Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇದೇ ನಿಜ

ಪರರನ್ನು ನಂಬಿ
ಬದುಕುತ್ತಿರುವ
ಏಲೇ ಮಾನವ....

ಪ್ರಯಾಣದ
ದಾರಿಯಲ್ಲಿ
ದಿಕ್ಕು ತಪ್ಪಿಸುವವರು
ಅವರು

ಉತ್ತಮ ಧ್ಯೇಯ
ಒಂದು ಇರಲಿ ನಿನ್ನ ಬಳಿ

ಹಸನಾಗುವುದು ನಿನ್ನ ಬದುಕು
ಅಸೂಯೆ ಪಡುವವರ ಮುಂದ..!

- Mahesh Rk

24 Aug 2020, 12:02 am

ಕಾಲ...

ಕಾಲ ಸದಾ ಓಡುವವನು
ಜೊತೆಗಿರುವ ಘಳಿಗೆ ಶಾಶ್ವತವೇನು?
ಇಂದು ಮುಂದಿನ ಘಳಿಗೆಗಳಲಿ
ಸ್ಥಿರಸ್ಮಿತವಿರಲಿ ವದನದಲಿ

- ಶ್ರೀಕಾವ್ಯ

23 Aug 2020, 10:09 pm

ದಿಗಂತದಂಚಿಗೆ

ಮರೆಯದೆ ಬಂದು ಬಿಡು
ಊರ ಕೊನೆಯ ಎಡ ತಿರುವಿಗಿರುವ
ದಿಗಂತದಂಚಿನತ್ತ...

ಕಾಯುತ್ತಿರುತ್ತೇವೆ ನಿನಗಾಗಿ,
ಭೂಮಿ, ಬಾನು ಮತ್ತು ನಾನು...

- ಶ್ರೀಕಾವ್ಯ

23 Aug 2020, 01:01 pm

ಶೃಂಗಾರ ಕಾವ್ಯ

ಬಳುಕುವ ಬಳ್ಳಿಗೆ
ಹೂಗಳೆ ಸಿಂಗಾರ
ನಗು ತುಂಬಿದ
ನಿನ್ನ ಮುದ್ದು ಮುಖಕ್ಕೆ
ಮೂಗುತಿಯೇ ಸಿಂಗಾರ
ಕುಣಿಯುವ ನವಿಲಿಗೆ
ಗರಿಗಳ ಅಲಂಕಾರ
ಒಲವು ತುಂಬಿದ
ನಿನ್ನ ಮುದ್ದು ಹೃದಯಕ್ಕೆ
ಪ್ರೀತಿಯ ಅಲಂಕಾರ

- ರಾಜು ಹಾಸನ

23 Aug 2020, 10:48 am

ನಾವು

ನಾನು ನಾನೆಂದು ಮೆರೆಯದಿರು ಮನುಜ
ಜೀವನ ಕ್ಷಣಿಕ ಮಾತುಗಳು ಮಾಣಿಕ್ಯ
ಸಹೋದರರ ಮಧ್ಯ ಬಿರುಕು ಸಹಜ
ಬಿರುಕಿನಿಂದ ಸಂಬಂಧ ಕೂಡಿಸುವುದೇ ಚಾಣಕ್ಯ

ಸಂಸಾರದ ಸಾಗರದಲ್ಲಿ ಜಲಚರಗಳಂತೆ ನಾವುದೊಡ್ಡದೂ ಚಿಕ್ಕದೂ ಸಮಸ್ಯೆಗೆ ಪರಿಹಾರವು
ಪ್ರಹಾರವಲ್ಲ ಉತ್ತರಿಸುವ ಪ್ರಕಾರವು
ನಡವಳಿಕೆಯೇ ಮನುಜನ ಭೂಷಣ ಪ್ರೀತಿ ಪ್ರೇಮದ ಜೀವನ ಬೆಲ್ಲದ ಊರಣ

ಸರಳ ಬದುಕಿನ ಮೆಟ್ಟಿಲು ಮುಂದಿನ ಸಾಧನೆಯ ಮಾರ್ಗದರ್ಶನಗಳು ತಿಳಿದು ಕೊಂಡರೆ ಬದುಕಿನ ಬಾವಾರ್ಥ ನಾನೆಂಬುದು ಬರಿ ವ್ಯರ್ಥ ನಾವೆಂಬುವುದೇ ಜೀವನದ ನಿಜವಾದ ಅರ್ಥ

- RoopaGowtham

23 Aug 2020, 07:43 am

ಬರಿಯ ಹೆಣ್ಣಲ್ಲ ನಾನು..

ಬರಿಯ ಹೆಣ್ಣೆಂದು ಕರಿಯಬೇಡ ನನ್ನನು
ಶಕ್ತಿ ನಾನು ಧೈರ್ಯ ನಾನು ಉಸಿರು ನಾನು
ಜೀವನಾಡಿ ನಾನು.

ಆತ್ಮಸ್ಥೈರ್ಯವ ಕುಂದಿಸಬೇಡ
ಉಸಿರಲ್ಲಿ ಛಲದ ಅಗ್ನಿಯ ಆರಿಸಬೇಡ,
ಹೆಣ್ಣೆಂಬ ಕೀಳಿರಿಮೆ ತೊಟ್ಟ ಅಪ್ಪನ ಮನಸು ನೀನಾಗಬೇಡ, ಅಶಕ್ತಳೆಂಬ ಭಾವನೆಯೊತ್ತ
ಅಮ್ಮನ ಮೌನ ನೀನಾಗಬೇಡ.

ನಾನೇನು ಮಾಡಬಲ್ಲೆನೆಂಬುದು ಕೇಳದೆ
ಏನನ್ನೂ ಮಾಡಲಾರೆನೆಂಬ ಊಹೆಯೊತ್ತ
ಸಮಾಜದ ಜೊತೆಗೆ ನೀ ಸಾಗಬೇಡ,
ಕನ್ನೆಂಜಲು ಉಪ್ಪೆಂದು ಸಿಹಿ ನಗೆಯ
ಸವಿ ನೀ ಮರಿಯಬೇಡ.

ನೊಂದ ಮನವೊತ್ತು ನಾ ತಿರುಗಲಾರೆ
ನೋವ ಕಳೆದುಹಾಕು ದೇವರೇ ನಲಿವಿನ
ರಂಗವಳ್ಳಿಯಲ್ಲಿ ಬಣ್ಣ ನಾನಾಗಬೇಕಿದೆ,
ಜೀವ ಹರುಷ ನೋಡಬೇಕಿದೆ ಬದುಕು
ಹಸಿರಾಗಬೇಕಿದೆ ನಾನಿರುವ ಸ್ಥಳವು ನಿನ್ನ ಮನೆಯಾಗಬೇಕಿದೆ ಗರ್ಭ ಗುಡಿಯಾಗಬೇಕಿದೆ.

- ಚುಕ್ಕಿ

21 Aug 2020, 07:47 am

ಕೊಳಲು

ನಾನಾಗಿರುವಾಗ ಕೊಳಲು
ನುಡಿಸಬಾರೋ ಒಲವಿನ ಹಾಡ
ತೇಲಿ ತೇಲಿ ಬರಲಿ ನಾದ
ಮರೆಯುವಹಾಂಗ ಮೈಮನ
ಬರೆದವರು. ಮಹಾಂತೇಶ ಸೋಪಿನ
..... .. ಬೈಲಹೊಂಗಲ

- ಮಹಾಂತೇಶಸೋಪಿನ

20 Aug 2020, 11:50 pm

ಎಲ್ಲಿಯತನಕ ಹೋರಾಟ

ಪರಕಿಯರ ಕಪ್ಪಿ ಮುಷ್ಟಿ ವಿರುದ್ಧ
ಜನ ಸಾಮಾನ್ಯರ ರಕ್ಷಣೆ
ಬಡವ ಬಲ್ಲಿದರ ಸಮಾನತೆ
ಮುಗ್ಧ ಸ್ತ್ರೀಯರ ಏಳಿಗೆ
ಶೋಷಿತರ ಶೋಷಣೆಯ ದಮನ
ವರ್ಣ ಬೇಧದ ನಿವಾರಣೆ
ತಾಯಿನಾಡಿನ ಜನರಿಗಾಗಿ ನಡೆದ ಹೋರಾಟ

ಇಂದು ಬಡವರ ರಕ್ಷಣೆಗೆ ನಿಲ್ಲದ
ಡೋಂಗಿ ಜನ ನಾಯಕರ ಪ್ರತಿಷ್ಠೆಗಾಗಿ
ಅಂಧ ನಾಯಕರ ಅಸ್ತಿತ್ವಕ್ಕಾಗಿ
ಅಂಧ ಭಕ್ತರ ಕೆಸರೆರಚುವಾಟ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ
ಜನ ಸಾಮಾನ್ಯರನ್ನು ಅತ್ತೀಕ್ಕುವ
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ರಕ್ಷಣೆಗಾಗಿ
ನಡೆಯುವ ಹೋರಾಟವಾಗಿದೆ

ಉಳ್ಳವರು ಇಲ್ಲದವರ ನಡುವಿನ
ತಾರತಮ್ಯ ನಿಲ್ಲುವ ತನಕ
ದೀನ ದಲಿತರು,ಸ್ತ್ರೀ ಶೋಷಿತರನ್ನು
ಕಿತ್ತು ತಿನ್ನುವ ಸಮಾಜದ ವಿರುದ್ಧ
ನಿಲ್ಲದಿರಲ್ಲಿ ನಿರಂತರ ಹೋರಾಟ
ಸಮ ಸಮಾಜ ನಿರ್ಮಾಣದ ತನಕ

- ರಾಜು ಹಾಸನ

20 Aug 2020, 01:37 pm

ಯಾರಿಗಾಗಿ ಹೋರಾಟ ಎಲ್ಲಿಯತನಕ

ಪರಕಿಯರ ಕಪ್ಪಿ ಮುಷ್ಟಿ ವಿರುದ್ಧ
ಜನ ಸಾಮಾನ್ಯರ ರಕ್ಷಣೆ
ಬಡವ ಬಲ್ಲಿದರ ಸಮಾನತೆ
ಮುಗ್ಧ ಸ್ತ್ರೀಯರ ಏಳಿಗೆ
ಶೋಷಿತರ ಶೋಷಣೆಯ ದಮನ
ವರ್ಣ ಬೇಧದ ನಿವಾರಣೆ
ತಾಯಿನಾಡು ತಾಯಿ ನಾಡಿನ
ಜನರಿಗಾಗಿ ನಡೆದ ಹೋರಾಟ

ಇಂದು ಬಡ ಜನರ ರಕ್ಷಣೆಗೆ ನಿಲ್ಲದ
ಡೋಂಗಿ ಜನ ನಾಯಕರ ಪ್ರತಿಷ್ಠೆಗಾಗಿ
ಅಂಧ ನಾಯಕರ ಅಸ್ತಿತ್ವಕ್ಕಾಗಿ ಗುದ್ದಡುವಾ
ಅಂಧ ಭಕ್ತರ ಕೆಸರೆರಚುವಾಟ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ
ಜನ ಸಾಮಾನ್ಯರನ್ನು ಅತ್ತೀಕ್ಕುವ
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ರಕ್ಷಣೆಗಾಗಿ
ನಡೆಯುವ ಹೋರಾಟವಾಗಿದೆ

ಉಳ್ಳವರು ಇಲ್ಲದವರ ನಡುವಿನ
ತಾರತಮ್ಯ ನಿಲ್ಲುವ ತನಕ
ದೀನ ದಲಿತರು,ಸ್ತ್ರೀ ಶೋಷಿತರನ್ನು
ಕಿತ್ತು ತಿನ್ನುವ ಸಮಾಜದ ವಿರುದ್ಧ
ನಿಲ್ಲದಿರಲ್ಲಿ ನಿರಂತರ ಹೋರಾಟ
ಸಮ ಸಮಾಜ ನಿರ್ಮಾಣದ ತನಕ

- ರಾಜು ಹಾಸನ

20 Aug 2020, 10:29 am

ಮೀನಿನ ಕ(ವ್ಯ)ಥೆ

ಒಬ್ಬರ ಮನಸ್ಸಿನ ಮಿನುಗು ತಾರೆ ನೀನು......
ಹೇಳಾಲಾಗದ ಭಾವನೆ ನೀನಾದೆ..
ಮನಸ್ಸಿನೊಳಗೆ ಅವಿತೋಗಿರುವೆ ನೀನು..
ಪ್ರೇಮಿಯಾಗಿರಲು ಬಯಸಿದ ನಿನಗೆ ಗೆಳತಿಯಾದೆ..
ಮನದ ಮೂಲೆಯಲಿ ಮುಚ್ಚಿಟ್ಟ ನವಿಲುಗರಿ....
ಖುಷಿಯಿಂದ ರೆಕ್ಕೆ ಬಿಚ್ಚೊ ಸಮಯದಿ ದೂರವಾದೆ...
ಪ್ರೀತಿಯ‌ ಬಲೆಯಲಿ ಬಿದ್ದಿರುವ ಮೀನುಗಳಾದೆವು ನಾವು..
ಆ ಮೀನಿಗೆ ಮಸಾಲೆ ಹಾಕಿ ಎಣ್ಣೆಗೆ ಬಿಟ್ಟಿರುವಿರೇನು..!??

@ಮೇಘ ಗಣೇಶ್

- Megha s

20 Aug 2020, 10:16 am