Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತ್ಮವಿಶ್ವಾಸ

ಮನೆ ಸಣ್ಣದಾದರೂ ಮನಸ್ಸು ದೊಡ್ಡದಿರಲಿ

ಹೃದಯ ಮುಷ್ಟಿಯಷ್ಟಿದ್ದರೂ ಪ್ರೀತಿ ಸ್ನೇಹ ಬೆಟ್ಟದಷ್ಟಿರಲಿ

ಹಣದಲ್ಲಿ ಬಡತನವಿದ್ದರೂ

ಗುಣದಲ್ಲಿ ಶ್ರೀಮಂತಿಕೆ ಇರಲಿ

ದಾರಿಯಲ್ಲಿ ಸಾವಿರಾರು ಅಡೆತಡೆಗಳಿದ್ದರೂ

ಚಿಮ್ಮುವ ಆತ್ಮವಿಶ್ವಾಸವಿರಲಿ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

02 Sep 2020, 11:17 pm

ಸಂಜೆ ಶುಭಾಷಿತ

ಬಿಸಿಲಿನ ತಾಪ ಕಡಿಮೆ ಆಗಿ
ಸಂಜೆಯ ತಣ್ಣನೆ ಗಾಳಿ
ಮೋಡಕವಿದ ವಾತಾವರಣ
ಮನಸ್ಸು ಹಕ್ಕಿಯಂತೆ ಮನುವು ಹಾರಾಡಿದ
ಶುಭ ಸಂಜೆ.
✍️ಸಾವಿತ್ರಿ....

- ಸವಿ

02 Sep 2020, 04:15 pm

ನಂಬಿಕೆ

ಓ ಮನವೇ
ನಂಬದಿರು ಯಾರನ್ನು
ನಿನ್ನವರು ಅಂದುಕೊಂಡರೆ
ನಿನ್ನನೇ ತುಳಿಯುವರು
Bhoomi

- BhoomikaDL

02 Sep 2020, 10:09 am

ಶ್ರೀಮಂತ ಬಡವ

ಬಡವರು ನಗು ನಗುತ್ತಾ
ಇಷ್ಟೇ ಸಾಕು ಎನ್ನುವರು
ಅಮೃತವು ವಿಷವಾಗುವುದೆಂದು

ಶ್ರೀಮಂತರು ಅಳುವರು
ಇನ್ನು ಬೇಕೆಂದು
ಅಮೃತವು ವಿಷವಾಯಿತೆಂದು

ಹಸಿದವನಿಗೆ ವಿಷವು
ಅಮೃತವಾಗುದು
ಹೊಟ್ಟೆ ತುಂಬಿದವನಿಗೆ
ಅಮೃತವು ವಿಷವಾಗುವುದು

ಶ್ರಮಜೀವಿಗಳು ಆಗಿರುವರು
ರೋಗ ಮುಕ್ತರು
ಸೋಂಬೇರಿಗಳು ಆಗಿರುವರು
ರೋಗಯುಕ್ತರು

- ರಾಜು ಹಾಸನ

02 Sep 2020, 01:42 am

ಪ್ರೇಮಿಗಳ ಜಗಳ

ಪ್ರೀತಿಸುವಾಗ ಹೇಳುವರು
ಕಾಮನಬಿಲ್ಲಿನಂತೆ ನಿನ್ನ ಕಣ್ಣ್ ನೋಟ
ಮುತ್ತಿನಂತೆ ನಿನ್ನ ಮಾತುಗಳು
ಸವಿ ಜೇನಿನಂತೆ ನಿನ್ನ ನಗು
ಬಣ್ಣಿಸಲು ಸಾಧ್ಯವಿಲ್ಲ
ನಿನ್ನ ಸೌಂದರ್ಯವಾ
ಎಷ್ಟೇ ನೋಡಿದರೂ ಸಾಲದು
ಮತ್ತೆ ಮತ್ತೆ ನೋಡುವಾಸೆ ಎನ್ನುವರು

ಚೂರಾದ ಪ್ರೀತಿಯಲ್ಲಿ ಹೇಳುವರು
ನಿನ್ನ ಕಣ್ಣ್ ನೋಟವೇ ಚುಚ್ಚುವುದು
ನನಗೆ ಚುಚ್ಚುಮದ್ದಿನಂತೆ
ಸಾಕೆನಗೆ ನಿನ್ನ ಕಾಟವೂ
ಬೇಡ ನನಗೆ ನಿನ್ನ ಮಾತುಗಳು
ಬಣ್ಣಿಸಲು ನಿನ್ ಯಾರು
ನಾನ್ ಯಾರೆಂದು ಕಿತ್ತಾಡುವರು
ಹೊತ್ತು ಗೊತ್ತಿಲ್ಲದೆ
ಮತ್ತೆ ಮತ್ತೆ ಹೇಳುವರು
ನಿನೇ ನನ್ನ ಜೀವಾ ಪ್ರಾಣವೆಂದು
ಮುತ್ತಿಟ್ಟು ಮುದ್ದಾಡುವರು
ಪ್ರೀತಿ ಗೆದ್ದ ಪ್ರೇಮಿಗಳು

- ರಾಜು ಹಾಸನ

02 Sep 2020, 01:13 am

ನನ್ನ ಗೆಳೆಯನಿಗೆ

#ಮನಸೆಂಬ

- ShivuVS

01 Sep 2020, 09:43 pm

ಕ್ಷಮೆ

ಹೇ " ಪ್ರಕೃತಿ ಮಾತೇ " ನೀ ಎಷ್ಟು ಸುಂದರ,
ನಿನ್ನ ನೋಡಲು ಎರಡು ಕಣ್ಣು ಸಾಲದು...
ನಿನ್ನ ಅಂದ ಎಷ್ಟು ವರ್ಣಿಸಿದರು ಕಡಿಮೆ..
ಈ ಮೂಡಜನರ ಮೇಲೆ ನಿನಗೆ ಕೋಪ ಬಂದಿದೆ, ನಿನ್ನ ಮಕ್ಕಳಲ್ಲವೇ, ನಾವು ಶಾಂತಳಾಗು ತಾಯೇ ನಮ್ಮನ್ನು ಕ್ಷಮಿಸು..
ನಿನ್ನ ಕ್ಷಮೆಗಾಗಿ ಕಾದಿರುವೆವು...
✍️ಸಾವಿತ್ರಿ...

- ಸವಿ

01 Sep 2020, 08:55 pm

ನೀನಾಗು

ಅರಿಯಲೊಲ್ಲದವನ
ತೋಳೆಳೆದು ಕರೆದು ಕಲಿಸಿ ಗುರುವಾಗು
ಜ್ಞಾನದ ಬೆಳಕಲ್ಲಿ ಹೃದಯ ಕಣ್ಣು ತೆರೆದು ಕೊಳ್ಳಲೂ ಬಹುದು

ಅರಿಯ ಬೇಕೆಂಬವನ
ಓಲೈಸಿ ಕರೆದು ಕಲಿಸಿ ಗುರುವಾಗು
ಮುಷ್ಟಿ ಜ್ಞಾನದಲ್ಲೇ ಸೃಷ್ಟಿಗೆ ಹಿತನಾಗಬಹುದು

ಅರಿತವನ ನುಡಿಗೆ ನೀ ತಲೆತೂಗು
ಬೆಚ್ಚಗಿನೆದೆ ಗೂಡಿನಲ್ಲಿ ನೀ
ಗುರುವಿಗೇ ಗುರುವೆಂದೆನಿಸಿಕೊಳ್ಳಲೂ ಬಹುದು

- R.D

01 Sep 2020, 05:48 pm

ಪ್ರೀತಿ♥♥

"ಪ್ರೀತಿ" ಎನ್ನುವುದು ಒಂದು ಸುಂದರ ಸಂಗೀತ
ಹೃದಯವೇ ಅದರ ಸಾಹಿತ್ಯ,
ಮನಸ್ಸೆ ಅದರ ಸಾಂಗತ್ಯ,
ಕನಸುಗಳೇ ಅದರ ಆದಿತ್ಯ,
ಭಾವನೆಗಳೇ ತುಂಬಿರುವದು ದಿನನಿತ್ಯ...!

- Megha

01 Sep 2020, 03:49 pm

ಯೌವನ

ಬಯಸಿದ್ದನ್ನು
ದೇವರು ಕೊಡುವನೆಂದು
ಭಜನೆ ಮಾಡುತ್ತಾ ಕುಳಿತರೆ
ಆಗುವುದು ವಯಸ್ಸು
ಮುಗಿಯುವುದು ಯೌವನ
ಬರುವುದು ಮುಪ್ಪು
ನೆಡೆಯುವುದು ವೈಕುಂಠ ಸಮಾರಾಧನೆ

- ರಾಜು ಹಾಸನ

01 Sep 2020, 12:59 pm