Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಣ್ಣು....ಕಣ್ಣು

ಇನ್ನೊಂದು ಮನೆಯ ಹೆಣ್ಣವಳು...ಕಣ್ಣವಳು.. ನಿಂದಿಸದಿರು.. ನೋಯಿಸದಿರು....ಮತ್ತೊಂದು ಮನೆ ಬೆಳಗೋ ಬೆಳಕವಳು...

- Parvati VH

21 Sep 2020, 08:14 pm

ಅಮ್ಮ....

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು ದೂರದಲ್ಲಿ ತೀರವಿದೆ ಎಂದು ತೋರಲು....ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ....ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ...

- Parvati VH

21 Sep 2020, 08:11 pm

ಬಂಡಾಯ

ಭೂ ಲೋಕದ ನರ ಮಾನವರು
ಸೇವಿಸುವುದು ಸಸ್ಯ ಆಹಾರ
ಮಾಂಸಾಹಾರ ಮಿಶ್ರ ಆಹಾರವಾದರೆ
ದೇವಾ ಲೋಕದ ದೈವಾ ಮಾನವರು
ಸೇವಿಸುವುದ್ದದಾರು ಏನು?

ಯಾವ ದೇವಾ ಲೋಕವು ಇಲ್ಲ
ಯಾವ ದೇವರು ಇಲ್ಲ
ಇರುವುದು ಒಂದೇ ಲೋಕ ಭೂ ಲೋಕ
ಭೂ ಲೋಕದ ಒಡೆಯ ನರ ಮಾನವ

ದೇವರಿದ್ದಾನೆಂದು ನಂಬಿಸುವವನು
‌ ಬಲು ಕಿಲಾಡಿ
ನಂಬಿ ಮೋಸ ಹೋಗುವವನು
ಹಳ್ಳಕ್ಕೆ ಬಿದ್ದ ಹರಕೆ ಕುರಿ

- ರಾಜು ಹಾಸನ

21 Sep 2020, 03:28 pm

ಆರೋಗ್ಯವೇ ಭಾಗ್ಯ

ನಾ ಕುಡುಕ ಕುಡುಕ
ಒಂದು ನೈಂಟಿ ಬಿಟ್ಟರೆ
ಹಾರುಡುವೆ ಹಕ್ಕಿಯಂತೆ
ತೇಲಾಡುವೆ ಮೋಡದಂತೆ
ವಾಲಾಡುವೆ ಅಡಿಕೆ ಮರದಂತೆ

ಕುಡಿದರೆ ನನಗೆ ನಾನೇ
ರಾಜಾದಿ ರಾಜ ಶೂರದಿ ಶೂರ
ಆಜ್ಞೆ ಹೊರಡಿಸಿದೆ ಉಪ್ಪಿನಕಾಯಿ ಕ್ವಾಟರ್ ಗೆ
ಕುಡಿದು ಕೂಗಿದರು ಮಿತ್ರರು
ಬೊಪ್ಪರಕ್ ಬೊಪ್ಪರಕ್

ಬರುವರು ಬಂಧು ಮಿತ್ರರು
ಬಂದು ಕಟ್ಟುವರು ಚಟ್ಟಾ
ಹಾಕುವರು ಮನೆ ಮುಂದೆ ಹೋಗೆ
ಗೋಳಾಡುವರು ಮನೆ ಮಂದಿ
ಬಾರಿಸುವರು ಶಂಖು ಜಾಗಟೆ
ನೆಡೆಸುವರು ಊರ ಮೇರವಣಿಗೆ
ತಂದು ಮಲಗಿಸುವರು
ಆರಾಡಿ ಮೂರಡಿ ಗುಂಡಿಯಲ್ಲಿ

ಹೆಂಡ ಮುಟ್ಟದಿರೆ ಕಟ್ಟುವರು ಚಟ್ಟಾ ಪಟ್ಟ
ಸೇರುವಿರಿ ಆರಾಡಿ ಮೂರಡಿ ಗುಂಡಿ
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

- ರಾಜು ಹಾಸನ

21 Sep 2020, 02:17 pm

ನಂದಾದೀಪ

ಹೆಣ್ಣುನ್ನು ದೇವರೆಂದು
‌ ‌ ಗೌರವಿಸುವ ಈ ಸಮಾಜದಲ್ಲಿ
ಹೆಣ್ಣಿಗಿಲ್ಲ ಸ್ವಾತಂತ್ರ್ಯ
‌‌ ಬಂಧಿಯಾಗಿರುವಳು
ನಾಲ್ಕು ಗೋಡೆಗಳ ನಡುವೆ
ಪಂಜರದ ಹಕ್ಕಿಯಾಗಿ

ಹೆಣ್ಣು ಅಬಲೆಯಲ್ಲ ಸಂಸಾರದ ಕಣ್ಣು
ಮನುಕುಲದ ನಂದಾದೀಪ
ಹೆಣ್ಣು ಏಂಕಾಗಿಯಾದರು
ಸಾಗಿಸುವಳು ಸಂಸಾರದ ಹೋರೆ
ಆಗಸದ ಸೂರ್ಯ ಚಂದ್ರರಂತೆ

ಹೆಣ್ಣು ಬಾವಿಯ ಕಪ್ಪೆಯೆಂದು ಬಿಂಬಿಸುವ
ಈ ಕೆಟ್ಟ ಸಮಾಜ ತಿಳಿಯಬೇಕು
ಹೆಣ್ಣು ಬಾವಿಯ ಕಪ್ಪೆಯಲ್ಲ
ಮನುಕುಲದ ನಂದಾದೀಪವೆಂದು

- ರಾಜು ಹಾಸನ

21 Sep 2020, 11:42 am

ಜನ-ಪದ

ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ
ದುಡಿದು ಮಾಡುವರು
ದಿನಕ್ಕೊಂದು ವಾರಕ್ಕೊಂದು
ದೇವರ ಹಬ್ಬ

ದುಡಿದು ಕೂಡಿಟ್ಟಿದ್ದು ಮೂರು ಕಾಸು
ಖರ್ಚು ಮಾಡುವುದು ಆರು ಕಾಸದರೆ
ಸುತ್ತಿಕೊಳ್ಳದಿರುವುದೇ ಮೈತುಂಬ ಸಾಲ
ಹಾಸಿಕೋಳ್ಳದಿರುವುದೇ ಮನೆ ತುಂಬಾ ಬಡತನ

- ರಾಜು ಹಾಸನ

21 Sep 2020, 01:34 am

ಎಲ್ಲಾ ಮಾಯಾ

ಈಡಿ ಜಗತ್ತನ್ನೆ ಸೃಷ್ಟಿಸಬಲ್ಲ
ನರ ಮಾನವ ಕಾಯುವನು ನಿಮ್ಮ ತಲೆ
ಒಂದು ಕಡ್ಡಿಯನ್ನು ಸೃಷ್ಟಿಸಲಾಗದ
ಕಲ್ಲ ಕಂಬ ಕಾಯುವುದೇ ನಿಮ್ಮ ತಲೆಯ

ಹೋಗದಿರಿ ಗುಡಿ ಗುಂಡತರಗಳಿಗೆ
ಸುತ್ತದಿರಿ ಕಲ್ಲು ಕಂಬವ
ಸುತ್ತಿದಷ್ಟ ಸವೆಯುವುದು ನಿಮ್ಮ ಪಾದ
ಆಳಾಗುವುದು ನಿಮ್ಮ ಮನಸ್ಸು
ಖರ್ಚಾಗುವುದು ನಿಮ್ಮ ಸಮಯ
ಕರಗದೆ ಇರುವುದು ಕಲ್ಲು ಕಂಬ

ಸರ್ವಾಂತರ್ಯಾಮಿ
ದೇವರು ಬರುವನು ನಿಮ್ಮಲ್ಲಿಗೆ
ತರುವನು ಲೇಖನಿ ಪುಸ್ತಕ
ಬರೆದುಕೊಳ್ಳುವನು ನಿಮ್ಮ ಗೋಳು
ನೀಡುವನು ಪರಿಹಾರ
ಕೇಳಲು ನಿವು ಇರುವುದಿಲ್ಲ
ಹೇಳಲು ಅವನೇ ಇರುವುದಿಲ್ಲ
ನಿವು ಮಾಯಾ ಅವನು ಮಾಯಾ
ಎಲ್ಲವೂ ಮಾಯಾ ಮಾಯಾ

- ರಾಜು ಹಾಸನ

21 Sep 2020, 12:24 am

ಬೆಂಕಿ ಕಡ್ಡಿ

ಬೆಂಕಿ ಪೊಟ್ಟಣದೊಳಗಿನ ಮದ್ದು ಜಪ್ಪಿಸಿ ಕುಳಿತಿದೆ.
ಅದರ ಮನ ಮರ್ಕಟ
ಮಂಕಿನೊಂದಿಗೆ, ಕಡ್ಡಿ ಮೈ ತಿಕ್ಕಿ ಗೀರಿಬಿಡುವಾಶೆ.
ಗೀರಿಕೊಂಡ ಕಡ್ಡಿ ಸ್ವಯಂ ಭಸ್ಮಾಸೂರ
ಹಣತೆಯಾದರೇನು? ಬನವೆಯಾದರೇನು?

- Siddugouda

20 Sep 2020, 02:13 pm

ಪ್ರೀತಿಯ ವೇದಾಂತ

ಪ್ರೀತಿ ಗೀತಿ ಅಂತ ಸುಂದರ ಹುಡುರ್ಗಿಂದೆ ನೀನು ಹೋಗಬೇಡ ಮಗ
ನೀನ್ ಹೋಗ್ ಹೋಗ್ ಹೋಗಾಬೇಡಾ ಸುಂದರ ಹುಡುಗೀರ್ಗೆ ಇರ್ತಾವೆ ಆಯ್ಕೆ ನೂರೆಂಟು
ಅದರಲ್ಲಿ ಕೆಲ ಹುಡುಗೀರ್ಗೆ ಕಾಗೆ ಹಾರ್ಸೋ ಚಾಳಿಯಂಟೂ ಉಷಾರು
ಉಷ್ ಉಷ್ ಉಷಾರು
ಇಲ್ಲಾಂದ್ರೆ ಜೀವನ ಬರೀ ಬೇಜಾರು

ಅವಳ ಪ್ರೀತಿಗಾಗಿ ಬಿದ್ದು ಸಾಯೋ ಹುಡುಗರು ಹಲವಾರು
ಅದರಲ್ಲಿ ನೀನು ಒಬ್ಬ
ತಿಳ್ಕೋ ಮೊದಲು ತಿಳ್ಕೊ ಗುರು
ಇಲ್ಲಾಂದ್ರೆ ಆಮೇಲೆ ಜೀವ್ನ ಬರೀ ಬೇಜಾರು ಬರ್ ಬರ್
ಬರೀ ಬೇಜಾರು

ಅವಳು ನಿನ್ನ ಕಡೆ ನೋಡಿ ಅವಳು ನಿನ್ನ ಕಡೆ ನೋಡಿ ನಕ್ಕಳು ಅಂತಾ
ನೀನು ಕ್ಲಾಸಿಗೆ ಚಕ್ಕರಾಕಿ ಅವಳಿಂದೇ
ಸುತ್ತ ಬೇಡ ಮಗ
ಸುತ್ ಸುತ್ ಸುತ್ತಾ ಬೇಡಾ ಮಗ

ನಿನ್ನ ಮನಸ್ಸಲಿ ಅವಳ ಬಿಂಬಾನ
ಹಚ್ಛೆ ಹಾಕಿ
ನಿನ್ನ ಹೃದಯಕೆ ಅವಳ ಹೆಸರನ
ಹೇಳೋದನ್ನ ಜಪಿಸೋದನ್ನ
ಕಲಿಸ್ಬೇಡ ಮಗ
ಕಲ್ ಕಲ್ ಕಲಿಸ್ಬೇಡಾ ಮಗ

ಅವಳನ್ನು ಮೆಚ್ಚಿದ ತಪ್ಪಿಗೆ
ನೆನಪುಗಳು
ಚುಚ್ಚೀ ಚುಚ್ಚಿ ಹುಚ್ಚ ನಾಗೋತ್ತೀಯಾ ಮಗ
ಹುಚ್ಚ್ ಹುಚ್ಚ್ ನಾಗೋತ್ತೀಯಾ

ಮನಸ್ಸು ಯುದ್ಧರಣರಂಗವಾಗಿ
ಅವಳ ನೆನಪಿನ ದಾಳಿಯ ನೀನು ಎದುರಿಸದೆ ಸೋತೋಗ್ತಿಯ
ದುಶ್ಚಟಗಳಿಗೆ ದಾಸನಾಗೋಗ್ತಿಯ

ಅಳೋದಕೂ ಆಗಲ್ಲ
ನಗೋದಕೂ ಮನಸ್ಸಿಲ್ಲ ಅನ್ನೊಂಗಾಗಿ
ಸತ್ತೋಗ್ತಿಯಾ ಮಗ
ನೀ ಸತ್ ಸತ್ ಸತ್ತೋಗ್ತೀಯ

ನಿನ್ನನು ಮರೆತು ಬಿಟ್ಟು ಇನ್ನೊಬ್ಬನ ಮದುವೆಯಾಗಿ
ಸಂಸಾರ ಮಾಡ್ತಾಳೆ
ಮಕ್ಕಳನ್ನ ಹೆತ್ತು ಸುಖ್ವಾಗಿರ್ತಾಳೆ
ಅಪ್ಪಿತಪ್ಪಿ ನಿನ್ನೆದುರು ಅವಳು ಬಂದರೆ
ಅವಳನ್ನ ತಲೆ ಎತ್ತಿ ನೋಡಿದೆ ಬೇಗ ಜಾಗ ಖಾಲಿ ಮಾಡು
ಇಲ್ಲಾಂದ್ರೆ ಇಲ್ಲ್ ಇಲ್ಲ್ ಇಲ್ಲಾಂದ್ರೆ
ನೀನು ನನ್ನನ್ನ ಮರೆತೂ ಬಿಟ್ಟು
ಬೇರೆ ಹುಡುಗೀನ ಮದುವೆಯಾಗಿ
ಸುಖ್ವಾಗಿರು ಅಂತಾಳೆ
ಸುಂಸುಮ್ನೆ ಹೃದಯಕ್ಕೆ ಕಷ್ಟ ಕೊಡುತ್ತಾಳೆ

"ಯಾಕೆ ಬೇಕು ಮಗ ನಿಂಗೆ ಇಂಥ ಪ್ರೀತಿಯಿಂದ ಹೋಗೋ ಆಳು ಜೀವ್ನ"

ನಿನ್ನನ್ನು ಪ್ರೀತಿ ಮಾಡೋ ಹುಡುಗಿಯನ್ನ
ನೀನು ಮರೆಯಬೇಡ
ಮರೆತು ಕೊರಗಬೇಡ
ಮೊದಲು ನಿನ್ನಿಂದೆ ಬರುವ
ಹುಡುಗೀನ ಇಷ್ಟಪಡು
ತುಂಬಾ ಪ್ರೀತಿ ಮಾಡು
ನೀನು ಚೆನ್ನಾಗಿರ್ತಿಯಾ
ನೀನು ಚೆನ್ ಚನ್ ಚನ್ನಾಗಿರ್ತಿಯಾ

ಅವಳಿಗೆ ನೀನೇ ರಾಜ ಆಗ್ತೀಯಾ
ಅವಳಿಗೆ ನೀನೆ ಎಲ್ಲ ಅಂದಮೇಲೆ
ನೀನು ಪ್ರೀತಿಯಲ್ಲಿ ಸೋಲೆ ಮಾತೇ ಬರಲ್ಲ
ನೀನು ಇನ್ ಸೋಲೋ ಮಾತೆ ಇಲ್ಲ
ಮಗ ನಿಂಗೆ ಉಳಿಯೋದೊಂದೆ ಈಗ
ಧರೆಯಲಿ ಸ್ವರ್ಗ ಅನ್ನೋ
ಮಾತು ಎಂದಿಗೂ ಸುಳ್ಳಾಗಲ್ಲ
ಸುಖ್ ಸುಖ್ ಸುಖ್ ವಾಗಿರು ಮಗ

- HarishKumarm

20 Sep 2020, 01:51 pm

ಅ-ವಿದ್ಯಾವಂತ

ಓದು ಬರಹ ಕಲಿತು
ಮೂಢನಂಬಿಕೆಗಳನ್ನು ಧಿಕ್ಕರಿಸಿ
ಜನರನ್ನು ತಿದ್ದುವ
ಗೌರವಿಸುವ ಪ್ರೀತಿಸುವ
ಮನುಷ್ಯತ್ವ ಗುಣವುಳ್ಳವನೇ
ನಿಜವಾದ ವಿದ್ಯಾವಂತ
ಇಲ್ಲದಿದ್ದರೆ ಆತ
ಅನಾಗರಿಕ ಅವಿದ್ಯಾವಂತ

- ರಾಜು ಹಾಸನ

20 Sep 2020, 09:07 am