Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಪರ್ಯಾಸ

ಹಾದಿ ಬೀದಿಯಲ್ಲಿ ಬಿಸಾಡಿದ ಕಲ್ಲು
ಊರ ಮುಂದಿನ ಬೆಟ್ಟದ ಕಲ್ಲು
ಜೀವವಿಲ್ಲದ ನೀರೊಳಗಿನ
ಬಂಡೆಯ ಕಲ್ಲು ದೇವರದಾರೆ
ಮನೆಯೊಳಗಿನ ಖಾರ ಆಡಿಸುವ ಕಲ್ಲು
ಬರಿ ಒಳಕಲ್ಲಾಗುವುದಯ್ಯ

ಜೀವವಿಲ್ಲದ ಕಲ್ಲಿಗೆ
ದೇವರೆಂದು ಹೊಗಳುವ ಜನ
ಜೀವವಿರುವ ಮನುಷ್ಯಗೆ
ದೆವ್ವವೆಂದು ತೆಗಳುವರಯ್ಯ

ಜೀವವಿಲ್ಲದ ಕಿತ್ತೋದ ಧರ
ಕಟ್ಟಿಕೊಂಡು ಶ್ರೇಷ್ಠನಾಗುವ
ಮನುಷ್ಯಗೆ ಫಲಿಸುವುದು
ಮುಕ್ತಿ ಮೋಕ್ಷ ಸ್ವರ್ಗ ನರಕ
ಹುಟ್ಟಿನಿಂದ ಸಾಯುವ ತನಕ
ದೊಡ್ಡ ದೊಡ್ಡ ಹಗ್ಗವ ಕುತ್ತಿಗೆಗೆ
ಸುತ್ತಿಕೊಂಡು ಸಾಯುವ
ಮೂಕ ಪ್ರಾಣಿಗಳಿಗೆ ಇಲ್ಲವೇ
ಮುಕ್ತಿ ಮೋಕ್ಷ ಸ್ವರ್ಗ ನರಕ

- ರಾಜು ಹಾಸನ

02 Oct 2020, 10:25 am

ಜಯ ಭಾರತ

ಕನ್ನಡನಾಡಿನ ಹೆಮ್ಮೆಯ ಪುತ್ರನಾ
ಹೇಳುವೆ ಕನ್ನಡಾಂಬೆಗೆ ಜೈ ಜೈ ಜೈ
ಹಿಂದೂಸ್ತಾನ ವ ಗರ್ವದಿ ಕಾಣುತ
ಭಾರತಾಂಬೆ ಗೆ ಹೇಳುವೆ ಜೈ ಜೈ ಜೈ //

ಗಂಗಾ ಯಮುನಾ ಸಿಂಧು ಸರಸ್ವತಿ
ಬ್ರಹ್ಮಪುತ್ರ ಸರಯೂ ನರ್ಮದಾ
ಗೋದಾವರಿ ಕೃಷ್ಣೆ ಕಾವೇರಿ ತಪತಿ
ಒಡಲೊಳಗಡಗಿದ ನದಿಗಳ ದೇಶ //

ತೇಗ ಶ್ರೀಗಂಧ ಚಂದನ ಅಶ್ವಥ
ಮಾವು ಹಲಸು ಬಾಳೆ ನೇರಳೆ
ಮಲ್ಲಿಗೆ ಸಂಪಿಗೆ ಸೇವಂತಿ ನೈದಿಲೆ
ಕೃಷಿಕ ಸಾಹಿತಿ ಕಲಾವಿದರ ದೇಶ//

ಕಾಶ್ಮೀರದ ತಾಯಿ ಶಾರದೆ ಸುಂದರ
ರಾಮೇಶ್ವರ ಮಹಾದೇವನ ಮಂದಿರ
ಪುರಿಯ ಶ್ರೀ ಜಗನ್ನಾಥನ ವಿಸ್ಮಯದ
ದ್ವಾರಕಾ ದೀಶ ಶ್ರೀ ರಾಧಾಕೃಷ್ಣರ ದೇಶ //

ಹಿಂದೂ ಸನಾತನ ಬೌದ್ಧ ಜೈನರ
ಸಿಖ್ ಧರ್ಮ ಗಳಿಗೆ ಜನ್ಮವ ನೀಡಿದ
ಸಿದ್ಧ ಶರಣ ಗುರು ಪರಂಪರೆಯ
ಸರ್ವಜನಾಂಗವ ಸಲುಹಿದ ದೇಶ //

ಭಾರತಾಂಬೆಯ ಕನ್ನಡದ ಕುವರನಾ
ಕೋಟಿ ಶರಣಾರ್ಥಿಗಳ ಅರ್ಪಿಸುತಾ
ಕನ್ನಡ ಶ್ರೀ ಭುವನೇಶ್ವರಿಗೆ ಜೈ ಜೈ ಜೈ
ಭಾರತ ಮಾತೆಗೆ ಹೇಳುವೆ ಜೈ ಜೈ ಜೈ //


ಕಲ್ಮೇಶ ಬಡಿಗೇರ
9743539657
........ಬಾದಾಮಿ........

- Kalmesh Badiger

01 Oct 2020, 09:46 pm

ಬರಿ ಓಳು ಬರಿ ಓಳು

ಸತ್ತ ಹೇಣದ ಮೇಲೆ ರಾಜಕೀಯ
ಮಾಡುವ ದುಷ್ಟ ನಾಯಕರ ಕಣ್ಣಿಗೆ
ಪಾಳು ಭೂಮಿ ಕಂಡರೆ ಸಾಕು
ಬಡಿದು ಬಾಯಿಗೆ ಹಾಕಿಕೊಂಡು
ಬಡ ಜನರ ಬಾಯಿಗೆ ಹಾಕುವರು
ಮೂರಿಡಿ ಮಣ್ಣು ತಲೆ ಮೇಲೆ ಅಕ್ಕಿ ಕಾಳು

ಭೂಮಿಯನ್ನೇ ಕೊಳ್ಳೆ ಹೊಡೆಯುವ
ಜನ ನಾಯಕ ನೀಚ ನಾಯಕ
ಮಂಗ ಮಾನವನಿಗೆ ಸಿಕ್ಕಿಲ್ಲ
ಆಗಸಕ್ಕೆ ಏರುವ ಸೇತುವೆ ಏಣಿ
ಆದರೂ ನಿಂತಿಲ್ಲ ಹಾರಾಟ ತೂರಾಟ
ಮಂಗ ಮನುಷ್ಯನ ಮಂಗನ ಆಟ
ಸಿಕ್ಕಿಬಿಟ್ಟರೆ ಮುಕ್ಕಿಬಿಡುವರು
ಈ ಆಗಸದ ಆಯಸ್ಸು

ಆ ಮಸೂದೆ ಈ ಮಸೂದೆ ಎಂದು
ಬೊಬ್ಬೆ ಹೊಡೆದು ತಿದ್ದುಪಡಿ ಮಾಡುವ
ಮುಟ್ಟಳ ನಾಯಕರು ತರುವುದಿಲ್ಲ
ಒಂದು ಕಾನೂನು ಒಂದು ಮಸೂದೆ
ಬಡ ಜನರ ಸ್ತ್ರೀ ಶೋಷಿತರ ರಕ್ಷಣೆಗೆ
ಬಾಯಿ ಮಾತಿಗೆ ಕೇಳಿದರೆ
ಬಾಯಿ ಬಡುಕ ನಾಯಕರು ಹೇಳುವರು
ಬರಿ ಓಳು ಬರಿ ಓಳು

- ರಾಜು ಹಾಸನ

01 Oct 2020, 03:37 pm

ಕೊಳದ ನೀರು

ಕೊಳದ ನೀರಿನಂತೆ ನಮ್ಮ ಮನಸು..
ಸುಮ್ಮನಿರಲಾರದವರು ಬರುವರು...
ಕೊಳದ ಕಸವನ್ನ ಮೇಲೆ ತೇಲುವಂತೆ ಮಾಡುವರು....
ನಮ್ಮ ಕೋಪ ಅದನ್ನು ಇನ್ನಷ್ಟು ಕಾಲ ಮೇಲೆ ತೇಲುವಂತೆ ಮಾಡುವುದು....
ಅದಕ್ಕಾಗಿ ಸುಮ್ಮನಿದ್ದು ಬಿಡು....
ಅದೇ ತಿಳಿಯಾಗುತದೆ......@Bhavya

- Bhavyashree K.G1

01 Oct 2020, 01:56 pm

ಬಂಗಾರು

ಮುದ್ದು ಬಂಗಾರು
ನಿನಗೆ ನಾನಾ ಹೆಸರು...
ನನ್ನ ಜೀವನದ ಜೀವದ ಉಸಿರು ನೀನು...
ನಿನ್ನ ಆ ಪ್ರೀತಿಗೆ ಸದಾ ಚಿರಋಣಿ ನಾನು....
i love u appuu

- Bhavyashree K.G1

01 Oct 2020, 01:55 pm

ಮುನಿಸು

ಯಾವ ಕೆಲಸ ಮಾಡಲು ಇಲ್ಲ ಮನಸ್ಸು
ಕಾರಣ ನಿನ್ನ ಮೇಲೆ ಮುನಿಸು
ಚುಚ್ಚಿ ಮಾತನಾಡುವ ಮುನ್ನ ಒಮ್ಮೆ ಯೋಚಿಸು

- Bhavyashree K.G1

01 Oct 2020, 11:08 am

ಬೇಜಾರು

ಭ್ರಷ್ಟಾಚಾರಿ ಕಳ್ಳರನ್ನು
ನಾಯಕ ಜನ ನಾಯಕನೆಂದು
ಗೆಲ್ಲಿಸಿ ಆಳಲು ದೇಶ ರಾಜ್ಯ ಕೊಟ್ಟರೆ
ದೇಶ ಮಾರಾಟವಾಗದಿರುವುದೇ
ರಾಜ್ಯ ಲೂಟಿಯಾಗದಿರುವುದೇ
ಜನರೇ ಮಾಡಿಕೊಂಡ ತಪ್ಪಿಗೆ
ಶೀಕ್ಷೆ ಅನುಭವಿಸುವುದು ಒಂದೇ ಬಾಕಿ
ಭ್ರಷ್ಟಾ ಕಳ್ಳರ ಕೈಗೆ ರಾಜ್ಯ ಕೊಟ್ಟು
ರಾಜ್ಯ ಲೂಟಿಯಾಗಿದೆ ಎಂದು
ಬೀದಿಗೆ ಇಳಿದು ಹೋರಾಟ ಮಾಡಿದರೆ
ನಿವು ಆಗುವಿರಿ ಜೈಲು ಪಾಲು
ಮನೆಯವರಾಗುವರು ಬೀದಿ ಪಾಲು
ಎಚ್ಚರ ಎಚ್ಚರಿಕೆ ಇರಲಿ
ಮತ ಹಾಕುವ ಮುನ್ನ ನಿಮಗೆ

- ರಾಜು ಹಾಸನ

01 Oct 2020, 12:30 am

ರಕ್ಷಿಸಿ ಗೌರವಿಸಿ

ಪ್ರಕೃತಿಯನ್ನೇ ದೇವರೆಂದು
ಪೂಜಿಸುತ್ತಿದ್ದ ದ್ರಾವಿಡರಿಗೆ
ವಿಷ ಸರ್ಪದಂತೆ ಸುತ್ತಿಕೊಂಡಿದೆ
ಧರ ಸಂಸ್ಕೃತಿ ಆರ್ಯಸಂಸ್ಕೃತಿ

ಮನುಸ್ಮೃತಿಯೆಂಬ
ಮಹಾಮಾರಿ ಪಿಡುಗನ್ನು
ಮೈ ತುಂಬಿಕೊಂಡು
ಹುಚ್ಚಾಟ ಆಡುವ ದುಷ್ಟ
ನೀಚಾರನ್ನು ಸಂಹಾರಿಸಿ
ಹೆಣ್ಣನ್ನು ರಕ್ಷಿಸಿ ಗೌರವಿಸಿ

- ರಾಜು ಹಾಸನ

30 Sep 2020, 07:33 pm

ದಿಗ್ಬಂಧನ

ಚುನಾವಣೆ ಬಂತೆಂದರೆ
ಬರುವರು ಭೂತ ಪ್ರೇತಗಳ ರೀತಿ
ಎಲ್ಲಿಯಂದ್ದರಲ್ಲಿಗೆ
ಕರೆಯದಿದ್ದರು ಬರುವರು
ಬಂದು ಬಿದ್ದು ಬೇಡುವರು
ಕೈ ಮುಗಿದು ಅಣ್ಣ ಅಕ್ಕ ತಂಗಿ ತಮ್ಮ
ಅಮ್ಮ ಅಪ್ಪ ಎಂದು ಹಲ್ಲು ಗಿರುಚುತ್ತ
ಬೇಡವೆಂದರು ಬರುವುದು
ಮನೆ ಬಾಗಿಲಿಗೆ ಚಿಲ್ಲರೆ ನೋಟು
ಸುಮ್ಮನಿದ್ದರು ಕರೆದು ತುಂಬುವರು
ಚಡ್ಡಿ ಜೇಬಿಗೆ ಗುಂಡು ತುಂಡು
ಏನಿದು ಗೌರವ ಏನಿದು ಸತ್ಕಾರ
ಹಹ್ ಹಹ್ ಬಾಲೆ ಬಾಲೆ
ಫಲಿತಾಂಶ ಬಂತೆಂದರೆ
ಯಾವ ಭೂತ ಪ್ರೇತಗಳು
ಕಣ್ಣಿಗೆ ಬಿದ್ದಿಲ್ಲ ಎಲ್ಲಿ ಯಾವ ಮರಕ್ಕೆ
ಜೋತು ಬಿದ್ದಿವೆಯೋ ಗೋತ್ತಿಲ್ಲ
ಆದರು ಕೇಡಕು ಮಾಡುತ್ತಿವೆ
ಕಣ್ಣಿಗೆ ಕಾಣದಂತೆ ಭೂತ ಪ್ರೇತಗಳು
ಜನರ ಮತ ಹಣ ತಿಂದು
ತಕ್ಕ ಶಾಸ್ತಿ ಮಾಡಬೇಕಾಗಿದೆ ಎಲ್ಲರೂ
ನಿಮ್ಮ ನಿಮ್ಮ ಮತಗಳ ದಿಗ್ಬಂಧನ ಮಾಡಿ
ಚಡ್ತಾ ಮಾಡುವ ಭೂತ ಪ್ರೇತಗಳಿಗೆ

- ರಾಜು ಹಾಸನ

30 Sep 2020, 02:54 pm

ಕನಸಿನ ಲೋಕ

ಕನಸಿನ ಲೋಕ
-------_---_-------
ನಾನೇ ಹೀರೋ .............
ನನ್ನ ಲೋಕದಾಗ,
ಬೇರೆ ಹೀರೋಗಳ ಗೋಜು ಬೇಕಿಲ್ಲ.

ನನ್ನ ಕನಸಿನ ಲೋಕದ ಹೀರೋ...
ಯಾವಾಗಲೂ ನಾನಾದಾಗ,
ಬೇರೆ ಹೀರೋಗಳ ಫೋಟೊ ಬೇಕಿಲ್ಲ.

ನಾ ಕಾಣುವ ಕನಸು
ಯಾವಾಗಲೂ ಹಸಿರಾದಾಗ,
ಬೇರೆಯವರ ಕನಸಿನ ಕಥೆ ಬೇಕಿಲ್ಲ.

ನನ್ನ ಕನಸಿನ ಕಥೆಗಾರ
ಯಾವಾಗಲೂ ನಾನಾದಾಗ
ಬೇರೆ ಕಥೆಗಾರನ ಕಥೆ ಬೇಕಿಲ್ಲ.

ನನ್ನ ಲೋಕದ ಕನಸು
ಸಾವಿರಾರು ವಷ೯ಗಳ ಕಥೆಯಾದಾಗ
ನನ್ನ ಕನಸು ನನಸಾಗ ಬೇಕೆಂಬುದಿಲ್ಲ.

ಸಂಸಾರದಲ್ಲಿ ಕಾಣದ ಸುಖ
ಕನಸಿನಲ್ಲಿ ಕಂಡಾಗ
ಸಂಸಾರ ಸುಖಕ್ಕೆ ಬೆಲೆಯಿಲ್ಲ.

ಮಾಗಿಯ ಕನಸು
ಕನಸುಗಾರನ ಕನಸಾದಾಗ
ಮಾಗಿಯ ಕಾಲಕ್ಕೆ ಬೆಲೆಯಿಲ್ಲ..

ಮೊಗ್ಗಿನ ಮನಸು
ಕಂಡ ಕನಸು ನನಸಾದಾಗ
ಅರಳುವ ಮೊಗ್ಗಿನ ಬೆಲೆಯಿಲ್ಲ......

ಕನಸಿನಲ್ಲಿ ತೇಲುವ ಮನಸು
ಜೀವನದಲ್ಲಿ ನೆಲೆ ಕಂಡಾಗ
ಕನಸಿನ ಲೋಕಕ್ಕೆ ನೆಲೆಯಿಲ್ಲ.

--------ಖಾಜಾ

- ಖಾಜಾ

30 Sep 2020, 10:22 am