Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಣ
ನೆಮ್ಮದಿಯನ್ನ
ಕಿತ್ತುಕೊಂಡ್ರೆ
ಪ್ರೀತಿ
ಹೃದಯವನ್ನು
ಕಿತ್ತುಕೊಳ್ಳುವುದು
ಚಿಂತೆ
ಖುಷಿಯನ್ನೆ
ಕಿತ್ತುಕೊಳ್ಳುವುದು
ಅತಿಯಾದ ಆಸೆ
ಅತಿಯಾದ ನಂಬಿಕೆ
ಒಳ್ಳೆಯದಲ್ಲ ಜೀವನಕ್ಕೆ
ನೆನಪಿರಲಿ
ಯಾವುದು ಕೆಟ್ಟದ್ದು ಅಲ್ಲ
ಯಾವುದು ಒಳ್ಳೆಯದು ಇಲ್ಲ
ಹಿತ ಮಿತವಾದ
ಆಲೋಚನೆಗಳೇ
ಜೀವನಕ್ಕೆ ದಾರಿ ದೀಪ
- ರಾಜು ಹಾಸನ
16 Sep 2020, 09:59 am
ವಿಶ್ವಕರ್ಮ ದೇವನೇ ನಿನಗೆ ವಂದನೆ
ಜಗದ ಸೃಷ್ಠಿಕರ್ತನೇ ನಿನಗೆ ವಂದನೆ
ದೇವಶಿಲ್ಪಿ ದೇವನೇ ನಿನಗೆ ವಂದನೆ
ದಿವ್ಯ ಜ್ಞಾನ ದೇವನೇ ನಿನಗೆ ವಂದನೆ //
ಪುತ್ರಿ ಸನ್ಯಾದೇವಿ ಯ ಧಾರೆಯೆರೆದು
ಸೂರ್ಯದೇವನಿಗೆ ಮಾವನಾದೆ
ಸೂರ್ಯತಾಪವನ್ನು ತಾಳುವಂತೆ
ಛಾಯಾ ದೇವಿ ಯನ್ನು ಸೃಷ್ಠಿಸಿದೆ //
ವಿಶ್ವ ಕಲ್ಯಾಣಕ್ಕಾಗಿ ಶನಿದೇವನನ್ನು
ಕಾಪಾಡಲು ದಿವ್ಯಸ್ತ್ರವನ್ನು ನೀಡಿದೆ
ಇಂದ್ರದೇವನೋಮ್ಮೆ ಬೆಡಿಕೊಳಲು
ಸ್ವರ್ಗ ಲೋಕವನ್ನೇ ನಿರ್ಮಿಸಿದೆ //
ದೇವ ಮಹಾದೇವನಿಗೆ ತ್ರಿಶೂಲ ಸೃಷ್ಠಿ
ವಿಷ್ಣು ದೇವನಿಗೆ ಸುದರ್ಶನ ಚಕ್ರ ಸೃಷ್ಠಿ
ಪರಶುರಾಮನಿಗೆ ಶಿವದನಸ್ಸು ಮಾಡಿತ್ತೆ
ದ್ವಾರಕೆ, ಆಯ್ಯೋದ್ದೆಯನ್ನು ನಿರ್ಮಿಸಿದೆ //
ಕುಭೇರನ ಆಸೆ ಆಣತಿಯಂತೆ ನೀನು
ಸ್ವರ್ಣ ಲಂಕೆಯನ್ನು ಸೃಷ್ಠಿಸಿದೆ ದೇವ
ಲೋಕ ಸುತ್ತಲವಗೆ ಪುಷ್ಪಕ ವಿಮಾನ
ವನ್ನೇ ನಿರ್ಮಿಸಿ ಕರುಣಿಸಿದೆ ದೇವಾ //
ವಸುಂಧರೆಯ ತುಂಬಾ ಸಕಲ ಕಲೆಗೆ
ಜೀವತುಂಬಿ ಬೆಳೆಸಿ ಹರಸಿರುವೆ ದೇವ
ಸುರ - ಅಸುರ ರೆಲ್ಲರಿಗು ಭವನಗಳನು
ನಿರ್ಮಿಸಿತ್ತು ಕೀರ್ತಿ ಮೇರೆಸಿರುವೆ //
ವಿಜ್ಞಾನ,ಆವಿಷ್ಕಾರ ಕಲಾ ಸಂಗೀತದಲ್ಲಿ
ವಿಶ್ವಕರ್ಮ ದೇವನ ಹೆಸರು ಹೊಮ್ಮಲಿ
ಜೈ ಜೈ ಕಾರಗಳ ದೂಪ ದೀಪ ಗಂಟೆಗಳ
ನಿನಾದವೆಲ್ಲ ಭುವಿಯ ತುಂಬಾ ಹರಡಲಿ //
ಬದಾಮಿ ಐಹೊಳೆ ಪಟ್ಟದಕಲ್ಲು ದೇಗುಲ
ಬೇಲೂರು ಹಳೇಬೀಡು ಹಂಪಿಯ ವೈಭವ
ಅಜಂತಾ ದಿಂದಾ ದಿಗಂತದೊರೆಗು ನಿಂತ
ತಂದೆ ವಿಶ್ವಕರ್ಮ ದೇವ ನಮೋ ನಮಃ //
ಕಲ್ಮೇಶ ಬಡಿಗೇರ
9743539657/9353980778
.......ಬಾದಾಮಿ........,
ಸರ್ವ ವಿಶ್ವಕರ್ಮ ಭಾಂದವರಿಗೆ
ವಿಶ್ವಕರ್ಮ ಜಯಂತಿಯ ಹಾರ್ಧಿಕ
ಶುಭಾಶಯಗಳು
- Kalmesh Badiger
16 Sep 2020, 09:36 am
ಕನ್ನಡಿಗ ಯಂಭು ವುದು ಒಂದು ರಾಜ್ಯ ದ ಜನ್ನ ರಲ್ಲ ❤ ಬದಲಾಗಿ ಒಂದು ಶಕ್ತಿ ಧೈರ್ಯ ಅಂಬಂತೆ ವೀರರು ಗಂಡರ ಗಂಡರು ಅದು ಏಳು ವುದು ನನಗೆ ಒಂದು ಹೇಮೆಯ ವಿಷಯ
- Krishna D Krishna D
16 Sep 2020, 08:31 am
ಅತಿಯಾದ ಪ್ರೀತಿ ಚುಚ್ಚುವುದು ಮುಳ್ಳಾಗಿ
ಅತಿಯಾದ ನಂಬಿಕೆ ಕೊಲ್ಲುವುದು ಖಡ್ಗವಾಗಿ
ಅತಿಯಾದ ಚಿಂತೆ ಸುಡುವುದು ಬೆಂಕಿಯಾಗಿ
- ರಾಜು ಹಾಸನ
16 Sep 2020, 12:29 am
ನಾ ಕಂಡ ದೇವತೆ ನೀನು
ನಿನ್ನ ಮಾಡೆಯಲಾರದ ಪಾಪಿ ನಾನು
ಮಾತೆಂದೂ ಸಿಗಲಾರದ ಗೊಂಬೆ ನೀನು
ಮತ್ತೆಂದೂ ಮರೆಯಲಾರದ ಪಾಪಿ ನಾನು ❤️❤️
ಅಮರ ಪ್ರೇಮಿ, ನಾಗೇಂದ್ರ, ಕುಣಿಗಲ್
7349111068
- nagendra
15 Sep 2020, 11:54 pm
ನೋಟ
ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ
ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ದರ್ಪದಿ ನೋಡುತ ಸುತ್ತಲು ಓಡುವ ಗಾಡಿಯ
ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ
ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು
ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ
ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು
ಜಲಮಾಲಿನ್ಯವು ನಗರದ ಕೊಳೆ ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು
ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ
ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020
- PremUdayKumar
15 Sep 2020, 11:16 pm
ಬದುಕು
ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..
ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!
ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..
ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!
ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..
ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020
- PremUdayKumar
15 Sep 2020, 11:13 pm
ಶಿಶುಗೀತೆ
ವರ್ಣ ಮಾಲೆ
ಅರಸನ ಹಾಗೆ
ಆಟಕೆ ಹೋಗೋ
ಇಲಿಯನು ಕಂಡು
ಈಟಿಯ ತಾರೋ
ಉದ್ದದ ಈಟಿಯ
ಊರುತ ಬಾರೋ
ಋಷಿಯಂತೆ ಕುಳಿತು
ಎಲೆಗಳ ಮರೆಯಲಿ
ಏರು ತಗ್ಗಿನಲಿ
ಐದಾರು ದಿಕ್ಕಿನಲಿ
ಒಲವಲಿ ಬದುಕುತ
ಓಡಲು ಬಿಡದೆ
ಔಷಧ ಹಾಕಿ
ಅಂಗಳದಿ ಹುಡುಕಿ
ಅಃ ಇಲಿಯ ಹಿಡಿದೇ ಬಿಟ್ಟೆ!
@ಪ್ರೇಮ್@
10.09.2020
- PremUdayKumar
15 Sep 2020, 11:12 pm
ನಗು ನಗುತಾ ಹೋದಳು
ಮರೆತು ಬಿಟ್ಟು ಹೋದಳು
ನೋಡಿ ಅಳೋದು ಯಾಕಲೇ
ಹೋದೊಳ್ ಹೋದೊಳ್ ಹೋಗಲಿ
ಬಂದೊಳ್ ಬಂದೊಳ್ ಬರಲ್ಲಿ
ಕುಡಿದು ಸಾಯೋದು ಯಾಕಲೇ
ಬಿಟ್ಟು ಹೋದೊಳ ನೆನೆದು
ಕುಡಿದು ಕುಣಿಯೋದು ಯಾಕಲೇ
ಕುಡಿದು ಗೋರಿಯಾಗಬೇಡಲೇ
- ರಾಜು ಹಾಸನ
15 Sep 2020, 07:01 pm
ನಿನ್ನ ಅಂಗೈಯ ತಾಕಿ ಮದರಂಗಿಗೂ, ಮುದ್ದಾದ ರಂಗು ಬಂದಿದೆ.
ನಿನ್ನ ಅಂಗಾಲ ಪಾದ ಪದ್ಮ ತಾಕಲೆಂದೇ ಈ ಧರಣಿ, ಧರಣಿ ಕುತ್ತಿದೆ.
ನೀನು ಅಂಗಳದಲ್ಲಿ , ತಿಂಗಳ ಬೆಳಕಿನಲಿ ಆಡುತ್ತಿದ್ದಾರೆ ಇಂಗೆ.
ಒಟ್ಟೊಟ್ಟಿಗೆ ಎರಡೆರಡು ಚಂದ್ರನ್ನ ನೋಡದಂಗೆ ಅಗೋಯ್ತು ನಂಗೆ.
ನಿನ್ನ ಕಾಡುವ ಕಣ್ಣುಗಳು ಅವಳದು ಹರಳುಗಳು.
ನಿನ್ನ ತೂಗುವ ಉಬ್ಬುಗಳು ಕಮನಬಿಲ್ಲುಗಳು.
ನಿನಾಡುವ ಮಾತುಗಳು ಸಿಹಿ ಜೇನಿನ ಬಿಂಧುಗಳು.
ಕಣ್ಣಿನ ನೋಟಗಳು ತಲೆ ತಿರುಗಿಸೋ ರಾಟೆಗಳು.
ನಿನ್ನ ನೋಡಿ ಬಾಗುತೈತೆ ಅ ಸೂರ್ಯಕಾಂತಿ.
ನಿನ್ನ ನೋಡುವ ಕ್ಷಣವೆಲ್ಲ, ನನಗೆ ಸಂಕ್ರಾಂತಿ.
- NaveenkumarK
15 Sep 2020, 10:37 am