Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಬಸ್ಸು

ಅಮ್ಮಾ ಅಮ್ಮಾ ನೊಡಬಾರಮ್ಮ
ನಮ್ಮೂರಿಗೆ ಬಸ್ಸು ಬಂದೈತಮ್ಮ
ಗುಡಿಸಲ ಊರಿಗೆ ಡುರಕಿಯ
ಹೊಡೆಯುತ ಬಂದು ನಿಂತೈತಮ್ಮಾ //

ಕಾಕಿಯ ಅಂಗಿ ಕೈಯಲಿ ಟಿಕೆಟ್
ಹಿಡಿದು ಕೂಗುತ ಲಿಹನಮ್ಮಾ
ಚರ್ಮದ ಬ್ಯಾಗಲಿ ಚಿಲ್ಲರೆ ಹಾಕುವ
ಬಸ್ ಕಂಡಕ್ಟರ್ ಇವನಮ್ಮ //

ಚಕ್ರವು ಮುರಿದಿಹ ಅಜ್ಜನ
ಸೈಕಲ್ ನನಗೆ ಬೇಡವಮ್ಮ
ಶಾಲೆಗೆ ಹೋಗಲು ಬರಲು
ನನಗೆ ಈ ಬಸ್ಸೇ ಸಾಕಮ್ಮ //

ರಾಜ್ಯ ಸಾರಿಗೆ ಬಸ್ಸಂತಂದ್ರೆ
ನಮಗೆ ತುಂಬಾ ಇಷ್ಟವಮ್ಮ
ಗುಡಿಸಿಲಿನಲ್ಲಿ ಅರಳುವ
ಗುಲಾಬಿಗೆ ನೆರಳನಿಯುವುದಮ್ಮ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ....

- Kalmesh Badiger

09 Sep 2020, 08:50 am

ನೀ ಎಲ್ಲಿರುವೆ

ಮಧುರ ಪ್ರೀತಿಯ ತೊರೆದು
ಮರೆಯಲ್ಲಿ ಇರುವೆ ನಿಹ್ನೇಗೆ
ಮೃಧು ಮಾತಿನ ಸಂದೇಶ
ನೀಡದೆ ನೀ ಎಲ್ಲಿರುವೆ //

ಪ್ರೀತಿಯ ಅಮೃತ ನೀಡಿದೆ
ಪ್ರೇಮದ ಪಲ್ಲವಿ ನುಡಿಸಿದೆ
ಪ್ರಣಯ ರಾಗವ ಹಾಡಿ
ಹಾರಿ ಹೋಗಿ ನೀ ಎಲ್ಲಿರುವೆ //

ಹಸಿರು ಕಾನನ ವೆನಗೆ
ಮುಸುಕು ಹಾಕಿದ ಮಾಯೆ
ನುಸುಳಿ ಹೋದರು ಒಳಗೆ
ಬರೀ ಮೊಸಳೆ ಕಣ್ಣೀರು //

ಸರಿಯಲಾರದ ಹೊತ್ತು
ಸುರಿಸ ದಾಗಿದೆ ಮುತ್ತು
ತನುವಿನೊಳಗಿನ ತವಕ
ತೆಯುತ್ತೀರುವುದು ಮನವ //

ಅಂದನ ಬಾಳಿನೊಳು
ಆನಂದದ ಅಲೆ ಬಂದಂತೆ
ಬಂದು ಬಿಡು ನನ್ನೇದುರೆಂದು
ಕೊರಗುತಲಿರುವೆ ನೀ ಎಲ್ಲಿರುವೆ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

09 Sep 2020, 08:34 am

ಕವಿತೆ

ಕವಿತೆ ಒಂದು ಬರೆದೆ ನಾನು
ನಿನ್ನ ಚೆಲುವ ನಗುವಿಗೆ
ಕತೆಯ ಒಂದು ಬರೆದೆ ನೀನು
ನನ್ನ ಮಧುರ ಬದುಕಿಗೆ //

ಮೊದಲ ಪ್ರೇಮದ ಪತ್ರ
ಮೊದಲ ಪ್ರೀತಿಯ ಚಿತ್ರ
ಅದಲು ಬದಲು ಆಗಲಿಲ್ಲ
ತೊದಲು ಮಾತು ನುಡಿಯಲಿಲ್ಲ //

ವಲಿದು ಬಂದು ನಿಲ್ಲಲಿಲ್ಲ
ಮನದಿ ಬಂದು ಇಣುಕಲಿಲ್ಲ
ಒಲವಿನಿಂದ ನಲಿಯಲಿಲ್ಲ
ಬಿಡುವು ನುಡಿಯಲಿಲ್ಲ //

ಪ್ರಣಯ ರಾಗ ಹಾಡಲಿಲ್ಲ
ನಯನ ದಿಂದ ಸೆಳೆಯಲಿಲ್ಲ
ಆದರೂ ಮನದಾಳದಲ್ಲಿ
ಮಧುರ ವಾಗಿ ಮೂಡಲಿಲ್ಲ //

ಎನಗೆ ನೀನು ಕವಿತೆಯಾದೆ
ನಿನಗೆ ನಾನು ಕಥೆಯೇ ಆದೆ
ಕವಿತೆ ಕಥೆಯ ಮಿಲನ ನೆನೆದು
ಮನದಿ ನೆನೆದು ಕೊರಗಿದೆ //

ಕಲ್ಮೇಶ ಬಡಿಗೇರ
9743539657
.......ಬಾದಾಮಿ......

- Kalmesh Badiger

09 Sep 2020, 08:21 am

ಸುಪ್ರಭಾತ

ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ

- ರಾಜು ಹಾಸನ

09 Sep 2020, 01:32 am

ಜ್ಞಾನೋದಯ

ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು

ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ

ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ

- ರಾಜು ಹಾಸನ

08 Sep 2020, 11:25 pm

ಸಾವಿನಲ್ಲೂ ಸಮಾನತೆ

ಕೆಲವರು ಹಸಿದು ಸಾಯುವರು
ಕೆಲವರು ತಿಂದರು ಸಾಯುವರು
ಇನ್ನೂ ಕೆಲವರು ತಾನು ತಿನ್ನದೆ
‌ ತಿನ್ನಲು ಬಿಡದೆ ಸಾಯುವರು
ಬಡವ ಶ್ರೀಮಂತನೆನದೇ
ಬಿಟ್ಟು ಹೋಗುವುದು ಜೀವಾ
ಗಾಳಿಯ ಅಲೆ ಅಲೆಯಾಗಿ
ಸಾಯುವುದು ದೇಹ
ಸೇರುವುದು ಮಣ್ಣಲ್ಲಿ ಮಣ್ಣಾಗಿ
ನೆನಪುಗಳು ಮಾತ್ರ ಅಮರ ಮಧುರ

- ರಾಜು ಹಾಸನ

08 Sep 2020, 12:40 am

ಕಾಣದ ಕಡಲು

ಮುಸ್ಸಂಜೆಗೆ ಮಲಗಿ
ಮುಂಜಾನೆಗೆ ಇರ್ತೀವೂ ಗೋತ್ತಿಲ್ಲ
ಆದ್ರೂ ಆಸೆಗಳಿಗೆ ಕಮ್ಮಿ ಇಲ್ಲ
ಕನಸುಗಳಿಗೆ ಕೊನೆಯೇ ಇಲ್ಲ
ಇಂದು ನಾಳೆಯ ಚಿಂತೆಯೇ ನಮಗೆಲ್ಲ

ಮೈ ತುಂಬಾ ಬಟ್ಟೆ
ಹೊಟ್ಟೆ ತುಂಬಾ ಊಟ
ಕಣ್ಣ್ ತುಂಬಾ ನಿದ್ರೆ
ಕೈ ತುಂಬಾ ಕೆಲಸ ಇದ್ದಾರೆ ಸಾಕು
ಮುಗಿಯುವುದು ಜೀವನ
ಕಣ್ಣಿಗೆ ಕಾಣದಂತೆ

- ರಾಜು ಹಾಸನ

07 Sep 2020, 11:59 pm

ಆಸೆ

ಆಸೆ ಯೋಚನೆ, ನೆನಪುಗಳು
ಹತೋಟಿಯಲ್ಲಿದ್ದಾಗ
ಬಂಡೆಗಲ್ಲಿನ ಮೇಲೂ ನಿದ್ದೆ ಬರುತ್ತೆ.

ಅದೇ ಆಸೆ ಯೋಚನೆ, ನೆನಪುಗಳ
ಗಲಾಟೆ ಮನಸ್ಸಿನಲ್ಲಿ ಹೆಚ್ಚಾದಾಗ
ಬೆಚ್ಚನೆಯ ಹಾಸಿಗೆ ಕೂಡ ಚುಚ್ಚಿ ಎಬ್ಬಿಸೀದಂತಾಗುತ್ತದೆ.......... ಮಂಜು

- ManjuDm

07 Sep 2020, 10:53 pm

ನಾನು ಮತ್ತು ಪ್ರೀತಿ

ನನಗೆ ತಿಳಿದು ತಿಳಿಯಾದೆ
ನನ್ನೆದೆಯಲ್ಲಿ ಹುಟ್ಟಿತು ಪ್ರೀತಿ
ಪ್ರೀತಿಯಿಂದ ಅಪ್ಪಿಕೊಂಡೆನು
ನನ್ನವಳ ಪ್ರೀತಿಯ
ಕಟ್ಟಿಕೊಂಡೆನು ಕನಸುಗಳ
ನನ್ನ ಮಡದಿಯೆಂದು

ಒಬ್ಬರಿಗೆ ಒಬ್ಬರು ಪ್ರೀತಿಸಿದೆವು
ಇದ್ದರೂ ಸತ್ತರು ಒಟ್ಟಿಗೆಯೆಂಬಂತೆ
ಇಬ್ಬರು ಹಂಚಿಕೊಳ್ಳುತ್ತಿದ್ದೇವು
ಹೃದಯಾದ ಮಾತು ಮನಸ್ಸಿನ ನೋವು
ಬಿಟ್ಟಿರಲಾರದಷ್ಟು ಅಚ್ಚಿಕೊಂಡೆವು
ಮನಸು ಕೊಟ್ಟೆವು ಒಬ್ಬರಿಗೆ ಒಬ್ಬರು

ತುದಿಗಾಲಲ್ಲಿ ನಿಲ್ಲುತ್ತಿದೆವೂ
ನೋಡಲು ಮಾತನಾಡಲು
ದಿನಾಲೂ ಕಿತ್ತಾಟವಾಡುತ್ತಿದ್ದೆವು
ಮಾತನಾಡುವ ಸಲುವಾಗಿ
ನನ್ನವಳು ಕಾಣದಿದ್ದರೆ
ನಾ ಆಗುತ್ತಿದೆ ಹುಚ್ಚನಂತೆ
ಅವಳು ಕೂಡ ಬಿಟ್ಟು ಇರಲಾರಳು
ಈ ನನ್ನ ಪ್ರೀತಿಯಿಲ್ಲದೆ

ಯಾರ ಕಣ್ಣು ಬಿತ್ತೋ ಗೋತ್ತಿಲ್ಲ
ನಮ್ಮಿಬ್ಬರ ಪ್ರೀತಿಗೆ
ದೇವರೆ ನಾಚುತ್ತಿದ್ದ ಅಂದು
ನಮ್ಮಿಬ್ಬರ ಪ್ರೀತಿ ಕಂಡು
ದೇವರೇ ಕೊರಗುತ್ತಿದ್ದಾನೆ ಇಂದು
ಹೊಡೆದು ಹೋದ
ನಮ್ಮಿಬ್ಬರ ಪ್ರೀತಿಯ ಕಂಡು
ಆದರೂ ಮರೆಯೋದುಂಟೆ
ನಮ್ಮ ಪ್ರೀತಿಯ

- ರಾಜು ಹಾಸನ

07 Sep 2020, 12:59 am

ಮಾತು

ಮಾತುಗಳು ಮುತ್ತಿನಂತೆ
ಕೆಲವೊಮ್ಮೆ ಸುಂದರ ಸ್ವಾತಿಮುತ್ತಿನಂತೆ,
ಇನ್ನೂ ಕೆಲವೊಮ್ಮೆ ಪರರ ಹೃದಯದಲಿ
ಕಿರಿಕಿರಿ ಮುತ್ತು ಕೊಂಡಂತೆ...!!

ಚಿಂತೆಯಲ್ಲಿ ಬೆಂದವನಿಗೆ
ಮಾತುಗಳು ವ್ಯರ್ಥವಂತೆ ,
ಏಕಾಂಗಿಯಾದವನಿಗೆ ಮಾತೆಯೆಲ್ಲವಂತೆ !!!

ಅಂತೆ , ಕಂತೆಗಳ ನಡುವೆ
ಬದುಕಿದವನಿಗೆ ಜೀವನವೇ ಸಾಕಂತೆ ,
ಹೇಳುವವನಿಗೆ , ಅವನಿಗಿಂತ
ಇತರರ ಜೀವನದಲ್ಲಿ ಧೋಷವಂತೆ !!!

ಮಾತು ಬರದವನಿಗೆ ಶಾಪವಂತೆ .
ಮೌನ ಕೆಲವೊಮ್ಮೆ ಅಸ್ತ್ರವಂತೆ ...!!

- Deepak R

06 Sep 2020, 01:32 pm