Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏನಿದೇ

ಮನೆ ಮೇಲೆ ಮನೆ
ಸಂಪತ್ತಿನ ಮೇಲೆ ಸಂಪತ್ತು
ಹಣದ ಮೇಲೆ ಹಣ
ಏನಿದ್ದರೇನು ಬಂತು
ತಂದೆ ತಾಯಿ
ಕೊಟ್ಟ ಜೀವ ಜೀವನ
ರೈತ ಬೆಳೆದ ಅನ್ನ
ತಿಂದು ಬದುಕು ನಾವು
ನಮ್ಮದೇನ್ನುವುದು ಏನಿದೆ

- ರಾಜು ಹಾಸನ

10 Oct 2020, 02:56 pm

ಶುಭಾಷಯಗಳು

ಸುಮಧುರ ಸುಂದರ
ಮನಸ್ಸುಗಳ ಸಂಗಮ
ಹೃದಯ ಹೃದಯಗಳ
ಮಿಲನ ಸಂಮಿಲನ
ಪ್ರೀತಿ ಪ್ರೇಮದ
‌ ಬೆಳ್ಳಕ್ಕಿ ಜೋಡಿ
ಜನುಮ ಜನುಮದ
ಅನುಬಂಧದ ಜೋಡಿ
ನವ ನವೀನ
ಮದುಮಕ್ಕಳ ನವ ಜೋಡಿ
ನಗು ನಗುತಾ
ಸುಖವಾಗಿ ಬಾಳಲಿ
ನೂರಾರು ಕಾಲ

- ರಾಜು ಹಾಸನ

10 Oct 2020, 02:35 pm

ನಂಬಿಕೆ ಇಲ್ಲದ ಮೇಲೆ

ನಂಬಿಕೆ ಇಲ್ಲದ ಮೇಲೆ
ಹೂವು ಹಾವಾದಂತೆ
ಅಮೃತವು ವಿಷವಾದಂತೆ
ಬದುಕಿದ್ದು ಸತ್ತಂತೆ

ಜೀವಕ್ಕೆ ಜೀವ ಎಂದು
ನಂಬಿಬಂದೆ ನಾನಂದು
ಅಗ್ನಿಸಾಕ್ಷಿಯಾಗಿ ನುಡಿದೆ ನೀ
ನಂಬಿಕೆಗೆ ನಾನೆ ನೆಂಟನೆಂದು

ಉಸಿರು ನಿಲ್ಲುವ ಮುನ್ನ
ಹೆಸರುಳಿಸುವ ಬಯಕೆ ನನ್ನದು
ಹೆಸರಳಿಸಿ ಉಸಿರಾಡುವ
ಹಾದಿಯಲ್ಲಿ ಸಾಗಿಹೆ ನೀನಿಂದು

ಅಂತರಂಗದ ಅರಿವಿಲ್ಲದೆ
ಅಂಧಕಾರದ ದಾರಿಯಲ್ಲಿ
ನಂಬಿದವರ ಮಣ್ಣಾಗಿಸಿ
ಮಸಣದಲ್ಲಿ ಮಲಗಿಹೆ ಇಂದು




ಶಾರದ

- ಶಕುಂತಲಾ

10 Oct 2020, 06:40 am

ಚಿರ ಋಣಿ

ಸುಖವೆಂದರೆ ಓಡಿ ಬರುವ ಮಾನವ
ಕಷ್ಟವೆಂದರೆ ಓಡಿ ಹೋಗುವ ಮನುಜ
ಕಷ್ಟ ಸುಖ ನೋವು ನಲಿವು
ಏನೇ ಬಂದರೂ ಓಡಿಹೋಗದೆ
ಧೈರ್ಯದಿಂದ ಓಡಿ ಬಂದು
ಹೆಗಲಿಗೆ ಹೆಗಲು ಕೊಟ್ಟು ಕಾಯುವ
ಕರುಣಮಹಿ ತಂದೆ ತಾಯಿಗೆ
ಸಾದಾ ಕಾಲ ನಾ ಚಿರ ಋಣಿ

- ರಾಜು ಹಾಸನ

09 Oct 2020, 11:33 pm

ಓಡುವರಯ್ಯ

ಆ ದೇವರಿಗೆ ಈ ದೇವರಿಗೆ
ಆ ಹರಕೆ ಈ ಹರಕೆಯೆಂದು
ಮಾಡಿಡುವರಯ್ಯ ಎಡೆಯೂಟ
ಕುರಿ ಕೋಳಿ ಕತ್ತರಿಸಿ
ತನ್ನನ್ನು ತಾನು ಕತ್ತರಿಸಿ
ಎಡೆಯೂಟ ಮಾಡಿರಿ ಎಂದರೆ
ಓಡುವರಯ್ಯ ಬಿದ್ದ್ನೋ ಎದ್ದ್ನೋ
ಎಂದು ಕೈಗೆ ಸಿಗದಂತೆ
ಪ್ರಾಣಿ ಮಾಂಸ ಕಂಡರೆ
ಜೊಲ್ಲು ಸುರಿಸುವ ಮಾನವ
ತನ್ನ ಬೆರಳು ತಾನೇ ಕತ್ತರಿಸಿ
ತಿನ್ನೆಂದರೆ ಮಾತು ಬಾರದ
ಮೂಕನಾಗುವನಯ್ಯ

- ರಾಜು ಹಾಸನ

09 Oct 2020, 06:22 pm

ಆ ಶಾಲೆಯಿಂದಾನೆ ಬಂದಿದ್ದು..

ಶಾಲೆಗೆ ಮಕ್ಕಳನ್ನು ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ

ಇಲ್ಲಿ
ಮೇಷ್ಟ್ರು ನಡೆ ನುಡಿ ಬೇರೆಯಾಗಿ ಸುಳ್ಳುಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ಪೊಲೀಸ್ ಲಂಚ ವಸೂಲಿಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ವಕೀಲ ಹಣಪಡೆದು ಅನ್ಯಾಯದ ನ್ಯಾಯವಾದಿಯಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..

ವೈದ್ಯ ಶ್ರೀಮಂತ ರೋಗಿಯನ್ನು ಮಾತ್ರ ಮುಟ್ಟಿ ನೋಡುತ್ತಿದ್ದಾನೆ
ಅವನು ಆ ಶಾಲೆಯಿಂದಾನೆ ಶ್ರಮಪಟ್ಟು ಬಂದಿದ್ದು

ಸರ್ಕಾರಿ ಅಧಿಕಾರಿಗಳು ಹೆಚ್ಚು ಭ್ರಷ್ಟರಾಗಿದ್ದಾರೆ
ಅವರು ಆ ಶಾಲೆಯಲ್ಲೇ ಹೆಚ್ಚು ಇದ್ದು ಬಂದಿದ್ದು..

ರಾಜಕಾರಣಿ ಜಾತಿ ಧರ್ಮವ ಬಳಸಿ ಸಮಾಜಕ್ಕೆ ಕೋಮುವಾದದ ಬೆಂಕಿ ಹಚ್ಚಿ ದೇಶವನ್ನು ಅಳುತಿದ್ದಾನೆ
ಅವನು ಆ ಶಾಲೆಯಿಂದಾನೆ ಬೇಗ ಬಂದಿದ್ದು...

ಸುದ್ದಿವಾಹಿನಿಯವರು ಜ್ಯೋತಿಷಿಗಳನ್ನು ಕೂರಿಸಿಕೊಂಡು ಇಬ್ಬರು ಬೊಗಳೆ ಬಿಡುತ್ತಾ ಪುಂಗಿದಾಸರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ಬಂದಿದ್ದು..

ಸಾಹಿತಿಗಳು ಇಲ್ಲದ ಸಲ್ಲದ ಭ್ರಮಸಂಗತಿಗಳನ್ನು ತುಂಬುವ ಚಿಂತಕರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ನಿಧಾನಕ್ಕೆ ಬಂದಿದ್ದು

ಇಂತಹ ವ್ಯರ್ಥ ಮಾತುಗಳನ್ನಾಡುವ ನಾನು ಬಂದಿದ್ದು ಆ ಶಾಲೆಯಿಂದಾನೆ.. !

ದಯವಿಟ್ಟು..
ಶಾಲೆಗೆ ಮಕ್ಕಳ ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ.....

-..ಪ್ರವೀಣಾ ಸಿಂಗೋನಹಳ್ಳಿ..

- praveens singonahalli

09 Oct 2020, 12:11 pm

ಮೂಢನಂಬಿಕೆ

ಹಸಿರು ಗರಿಕೆಯ ಹುಲ್ಲು ತಿಂದು
ಹಾಲು ಕೊಡುವ ಹಸುವಿನಲ್ಲಿ
ಮುಕ್ಕೋಟಿ ದೇವರು ಇರುವುದಾದರೆ
ಆದೇ ಹಸಿರು ಗರಿಕೆ ಹುಲ್ಲು ತಿಂದು
ಹಾಲು ಕೊಡುವ ಎಮ್ಮೆಯಲ್ಲಿ
ಯಾಕಿಲ್ಲ ಮುಕ್ಕೋಟಿ ದೇವರುಗಳು

ಹಸುವಿನ ವಿಭೂತಿ ಶ್ರೇಷ್ಠವೆಂದು
ಹಣೆಗೆ ಮೈ ಕೈಗೆ ತಿಕ್ಕಿಕೊಳ್ಳುವ
ಜನರು ತಿಂದು ರುಚಿ ಕಂಡಿರುವರೇ
ಇದು ಹಸುವಿನ ಸಗಣಿ ಇಲ್ಲ
ಇದು ಎಮ್ಮೆಯ ಸಗಣಿಯೆಂದು
ಯಾರಿಗೆ ಗೊತ್ತು ಯಾರು
ಯಾವ ಸಗಣಿ ತಿಂದಿದ್ದಾರೋ ಏನು
ಅವರೇ ಬಲ್ಲವರು ಅವರೇ ನಿಪುಣರು

- ರಾಜು ಹಾಸನ

09 Oct 2020, 12:51 am

ಹೊಟ್ಟೆ ಪಾಡು

ಪೂಜೆ ಪುನಸ್ಕಾರ
ಹಬ್ಬ ಹರಿದಿನ ಜಪ ತಪ ಮಾಡೆಂದು
ಯಾವ ದೇವರು ಯಾವ ಪುಸ್ತಕದಲ್ಲಿ
ಬರೆದಿಟ್ಟು ಎಲ್ಲಿಗೆ ಓಡಿ
ಹೋಗಿದ್ದಾನೋ ನಾ ಕಾಣೆನು
ತಿಥಿ ಪುಣ್ಯ ತಿಥಿ ಮಾಡೆಂದು
ಯಾವ ವ್ಯಕ್ತಿ ಯಾವ ಘಳಿಗೆಯಲ್ಲಿ
ಯಾರಿಗೆ ಹೇಳಿ ಸತ್ತಿರುವನೋ
ನಾ ಕಂಡಿಲ್ಲ ನಾ ಕೇಳಿಲ್ಲ
ಯಾವುದು ದೇವರಿಗಾಗಿಯು ಅಲ್ಲ
ಸತ್ತವರಿಗಾಗಿಯು ಅಲ್ಲ
ಯಾಲ್ಲವು ನಮಗಾಗಿ
ನಮ್ಮ ಹೊಟ್ಟೆ ಪಾಡಿಗಾಗಿ ಅಷ್ಟೇ

- ರಾಜು ಹಾಸನ

09 Oct 2020, 12:04 am

ನಿಜವಲ್ಲವೇ

ಸತ್ತ ಪ್ರಾಣಿಯ
‌‌ ಮಾಂಸವೆಂದು ತಿನ್ನುವ ಜನ
ಸತ್ತ ವ್ಯಕ್ತಿಯ
ಹೆಣವೆಂದು ಸುಡುವ ಜನ
ಸತ್ತವನ ಸುಟ್ಟು ಬರಿ
ಬೂದಿ ಬಿಡುವರಯ್ಯ ನೀರಿಗೆ
ಸತ್ತವನು ಬಿಟ್ಟು ಹೋದ
ಆಸ್ತಿ ಅಂತಸ್ತು ಸಿರಿ ಸಂಪತ್ತನ್ನು
ಸುಡದೆ ಬಿಡದೆ ಎಡಬಿಡದೆ
ಮುಕ್ಕಿಬಿಡುವರಯ್ಯ ಈ ಜನ

- ರಾಜು ಹಾಸನ

08 Oct 2020, 08:15 am

ಜನರ ಆಟ

ಮಾತಿನಲ್ಲಿ ಮುತ್ತು
ಮನಸ್ಸಿನಲ್ಲಿ ಹೊಲಸು
ತುಂಬಿಕೊಂಡು
ದೇವಾಲಯದ ಸುತ್ತ ಸುತ್ತಿ
ಜಪ ತಪವೆಂದು
ಕಲ್ಲು ಮುಂದೆ ಮೌನವಾಗಿ
ಕುಳಿತರೇನು ಬಂತಯ್ಯ
ಮುಕ್ತಿ ಮೋಕ್ಷಕ್ಕಾಗಿ
ಜಪ ತಪವೆಂದು
ದೇವರ ಭಜನೆ ಮಾಡುತ್ತ ಕುಳಿತರೆ
ವ್ಯರ್ಥವಾಗುವುದು ಸಮಯ
ತುಂಬದಿರುವುದು ಹಸಿದ ಹೊಟ್ಟೆ
ಆದರೂ ನಿಲ್ಲದಿರುವುದು
ದೇವರ ಹಿಂದೆ ಓಡುವ ಜನರ ಆಟ

- ರಾಜು ಹಾಸನ

08 Oct 2020, 12:27 am