Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಪ್ಪಾ ಬ್ಯಾಡಾಂದ್ರೂ ಕೇಳಲಿಲ್ಲಾ ಪೋರೀ
ಹೋಗತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರಿ
ಹೋಗಬೇಡ್ವೆ ಅವನಾ ಹಿಂದೆ ಚಕೋರೀ
ಅಪ್ಪಾ ಅಮ್ಮಂಗೇ ಹೇಳತ್ತಿದ್ಲು ಸಾರೀ
ನಾ ಹಚ್ಕೊಂಡೀನಿ ಅವನಾ ಭಾರೀ....
ಹೋಗತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೈಕನೇರೀ..
ಬುದ್ಧಿ ಮಾತು ಕೇಳಲಿಲ್ಲಾ
ತಿದ್ದಿಕೊಂಡು ನಡೀಲಿಲ್ಲ
ಕತ್ತಲಾದ್ರು ಮನೆಗೆ ಬರಲೇ ಇಲ್ಲಾ
ಮುಂದಿನ ಜೀವನ ಅವಳಿಗೆ ಹೊಳೀಲೇ ಇಲ್ಲಾ
ಅವನು ಮಾತ್ರ ಕಲಿತಿದ್ದ ಬರೋಬ್ಬರಿ
ಕರ್ಕೊಂಡು ಹೋಗುತ್ತಿದ್ದ ಭಾರಿಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೊಳೆ ಮೀನ್ಹಂಗೆ ಜಾರೀ..
ಬಾಯಿ ಬಾಯಿ ಬಡ್ಕೊಂಡ್ಳು ಖೋಡೀ.
ನನ್ನ ಹಾಗೆ ನೀವಾಗ ಬೇಡೀ..
ಕೇಳ್ತಾವ ಬಿಸಿ ರಕ್ತದ ಜೋಡೀ..
ಕೆಟ್ಟ ಮೇಲೆ ಬುದ್ಧಿ ಬಂತು ನೋಡೀ.
- abhi.s.j
19 Sep 2025, 10:45 pm
ಕಾಣದ ಮುದ್ದಾದ ಅಂದನ
ನೋಡಿ ನಾಚುತ ನಾಚುತ
ಸೂರ್ಯನು ಮೆಲ್ಲನೆ ಕೆಂಪೇರಿ
ಅಂಬರದಿ ಗೊತ್ತಾಗದೆ ಜಾರುತಿಹನು
ಬಾನಗಲಕ್ಕು ಬೆಳದಿಂಗಳ ಚೆಲುತಾ
ಪೂರ್ಣ ಚಂದಿರನು ಮತ್ತೆ ಬಂದನು
ಬೆಳದಿಂಗಳ ರೆಷಿಮೆಯಾ
ಸೀರೆಯಾ ಹುಡಿಸಲು
ಕಂಗಳಲಿ ಮೌನದಿ ಮಾತಾಡಿ
ಕಣ್ಣಂಚಲೆ ಕರೆದ ಹೊರೆ ನೋಟಕೆ
ತಂಪಾದ ತಂಗಾಳಿಯೂ ಕೂಡ
ನನ್ನನು ಸೋಕಿ ಮಾಯವಾಯಿತು
ತುಟಿಯಂಚಲಿ ಅರಳಿದ
ಹೂನಗೆಯ ಸಂತಸಕೆ ಮಳೆಬಿಲ್ಲು
ಕೂಡಾ ಮೆಲ್ಲನೆ ನಾಚುತ
ಆಗಸದ ಮೆಟ್ಟಿಲನು ಏರಿ ರಂಗೇರುತಿಹುದು
ಕವಿಯೋಬ್ಬ ಕಲ್ಪನೆಯಲ್ಲೆ
ಹೊಸದಾದ ಜಾಡು ಹಿಡಿದು
ಕಲ್ಪಿಸಿ ಬರೆಯುತ ವರ್ಣಿಸಿದನು
ಸೌಂದರ್ಯ ರಾಶಿಯೆಲ್ಲಾ
ಅರಳಿದ್ದು ನಿನ್ನಿದಲೆ ಎಂದು...
ನಾಚಿದ ಮನಸ್ಸು ನೀರಾಗಿ
ಕಾಲ್ ಬೆರಳಲ್ಲಿ ರಂಗೋಲಿ ಹಾಕುತ
ಮನಸಲ್ಲಿ ಚಡಪಡಿಕೆ ಹೆಚ್ಚಾಗಿ
ಸುಮ್ಮನೆ ಉಗುರು ಕಚ್ಚುತ
ಕಂಗಳು ಮೌನದಿ ಆಸೆಗಳ ಸೂಚಿಸಿವೆ
ಹೀಗೆ ಕನಸಲ್ಲೊಂದು
ಕನಸ ನೆನೆದು ನೆನೆದು ಬರೆದೆನು
ಕನಸಿನ ಕನ್ಯಾ ಸುಕುಮಾರಿಗೆ
ನನ್ನ ಕಲ್ಪನೆಯ ಚೆಂದಗಾತಿಗೆ...
- abhi.s.j
19 Sep 2025, 10:41 pm
ಹೇ ಗೆಳತಿ ನೀ ಕಣ್ಣೋಟದಿ
ಕಾಮನ ಬಿಲ್ಲಿನೊಳು ಬಿಟ್ಟ
ಅನುರಾಗ ಬಾಣ
ಎನ್ನೆದೆಯನಿರಿದು
ಒಲವ ಮೂಡಿಸಿತಲ್ಲೆ ,
ಇನ್ನೇಕೆ ನಿನಗೆ ಸಿಗ್ಗಿನಾ ಪರದೆ,
ಸರಿಸಿಬಿಡೊಮ್ಮೆ
ನಿನ್ನ ನವಿರ ಸಿಗ್ಗನು ನೇಪತ್ಯಕೆ...!
ನೀ ಬಿಟ್ಟ ಸುಮಬಾಣ
ಕುಂಚವಾಗಿ ಚಿತ್ರಿಸಿತು ನಿನ್ನ
ನಲ್ಮುಖದ ಭಾವಚಿತ್ರವ.
ಎನ್ಮನದಿ ನೂರಾರು
ಆಕಾಂಕ್ಷೆಗಳು ಸಂಚಯಿಸಿ,
ಮೋಹರಾಗವ ಹಾಡುತ,
ಅನುರಾಗ ಲಹರಿಯ
ಜೊತೆಗೂಡಿದೆ.
ಚಂದದುಹೆಯ
ತುರಗವೇರಿದ ನಿನ್ನ
ಒಲವ ಲಹರಿ ಎಲ್ಲೆ
ಮೀರಿ ಅನಂತಾಕಾಶದಿ
ಸದ್ದಿಲ್ಲದೆ ಸಾಗಿ
ಭವ್ಯ ಭಾವ
ಲಹರಿಯಲಿ ಚಲಿಸಿದೆ.
- abhi.s.j
19 Sep 2025, 10:25 pm
ಮಳೆಗಾಲದಲ್ಲೂ ನನ್ನ
ಮನಸ್ಸು ತಂಪಾಗುತ್ತಿಲ್ಲ
ಊಹಿಸು ಗೆಳತಿ ಅದೆಂತ
ಕೊಳ್ಳಿ ಇಟ್ಟಿರುವೆ ನನ್ನ ಹೃದಯಕ್ಕೆ..
- abhi.s.j
19 Sep 2025, 10:19 pm
ಮೊನ್ನೆ ಗಜಮಾ ಅಂತ ಹೇಳಿ
Sᴛᴏʀʏ ಹಾಕಿದ್ದೆ ಕ್ರಶ್ ನೋಡಿ ಬಿಟ್ಟಳು
ಅವತ್ತು DP ಚೇಂಜ್ , ಮಾಡಿದಾಕಿ
ಇನ್ನು DP ನೇ ಇಟ್ಟಿಲ್ಲ ಯಾಕೋ...? ?♂️
- abhi.s.j
19 Sep 2025, 10:15 pm
ಓ ಭಾರತಾಂಬೇ ನಿನಗೆ ಗೊತ್ತಾ ,
ಒಂಬತ್ತು ತಿಂಗಳ ತನ್ನ ಹೊಟ್ಟೆ ಯೊಳಗೆ ಇಟ್ಟು ಕೊಂಡು ಹೋರ ಹಾಕಿದಳು ಹೆತ್ತ , ಅವಳ ಋಣ ತೀರಿಸಬಹುದತ್ತ ಆದರೆ ತಾಯೆ ನೀ ಸಾಯುವವರೆಗೂ ಸಾಕಿದೆ ನನ್ನ ಹೊತ್ತ , ನಿನ್ನ ಋಣ ತೀರಿಸಲೂ ಸಾಧ್ಯ ವಾಗುವುದಿಲ್ಲತ್ತ , ನಿನ್ನ ಋಣ ತೀರಿಸಲೂ ವೀರ ಯೋಧರು ಹೋದರು ಯುದ್ಧದಲ್ಲಿ ಸತ್ತ ಅವರಾಂಗ ಆಗಬೇಕು ನಾ ಇವತ್ತ , ನಿನ್ನ ಈ ಪುಣ್ಯ ಭೂಮಿಯಲ್ಲಿ ಹುಟ್ಟಬೇಕು ನಾ ಮತ್ತಾ ಮತ್ತಾ
- Somanagouda Biradar
08 Sep 2025, 03:02 pm
- Suma M B
07 Sep 2025, 02:15 pm
ಇಬ್ಬರು ಜೊತೆಯಲ್ಲೇ Settle
ಆಗೋಣ ಅಂದಿದ್ದು ನಾನು,,,
ಹೀಗೆ Settle ಆಗಿಲ್ಲ ಅಂತ ಹೇಳಿ
?????? ℝ?????? ಹೇಳಿ
ಪ್ರೀತಿ ಗೇ ಶ್ರದ್ಧಾಂಜಲಿ ಹೇಳು ಅಂತ ಅಲ್ಲಾ...!!
*ನಿನ್ನ ಜೊತೆ ಬದುಕಬೇಕು ಅಂತ*
*ಹೇಳಿದ್ದು ನಾನು, ನನ್ನ ನೆನಪುಗಳ*
*ಜೊತೆ ಬದುಕು ಅಂತ ಹೇಳಿ,*
*ಬಿಟ್ಟೋಗು ಅಂತ ಅಲ್ಲ...!!??*
- abhi.s.j
07 Sep 2025, 10:16 am
ಪ್ರೀತಿಗೋಸ್ಕರ.. ತಾಜ್ ಮಹಲ್..
ಕಟ್ಟಿಸೋಕೆ.... ನಾ ,.. ಶಹಜಾಹನ್... ಅಲ್ಲ....??
ನಿನ್ನ... ಅಂಬಾರಿ.. ಮೇಲೆ... ಹೊತ್ತು... ಮೆರವಣಿಗೆ..... ಮಾಡ್ಸೋಕೆ.... ನಾ...
ಮುಕೇಶ್... ಅಂಬಾನಿ... ಅಲ್ಲ.....?????
ಕೋಟೆಯನ್ನು.. ಲಗ್ಗೆ.. ಹಾಕಿ...ದೋಚಿ..... ತರಲು....
ನಾ... ಅಲೆಕ್ಸಾಂಡರ್.... ಅಲ್ಲ....??????
ನಿನಗಾಗಿ.... ನೀ.. ಮೆಚ್ಚಿದ... ಗುಲಾಬಿಯನ್ನು...
ತಂದು... ಕೊಡಬಲ್ಲ......
*MIDDLE CLASS .. ಪ್ರೇಮಿ...ನಾನು.....??*???
- abhi.s.j
07 Sep 2025, 10:15 am
ಪುಣ್ಯಭೂಮಿಯ ನಾಡು ನಮ್ಮದು,
ಕರಾವಳಿಯ ನೆಲೆಸಿದ ಭಾಗ್ಯ ನಮ್ಮದು.
ಭಟ್ಟಾಕಳಂಕನ, ಚೆನ್ನಭೈರಾದೇವಿಯ ಜಯಭೇರಿ,
ಮೇರೆಯುತ್ತಿರುವ ಜನಸಾಗರವೇರಿ
ಭಟ್ಟಾಕಳಂಕ ಜ್ಞಾನದಿ ಬೆಳಕು ಹರಿದು,
ಚೆನ್ನಭೈರಾದೇವಿ ಧೈರ್ಯದಿ ನಾಡನು ಕಾಪಾಡಿ ನಿಂದಿತು.
ಇವರ ಕೀರ್ತಿಯ ಧ್ವನಿ ಸಾಗರದಿ ಮೊಳಗಿತು,
ಹೆಮ್ಮೆಯ ಪೀಳಿಗೆಗೆ ದಾರಿ ಬೆಳಗಿತು.
ಭಟ್ಟಾಕಳಂಕ ಮಾತು ಮುತ್ತಿನಂತೆ ಮಿಂಚಿತು.
ಚೆನ್ನಭೈರಾದೇವಿಯ ನಡೆ ವೀರತೆಯಂತೆ ಬಡಿದ್ದೆಬ್ಬಿಸಿತು.
ಒಬ್ಬನು ತತ್ತ್ವದ ದಾರಿಯಲ್ಲಿ,
ಇನ್ನೊಬ್ಬಳು ಧೖರ್ಯದ, ಮಾರ್ಗದ ಪಥದಲ್ಲಿ.
ಭಟ್ಟಾಕಳಂಕ ಕೀರ್ತಿಯ ಹೂವು ಅರಳಿತು,
ಚೆನ್ನಭೈರಾದೇವಿಯ ಶೌರ್ಯದ ಮೆರಗು ಕಂಗೊಳಿತು.
ಇವರಿಬ್ಬರ ಪಯಣ ಕರುನಾಡಿನ ಹೆಮ್ಮೆ,
ಇವರಿಬ್ಬರ ಜಯಗುಣಗಾನ ಶಾಶ್ವತ ಹಿರಿಮೆ.
ಭಟ್ಟಾಕಳಂಕನ ನುಡಿ ವಿದ್ಯೆಯ ಹಾದಿ,
ಚೆನ್ನಭೈರಾದೇವಿಯ ನಡೆ ಶೌರ್ಯದ ಹಾದಿ.
ಜ್ಞಾನ–ಧೈರ್ಯ ಒಂದೇ ನಾದವಾಗಿ,
ನಾಡು ಬೆಳೆದಿತು ಉತ್ಸಾಹದ ಕನಸಾಗಿ.
ಭಟ್ಟಾಕಳಂಕ ತರ್ಕದಿ ಅಜ್ಞಾನವನು ಸೋಲಿಸಿದರು.
ಚೆನ್ನಭೈರಾದೇವಿ ವೀರ ಬಲದಿಂದ ಶತ್ರುವನು ಮುರಿದರು
ಇವರ ಸಾಧನೆ ಶಾಶ್ವತ ದೀಪದಂತೆ ಹೊಳೆಯಿತು,
ಇವರ ನೆನಪು ಶಾಶ್ವತವಾಗಿ ತನುಮನದಲ್ಲಿ ಉಳಿಯಿತು.
----------- ಆಶಾ ಡಿಸೋಜಾ ✍️✍️✍️
- Asha Dsouza
06 Sep 2025, 09:47 am