Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭೂರಮೆ

ನಮ್ಮ ಪೋರೇವ ನಮ್ಮ ತಾಯಿ
ಭೂಮಿ ತಾಯಿ ನಿನಗೆ ಶರಣು
ಹಸಿರು ಹೊದ್ದು ಉಸಿರು ನೀಡ್ವ
ಭೂರಮೆ ಮಾತೆ ನಿನಗೆ ನಮೋ //

ಬಿರು ಬಿಸಿಲು ತಡೆದು ಜಗಕೆ
ತಂಪು ಗಾಳಿ ಬೀಸುವ ವೃಕ್ಷಗಳೆ
ಹಸಿರು ಹುಲ್ಲು ಹೊಸತು ಮಾತು
ಜೀವದಾರೆಯಾದ ಮರಗಳೆ //

ಸಕಲ ಜೀವಿಗಳಿಗೆ ಸಲುಹಿದ
ಮನುಜ ಕುಲವ ಬೇಳೆಸಿದಂತಾ
ಸದಾ ನಗುತಾ ಉಲ್ಲಾಸದಿಂದ
ನಿಂತ ತಾಯೆ ಭೂರಮೆಗೆ ಜೈ //

ನೀರು ನೆರಳು ಹಸಿರು ಉಸಿರು
ನಿಂದಾ ಭೂಮಿಯೋಂದು ಸುಂದರ
ಪ್ರಕೃತಿಯ ಮಡಿಲಿನಲ್ಲಿ ವೃಕ್ಷಮಾತೆ
ಎಷ್ಟು ಸುಂದರ ಅತಿ ಸುಂದರ //

ಕಾಲಿ ಕಾಲಿ ಬೆಂಚು ಕಾಡಿನಲ್ಲಿ
ಕೊರೆವ ಬಿಸಿಲು ನೆತ್ತಿಮೇಲೆ
ಮುತ್ತನಿಯುತ ಮದ್ಯದಲ್ಲಿ ನಿಂತ
ಮುದ್ದು ಮರಗಿಡಗಳೆ ಸುಂದರ //


ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

04 Oct 2020, 08:10 pm

ಹೆಣ್ಣು ನಮ್ಮ ದೇಶದ ಕಣ್ಣು

ಬೆದರಿ ಹೆದರಿ ಬದುಕಿಯದು ಸಾಕು ಹೆಣ್ಣೆ... ಆತ್ಮವಿಶ್ವಾಸದ ಧೈರ್ಯದಿಂದ ಮುಂದೆ ಬಾ... ಮುಗ್ದ ಮಗುವಿನ ಹಾಗೆ ಪ್ರತಿ ಹೆಣ್ಣಿನ ಮನಸು... ಆತ್ಮೀಯರಿಗೆ ಸೇವೆ ಮಾಡುವದೇ ಇವರ ಕನಸ್ಸು.. ಪ್ರೀತಿಸಿವುದೇ ಹೆಣ್ಣಿನ ಗುಣ...... ಮನೆತನ ಕಾಪಾಡುವದೇ ಇವರ ಋಣ.... ತಾಳ್ಮೆಯಿಂದ ಇದ್ದರೆ ತಂಗಾಳಿ... ಕೋಪದಿಂದ ಇದ್ದರೆ ಸುಂಟರಗಾಳಿ.. ಪ್ರತಿಯೊಂದು ಪ್ರಯತ್ನವನ್ನು ನಂಬಿಕೆಯಿಂದ ಇಡು. ಸಾವಿರಾರು ದಾರಿಗಳು ಕಾಣುತ್ತದೆ. ನಿಮ್ಮ ಅಹಂಕಾರ ಕೋಪವನ್ನು ಸ್ವಲ್ಪ ಕಡಿಮೆಗೊಳಿಸಿದರೆ ಎಲ್ಲರ ಪ್ರೀತಿ ಒಲವು ಸಿಗುತ್ತದೆ... ನಿಮ್ಮ ಕಣ್ಣೀರಿನ ಚಿಂತೆಗಳನ್ನು ಮರೆತು ನಗು ನಗುತ ಇದ್ದರೆ ಬದುಕು ಸಂತೋಷವಾಗುತ್ತದೆ.. ಎಲ್ಲ ನನ್ನ ಹಣೆಬರಹ ಎಂದು ಕೊರಗುವುದಕ್ಕಿಂತ ನನ್ನ ಬಾಳೋ ಜೀವನವೇ ಸ್ವರ್ಗವೆಂದು ಸ್ವೀಕರಿಸು.. ಧೈರ್ಯದಿಂದ ಎಲ್ಲ ಸಂಕಟಗಳನ್ನು ಎದುರಿಸಿ ಗೆಲುವನ್ನು ಸ್ವಾಗತಿಸು... ಹೆಣ್ಣು ಎಂದಿಗೂ ಹೊನ್ನು... ಹೆಣ್ಣು ದೇಶದ ಕಣ್ಣು

- mahendran h

04 Oct 2020, 03:55 pm

ಒಂಟೆ

ಒಂಟೆ ಬಂದೈತಣ್ಣ ಊರಲ್ಲಿ
ಡುರುಕಿಯ ಹೊಡೆಯುತ್ತಾ
ದುಬ್ಬದ ಮೇಲೆ ಗುಬ್ಬಿಯ
ಗೂಡನು ಹೊತ್ತು ಬಂದೈತಣ್ಣ //

ಉದ್ದನೆ ಕಾಲು ಗಿಡ್ಡನೆ ಬಾಲ
ಎಷ್ಟುದ್ದ ಇರುವುದು ನೋಡಣ್ಣ
ಕತ್ತನು ಎತ್ತಿ ಹಾವಿನ ಹಾಗೆ
ಅತ್ತಿತ್ತ ನೋಡುತಲಿಹುದು ಬಾ ಅಣ್ಣ //

ಒಂಟೆಯ ನೋಡಲು ಊರಿನ
ಭಂಟರ ದಂಡೆ ಸೇರಿತು ನೋಡಣ್ಣ
ಕೊರಳಿನ ಗಂಟೆಯ ಸದ್ದಿಗೆ ಚಿಣ್ಣರು
ಕುಣಿಯುತ ಬಂದರು ಬಾ ಅಣ್ಣ //

ಹೆಜ್ಜೆಯ ಎಣಿಸಲು ಹುಚ್ಚೆದ್ದು ಹೋಗಿ
ಪೆಚ್ಚು ಮೊಗದಲಿ ಮರಳಿದರು ನೋಡಣ್ಣ
ಮಕ್ಕಳ ಮುಂದೆ ಗಂಟೆ ಗಟ್ಟಲೆ ಕೂತು
ಒಂಟೆಯ ಮಾತು ಕಟೆದರು ಕೇಳಣ್ಣ //


ಕಲ್ಮೇಶ ಬಡಿಗೇರ
9743539657
. ........ಬಾದಾಮಿ....

- Kalmesh Badiger

04 Oct 2020, 01:54 pm

ಕಾಣದ ಕಡಲು

ಕಾಣದ ಕಡಲಲಿ ಏನಿದೆಯೋ ನಾ ಕಾಣೆ
ನೀ ಕಂಡಿದ್ದರೆ ಹೇಳುಬಾ ಓ ಜಾಣೆ
ಕಾಣಬೇಕೆಂಬ ಹಂಬಲ ಕಾಣದ ಕಡಲನು
ಸೇರಬೇಕೆಂದು ಕಾತುರ ಕಾಣದ ಕಡಲಿಗೆ

- kannadatiyabhavanegalu

04 Oct 2020, 12:59 pm

ಪ್ರೇಮಿ

ಬಣ್ಣದ ಲೋಕದ ಬುಗುರಿಯಲಿ
ತಿರುಗುತ ಲಿರುವೇನು ನಾನಿಲ್ಲಿ
ಭೂತ ಭವಿಷ್ಯದ ಪರಿವೆ ಇಲ್ಲದೆ
ಕುಳಿತಿರುವೆ ನೋಡು ಮರೆತಿಲ್ಲಿ //

ಚಿನ್ನದ ಮಾತುಗಳು ಇನ್ನೆಲ್ಲಿ
ಕಣ್ಣಿಗೆ ಕಾಣದೆ ನೀ ಇಲ್ಲೇಲ್ಲು
ಬಡ ಬಡಿಸುತಿರುವೆ ನಾನಿಲ್ಲಿ
ಕೆಳಿಸದೇನೋ ನೀನಗಲ್ಲಿ //

ಪ್ರೇಮಿಗಳ ದಿನ ಇನ್ನೆಲ್ಲಿ
ಮಧುರ ಮಾತು ಮರೆತಿಲ್ಲ
ನೆನಪಿಸುತ್ತಿರುವೆ ನಾನಿಲ್ಲಿ
ಕನವರಿಸುತಿರುವೆ ಕೇಳಿಲ್ಲಿ //

ನೆನಪಿನ ಕಾಣಿಕೆ ಕಾಣದಾಯ್ತೆ
ಕುಣಿಯುವ ಕಾಲು ನಿಂತೊಯ್ತು
ಕಣ್ಣಿಗೆ ಕತ್ತಲೆಯು ಕಾವಿದಾಯ್ತು
ನೀ ಬರದೆನ್ಮನ ಬರಿದಾಯ್ತು //

ಬಂತೆ ಬಂತು ನೋಡು ಆದಿನ
ಗುಲಾಬಿ ಕೊಟ್ಟ ಕ್ಷಣದ ದಿನ
ಪ್ರೀತಿಸುವ ಆಸೆಯೂ ಚಿಗಿತ
ಆ ಮಧುರ ಗಳಿಗೆಯ ದಿನ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

04 Oct 2020, 09:09 am

ಹದಿನಾರರ ಹುಡುಗಿ ನಾ

ಹದಿನಾರರ ಹುಡುಗಿ ನಾನು
ಭಿನ್ನಾನದ ಬೇಡಗಿಯು ನಾನು
ಬ್ಯಾಸರಕೀ ಮೂಡತಾವ
ನನಗ ಆಸರಕ ಬೇಡತಾವ //

ಎಳೆ ಮನಸಿನ ಆಳದಲಿ
ಮಜ್ಜಿಗೆ ಕಡದಂಗೆ ಆಗಿ
ಗೆಜ್ಜೆ ಕಾಲ್ ಕುಣಿಸತಾವಾ
ಎದೆ ನಡುಗಿ ಹಾಡತಾವ //

ಜೋಡಿ ಗಿಳಿಗಳ ಕಂಡು
ಜೊತೆ ಇರದೆ ನಾ ನೊಂದು
ಕಥೆ ಹೇಣೆಯುತ ಕುತಂಗಾತ
ನನ್ನ ಕನಸೆಲ್ಲ ಬಲಿತಂಗಾತಾ //

ಮಕ್ಕಳ ಮಾತನು ಮುರಿದು
ಅಕ್ಕರೆಯ ಆಟವನ್ನು ಅಳಿಸಿ
ಹುಬ್ಬಿಗೆ ಕೈ ಹಚ್ಚಿ ಹುಡುಕುತಾವ
ಮಬ್ಬಾದ್ರ ಮನಸು ಮುದರತಾವ //

ಕಲ್ಮೇಶ ಬಡಿಗೇರ
9743539657
......ಬಾದಾಮಿ.......

- Kalmesh Badiger

04 Oct 2020, 08:53 am

ಮಂಗನ ಮರಿ

ನಮ್ಮನೆ ಅಂಗಳದಲ್ಲಿ ಒಂದು
ಅಜ್ಜನ ಆಲದ ಮರ ವಿಹುದು
ಮಂಗನ ಮರಿಯು ಕೊಂಬೆಯ
ಮೇಲೆ ನೆಗೆಯುತ ಜಿಗಿಯುವುದು //

ಕೈಯನು ತೋರಲು ಛಂಗನೆ ಹಾರಿ
ಕುಣಿಯುತ ಹಾರುತ ಬರುವುದು
ಕೈಯನು ನೀಡಲು ಕುಲಕುತಾ
ಮುತ್ತನು ಕೊಟ್ಟಂತೆ ಮಾಡುವುದು //

ತಲೆಯನು ಕೆದರುತಾ ಕೂಡಲು
ಬಂದು ಹೇಣನು ನೋಡುವುದು
ಹಣ್ಣನ್ನು ಕೊಡಲು ಹಲ್ಲನು ಕಿರಿದು
ಗಬ ಗಬಾ ತಿನ್ನುತ್ತಾ ಕೂಡುವುದು //

ಅಂಗಿಯ ತೊಡಿಸಲು ಮೈಯ್ಯನು
ಪರಚುತ ಮರವನು ಏರುವುದು
ಆ ಕಡೆ ಈ ಕಡೆ ಜಿಗಿಯುತ್ತಾ ಮಂಗವು
ಜೀಕವ ಹೋಡೆಯುತ ನಲಿಯುವುದು //

ಆಳುವ ಮಕ್ಕಳ ದ್ವನಿಯ ಕೇಳಲು
ಅರಚುತಾ ಓಡೋಡಿ ಬರುವುದು
ಅಮ್ಮನ ಕೈಯಲಿ ರೊಟ್ಟಿಯ ಕಂಡು
ಕಿರಚುತಾ ಮೈ ಪರಚುತ ಕೂಡುವುದು //

ಅಜ್ಜನ ಕೊಲನು ಕೈಯಲಿ ಕೊಟ್ಟರೆ
ನಟನೆಯ ಮಾಡುತ ಲಿರುವುದು
ಕಟ್ಟೆಯ ಮೇಲೆ ಕುಳಿತರೆ ಸಾಕು
ನಮ್ ಜೊತೆ ಆಟವ ಆಡುವುದು //


ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

04 Oct 2020, 08:38 am

ಜವಾರಿ ಕೊಳಿ

ಜವಾರಿ ತಳಿ ಇದು ನಮ್ಮನೆ ಕೋಳಿ
ಆ ಆ ಎನ್ನಲು ಓಡುತಾ ಬರುವುದು
ಕಾಳನು ಕಾಣಲು ಕೊಕ್ಕರೋಕ್ಕ ಎಂದು
ನೆಲ ಕುಕ್ಕುತಾ ಕೆದರುತಾ ನಿಲ್ಲುವುದು //

ಅಮ್ಮನ ದ್ವನಿಯನು ಕೇಳಲು ಕೋಳಿ
ಕಾಲಲಿ ಗಿರಕಿಯ ಹೊಡೆಯುವುದು
ಚಿಕ್ಕ ಮಕ್ಕಳ ಪರಿವೆ ಇಲ್ಲದೆ ಕೊಳಿಯು
ಕೊಕ್ಕರೊಕ್ಕ ಎನ್ನುತಾ ಹಾರುವುದು //

ತಿಪ್ಪೆಯ ಮೇಲಿನ ತೆಪ್ಪವ ಕೆದರುತಾ
ದಪ್ಪನೆ ಹುಳುಗಳ ಮೇಯುವುದು
ಚಿಂವ್ ಚಿಂವ್ ಎನ್ನುವ ಪುಟಾಣಿ ಮರಿಗೆ
ಕುಕ್ಕುತಾ ಗುಟುಕನು ನೀಡುವುದು //

ಬೆಕ್ಕನು ಕಂಡರೆ ರೆಕ್ಕೆಯ ಬಿಚ್ಚುತಾ
ಕೊಕ್ಕರೋಕ್ ಎನ್ನುತ್ತಾ ಹಾರುವುದು
ಕಣ್ಣಿಗೆ ಕುಕ್ಕಿ ಮೈಯನು ಪರಚುತಾ
ಸೊಕ್ಕನು ಅಡಗಿಸಿ ಕಳಿಸುವುದು //

ಸಜ್ಜೇಯ ಜೋಳದ ಚೀಲವ ಕುಕ್ಕಿ
ಕಚ್ಚಿ _ ಬಿಚ್ಚಿ ಕೆದರಿ ಹಾಕುವುದು
ಅಜ್ಜಿಯ ದಿಂಬು ಕೌದಿಯ ಕೆದರಿ
ಹರಿದು ಮುರಿದು ತಾ ಹಾಕುವುದು //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

04 Oct 2020, 08:18 am

ಮುದ್ದು ಗೊಂಬೆ

ಮುದ್ದು ಗೊಂಬೆ ಮುದ್ದು ಗೊಂಬೆ
ನೀ ನನ್ನ ಅಂದದ ಗೊಂಬೆ
ನೋಡಲು ಬಲು ಚಂದ
ನೀ ನನ್ನ ಬಣ್ಣದ ಗೊಂಬೆ
ಸಂಪಿಗೆ ಮೂಗಿನ
ಮಿಣ ಮಿಣ ಮಿಂಚುವ
ಮಿಂಚುಳ್ಳಿ ಕಣ್ಣಿನ
ಬಂಗಾರದ ಗೊಂಬೆ
ಉದ್ದ ಜಡೆಯ ಕೋಮಲಾಂಗಿ
ನಕ್ಕು ನಲಿಯುವ ಮುದ್ದಿನ ಅರಗಿಣಿ
ನೀ ನನ್ನ ಮುದ್ದು ಗೊಂಬೆ

- ರಾಜು ಹಾಸನ

03 Oct 2020, 12:22 am

ದೋಣಿ ಸಾಗಲಿ

ಜೀವನವಿದು ಹುಟ್ಟು-ಸಾವಿನ ಪಯಣ
ಜನಿಸಿ ಬರುವೆವು ಅಳುತ್ತಾ, ಬಂದು ಅಳುವೆವು ಮತ್ತಷ್ಟೂ
ನಮ್ಮ ಮೊದಲ ಅಳುವಿನ ಧನಿಯೇ,ಹೆತ್ತವರ ಒಡಲ ಸಂತೋಷ
ಜೀವನದಿ ಬರುವ ಮತ್ತಷ್ಟು ಕಷ್ಟಗಳಿಗೆ ಹೆತ್ತವರೇ ಆಧಾರ

- Ranjitha

02 Oct 2020, 05:48 pm