ದುಂಡು ಮಲ್ಲಿಗೆಯೇ
ನೀ ಅರಳೊ ಮುದ್ದಾದ ಚೆಲುವಿಗೆ ,
ಈ ಲೋಕದಾ ಚಂದುಳಿ ಚೆಲುವಿಯರೆಲ್ಲಾ ಒಟ್ಟಾಗಿ ,
ನಿನ್ನಾ ನೋಡುತಲೆ ಆಹಾ ಆಹಾ... ಎಂದು ಉದ್ಗಾರಿಸುತ್ತಾ ,
ನೀ ಚೆಲ್ಲುವಾ ಪರಿಮಳವ ಘಂ ಎನ್ನುವ ಪರಿಮಳವನ್ನೆ ಅಸ್ವಾಸುತ್ತಿರುವರು ...
ಮೈಸೂರು ಮಲ್ಲಿಗೆಯೇ ,
ಬೆಳ್ಳಗಿನ ನಿನ್ನ ಮೈ ಬಣ್ಣದ ಅಂದಕೆ
ಬೆಳ್ ಮುಗಿಲಲ್ಲಿ ನಕ್ಷತ್ರಗಳ ಮಿನುಗಿಸಿ,
ಬಾನ ತುಂಬೆಲ್ಲಾ ಬೆಳದಿಂಗಳ ಚೆಲುತ್ತಾ ಮೋಡಗಳ ಮೆರೆಯಲ್ಲಿ ನಿಂತು , ನಿನ್ನಂದವ ಮನಸಾರೆ ಕಣ್ತುಂಬಿಕೊಳ್ಳುತಿಹನು
ಸೂಜಿ ಮಲ್ಲಿಗೆಯೇ ನಿನ್ನಿಂದಾನೆ
ಆ ಸಾಗರಿಯು ಕೂಡಾ ಅಲೆಗಳಲ್ಲಿ ಅಪ್ಪಳಿಸುತ್ತಾ
ಬೆಳದಿಂಗಳನು ಎಳೆ ಎಳೆಯಾಗಿ ಸ್ವೀಕರಿಸುತ್ತಾ
ತುಂಬಾ ಆಸೆಯಿಂದ ಪ್ರೀತಿಸುತ್ತಾ ಸಂಬ್ರಮಿಸುತಿಹಳು ....
ಕಡಲಾಳದಲ್ಲಿ ಹುಡುಕಿದರು
ಸಿಗದ ಸ್ವಾತಿಮುತ್ತು ನೀ ಗೆಳತಿ
ನೀ ಸಿಕ್ಕಿದೆ ಪಕ್ಕದ ಊರ ಬೀದಿಯಲಿ
ನಾ ಅಲೆಯುತ ಬಂದಾಗ
ನನ್ನ ಕಂಡು ನೀ ಮರೆಯಲಿ
ನಿಂತು ಇಣುಕಿ ನೋಡುವ ಪರಿ
ನನ್ನ ಹೃದಯಕ್ಕೆ ಬೀರಿತು ಬಾಣದ
ಗುರಿ ನಾ ತಪ್ಪಿಸಿಕೋಳ್ಳಲು ಪರದಾಡಿದೆ
ನೀನ್ನ ನಗುವಿನ ಬಾಣವ ಕಂಡು
ಆದರೆ ಆ ಬಾಣವೆ ಹೃದಯವ ಹೊಕ್ಕು
ಇಂದು ನನ್ನ ನೆಮ್ಮದಿಯಗೆಡಿಸಿತು ಹಾಳಾದ್ದು..
ಸೀರಿಯಲ್/ಕ್ರಿಕೆಟ್/ಬಿಗ್ಬಾಸ್ ಹುಚ್ಚುಗಳು ಅದರಲ್ಲೇ ಬರುವ ನಮ್ಮ.. ಇಂಟರ್ನಲ್ ಗಳು...?
ಪೂರ್ತಿಯಾಗದ ಅಸೈನ್ಮೆಂಟ್ ಗಳು... ಅದನ್ನು ಪೂರ್ತಿ ಮಾಡಲು ಪ್ರಯತ್ನಿಸಿದ ನಾವುಗಳು....?
ಗೊತ್ತಿದ್ದರೂ ಗೊತ್ತೀರದಂತಿರುವ ಸೀಕ್ರೆಟ್ ಪ್ರೆಮಕತೆಗಳು?..
ಹೀಗೆ ಸಾಗುವುದು ನಮ್ಮ ಡೈಲಿ ವ್ಯತೆಗಳು......
ಕನಸು ಸಾಧಿಸುವ ಹಾದಿಯಲಿ ಕಲ್ಲು ಮುಳ್ಳಿನ
ದಾರಿ ನೂರಾರು ಆದರೂ ಬಿಡೆನು ನಾ ಗುರಿ ಸಾಧಿಸುವ ಚಲವ.
ಕನಸು ಕಾಣುವ ಹಾದಿಯಲಿ ವಿಘ್ನಗಳು ನೂರಾರು
ಆದರೂ ಬಿಡೆನು ನಾ ತಲುಪುವ ಗಮ್ಯವ.
ಹಾದಿಯಲಿ ಸಿಗುವ ಕಲ್ಲು ಮುಳ್ಳುಗಳನ್ನು ನಾ
ಬಗೆವೆ ಯಶಸ್ಸಿನ ಹಾದಿಯಾಗಿ.
ಎಲ್ಲಾ ಕಷ್ಟದ ಹಾದಿ ದಾಟಿ ಒಂದಲ್ಲ ಒಂದು ದಿನ
ಏರುವೆ ಗೆಲುವಿನ ಶಿಖರ.
- shreya M S
30 Aug 2025, 10:29 pm
ಹೊಸದಾದ ರಾಗಕೆ
ಶೃತಿ ಸೇರಿದಂತೆ
ಜೊತೆಯಾದೆ ನೀ
ಚಿಗುರಿದ ಕನಸಲ್ಲಿ
ಹೊಸದಾದ ಆಸೆಗಳು ಅರಳಿದಂತೆ
ಜೀವನ ಜ್ಯೊತಿಯಾದೆ ನೀ
ಹಾಲಿಗೆ ಜೇನ ಸೇರಿ ಬೆರೆಸಿದಂತೆ
ಸ್ನೇಹದಲ್ಲಿ ಬೆರೆತು ಸೇರಿದೆ
ಪ್ರೇಮದ ಪ್ರೀತಿಯಾದೆ ನೀ