Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಂದೇಶ

ಮನದ ಕೋಗಿಲೆ ಒಮ್ಮೆ
ಹಾಡಲೊಲ್ಲದು ಏಕೋ
ನಿನ್ನಿಂದಾ ದೂರಾಗಿ ಬೇರಾದರೇನೋ
ಕನಸಿಂದಾ ಜಾರಿ ಮರೆಯಾದರೆನೋ //

ಅದೋ ನೋಡು ಮೂಡಿಹನು
ಆ ಬಾಲ ಚಂದ್ರಮನು
ಹೊತ್ತು ತಂದಿಹನೇಳು ನಿನಗೆ
ಅವ ಸಪ್ತ ಸಂದೇಶಗಳ //

ಹಾಡು ಕೋಗಿಲೆ ನೀನು
ಮತ್ತೆ ಮೊದಲಿನ ಹಾಗೆ
ಜನ ಮೆಚ್ಚಿ ನಲಿವಂತೆ
ಮನನೆಚ್ಚಿ ಮಿಡಿವಂತೆ //

ಸರಿದ ಕನಸನು ನೆನೆದು
ಕೊರಗಿ ಸೊರಗುವೆ ಏಕೆ
ಕಲೆಯಿಂದಾ ಬಲೆ ಹೆಣೆದು
ಬೇಳಕಾಗು ಜಗಕೆಲ್ಲಾ //

ಹಾರಿ ಹೋದರೆ ನೀನು
ಯಾರು ಕೆಳುವರಿಲ್ಲ
ಹಾಡಿದರೆ ಏಳುವರು
ಬಿದ್ದು ಕೊಂಡವರೆಲ್ಲ //

ಕಲ್ಮೇಶ ಬಡಿಗೇರ
9743539657
.......ಬಾದಾಮಿ......

- Kalmesh Badiger

03 Sep 2020, 05:34 pm

ಬೆಳದಿಂಗಳು

ತಿಂಗಳಿನ ರಾತ್ರಿಯಲಿ
ಬಂಗಾರದ ಬೆಳದಿಂಗಳು
ಕೆಂದಾವರೆ ಕೆರೆಮೇಲೆ
ತಾ ಮೂಡಿ ಬಂದಾ //

ಅಂದ ಚೆಂದದ ತೇರ
ಹಂದರ ಹಾಕದೆ ತಂದು
ಮೊಗ್ಗುಗಳು ಮೆಲಾಯ್ಸಿ
ಮಲ್ಲಿಗೆ ರಾಶಿ ಸುರಿಸ್ಯಾನ //

ಬೆಟ್ಟ ಗುಡ್ಡಗಳ ಸೀಳಿ
ದಟ್ಟ ಅಡವಿಯ ಮೆಟ್ಟಿ
ಪುಟ್ಟಿಯರ ಮನಗೆದ್ದು
ಬೆಳ್ಳಿಹಾಂಗ ಹೊಳದಾಣ //

ಅಕ್ಕರೆಯ ಮಕ್ಕಳಿಗೆ
ಅಕ್ಷಯ ಪಾತ್ರೆಯ ಹಾಗೆ
ಚುಕ್ಕಿ ಜೊತೆಗೂಡಿ ಬಂದಾನ
ಚಿಣ್ಣರ ಚೆಂಡಾಗಿ ಬಲಿದಾನ //


ಕಲ್ಮೇಶ ಬಡಿಗೇರ
9743539657
...........ಬಾದಾಮಿ.........

- Kalmesh Badiger

03 Sep 2020, 05:23 pm

ಮಾಣಿಕ್ಯ

ಮಳೆ ಗಾಳಿಯೇನ್ನದೆ
‌ ಬಿಸಿಲು ಬೆಂಕಿ ಕಾಣದೆ
ಕೂಲಿ ನಾಲಿ ಮಾಡಿ
ತಾನು ಹಸಿದಿದ್ದರೂ
ತನ್ನವರ ಒಡಲು ತುಂಬಿಸಿದ
ಕಣ್ಣಿಗೆ ಕಾಣುವ ದೇವರು ತಾಯಿ
ಕಷ್ಟವೆಂದರೆ ಬರುವಳು ತಾಯಿ
ಕಣ್ಣೀರು ಒರೆಸುವಳು ಜನ್ಮ ದೇವತೆ
ತಾಯಿಗೆ ಇಲ್ಲದ ಸೂರು ನೀರು
ಹಾರ ತೂರಾಯಿ ಮೃಷ್ಟಾನ್ನ ಭೋಜನವಾ
ಕಲ್ಲು ದೇವರುಗಳ ಮುಂದಿಟ್ಟು
ಪೂಜಿಸಿದರೇನು ಫಲವಯ್ಯ
ಮಾತನಾಡಲು ಮಾತು ಬಾರದ
ಮನಸಿನ ಮಾತು ತಿಳಿಯಾದ
ಕಷ್ಟ ಸುಖ ನೋವು ನಲಿವಿನ ಅರಿವಿಲ್ಲದ
ಕಲ್ಲು ಕಂಬದ ಮುಂದೆ
ತಲೆ ಚಚ್ಚಿಕೊಂಡರೇನು ಫಲವಯ್ಯ

- ರಾಜು ಹಾಸನ

03 Sep 2020, 04:29 pm

ಕನ್ನಡ ಮಾತೆ

ಕನ್ನಡ ತಾಯಿಯ ಸೆರಗಿನ ನೆರಳಲಿ
ನಲಿಯುತ ತಾಯಿಗೆ ನಮಿಸೋಣ ll
ಪದಗಳ ಪದಕವ ತೊಡಿಸುತ ನಗಿಸುತ
ಕವನದ ಕುಸುಮವ ಮುಡಿಸೋಣ ll೧ll
ಚದುರಿದ ಉಡುಗೆಯ ನೆರಿಗೆಯ ಬಿಗಿದು
ಮಾತೆಯ ಮಾನವ ಕಾಯೋಣ ll
ಗುರುವರ ಬಲದಿ ಬರಹ ಸಿಂಧೂರವ
ಮಾತೆಯ ಚೆಲು ಹಣೆಗಿರಿಸೋಣ ll೧ll
ಕನ್ನಡ ತಾಯಿಯ ಹಿರಿಮೆಯ ಸಾರಿದ
ಹಿರಿಕವಿವರ್ಯರ ಸ್ಮರಿಸೋಣ ll
ಚತುರರು ನಾವು ತಾಯಿಯ ಕೀರ್ತಿಯ
ನಾಡಿನ ಎಲ್ಲೆಡೆ ಹರಡೋಣ ll೧ll
ಬೆವರಿನ ಪಸೆಯಲಿ ಅನ್ನವ ನೀಡುವ
ತ್ಯಾಗಿಯ ಕಾಯಕ ಅರಿಯೋಣ ll
ಉಸಿರನು ಕಾಯುವ ಯೋಧರ ಸಾಹಸ
ಪ್ರತಿ ಉಸಿರಲ್ಲೂ ಜಪಿಸೋಣ ll೧ll

- R.D

03 Sep 2020, 02:44 pm

ಸಂಬಂಧ

ಎಲ್ಲರೂ ಬಯಸುವರು
ಸಂಬಂಧ ಗಟ್ಟಿಯಾಗಿರಬೇಕೆಂದು..
ಆದರೆ‌ ನಾಟಕದ‌ ಬಲೆಯಲ್ಲಿ ಬಿದ್ದು ಬಿಟ್ಟರೇನೋ?
ಬಂಧ ನಿಂತಿರುವುದು
ಸಂ-ಪೂರ್ಣ ನಂಬಿಕೆ,ವಿಶ್ವಾಸದ ಮೇಲೆ..
ಮರೆತೋಗುವುದು ಇವೆಲ್ಲಾ ಸ್ವಾರ್ಥದ ಮುಂದೆ..
ಅವರ ಕಷ್ಟಕ್ಕೆ ಎಲ್ಲರ‌ನೂ ನೆನೆವರು
ಆದರೆ ನಮ್ಮ ಕಷ್ಟಕ್ಕೆ ದೂರಾಗುವರು..
ದಾರಿ ಎಲ್ಲರೊಂದಿಗೆ‌ ಸಲೀಸಾಗಿ‌ ಹೋಗವಾಗ
ಬರುತ್ತಿರುತ್ತಾರೆ ಯಾರಾದರೂ ಮನದಲ್ಲಿ ಕಲ್ಮಷ ತುಂಬಲು..
ಸ್ವಂತ ಮನದ ಮಾತ ಕೇಳಿ ಮುನ್ನುಗುತಿರಲಿ
ಹಾಯಾಗಿರುವುದು ಮನವು ಎಂದೆಂದೂ..
ಮನದ‌‌ ನುಡಿತ ಬೇರೆಯವರ ಹಿತವಾಗಿರಲಿ..
ಎಲ್ಲರ ಒಳಿತು‌ ನಿಮ್ಮ ಮಾತಾಗಿರಲಿ...
@ಮೇಘ ಗಣೇಶ್

- Megha s

03 Sep 2020, 11:00 am

ಅರಳುವ ಹೂವುಗಳು

ಸಾವಿರ ಗುಡುಗು ಬರಲಿ
ಸಾವಿರ ಮಿಂಚು ಬರಲಿ
ಕಾರ್ಮೋಡ ಕವಿಯಲಿ
ಅರಳುವ ಹೂವುಗಳು
ಅರಳಿ ಯೇ ತೀರುವವು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

03 Sep 2020, 09:44 am

ಮಾಯಾಲೋಕ

ಮಾಯಾ ಲೋಕವಿದು
ಬಡವರಿಗೆ ಒಂದು
ಶ್ರೀಮಂತರಿಗೆ ಇನ್ನೊಂದು
ಬಲ್ಲೆಂ ಎಂದರೆ ಒಂದು
ಗೊತ್ತಿಲ್ಲ ಎಂದರೆ ಇನ್ನೊಂದು
ಆಹಾರವಿಲ್ಲದೆ ಉಪವಾಸ ಹಲವರದು
ಆಹಾರವಿದ್ದರೆ ಉಪವಾಸ ಕೆಲವರದು
ಜೇಬುಗಳು ಭರ್ತಿ
ಮನಸುಗಳು ಖಾಲಿ
ಇದೊಂದು ರಂಗಮಂದಿರ
ಕೆಲವರು ಅತ್ತರು ನಗಬೇಕು
ಕೆಲವರು ನಕ್ಕರು ಅಳಬೇಕು
ಮಾಯಾ ಲೋಕವಿದು
ಇದರ ಮರ್ಮ ವಿಧಿಯೇ ಬಲ್ಲದು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

03 Sep 2020, 09:38 am

ಮುಂಜಾನೆ ಶುಭಾಷಿತ

ಹಗಲೆಲ್ಲ ಧಣಿದು, ಆಯಾಸಾದವರಿಗೆ
ರಾತ್ರಿ ಎನ್ನುವ ವಿಶ್ರಾಂತಿ ಕೊಟ್ಟು.
ಪುನಃ ಖುಷಿಯಿಂದ
ತಮ್ಮ ಕಾಯಕವನ್ನು ಮುಂದುವರೆಸಿದ
ಶುಭ ಮುಂಜಾವು.

- ಸವಿ

03 Sep 2020, 07:13 am

ಮನಸು

ನಿನ್ನ ಕಾಣದೆ ನೊಂದು
ಬೇಯುವುದು ನನ್ನ ಮನಸ್ಸು
ಅದನ್ನು ಅರಿತು ಕೂಡ ನೀನು
ಓಡೆಯುವುದೇಕೋ ಕನಸು

ಅಳಿಸುವುದರಲ್ಲಿ ನಿನಗೇನೋ
ಸಿಗುವುದು ಸಂತಸ
ಅದಕ್ಕಾಗೇ ನಾ ತೋರುವೆ
ನಿನ್ನಲಿ ಮುನಿಸು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

03 Sep 2020, 06:20 am

ಸ್ಫೂರ್ತಿ

ಹಾಡುವ ಕೋಗಿಲೆಗೆ ಕಂಠವೇ ಸ್ಫೂರ್ತಿ!
ನರ್ತಿಸುವ ನವಿಲಿಗೆ ತುಂತುರು ಹನಿಯೇ ಸ್ಫೂರ್ತಿ!!

ಹಾರುವ ಚಿಟ್ಟೆಗಳಿಗೆ ಹೂಗಳೇ ಸ್ಫೂರ್ತಿ!
ಅರಳುವ ಹೂಗಳಿಗೆ ಹೊಂಬಿಸಿಲೇ ಸ್ಫೂರ್ತಿ!!

ಈಜುವ ಮೀನಿಗೆ ರೆಕ್ಕೆಯೇ ಸ್ಫೂರ್ತಿ!
ನಾಚುವ ಗಿಣಿಗೆ ಮೈ ಬಣ್ಣವೇ ಸ್ಫೂರ್ತಿ!!

ಸುರಿವ ಮಳೆ ಹನಿಗೆ ಮೋಡವೇ ಸ್ಪೂರ್ತಿ
ಚಿತ್ತಾರ ಬಿಡಿಸಿರುವ ಕಾಮನಬಿಲ್ಲಿಗೆ ಬಿಸಿಲು-ಮಳೆಯೇ ಸ್ಫೂರ್ತಿ!!

ಅವಳು ಸೃಷ್ಟಿಯಾಗಲು ಸಾಗರವೇ ಸ್ಫೂರ್ತಿ!

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

03 Sep 2020, 06:08 am