Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಖಡಕ್ ಮಾತು

ಮುಂದೆ ಸಿಕ್ಕರೆ
ಮಾತನಾಡುವರು ಗೋವಿನಂತೆ
ಹಿಂದೆ ಹೋಗಿ ತಳ್ಳುವರು
ಗೋಮುಖ ವ್ಯಾಘ್ರನಂತೆ

ಸ್ನೇಹದಲ್ಲಿ ತಿಳಿಯಾದು ಮಾತಿನ ಬಣ್ಣ
ಪ್ರೀತಿಯಲ್ಲಿ ತಿಳಿಯಾದು ಮನಸ್ಸಿನ ಬಣ್ಣ
ಕೊಳದಲ್ಲಿ ತಿಳಿಯಾದು ನೀರಿನ ಬಣ್ಣ
ಬದುಕಿನಲ್ಲಿ ತಿಳಿಯಾದು ಮುಖವಾಡದ ಬಣ್ಣ

- ರಾಜು ಹಾಸನ

28 Aug 2020, 10:40 am

ನಂಬರ್ ಒನ್

ಬಯಸಿದ್ದನ್ನು
ದೇವರು ಕೊಡುವನೆಂದು
ಭಜನೆ ಮಾಡುತ್ತಾ ಕುಳಿತರೆ
ಆಗುವುದು ವಯಸ್ಸು
ಮುಗಿಯುವುದು ಯೌವನ
ಬರುವುದು ಮುಪ್ಪು
ನೆಡೆಯುವುದು ವೈಕುಂಠ ಸಮಾರಾಧನೆ

- ರಾಜು ಹಾಸನ

28 Aug 2020, 10:17 am

ಸ್ವಗತ

ನೀನು ನಗುತಿದ್ದರೆ ಹೊಳೆ ಬೋರ್ಗರೆತ ಎದೆಯಲ್ಲಿ ಕಾಮನೆಗಳ ಕಾನನಸುತ್ತಿ
ಬಯಕೆ ಬೆಟ್ಟದೆಗಲ ಮೇಲೆ ಕೈ ಚಾಚಿ
ಮುಖ ವಾಲಿದಾಗೊಮ್ಮೆ ಜಾರಿದ ಜೋಗದಂತಾ ಝಳಪು.
ಅಲ್ಲಿ.... ಬಿರುಬಿಸಿಲು ಮಳೆಗೆ ಮೂಡಿದ ಕಾಮನಬಿಲ್ಲು
ಕುಳಿತ ಹುಡುಗ ಚಿತ್ರ ಅಳಿಸಿ ರಬ್ಬರನಿಂದ....ಎಳೆದು ಹೊಸ ಮುಖ ರೇಖೆ
ಮಾಗಿದ ಬದುಕಿಗೆ ಒಡಲಾಳ ಒರತೆ ನೀರು ನಿನ್ನದು .....ನನಗೇನಿದ್ದರೂ ಬೊಗಸೆ ತುಂಬ ಅಲ್ಲದಿದ್ದರೂ ಮುಷ್ಟಿ ತುಂಬ ....ಇರಲಿ ಬಿಡು .....
ಹಾದ್ಯಾಗಿನ ಅವರೆಹೂ ಯಾರ ಮುಡಿಗೇರಿದೆ ಹೇಳು?
ಯಾರಾದರೂ ಮುಟ್ಟಿದ್ದಾರೆಯೇ ಹೇಳು?
ಯಾರಾದರೂ ದಿಟ್ಟಿಸಿದ್ದಾರೆಯೇ ಹೇಳು
ಪಾಡುಗಳು ಅವರವರಿಗೆ ಅವರದೇ ದೊಡ್ಡವು.
ಹಾಡುಗಳು ಅವರವರಿಗೆ ಅವರದೇ ನಾದಗಳು.
ನಾದ ಲಯ ಸ್ವರದೇರು ತೇರು ಭಂಗಿ ನಾನು-"ಭಾವ ನೀನು".

- prakaveri

28 Aug 2020, 07:28 am

ಹೀಗೊಂದು ಆಸೆ

ತೇಲುವ ಅಲೆಗಳ ರಭಸಕ್ಕೆ ಸಿಕ್ಕಿ ಮುಳುಗುವಾಸೆ ;
ಆ ಅಲೆಗಳ ಆಂತರ್ಯದಲ್ಲಿ ಅಲೆಯುವ ಅಲೆಮಾರಿ( ಜಲಚರ) ನೀನಾದರೆ.....

ನೆನಪಿನ ದೋಣಿಯಲಿ ತೀರದ ತೀರವ ಸೇರುವಾಸೆ;
ಆ ನೆನಪಿನ ನಾಲೆಯ ನೆನಪುಗಳ ನಾವಿಕ ನೀನಾದರೆ....

ತಾರಾಗಣದಲ್ಲಿ ಹೊಳೆಯುವ ತಾರಕೆ ನಾನಾಗುವಾಸೆ;
ಆ ತಾರಕೆಯ ಪರಿವೀಕ್ಷಕ ಕೇವಲ ನೀನಾದರೆ....

ಬಡಿಯುವ ಹೃದಯದ ಬಡಿತವು ನಾನಾಗುವಾಸೆ;
ಆ ಹೃದಯವಂತ ಕೇವಲ ನೀನಾದರೆ.....

ನಿಷ್ಕಲ್ಮಶ ಪ್ರೀತಿಯ ಒಲವಿನ ನಾಯಕಿ ರಾಧೆ ನಾನಾಗುವಾಸೆ;
ಆ ಒಲವಿನ ಕೊಳಲನೂದುವ ನೀಲಶ್ಯಾಮ ಕೇವಲ ನೀನಾದರೆ.......

- tejavathikn

27 Aug 2020, 09:39 pm

ಕೈಗನ್ನಡಿ

ಇರುವಾಗ ಓಡಿ ಬರುವರು
ಹತ್ತಿರ ಹತ್ತಿರ
ಇಲ್ಲದಿದ್ದರೆ ಓಡಿ ಹೋಗುವರು
ದೂರ ದೂರ

ಇದ್ದಾಗ ಕೊಡುವುದಿಲ್ಲ
ಒಂದೊಂತ್ತಿನ ಅನ್ನ
ಸತ್ತಾಗ ಮಾಡಿ ತಿನ್ನುವರು
ಪಿಂಡದ ಅನ್ನ

ಇದ್ದಾಗ ದೂರ ತಳ್ಳುವರು
ಸತ್ತಾಗ ಮುತ್ತಿಕೊಳ್ಳುವರು
ಬಿಟ್ಟು ಹೋದದ್ದನ್ನು
ಬಾಚ್ಚಿಕೊಳ್ಳುವರು

- ರಾಜು ಹಾಸನ

27 Aug 2020, 06:09 pm

ಗೆಳಯ-ಗೆಳತಿಯರಿಗಾಗಿ

ಪ್ರೀತಿಯೆಂಬುದು
ಬಳ್ಳಿಯ ಹೂವಿನಂತೆ
ನೋಡಲು ಬಲು ಚಂದವೆಂದು
ನೋಡಬೇಕೆ ಹೋರೆತು
ಮುಟ್ಟಿದರೆ ಚುಚ್ಚುವುದು
ಬಳ್ಳಿಯ ಮುಳ್ಳಿನಂತೆ
ಸುರಿಯುವುದು ರಕ್ತ
ಹರಿಯುವುದು ಕಣ್ಣೀರು
ಪ್ರೀತಿಯಲ್ಲಿ ಬಿದ್ದರೆ
ಪ್ರೇಮಿಯಾಗುವರು
ಪ್ರೀತಿಯಲ್ಲಿ ಸೋತರೆ
ಹುಚ್ಚರಾಗುವರು
ಕೈ ಕೊಟ್ಟು ಹೋದ ಪ್ರೀತಿ
ಕಲಿಸುವುದು ಜೀವನದ ಪಾಠ

- ರಾಜು ಹಾಸನ

27 Aug 2020, 12:15 am

*ಅವಳ ಪ್ರೀತಿ ನನಗಾಗಿ*.....

*ಅವಳ ಪ್ರೀತಿ ನನಗಾಗಿ*.....

ನನ್ನೋಳಗಿನ ಪ್ರೀತಿಯ ಸಂದೇಶ ತಿಳಿಸಲು ಬಂದೆ
ಒಪ್ಪಿಕೋ ನನ್ನ ಪ್ರೀತಿಯ ರಾಜಕುಮಾರಿ ...
ನಿನ್ನ ಭಾವನೆಗಳಿಗೆ ಸ್ಪಂದಿಸಿ
ನೀರೆರೆದು ಪೋಷಿಸಿ ಬೆಳಸಿ
ಪಾರಿವಾಳದಂತೆ ನಿನ್ನ ಕನಸುಗಳ
ನನಸು ಮಾಡಿ ರೆಕ್ಕೆಗಳ ಕಟ್ಟಿ
ಆಗಸದೀ ಹಾರಾಡಿಸುವೆ.....
ನನ್ನಿ ಪ್ರೀತಿಯ ಒಲಮೆಯ ತೋರು ಬಾ ಗೆಳತಿ

ನಿನ್ನ ಸೌಂದರ್ಯಕ್ಕೆ ಮಾರುವ ಹೋದ
ಮನ್ಮಥನು ನಾನು
ನನ್ನ ಹೃದಯದ ಅಂತರಾಳದಲಿ ರತಿಯಂತೆಯೇ
ಕಾಣುವೆ ನೀನು...
ನೀ ನನ್ನಿಂದ ದೂರವಾಗಿ ಪ್ರೀತಿಯ ಬೇಗೆಯಲ್ಲಿ
ಸುಟ್ಟು ಬಿಡಬೇಡ..
ಬಂದು ಸೇರು ನನ್ನ ಪ್ರೀತಿಯ ಆಹ್ವಾನಕೆ
ನನ್ನ ಎದೆಯ ಗೂಡಿನೊಳಗೆ..

ಸೀತೆಯ ಅಂದವಾದ ಸೌಂದರ್ಯಕೆ
ರಾವಣನಂತವನೇ ಮಾರುಹೋದ
ಭಗವದ್ಗೀತೆಯನ್ನೇ ಬೋಧಿಸಿದ ಶ್ರೀ ಕೃಷ್ಣ
ರಾಧೆಯ ಮನಸ್ಸನ್ನೆ ಕಳ್ಳನಂತೆ ಕದ್ದ..
ಶಿವನ ಕೋಪಕ್ಕೆ ಸುಟ್ಟು ಹೋದ
ರತಿ- ಮನ್ಮಥರು ಪ್ರೀತಿಯಲ್ಲೆ ಹೊಂದಾದರು.
ನನ್ನ ನಿಶ್ಕಲ್ಮಶ ಪ್ರೀತಿಯ ಒಪ್ಪಿಕೊ..
ಜೋತೆಯಾಗಿ ಸೇರಿ....

ಮುಂದಿನ ಜೀವನದ ಬಂಡಿ ಏಳೆಯೋಣಾ..

ರಚನೆ-ಸಂಜೀವ್ ಚಿನ್ನೇನಹಳ್ಳಿ

- Bhavish tv

26 Aug 2020, 10:07 pm

ಕ್ಷಮಿಸಿಬಿಡಿ ಗುರುವೇ

ಅರ್ಥ- ಅನರ್ಥಗಳ
ನಡುವಿನ ಹೋರಾಟ
ಕ್ಷಣಹೊತ್ತಿನ ಮನಸ್ಸಿನ ಆಟ
ವಿಘಟಿಸಿತು ಸಂಬಂಧಗಳ
ಒಮ್ಮೆ ಕ್ಷಮಿಸಿಬಿಡಿ ಗುರುವೇ !

ಗುರು-ಶಿಷ್ಯರ ಸಂಬಂಧ
ಬಿಡಿಸಲಾಗದ ಅನುಬಂಧ
ಸಂಕುಚಿತತೆಯ ನೋಟ
ಕಲಿಸಿತು ಜೀವನಕ್ಕೆ ಪಾಠ
ಒಮ್ಮೆ ಕ್ಷಮಿಸಿಬಿಡಿ ಗುರುವೇ !

ಅನಿರೀಕ್ಷಿತ ನಿಮ್ಮ ಪರಿಚಯ
ಸಾಧನೆಯ ಹೊಸ ಅಧ್ಯಾಯ
ಕೆರೆಯ ಕೂರ್ಮ ನಾನು
ಅರಿಯದಾದೆ ಸಾಗರದ ಆಳವನು
ಒಮ್ಮೆ ಕ್ಷಮಿಸಿಬಿಡಿ ಗುರುವೇ !



ಶಾರದ

- ಶಕುಂತಲಾ

26 Aug 2020, 04:23 pm

ಕೈಗನ್ನಡಿ

ಇರುವಾಗ ಓಡಿ ಬರುವರು
ಹತ್ತಿರ ಹತ್ತಿರ
ಇಲ್ಲದಿದ್ದರೆ ಓಡಿ ಹೋಗುವರು
ದೂರ ದೂರ

ಇದ್ದಾಗ ಕೊಡುವುದಿಲ್ಲ
ಒಂದೊಂತ್ತಿನ ಅನ್ನ
ಸತ್ತಾಗ ಮಾಡಿ ತಿನ್ನುವರು
ಪಿಂಡದ ಅನ್ನ

ಇದ್ದಾಗ ದೂರ ತಳ್ಳುವರು
ಸತ್ತಾಗ ಮುತ್ತಿಕೊಳ್ಳುವರು
ಬಿಟ್ಟು ಹೋದದ್ದನ್ನು
ಬಾಚ್ಚಿಕೊಳ್ಳುವರು

- ರಾಜು ಹಾಸನ

26 Aug 2020, 03:30 pm

ಆಕಾಂಕ್ಷೆ

ಕನಸು ನನಸಾಗಲು ಬಯಸುತಿರುವೆ ನಾ..
ನನಸಾಗಲು ಒಗ್ಗೂಡಿಸು ನಿನ್ನ ಕೈಗಳನು..
ಭಯದಲ್ಲಿ ಧೈರ್ಯ ವಾಗಿ..
ದ್ವೇಷ ದಲ್ಲಿ ಪ್ರೀತಿ ಯಾಗಿ..
ಕೋಪದಲ್ಲಿ‌ ಶಾಂತಿಯಾಗಿ..
ಜಡದಲ್ಲಿ‌ ಉಲ್ಲಾಸವಾಗಿ..
ಇಲ್ಲದ ಗತಿಯಲ್ಲಿ‌ಗುರಿಯಾಗಿ..
ಮುನ್ನಡೆಸು‌‌ ನನ್ನನೂ.‌..
ಓ ಮನಸೇ ಬಂದುಬಿಡು
ಮುನ್ನೂಗೋಣ ಜೊತೆಯಾಗಿ..
ಬಾನೆತ್ತರದಿ ಹಾರೋಣ..
ಕಷ್ಟದಿ ಸುಖವ ನೀಡೋಣ ..
ಎಲ್ಲರನು ಪ್ರೀತಿಸೋಣ..
@ಮೇಘ ಗಣೇಶ್

- Megha s

25 Aug 2020, 06:39 pm