸೈನಿಕರೇನು ತಪ್ಪೆ ಮಾಡಲ್ವ ಮಾಡುತಾರೆ
ಆದರೆ ದೇಶ ಸೇವೆ ಮುಗಿದ ಮೇಲೆ ಪ್ರಾಮಾಣಿಕತೆ ಮೆಚ್ಚಿ
ಪಿಂಚಣಿಗೊಸ್ಕರ ಚಪ್ಪಲಿ ಸವೆದು ಹೋಗಿ ಸುಸ್ತ ಆಗೊ ತರ
ಪಿಡಿಸುತ್ತಾರಲ್ವ ರಾಜಕಾರಣಿಗಳು ,ಅಧಿಕಾರಿಗಳು ಅವರಿಗೆ ಲಂಚ ಅಂತ ಭಿಕ್ಷೆ ನೀಡಬೇಕಲ್ವ ಅದೇ ಒಂದು ತಪ್ಪು
ದೇಶದ ಗಡಿಯಾಚೆ ಹುಲಿ ಬಂದ್ರು ಹೊಡೆದು ಉರುಳಿಸೊ ತಾಕತ್ತು ನಮ್ಮ ಸೈನಿಕರದು
ಅದೇ ದೇಶದೊಳಗಿರೊ ಇಲಿಗಳನ್ನ ಹೊಡೆದು ಬಿಸಾಡೊಣ ಅಂದ್ರೆ ಕಾಯ್ದೆ ಕಾನೂನು ಸಂವಿಧಾನ ಅಂತ ಇದೆ ಸಾಕ್ಷ್ಯಾಧಾರವಿಲ್ಲದೆ ಇಲಿಗಳು ಹೆಗ್ಗಣಗಳ ತರ ಆಗಿದಾವೆ
ಬಿಲ ಬಗೆಯೊದೊಂದೆ ಕೆಲಸ
ಸಾಕ್ಷ್ಯಾಧಾರ ಮೂಲಕ ಸಿಕ್ಕರೆ ಕಾನೂನು ಚೌಕಟ್ಟಲ್ಲಿ ಚಟ್ಟ ಕಟ್ಟೊದೆ
ಸುಂದರ ಮನಸ್ಸಿನ
ಮುದ್ದು ಹುಡುಗಿ
ಮುದ್ದು ಹೃದಯಾದ
ನನ್ನ ಬಾಳ ಸಂಗಾತಿ
ನಗು ನಗುತ್ತಾ ಇರಲಿ
ಚಿರ ಕಾಲ ಬೆಳ್ಳಿ ಮೋಡಗಳ
ಚುಕ್ಕಿ ತಾರೆಯಂತೆ
ಹರುಷವಿರಲಿ ಸಾದಾ ಕಾಲ
ಆಗಸದ ಹಕ್ಕಿಯಂತೆ
ಬದುಕು ಬಂಗಾರವಾಗಿರಲಿ
ವರುಷಗಳು ಉರುಳಿದರು
ಸಂತೋಷ ತುಂಬಿರಲೆಂದು
ಹೃತ್ಪೂರ್ವಕ ಹುಟ್ಟು ಹಬ್ಬದ
ಶುಭಾಷಯ ಕೋರುವ
ಇಂತಿ ನಿನ್ನ ಗೆಳಯ
ನನ್ನದೆ ಜೀವನದಲಿ ನಿನ್ನಯ ಒಡನಾಟ
ನರ್ತಿಸಿ ನಾಚಿಸುವ ನವಿಲಿನ ನಿನ್ನ ಮೈಮಾಟ
ಕಂಡೆ ನಿನ್ನ ಕೀರು ನಗೆಯ ಕಳ್ಳ ನೋಟ
ಕಾಯ್ದಿರಿಸಲಿ ಮಿಡಿಯುವ ನನ್ನ ಹೃದಯಕೆ
ನುಡಿಸು ಬಾ ಹೂ ಬಾಣ ತಂತಿಯ ಮಿಟಿ
ನಾನು ನನ್ನದೆಂದು
ಕಿತ್ತಾಡಿ ಹೊಡೆದಾಡುವ ಜನ
ಮನೆ ಮೇಲೆ ಮನೆ ಕಟ್ಟಿ
ಹಣದ ಮೇಲೆ ಹಣ ಸಂಪಾದಿಸಿ
ಸಂಪತ್ತಿನ ಮೇಲೆ ಸಂಪತ್ತು
ಕೂಡಿಟ್ಟು ಬಚ್ಚಿಟ್ಟರೇನು ಬಂತು
ತಂದೆ ತಾಯಿ ಕೊಟ್ಟ ಜೀವ
ಪ್ರಾಣ ಭಿಕ್ಷೆಯಾಗಿರುವಾಗ
ಪ್ರಕೃತಿ ಕೊಟ್ಟ ಸಿರಿ ಸಂಪತ್ತು
ನಮ್ಮದಲ್ಲದಿರುವಾಗ ಜಂಬವೇಕೆ
ರೈತ ಬೆಳೆದ ಅನ್ನ ತಿಂದು ಬದುಕುವ
ನಾವು ನನ್ನದೆಂದು ನಮ್ಮದೆಂದು
ಹೇಳುವ ಗರ್ವವು ನಮಗಿಲ್ಲ
ಏನೇ ಆದರೂ ಏನೇ ಇದ್ದರೂ
ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನ
ಯಾರಿಂದಲೂ ತಪ್ಪಿಸಲಾಗದು