Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿಜವಾ ನುಡಿಯಲು ಭಯವೇಕೆ

ದೇವರ ಪೂಜೆ ಮಾಡುವುದರಿಂದ
ಕಷ್ಟ ಗಳು ಕಡಿಮೆಯಾಗುವುದಿಲ್ಲ
ಅಭಿಷೇಕ ಮಾಡುವುದರಿಂದ
ಜನರ ಹೊಟ್ಟೆ ತುಂಬುವುದಿಲ್ಲ
ದೇವರ ಭಜನೆ ಮಾಡುವುದರಿಂದ
ಬಡತನ ಹೋಗುವುದಿಲ್ಲ
ದೇವಸ್ಥಾನ ಕಟ್ಟುವುದರಿಂದ
ಸಾಧನೆ ಮಾಡಲು ಸಾಧ್ಯವಿಲ್ಲ
ಹಬ್ಬ ಹರಿದಿನ ಮಾಡುವುದರಿಂದ
ಜೇಬು ತುಂಬುವುದಿಲ್ಲ

- ರಾಜು ಹಾಸನ

01 Sep 2020, 12:56 pm

ಅಮೃತ.... ಪಂಚಾಮೃತ

ದೇವಸ್ಥಾನದಲ್ಲಿ ಕೊಡುವ ಅನ್ನ
ಪ್ರಸಾದವಾದರೆ
ಅಮ್ಮ ಕೊಡುವಾ ಕೈತುತ್ತು
ಮೃಷ್ಟಾನ್ನವಾಗುವುದು
ಹಸಿದಾಗ ಸಿಗುವ ಅನ್ನ
ಅಮೃತವಾಗುವುದು
ದೇವಸ್ಥಾನದಲ್ಲಿ ಕೊಡುವ
ನೀರಿನ ಹನಿ ತೀರ್ಥವಾದರೆ
ದಣಿದಾಗ ಸಿಗುವ
ಅಳ್ಳದ ಕೊಳ್ಳಾದ ನೀರು
ಪಂಚಾಮೃತವಾಗುದು

- ರಾಜು ಹಾಸನ

01 Sep 2020, 01:56 am

ಜೀವನದ ತಿರುವು

ಜೀವನದಲ್ಲಿ ಎಲ್ಲವೂ ಚೆನ್ನಾಗಿರಬೇಕು ಅಂದರೆ, ಒಂದು ಎಲ್ಲಾನೂ ಪಡಕೊಂಡ ಬಂದಿರಬೇಕು,
ಇಲ್ಲಾ,
ಜೀವನ ಬಂದ ಹಾಗೆ ಸಂತೋಷವಾಗಿ
ಸ್ವೀಕರಿಸಬೇಕು...!

- Megha

31 Aug 2020, 11:08 am

ತಿಥಿ ಊಟ

ಹುಟ್ಟಿದಾಗ ಮಾಡುವರು ಹುಟ್ಟು ಹಬ್ಬ
ಸತ್ತಾಗ ಮಾಡುವರು ಪುಣ್ಯ ತಿಥಿ
ಇದ್ದಾಗ ಒಗೆಯುವರು ಬಟ್ಟೆಯಂತೆ
ಸತ್ತಾಗ ಹಾಕುವರು ಹಾರ ತುರಾಯಿ
ತಿಂಡಿ ತಿನಿಸು ಮಾಡಿಡುವರು
ಗೊಡೆಯಲ್ಲಿನ ಫೋಟೋಕ್ಕೆ
ತಂದಿಟ್ಟು ತಮಾಷೆ ಮಾಡುವರು
ತಿನ್ನು ತಿನ್ನೆಯೆಂದು ಹೇಂಗೆ ತಿನ್ನಲಿ ಹೇಳಿ
ನಾ ಇರುವುದು ಗೊಡೆಯ ಫೋಟೋದಲ್ಲಿ
ತಿನ್ನುವುದು ಮಾತ್ರ ಅವರು
ಹೇಳುವುದು ಮಾತ್ರ ನನ್ನ ಹೆಸರು
ಏಕೆಂದರೆ ತಿಥಿ ಊಟ ನನ್ನದು ಅಲ್ಲವೇ

- ರಾಜು ಹಾಸನ

31 Aug 2020, 12:14 am

ಉತ್ತರ ಕರ್ನಾಟಕ

ನಮ್ಮ ಉತ್ತರ ಕರ್ನಾಟಕ ಬಯಲು ಸೀಮೆ ಎಂದೇ ಪ್ರಸಿದ್ಧಿಯನ್ನ ಪಡೆದ ನಾಡು...
ಬಾದಾಮಿ ಚಾಲುಕ್ಯರ, ಜಕಣಾಚಾರ್ಯರರ ವಾಸ್ತು ಶಿಲ್ಪಿಯ ನಾಡು....
ಕಲೆ ಸಂಸ್ಕೃತಿಯ ದೇವಾಲಯಗಳ ತಾಯಿನಾಡು ಇದು....
ನವ ದಾನ್ಯಗಳ ನಾಡು ಜೋಳದ ಖಡಕ್ ರೋಟಿಗೆ , ಪ್ರಸಿದ್ಧಿಯನ್ನ ಪಡೆದ ನಾಡು...
ಮಾತು ಒರಟು , ಮನಸ್ಸು ಮೃದು..
ನಮ್ಮ ಕನ್ನಡ ಭಾಷೆ ರೀ ಎಂದೇ ಪ್ರಸಿದ್ಧಿ .. ಬರ್ರೀ, ಆರಾಮ ರೀ ಬೇರೆಯವರ ಮನಸ್ಸಲ್ಲಿ ಅಚ್ಚು ಹೊಳೆದ ಭಾಷೆ ನಮ್ಮದು...
ಬಯಲು ಸೀಮೆ ಗಂಡು ಮೆಟ್ಟಿದ ನಾಡು ನಮ್ಮದು....
✍️ಸಾವಿತ್ರಿ.....

- ಸವಿ

30 Aug 2020, 05:50 pm

ಕುಡುಕರ ಗಮ್ಮತ್ತು

ಸಾರಾಯಿ ಕುಡಿದಾಗ ಆಡುವರು
ಶುರರು ಧೀರರಂತೆ
ಸಾರಾಯಿ ಕುಡಿಯದೆ ಇರುವಾಗ ಇರುವರು
ಸನ್ಯಾಸಿಯಂತೆ

ಸಾರಾಯಿ ಕುಡಿದರೆ ಮನೆಯಾಳು
ಸಾರಾಯಿ ಕುಡಿಯದಿದ್ದರೆ ತಲೆಯಾಳು
ಕುಡಿದರು ಹಾಳು ಕುಡಿಯದಿದ್ದರು ಹಾಳು
ಒಟ್ಟಿನಲ್ಲಿ ಜೀವನವೇ ಹಾಳು ಹಾಳು

ಸಾರಾಯಿ ಕುಡಿಯುವ ಮುನ್ನಾ
ಹೇಳುವರು ಸುಳ್ಳು ಸುಳ್ಳು
ಸಾರಾಯಿ ಕುಡಿದ ನಂತರ
ಹೇಳುವರು ಸತ್ಯ ಸತ್ಯ

ಸಾರಾಯಿ ಕುಡಿಯದೆ ಇರುವಾಗ
ಬರುವುದು ಸಿದಾ ಸದಾ ಮಾತು
ಸಾರಾಯಿ ಕುಡಿದಾಗ ಬರುವುದು
ಸಂಸ್ಕೃತ ತೊದಲು ಮಾತು

ಸಾರಾಯಿ ಕುಡಿಯದೆ ಇರುವಾಗ
ನೆಡೆಯುವರು ಸಿದಾ ಸದಾ ನೆಡೆ
ಕುಡಿದಾಗ ನಡೆಯುವರು
ಅಂತಿಂಥ ನೆಡೆಯಲ್ಲ ಭರತ ನಾಟ್ಯ ನೆಡೆ

- ರಾಜು ಹಾಸನ

30 Aug 2020, 01:59 am

ಚಡ್ಡಿ ದೋಸ್ತ್

ಕರುಳು ಬಳ್ಳಿಯ ತೊಟ್ಟಿಲಲ್ಲಿ
ಹುಟ್ಟಿದೆವು ಅಣ್ಣ ತಂಗಿಯಾಗಿ
ಆಟವಾಡುತ್ತಾ ಬೆಳದೆವು
ತಾಯಿಯ ಮಡಿಲಲ್ಲಿ
ಚಡ್ಡಿ ದೋಸ್ತಿನಂತೆ
ಜಗಳವಾಡುತ್ತಿದ್ದೆವು ಶತ್ರುವಿನಂತೆ
ಒಂದಾಗುತ್ತಿದೆವು
ಬಾನಂಗಳದ ಹಕ್ಕಿಯಂತೆ
ಇಂದು ಬರಿದಾಗಿದೆ ಗೂಡು
ನಿನ್ನ ಪುಟ್ಟ ಗೆಜ್ಜೆಯ ಸದ್ದಿಲ್ಲದೆ
ಜಿನುಗುತ್ತಿದೆ ಕಣ್ಣೀರು
ಧುಮ್ಮಿಕ್ಕಿ ಹರಿಯುತ್ತಿದೆ
ಮನದ ನೋವು
ಬಾಲ್ಯದ ನೆನಪು ಕಂಡು
ಮರೆಯೋದುಂಟೆ
ಒಡಹುಟ್ಟಿದವಳನ್ನು
ನನ್ನ ಪುಟ್ಟ ತಂಗಿ

- ರಾಜು ಹಾಸನ

29 Aug 2020, 10:45 pm

ವಿರಹ

ವಿರಹ ವೆಂದರೆ ಏನು
ಎಂತೆಂದು ನಾನರೀತೆ
ನಾ ಮೆಚ್ಚಿದ ಹುಡುಗಿ
ನನ್ನಗಲಿ ಹೋದಾಗ //

ಒಡಲ ಪ್ರೀತಿಯ ಒಳಗೆ
ಉರಿವ ಪ್ರೇಮದ ಜ್ವಾಲೆ
ಹೊರ ಹೊಮ್ಮಲೇತ್ನಿಸಿ
ತಾ ಮೋಗಾಚಿ ಬಿದ್ದಂತೆ //

ವಿರಹ ಹರವಿಯ ನಡುವೆ
ಎನಿಹಿದು ವ್ಯೇತ್ಯಾಸ
ಹರವಿಯೋಳಗಿನ ನೀರು
ವಿರಹದ ಕಣ್ಣೀರು ಎಲ್ಲ ಒಂದೆ //

ವರುಷ ಉರುಳಿದರೆನು
ಹರುಷ ವಿಲ್ಲದ ಮನಕೆ
ಮರುಜೀವ ನೀಡಿ
ನಡೆಸಲು ಬರುವಳೇನು //

ವಿರಹದ ಕಟ್ಟೆ ಓಡೆದರೊಮ್ಮೆ
ಕೊಚ್ಚಿ ಹೋಗರು ಯಾರು
ಹುಚ್ಚಾಗಿ ಹೊಯ್ದಾಡಿ ಬಿಚ್ಚಲೆ
ಬೇಕಲ್ಲವೇ ಮನದಾಳವನ್ನು //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

29 Aug 2020, 09:33 pm

ಚಾಕೊಲೇಟ್ ನ ಬಂಗ್ಲ

ನೀಲ ಆಗಸದಲ್ಲಿ
ನೂರೊಂದು ಬಣ್ಣ
ಅದರಾಚೆಗೆ ಇರುವುದು
ಚಾಕೊಲೇಟ್ ನ ಬಂಗ್ಲ //

ಸೂರ್ಯ ಚಂದ್ರಮರೆ
ಅದರ ದ್ವಾರಗಳು
ಸುತ್ತೋ ಗ್ರಹಗಳೇ
ಅದಕೆ ಕಾವಲಿಗರು //

ಬಣ್ಣದ ಕಾಮನ ಬಿಲ್ಲೆ
ಮನೆಯ ಅಂಗಳವು
ಅರಳುವ ಮಲ್ಲಿಗೆಯಂತೆ
ಆ ಹೊಳೆವ ಚುಕ್ಕಿಗಳು //

ಉಕ್ಕುವ ಜಲಧಾರೆಯ
ಆ ಧೂಮ ಕೇತುಗಳು
ಮಂಜಿನ ಹನಿಗಳಂತೆ
ಉಲ್ಕೆಯ ಸುರಿಮಳೆಯೋ //

ಆಗಸ ವೆಂಬುವುದೆ
ಆನಂದದ ಮಡಿಲೋ
ವಡಿಲಿನಂತಿರುವ ಆ
ದೇವರ ದೇವನ ಕಡಲೋ //

ಕಲ್ಮೇಶ ಬಡಿಗೇರ
9743539657
.......ಬಾದಾಮಿ.......

- Kalmesh Badiger

29 Aug 2020, 09:18 pm

ಕರಡಿ ಆಡಿಸಾವ

ಕೈಯಲಿ ಕೋಲನು ಹಿಡಿದು
ಬಂದನು ಕರಡಿ ಆಡಿಸಾವಾ
ಬಗಲಲಿ ಚೀಲ ಬಲಗಡೆ
ಕೈಯಲಿ ಕರಡಿ ಹಿಡಿದಾವ //

ತಕ ತಕಾ ಕುಣಿವ ಕರಡಿಗೆ
ಅಳುತಾ ಕೂತ್ಕೋ ಆನ್ನಾವ
ತವರಿನ ದುಃಖ ತರುಣಿಯ
ಸೋಗನು ಮಾಡಿಸಿ ತೋರ್ಸಾವ //

ಮೂಗಿಗೊಂದು ದಾರವ ಹಾಕಿ
ಕರಡಿಯ ಮೂಗುದಾರ ಹೀಡಿದಾವ
ಬೆನ್ನಿನ ಮೇಲೆ ಸಣ್ಣ ಹುಡುಗರ
ಕೂಡಿಸಿ ಮಂತ್ರಿಸಿ ಹರಸಾವ //

ಕರಡಿಯ ಕೂದಲು ಕಿತ್ತು ಮಗುವಿಗೆ
ತಾಯತ ಕಟ್ಟಾವ ಇವನು
ದೇವ್ವವ ಕಂಡರೆ ಹೆದರಲ್ಲಂತಾ
ಬರವಸೆ ಕೊಡುತಾ ಹೊಂಟಾವ //

ಬೇಸತ್ತ ಜನರಿಗೆ ಖುಷಿಯನ್ನು ಕೊಟ್ಟು
ತಾನೆಂದು ಬೇಜಾರ್ ಆಗದಾವ
ಬಂದ ಬಿಕ್ಷೆಯ ತೆಗೆದುಕೊಂಡು
ಮುಂದಿನ ಊರಿಗೆ ಹೊಗಾವ //

ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

29 Aug 2020, 09:02 pm