ಅಪ್ಪ ಅಮ್ಮನ ಮನಸ್ಸು
ಮಕ್ಕಳ ಮನಸ್ಸಿನಂತೆ
ಅವರನ್ನು ಮಕ್ಕಳಂತೆ
. ನೋಡಿಕೊಳ್ಳುವುದರಲ್ಲಿ ಸಿಗುವಾ
ಖುಷಿ ಸ್ವರ್ಗಕ್ಕಿಂತ ಮಿಗಿಲು
ಕೊನೆಗಾಲದಲ್ಲಿ
ಅಪ್ಪ ಅಮ್ಮ ಬಯಸುವುದು
ಪ್ರೀತಿಯಿಂದ ನಾವು ಆಡುವ
ನಾಲ್ಕೇ ನಾಲ್ಕು ಮಾತುಗಳು
ತಮ್ಮ ಮಕ್ಕಳು ತಮ್ಮ ಜೊತೆಯಲ್ಲಿ
ಇರಬೇಕೆಂಬುದೇ ಹೊರೆತು
ಅನ್ನ ನೀರಲ್ಲ ಸಿರಿ ಸಂಪತ್ತಲ್ಲ
ನಮ್ಮಿಂದ ಇಷ್ಟು ಆಗದಿದ್ದರೆ
ನಾವು ಬದುಕಿ ಸಾಧಿಸುವುದಾದರೂ ಏನು
ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.
ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.
ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿಯ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.
ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.
ತಂಗಾಳಿಯ ತನ್ಮಯತೆಯಲ್ಲಿ
ತನ್ನ ಕರ್ಣಾಲಂಕರಿತ ಆಭರಣಗಳ
ಝೇಂಕಾರವ ಕೇಳಿಸುತ್ತಾ
ಬಿರಿದ ಸುಮದ ಸುಗಂಧವ ಬೀರುತ
ತನ್ನೆಡೆಗೆ ನನ್ನ ಮನದ ಗಮನವ ಸೆಳೆಯುತ್ತಿಹ
ನಲ್ಮೆಯೇ
ಯಾರೆ ನೀ ಯಾರೆ
ನನ್ನ ಮನದ ನಿಶಬ್ದ
ಭಾವಗಳ ಕರ್ಣಾತರಂಗಕ್ಕೆ ತನ್ನ ಮನದೊಳಗಿವಿಯನ್ನೋತ್ತಿ
ಏಕಾಗ್ರತೆಯಿಂದ ಆಲಿಸಿ ಅರಿತು
ಎನ್ನೆಡೆಗೆ ಒಮ್ಮೆಲೆ ತಿರುಗಿ ನೋಡಿ ಮುಗುಳ್ನಕ್ಕು ತನ್ನ ಮುಂಗುರುಳ ತುಂಟಾಟವ ಆನಂದಿಸುತ್ತಾ ಹೋರಟ
ಪ್ರೀತಿ ಅಂಕುರವೆ
ಯಾರೆ ನೀ ಯಾರೆ