Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

100÷100 ×100 = 100%

ಹಸಿದವನಿಗೆ
ಅನ್ನದ ಬೆಲೆ ತಿಳಿದಿರುವುದೇ ಹೊರೆತು
ಹೊಟ್ಟೆ ತುಂಬಿದ ವ್ಯಕ್ತಿಗಲ್ಲ
ಬಡತನವೆಂಬುದು ಜನರಿಗಲ್ಲದೆ
ಮೃಗಗಳಿಗೆ ಬರುವುದೇ

ಬಡವರ ಗೋಳು ತಿಳಿಯದ ನಾಯಕ
ಆಳುವ ಅರಸನದ್ದಾರೇನು
ಗುಡಿಯೋಳಗಿನ ಕಲ್ಲ ಕಂಬವದ್ದಾರೇನು
ಆಳುವ ಅರಸ ಆಳಗದ್ದಿದರು
ಆಳು ಆಳುವ ಅರಸನಗಬಲ್ಲ

ಸ್ಪರ್ಶ ತಿಳಿಯಾದ ಕಲ್ಲು
ದೇವರಗುವುದದ್ದಾರೆ
ಕಷ್ಟ ಸುಖಗಳಿಗೆ ಸ್ಪಂದಿಸುವ ಮನುಜ
ದೇವರಿಗೆ ದೇವರಾಗಬಲ್ಲನ್ನು
ತಿಳಿಯೋ ಮಂಕುತಿಮ್ಮ

- ರಾಜು ಹಾಸನ

25 Aug 2020, 06:27 pm

ಅಜ್ಜ

ಅಜ್ಜ ಅಜ್ಜ ನಮ್ಮಜ್ಜ
ಕಥೆಯನು ಹೇಳು ನಿನಜ್ಜ
ಕುಂತು ಕೆಳುತಿರೆ ನಾವೆಲ್ಲಾ
ಮೈ ಜುಂ ಅನಬೇಕು ಕೇಳಜ್ಜ //

ರಾಜನ ಕಥೆ ಯ ಹೇಳಜ್ಜ
ರಾಣಿಯ ಕಥೆಯ ಹಾಡಜ್ಜ
ರಾಜಾ ರಾಣಿ ಎರಡು ಹೇಳದೆ
ಮಂತ್ರಿಯ ಆಟವ ಆಡಿಸಜ್ಜ //

ಕೈಯ್ಯಲ್ಲಿ ಕೋಲು ಹಿಡಿಯಜ್ಜ
ಹೊಲಗಳ ಕಡೆಗೆ ನಡೆಯಜ್ಜ
ಕಾಗೆ,ಕೋಗಿಲೆ ಗಿಳಿಗಳ ತೋರುತಾ
ಅದರಂತೆ ಹಾಡಲು ಕಲಿಸಜ್ಜ //

ಕತ್ತಲಾಗಲು ನಮ್ಮನ್ನೆಲ್ಲ
ಮಾಳಿಗೆ ಮೇಲೆ ಕರೆ ಅಜ್ಜ
ಚುಕ್ಕೆ,ಚಂದ್ರಮರ ತೋರುತ
ಅವುಗಳ ಎಣಿಸಲು ಹೇಳು ನಮ್ಮಜ್ಜ //

ಶಾಲೆಯ ಓದು ಸಾಕಜ್ಜ
ಮನೆಗೆಲಸ ಎಲ್ಲ ಮುಗಿತಜ್ಜ
ಮಲಗುವ ಮೊದಲು ಮೆಲ್ಲಗೆ
ನಮಗೆ ಹಾಡನು ಹೇಳು ನೀ ಅಜ್ಜ //

ಕಲ್ಮೇಶ ಬಡಿಗೇರ
9743539657
.........,..ಬಾದಾಮಿ.......

- Kalmesh Badiger

25 Aug 2020, 05:59 pm

ಸಿಗ್ನಲ್

ಕತ್ತಲೆಯಲ್ಲಿ ಕೆಂಪನೆ ದೀಪ
ಮಿಣ ಮಿಣ ಮಿನಗುತಲಿತ್ತ
ಸಿಗ್ನಲ್ ನಲಿ ಒಂದು ಎರಡು
ಟಕ್ ಟಿಕ್ ಮೂಡುತಲಿತ್ತ//

ಎಲ್ಲಿಂದಲೋ ಬಂದ ಕಾರು
ಪಕ್ಕದಲಿ ನಿತ ಗೊಂಡಿತ್ತ
ಒಳಗಿರುವ ದಂತದ ಗೊಂಬೆ
ಕಣ್ ಕಣ್ ಮಿಟುಕಿಸು ತಿತ್ತಾ//

ಅದು ಎಂತಾ ಸುಂದರಿ ಎಂದು
ಎಲ್ಲರೂ ನೋಡುತಲಿದ್ರಾ
ಆ ಗೊಂಬೆಯ ಪಡೆಯಲು
ಪುಣ್ಯವು ಇರ್ಬೇಕಂದ್ರ//

ಕಾರೊಳಗಿನ ಚಂದ್ರನ ಬೆಳಕು
ಬೆಳಗುತ ಹೊಳೆಯುತ್ತಿತ್ತು
ಆದ ಕಣ್ಣಿಗೆ ಕಣ್ ಸೇರಿಸಲು
ಜನ ಹವಣಿಸುತ್ತಿತ್ತು//

ಅಷ್ಟೊತ್ತಿಗೆ ಅರವತ್ ಆಗೋಗಿತ್ತ
ಗ್ರೀನ್ ಸಿಗ್ನಲ್ ಬಿದ್ದಾಗಿತ್ತ
ಕಣ್ ಬೇರೆಸುವುದ ರೊಳಗೆ
ಕಾರ್ ಕೈ ಮಾಡಿ ಹೊರಟೋಗಿತ್ತ //

ಕಲ್ಮೇಶ ಬಡಿಗೇರ
9743539657
.............ಬಾದಾಮಿ..........

- Kalmesh Badiger

25 Aug 2020, 07:39 am

ಕೊಂಕಣದ ಹುಡುಗಿ

ಏನ್ ಚೆಂದ ಕಾಣಿಸ್ತಿದ್ಳು
ಕೊಂಕಣದ ಹುಡುಗಂದ್ರಿ
ಬಾಳಿ ಗಿಡದ ಬಡ್ಡಿಹಾಂಗ
ಬಳಕುತ ಬೆಳೆದು ನಿಂತಾಕಿ //

ಕೈಲಿ ಮೀನದ ಬುಟ್ಟಿ ಹಿಡಿದು
ಸಮುದ್ರಕ್ಕೆ ಹೋಗು ವಾಕಿ
ಅಂಡಗಚ್ಚಿ ಹಾಕ್ಕೊಂಡು
ನೀರಾಗ ಮೀನು ಹಿಡಿವಾಕಿ //

ತಲೆಕೂದಲು ಒಂದು ಗೂಡಿಸಿ
ತುರುಬಾ ಕಟ್ಟಾಕಿ ಅದಕ
ಚೆಂದ ಕಾಣಿಸ್ಲಂತಾ ಸುತ್ತ
ಮಲ್ಲಿಗೆ ಹೂ ವನು ಸುತ್ತಾಕಿ //

ಮಾಜೆ ಮೋಗ ಮಾಜೇ ಗಾನ
ಅಂತಾ ಗುನುಗುತ ಹಾಡಾಕಿ
ಸಂತೆ ಚೀಲ ಕೈಯಲಿ ಹಿಡಿದು
ಕುಲು ಕುಲು ನಗುವಾಕಿ //

ಹೊತ್ತು ಮುಳುಗಿತು ಅಂದ್ರ
ಮೀನಿನ ಸಾಂಬಾರ್ ಮಾಡಾಕಿ
ಸಿಂಪಿನ ಪಲ್ಲೆ ಸಾರು ಹಾಕ್ಕೊಂಡು
ಕುಂತ ಮಸ್ತಂಗ ಜಡಿಯಾಕಿ //

ಏರೇರಿ ಬರುವ ತೆರೆಗಳ ಕೂಡ
ಕುತಗೊಂಡು ನ್ಯಾರಿ ಮಾಡಾಕೀ
ಸಾಗರ ನನ್ನ ಸಂಗಾತಿ ಅಂತಾ
ಹುಡುಗಿ ಜೀವನ ನಡೆಸಾಕಿ //

ಕಲ್ಮೇಶ ಬಡಿಗೇರ
9743539657
.............ಬಾದಾಮಿ.........

- Kalmesh Badiger

25 Aug 2020, 07:11 am

ಯುವ ಶಕ್ತಿ

ಕಟ್ಟುವೆವು ನಾವು ಕಟ್ಟುವೆವು
ಯುವ ಶಕ್ತಿಯ ನಾಡೊಂದ
ರಾರಾಜಿಸೋ ಮನಗಳಲ್ಲಿ
ಹೋರಾಡುವ ಹೃದಯದಲ್ಲಿ //

ಮಾಡುವೆವು ಕಾರ್ಯವನು
ತಾನು ಮನವ ಅರ್ಪಿಸುತ
ಕಲಾ ಕುಸುರಿಗಳ ಮೀರಿ
ಯುವ ಶಕ್ತಿಯಲೀ ಸೇರಿ //

ಮೇಲೆ ಎತ್ತುವೆವು ಹಿಡಿದು
ಬಿದ್ದು ಒದ್ದಾಡುವ ಜನರ
ಎದ್ದು ಬಿದ್ದ ಹೃದಯಗಳ
ಇದ್ದು ಏಳದ ಮನಸುಗಳ//

ಮೆಟ್ಟುವೇವು ನಾವೆಲ್ಲಾ
ದುಷ್ಟರ ಕೆಟ್ಟ ಶಕ್ತಿಗಳನ್ನು
ಭ್ರಷ್ಟರ ರಾಕ್ಷಸ ಗುಣಗಳನ್ನು
ತಪ್ಪಿ ನಡೆಯುವರನ್ನು //

ಹಾರಿಸುವೇವು ನಾವು
ಯುವ ಶಕ್ತಿಯ ಧ್ವಜವನ್ನು
ಈ ಧರೆಯ ಅಗಲಕ್ಕೂ
ಆ ಭಾನಿನ ಎತ್ತರಕ್ಕೂ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.........

- Kalmesh Badiger

25 Aug 2020, 06:42 am

100% - ಸತ್ಯ

ಹಸಿದವಾನಿಗೆ
ಅನ್ನದ ಬೆಲೆ ತಿಳಿದಿರುವುದೇ ಹೊರೆತು
ಹೊಟ್ಟೆ ತುಂಬಿದ ವ್ಯಕ್ತಿಗಲ್ಲ
ಬಡವರ ಗೋಳು ತಿಳಿಯದ ನಾಯಕ
ಆಳುವ ಅರಸನದ್ದಾರೇನು
ಗುಡಿಯೋಳಗಿನ ಕಲ್ಲ ಕಂಬವದ್ದಾರೇನು
ಆಳುವ ಅರಸ ಆಳಗದ್ದಿದರು
ಆಳು ಆಳುವ ಅರಸನಾಗಬಲ್ಲ
ಸ್ಪರ್ಶ ತಿಳಿಯಾದ ಕಲ್ಲು
ದೇವರಗುವುದದ್ದಾರೆ
ಕಷ್ಟ ಸುಖಗಳಿಗೆ ಸ್ಪಂದಿಸುವ ಮನುಜ
ದೇವರಿಗೆ ದೇವರಾಗಬಲ್ಲನ್ನು
ತಿಳಿಯೋ ಮಂಕುತಿಮ್ಮ

- ರಾಜು ಹಾಸನ

25 Aug 2020, 12:30 am

ಅಗಲಿಕೆ

ಒಂದೇ ಪ್ರಾನದಂತಿದ್ದೇವು
ನಾನು ನೀನು
ಒಡೆದ ಚೂರು ಗಳಾದೇವು
ನೀನು ನಾನು//

ಒಂದಾಗಿ ಬಾಳ ಲೆಂದೇವು
ನಾನು ನೀನು
ಒಬ್ಬಂಟಿ ಯಾಗಿರಬೇಕಾಯಿತು
ನೀನು ನಾನು//

ಒಮ್ಮೆಲೆ ಚಿಗುರ ಬೇಕೆಂದೆವು
ನಾನು ನೀನು
ಚಿವುಟಿದ ಚಿಗುರೆಲೆ ಯಾದೇವು
ನೀನು ನಾನು//

ಬೆಳದಿಂಗಳು ಆಗ ಬೇಕೆಂದೇವು
ನಾನು ನೀನು
ಬಾಡಿದ ಎಲೆ ಗಳಾದೆವು
ನೀನು ನಾನು//

ಬೀದಿಗೆ ಬೆಲ್ಲ ವಾಗ ಬೇಕೆಂದೇ ವು
ನಾನು ನೀನು
ಸಾಗರದ ಎರಡು ದಡಗಳಾದೆವು
ನೀನು ನಾನು//

ಕಲ್ಮೇಶ ಬಡಿಗೇರ
9743539657
.........ಬಾದಾಮಿ.....

- Kalmesh Badiger

24 Aug 2020, 09:58 pm

ನನ್ನವಳು

ನನ್ನವಳು ಸಣ್ಣಾಕಿ
ಸಿಹಿಬೆಲ್ಲ ತಿನ್ನಾಕಿ
ಮನಬಿಚ್ಚಿ ಮಾತಾಡಿ
ಮೃದು ಮನಸ ಕದ್ದಾಕಿ//

ಸುಮ್ಮ ಸುಮ್ಮನೆ ನಕ್ಕಾಕಿ
ನಕ್ಕೆನ್ನ ಸೇಳೆದಾಕಿ
ಮರೆಯಲ್ಲಿ ನಿತ್ಕೊಂಡು
ವಾರಿನೋಟ ಬಿರ್ದಾಕಿ//

ಸೇವಂತಿ ಮುಡ್ಕೊಂದು
ಸರ ಸರನೆ ನಡೆಯೋಕೆ
ಮಲ್ಲಿಗೆ ಹೂ ಮೋಗ್ಗಂತೆ
ಮುಗುಳ್ನಕ್ಕು ಹೋದಾಕಿ//

ಹಾಡಂದ್ರೆ ಬಲು ಇಷ್ಟ
ಹಾಡೋದು ಬಾಳ ಕಷ್ಟ
ಒಮ್ಮಿಷ್ಟ ಆದ್ಮೇಲೆ
ಬಿಟ್ಟಕೊಡಲ್ಲಂತ ಹೇಳ್ದಾಕಿ//

ನೀವ್ ಬಂದ್ರಿ ಕನಿಸ್ನ್ಯಾಗ
ನಾವ್ ನಿಮ್ಮ ಮನಿಸ್ನ್ಯಾಗ
ಕುಂತ್ರ್ಯಾಕ ಸುಮ್ಕ ಅಂತಾ
ಚಿಂತಿನ ಮರ್ಸಿದ್ಯಾಕಿ//

ಕಲ್ಮೇಶ ಬಡಿಗೇರ
9743539657
....... ..ಬಾದಾಮಿ...........

- Kalmesh Badiger

24 Aug 2020, 09:38 pm

ತೂಗುಯ್ಯಾಲೆ

ಜೀವನವೊಂದು ತೂಗುಯ್ಯಾಲೆ,
ಎಲ್ಲವೂ ಆ ಸಷ್ಟಿಕತ೯ನ ಲೀಲೆ,
ದಾರಿಗಳುಂಟು ಸಾಧನೆಯ ಹಾದಿಯಲ್ಲೆ,
ಅರಸುವುದೇತಕೆ ಎಲ್ಲೆಡೆ..?
ಸುಖವುಂಟು ಮುಂದೊಂದು ದಿನ,
ತಾಳ್ಮೆ ಬೇಕು ಆ ಒಂದು ಕ್ಷಣ,

ದು:ಖವು ಒಂದು ಮರೀಚಿಕೆ,
ಮರೆಮಾಚುವುದು ಒಂದಲ್ಲ ಒಂದು ದಿನ, ಚಿಂತಿಸುವುದೇತಕೆ..?
ಜೀವನವೊಂದು ತೂಗುಯ್ಯಾಲೆ..!

- Megha

24 Aug 2020, 08:36 pm

ಮನಸ್ಸು ಮೆಚ್ಚಿದೆ..

ನನ್ನ ಅಂಗೈಯಲಿ ನಿನ್ನ ಹೆಸರನ್ನು ಬರೆದು ಕೂಗಿರುವೆ ಕೇಳು.
ನಿನ್ನ ಅಂಗಾಲಿನಲಿ ನನ್ನ ಮನಸ್ಸನ್ನು ತುಳಿದು ನೀ ಎಲ್ಲಿ  ಹೊರಟಿರುವೆ ಹೇಳು.
ನಿನ್ನ ಕಾದು ಕಾದು ಕಾಲನೆ ಕಳೆದುಹೋಗಿದೆ.
ಕ್ಷಮಿಸಿ ಓಪ್ಪಿಕೊಳದಂತ ತಪ್ಪು ನಾ ಏನು ಮಾಡಿದೆ.
ನನ್ನ ಕಾಡೊ ನಿನ್ನ ಕಣ್ಣಿಗು ಕೂಡ ನಾನು  ಕಾಣದಗಿದೆ.
ಸಾರಿ ಸಾರಿ ಕೂಗಿದರು ಕೇಳದಷ್ಟು ದೂರ ನೀನು ಸಾಗಿದೆ.
ಕಣ್ಣಾ ಕಾಯೋ ರೆಪ್ಪೆಕೂಡ ತನ್ನ ಕಣ್ಣ ತಾನೇ ಚುಚ್ಚಿದೆ.
ನನ್ನ ಮನಸ್ಸಿಗೇನು ತಿಳಿಯುತ್ತಿಲ್ಲ , ನಿನ್ನ ಮರ್ಮ ಏನಿದೆ.
ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ  ಹೊರಟವಳನ್ನೇ ಮನಸ್ಸು ಮೆಚ್ಚಿದೆ.

- NaveenkumarK

24 Aug 2020, 12:32 pm