Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ
- ರಾಜು ಹಾಸನ
13 Sep 2020, 07:13 pm
ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು
ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ
ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ
- ರಾಜು ಹಾಸನ
13 Sep 2020, 06:57 pm
ತುಂಬಾ ಕನಸನ್ನು ಒತ್ತು
ನಿನ್ನ ಜೀವನದ ಸಂಗತಿಯಾಗಿ ಬರುವೆ
ತುಂಬಾ ಆಸೆ ಇದೆ ,
ಮದುವೆಯಂಬ ಮಿಲನದಲ್ಲಿ...
ನಿನ್ನೆದುರು ನಿಂತು ನಿನ್ನ ಕೈ ಇಂದ
ನನ್ನ ಹಣೆಗೆ ಅರಿಶಿನ ಕುಂಕುಮವನ್ನು ಇಡಿಸ್ಕೊಳಲ್ಲು...
ಆ ನಿನ್ನ ಕೈ ಇಂದ
ತಾಳಿ ಕಟ್ಟಿಸಿಕೊಳಲ್ಲು...
ನೀ ಮುಂದೆ, ನಾ ನಿನ್ನ ಇಂದೆ
ಬರುತ ಆ ಸಪ್ತಪದಿಯನು ತುಳಿಯಲು
ಮತ್ತೆ ಕಾಣದ ಆ
ಅರುಂಧತಿ ನಕ್ಷತ್ರವನು ನೋಡಲು......❤️
.....
- Bhavyashree K.G1
13 Sep 2020, 07:08 am
ಗೆಲುವೆಂಬುದೊಂದು ತುಂಬಾ ಸಿಹಿಯಾದ ಅನುಭವ
ಇದು ನಮ್ಮೊಡನೆ ಇದ್ದರೆ ಬೇಗ ಮರೆಯುವೆವು ನೋವ
ಸೋಲೆಂಬುದೊಂದು ನಿಜವಾಗಿ ಕಹಿಯಾದ ಅನುಭವ
ಇದು ಮಸ್ತಕವನು ಹೊಕ್ಕಿದರೆ ನಡುಗುವುದು ಜೀವ
ಸೋಲೆಂಬುದೆ ಗೆಲುವಿಗಾದರೆ ಮೆಟ್ಟಿಲು
ಗೆಲುವೇ ಮನಸ್ಸೆಂಬ ಮಗುವಿಗೆ ಆಗುವುದಂತೆ ನಗು ತುಂಬಿದ ತೊಟ್ಟಿಲು
- DevakumarBK Dev
12 Sep 2020, 06:05 pm
ದಿನಕ್ಕೊಂದು ಕವನ
ಅದಕ್ಕೆ ನೀನೇ ಕಾರಣ....
ಪ್ರೀತಿಸುವೆ ನಿನ್ನನ್ನ...
ಮುಚ್ಚುವವರೆಗು ನನ್ನ ನಯನ....@©
- Bhavyashree K.G1
12 Sep 2020, 03:34 pm
ನೋಟ
ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ
ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ಸುತ್ತಲು ಓಡುವ ಗಾಡಿಯು
ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ
ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು
ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ
ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು
ಜಲಮಾಲಿನ್ಯವು ನಗರದ ಕೊಳೆ ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು
ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ
ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020
- PremUdayKumar
12 Sep 2020, 02:11 pm
ಸಾರಾಯಿ ಕುಡಿದರೆ
ಕುಡುಕ ಎನ್ನುವ ಜನರು
ಸುರಪಾನ ಕುಡಿದು
ವಾಲಾಡಿ ತೇಲಾಡುವ
ದೇವಾ ಲೋಕದ
ದೊಡ್ಡ ಸಾರಾಯಿ ಕುಡುಕರನ್ನ
ದೇವರೆಂದು ಪೂಜಿಸುವರು
ಈಗ ಹೇಳಿ ನಿವು
ಯಾರನ್ನು ಬೈಯುವರೆಂದು
ಕುಡುಕರನ್ನು ಬೈದರೆ
ದೇವರನ್ನು ಬೈದಂತೆ
ಕುಡುಕರು ಸತ್ಯ ಹೇಳುವ
ಸತ್ಯವಂತರು
ಆದರೂ ಕುಡಿಬೇಡಿ ಸಾರಾಯಿ
ಆರೋಗ್ಯಕ್ಕೆ ಹಾನಿಕಾರಕ
- ರಾಜು ಹಾಸನ
10 Sep 2020, 09:04 am
ಊರಲ್ಲಿ ತೊಟ್ಟು ನೀರಿಲ್ಲಾ
ಕೆರೆ ಬಾವಿ ಗಳೆಲ್ಲ ಬತ್ತೊಯ್ತು
ಎತ್ತ ನೋಡಿದರತ್ತ ಆಕ್ರಂದನ
ಸುತ್ತೆಲ್ಲ ಸುಡುಗಾಡು ಮೌನ //
ಗುಳೆ ಹೋಯ್ತು ಜನವೇಲ್ಲ
ಹೂಳೆತ್ತುವವರಾರೂ ಇಲ್ಲ
ಹಳೆ ಗುಡಿಸಲ ಒಳಗೆಲ್ಲಾ
ಹಸುಳೆಗಳ ಆಹ್ಹಾಕಾರ //
ಊರ ಕಲ್ಲಪ್ಪ ಸಾಹುಕಾರ
ಕಲ್ಲುಗಳನ್ನೆಲ್ಲಿಂದ ತರಲೆಂದ
ಕೆರೆ ಬಾವಿ ಗಳ ಕಟ್ಟಿಸಲು
ತಲೆ ಕೂದಲೆಲ್ಲ ಕೆರೆದುಕೊಂಡು //
ಊರಾಗಿರೋ ವೆಂಕಟೇಶ
ಉರ್ಹೊರಗಿರೋ ಹನಮಂತ
ಎಲ್ಲಾ ದೇವರ ಕಲ್ಲು ಕಿತ್ತು ತಂದ
ಅಂದ ಚೆಂದದ ಕೆರಗೆ ಮೂರ್ತವಿಟ್ಟ //
ದೇವರ ಕೇರೆಯಂದು ಅದಕ್ಕೆ
ನಾಮಕರಣ ಮಾಡಿ ಬಿಟ್ಟಾ
ದೇವರ ಮನೆಗಳನ್ನೇಲ್ಲ ಒಡೆದು
ದೇವರ ಕೆರೆಯೊಂದು ಕಟ್ಟಿಬಿಟ್ಟ //
ದೇವರ ದು ಎಂತಾ ಪಾಪ
ಅನ್ಯರಿಗೆ ಕಲ್ಲು ಕೊಟ್ಟು
ಅಂದಿನಿಂದ ಇಂದಿನ ತನಕ
ಬಿಸಿಲಲ್ಲಿ ಮಲಗಿ ಬಿಟ್ಟಾ //
.. ಕಲ್ಮೇಶ ಬಡಿಗೇರ
9743539657
..,..ಬಾದಾಮಿ......
- Kalmesh Badiger
09 Sep 2020, 10:23 am
ಇದು ಅಂತಿಂತ ಬರವಲ್ಲಾ
ಹಿಂದೆಂದೂ ಕಂಡಿಲ್ಲಾ
ಮುಂದೆಂದೂ ಕಾಣಲ್ಲ
ಈ ಧರೆಯ ಮೇಲೊಂದು ಬರ//
ಹದಿಮೂರನೇ ಶತಮಾನದ
ದುರ್ಗೆಯ ಬರವಲ್ಲಾ
ಹದಿನೇಳನೆಯ ಶತಮಾನದ
ಡೋಗಿಯ ಬರವಲ್ಲಾ //
ಸಜ್ಜೆಯ ಬರವಲ್ಲವೋ
ರಾಗಿಯ ಬರವಲ್ಲವೋ
ಸಾಲು ಮರಗಳ ಕಡಿದು
ಮಳೆ ಬಾರದ ಬರವಲ್ಲ//
ಕೋರೋಣ ದಿಂದಾಗಿ
ಇದು ಜಾಗತಿಕ ಹಣಕಾಸು
ಕುಸಿದ ಬರವಣ್ಣಾ
ನೀವಿದನು ಅರಿಯರಣ್ಣ //
ಉದ್ಯೋಗ ಕಳೆದ ಬರ
ಅನ್ನವ ಕಿತ್ಕೊಂಡ ಬರ
ಉದ್ದಿಮೆ ಮುಚ್ಚಿದ ಬರ
ಬಣ್ಣ ಬಯಲಾದ ಬರ//
ಕಲ್ಮೇಶ ಬಡಿಗೇರ
9743539657
......ಬಾದಾಮಿ........
- Kalmesh Badiger
09 Sep 2020, 09:22 am
ಬದಲಾಯ್ತು ಜಗವೆಲ್ಲಾ
ಮರುಳ ಆಯ್ತು ಜಗವೆಲ್ಲಾ
ಮೊದಲಿದ್ದ ಅಡುಗೆಮನೆ
ಇನ್ನೇಲ್ಲಿ ಕಾಣುವುದು //
ಸಜ್ಜೆ ಜೋಳದ ರೊಟ್ಟಿ
ಕುಟ್ಟಿ ಮಾಡಿದ ಹುಗ್ಗಿ
ಕರಿದ ಕರಿಗಡಬು ಹೋಳಿಗೆ
ಇನ್ನೇಲ್ಲಿ ದೊರೆಯುವುದು //
ನಾಜೂಕದ ಲೋಕದಲಿ
ನಾಸ್ಟಾ ಎಂಬುದೇ ಊಟ
ನಾಲ್ಕು ತುತ್ತಿಂದರೆ ಆಯ್ತು
ಮುಂದೇನು ಮಾಡುವುದು //
ರಾಗಿ ಮುದ್ದೆ ಯು ಇಲ್ಲಾ
ಗಸ ಗಸೆ ಪಾಯಸ ವಿಲ್ಲ
ಮಣೆಮೇಲೆ ಕುತ್ಗೊಂಡು
ಊಟ ಮಾಡಿದ ಕಾಣೆ //
ಇಲ್ಲಿರುವುದು ಒಂದೇ
ಹಲ್ಲಿರದವರು ತಿನ್ನುವ
ಅಣ್ಣದಲಿ ಮಾಡಿರುವ
ಬಣ್ಣ ಬಣ್ಣದ ಊಟ //
ಕಲ್ಮೇಶ ಬಡಿಗೇರ
9743539657
....ಬಾದಾಮಿ.......
- Kalmesh Badiger
09 Sep 2020, 09:06 am