ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಕಲೆ,ಹವ್ಯಾಸ,ಮುನ್ನುಗುವ ಛಲ ಇದ್ದೇ ಇರುವುದು...
ಅವರನ್ನು ಮತ್ತಷ್ಟು ಎತ್ತರಕ್ಕೆ ಮುನ್ನುಗ್ಗಿಸುವವರು ಬೇಕಾಗುವರು...
ನನ್ನ ಜೀವನದಲ್ಲೂ ಒಬ್ಬರು ಪ್ರೇರೇಪಣೆಯಾಗಿ ಬಂದರು..
ನಮ್ಮೆಲ್ಲರ ಒಳಿತಿಗಾಗಿ ಕಷ್ಟ ಪಟ್ಟರು..
ನಮ್ಮ ಸಣ್ಣ ಒಂದು ಒಳ್ಳೆ ಕೆಲಸ,ಅಂಕ ನೋಡಿ ಹುರಿದುಂಬಿಸಿದರು..
ಪಾಠವನ್ನು ಓದಿ,ಅರ್ಥೈಸಿ,ಆನಂದಿಸಿ ಕಲಿಯಲು ತಿಳಿಸಿದರು..
ಭೇದ- ಭಾವವಿಲ್ಲದೆ ಪ್ರತಿಯೊಬ್ಬರಿಗೂ ಬುದ್ದಿ ಪಾಠ ವಿದ್ಯಾದಾನ ಮಾಡಿದರು..
ಕನಸ ಕಂಡೆ ನನ್ನ ಜೀವನವು ಅವರಂತೆ ಆಗಬೇಕೆಂದು..
ಕೊನೆಗೂ ನನಸಾಯಿತು ಆ ನನ್ನ ಕನಸು..
ಓ ಗುರುವೇ
ನನ್ನ ನಮಸ್ಕಾರಗಳು ನಿಮ್ಮ ಚರಣಗಳಿಗೆ..
ಶಿಸ್ತು ಕ್ಷಮೆ ಕರುಣೆಗೆ ಹೆಸರಾದ ಗುರುದೇವ ಪ್ರೀತಿಲೇ ತೆರೆಸುವ
ಮುಗ್ಧ ಮನಗಳ ತೊದಲನುಡಿ ಯ ಮೊದಲ ಪುಟವ
ಸರ್ವ ಮಕ್ಕಳ ಸಹಾನುಭೂತಿ ತಾನಾಗಿ ಸೃಷ್ಟಿಸುವ ಸಮನ್ವಯತೆಯ ಲ್ಲಿ ಹೊಳೆಯುವ ಸುಂದರ ಸ್ನೇಹ ತಾರೆಗಳ ಹಕ್ಕಿಗಳ ಕೂಟವ
ನಿರ್ಮಲ ಹೃದಯದಿ ಅಕ್ಷರ ಬೀಜವ ಬಿತ್ತಿ ಸದಾ ಸಕಲ ಮೌಲ್ಯಗಳ ಸಂಸ್ಕಾರವ ನೀಡುವ ಗುರುದೇವ
ಮಕ್ಕಳ ಸಾಧನೆಯ ಸಫಲತೆಯ ಹಾದಿಯಲ್ಲಿ ಸನ್ನಡತೆಯ ಸಹಬಾಳ್ವೆಯನ್ನು ಬಯಸುವ
ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಉಜ್ವಲತೆಗೆ ಉಸಿರಾಗಿ
ಖಾಲಿ ಶಿಲೆಗಳ ಮನದೊಳಗೆ ದಿವ್ಯ ಜ್ಞಾನ ಜ್ಯೋತಿಯ ಬೆಳಗಿಸುವ ಶಿಲ್ಪ ಕಲೆಯಾಗಿ ಮಕ್ಕಳ ಗುರಿ ಸಾಧನೆಯ ಯಶಸ್ವಿಗೆ ಸ್ಪೂರ್ತಿಯಾಗಿ
ಜಗದೊಳಗೆ ಜನ ಸ್ಮರಿ ಸೋ ಸಾಧಕರ ಪಟ್ಟಿಯಲ್ಲಿ ತನ್ನ ಶಿಷ್ಯರ ಹೆಸರ ಹುಡುಕುವ
ಗುರುದೇವ ಮಿಂಚುಹುಳ ವಾಗಿ
ಪ್ರೀತಿಸುವಾಗ ಹೇಳುವರು
ಕಾಮನಬಿಲ್ಲಿನಂತೆ ನಿನ್ನ ಕಣ್ಣ್ ನೋಟ
ಮುತ್ತಿನಂತೆ ನಿನ್ನ ಮಾತುಗಳು
ಸವಿ ಜೇನಿನಂತೆ ನಿನ್ನ ನಗು
ಬಣ್ಣಿಸಲು ಸಾಧ್ಯವಿಲ್ಲ
ನಿನ್ನ ಸೌಂದರ್ಯವಾ
ಎಷ್ಟೇ ನೋಡಿದರೂ ಸಾಲದು
ಮತ್ತೆ ಮತ್ತೆ ನೋಡುವಾಸೆ ಎನ್ನುವರು
ಚೂರಾದ ಪ್ರೀತಿಯಲ್ಲಿ ಹೇಳುವರು
ನಿನ್ನ ಕಣ್ಣ್ ನೋಟವೇ ಚುಚ್ಚುವುದು
ನನಗೆ ಚುಚ್ಚುಮದ್ದಿನಂತೆ
ಸಾಕೆನಗೆ ನಿನ್ನ ಕಾಟವೂ
ಬೇಡ ನನಗೆ ನಿನ್ನ ಮಾತುಗಳು
ಬಣ್ಣಿಸಲು ನಿನ್ ಯಾರು
ನಾನ್ ಯಾರೆಂದು ಕಿತ್ತಾಡುವರು
ಹೊತ್ತು ಗೊತ್ತಿಲ್ಲದೆ
ಮತ್ತೆ ಮತ್ತೆ ಹೇಳುವರು
ನಿನೇ ನನ್ನ ಜೀವಾ ಪ್ರಾಣವೆಂದು
ಮುತ್ತಿಟ್ಟು ಮುದ್ದಾಡುವರು
ಪ್ರೀತಿ ಗೆದ್ದ ಪ್ರೇಮಿಗಳು