Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಸದಾದ ರಾಗಕೆ
ಶೃತಿ ಸೇರಿದಂತೆ
ಜೊತೆಯಾದೆ ನೀ
ಚಿಗುರಿದ ಕನಸಲ್ಲಿ
ಹೊಸದಾದ ಆಸೆಗಳು ಅರಳಿದಂತೆ
ಜೀವನ ಜ್ಯೊತಿಯಾದೆ ನೀ
ಹಾಲಿಗೆ ಜೇನ ಸೇರಿ ಬೆರೆಸಿದಂತೆ
ಸ್ನೇಹದಲ್ಲಿ ಬೆರೆತು ಸೇರಿದೆ
ಪ್ರೇಮದ ಪ್ರೀತಿಯಾದೆ ನೀ

- abhi.s.j

26 Aug 2025, 09:35 am

ಅವಳ ನೆನಪು



ನಿಶ್ಚಿತದ ಮೌನದಲ್ಲಿ ಆಕೆಯ ನೆನಪು ತಟ್ಟುತ್ತದೆ,
ಹೃದಯದ ಪ್ರತಿಯೊಂದು ತಂತಿಯೂ ಅವಳ ಹೆಸರನ್ನು ಜಪಿಸುತ್ತದೆ.

ಕಣ್ಣೀರು ಮಸುಕಾದ ಕಿಟಕಿಯಾಚೆ,
ಅವಳ ನಗುವಿನ ನೆರಳು ಮಿನುಗುತ್ತದೆ.

ಕಾಲ ಹೋದರೂ ಗಾಯ ಗುಣವಾಗಿಲ್ಲ,
ಅವಳ ಮಾತುಗಳ ಪ್ರತಿಧ್ವನಿಯೇ ಬದುಕಾಗಿದೆ.

ಸ್ನೇಹವೆಂದು ಆರಂಭವಾದ ಕನಸು,
ಪ್ರೀತಿಯಾಗಿಬಿಟ್ಟು ವ್ಯಥೆಯಾಗಿ ಬಿಟ್ಟಿತು.

ಆದರೂ –
ಅವಳ ನೆನಪು ನನಗೆ ಶಾಪವಲ್ಲ,
ನನ್ನ ಜೀವದ ಒಡನಾಟ,
ಹೃದಯದ ಅಮರ ಗೀತೆಯಾಗಿದೆ.


--- ಸಂಜಯ್ ?

- Sanjay

25 Aug 2025, 08:46 pm

ಆಗಷ್ಟೇ ಸತ್ತಿದ್ದ ಒಂದು ಸುಂದರವಾದ ಹುಡುಗಿ ಮೇಲೆ ಪ್ರೇಮವಾಯಿತು ಆರು ಮೂರು ಗುಂಡಿ ತೋಡುವವನಿಗೆ...ಅವನು ತನ್ನ ಪ್ರೇಮವನ್ನು ಭದ್ರವಾಗಿ ಹೂತು ಸ್ಮಾರಕ ಕಟ್ಟುತ್ತಿದ್ದನು..

- abhi.s.j

25 Aug 2025, 10:41 am

ಕನಸಿನ ಕಣ್ಣನು ತೆರೆಸಿದಾಕೆ, ಮನಸ್ಸಿನ ಪುಟವನ್ನ ಓದಿದಾಕೆ, ಪ್ರೀತಿಗೆ ಹೊಸ ಅರ್ಥ ತಿಳಿಸಿದಾಕೆ, ನನ್ನ ಜೀವನ ಬದಲಿಸಿದಾಕೆ, ನಾ ನನ್ನ ಪ್ರೀತಿಯ ತಿಳಿಸುವ ಮುಂಚೆ ಮದುವೆಯಾಳಾಕೆ... ?

- abhi.s.j

25 Aug 2025, 10:40 am

ಅರವಿಗೆ ಬಾರದೇ..

ಅರಿವಿಗೆ ಬಾರದೆ ನಾ ನಿನ್ನ ನೋಡುವೆ.. ಅರಿವಿಗೆ ಬಾರದೆ ನಾ ನಿನ್ನ ನೆನೆಯುವೆ.. ಅರಿವಿಗೆ ಬಾರದೆ ನಾ ನಿನ್ನ ನೋಡಿ ನಗುವೆ.. ಒಟ್ಟಾರೆ ನಿನ್ನ ನೋಡಿದಾಗಲೆಲ್ಲಾ ನಾ ಅರಿವಿಲ್ಲದಂತಾಗುವೆ....

- abhi.s.j

24 Aug 2025, 10:30 pm

ಗಂಡ-ಹೆಂಡತಿ ಜಗಳ

ಒಂದಿನ ಸಮಸ್ಯೆ ಒಂದು ವರ್ಷ ಸಮಸ್ಯೆ ಏನೇ ಇದ್ದರೂ ಗಂಡ ಹೆಂಡತಿ ಊಟ ಮಾಡಿ ಮಲಗುವಾಗ ? ಮಾತನಾಡಿದರೆ ಏನೋ ಒಂದು ಸಮಾಧಾನ ಪರಿಹಾರ ಆಗಬಹುದು ♥️

ನಮ್ ಕೈಯಲ್ಲಿದ್ದಾಗಲೇ ಇಬ್ಬರಲ್ಲಿ ಒಬ್ಬರು
ಸೋತರೆ ಸಂಸಾರ ನಡೆಯುತ್ತದೆ ?

ಯಾರ ಮಧ್ಯದಲ್ಲಿ ಸಮಸ್ಯೆ ಬಂದರೆ ಸರಿ ಹೋಗಬಹುದು
ಇಬ್ಬರು ಮಧ್ಯದಲ್ಲಿ ಜಾಸ್ತಿ ಮಾತು ಬಿಡಬಾರದು ❤️‍?
ಯಾರು ಬಲ್ಲೋರು ನಾಳೆ ದಿನ ಏನಾಗಬಹುದು..☺️

- abhi.s.j

24 Aug 2025, 10:01 pm

ಪ್ರೀತಿಯ ಹುಡುಗಿ..

SOMEONE SAID :- ಇಷ್ಟೆಲ್ಲಾ ಆದ್ರೂ ಕೂಡಆ ಹಂತಕಿನ, ಈಗಲೂ ಪ್ರೀತಿಸುತ್ತಿಯಾ..?

ಬಿಳಿ ಸೀರೆ ಉಟ್ಟುಕೊಂಡು,
ಮುದುಕಿಯಾದರೂ,ಅವಳ
ಹಿಂದೆ ಮುಂದೆ ಹಾರಾಡೋ
ಗುಬ್ಬಿ ನಾನು...?

- abhi.s.j

24 Aug 2025, 09:57 pm

ಮನದ ಮಾತು


ಮಾತುಗಳ ಪೆಟ್ಟಿಗೆಯಲ್ಲಿ ತುಂಬಿಕೊಂಡಿವೆ ಭಾವನೆಗಳು,
ಆದರೆ ತುಟಿಗಳ ಬಾಗಿಲು ತೆರೆದುಕೊಳ್ಳುತ್ತಿಲ್ಲ.
ಹೃದಯದ ಸಾಗರದಲ್ಲಿ ಅಲೆಗಳು ಎದ್ದರೂ,
ಹೊರಗೆ ಬಂದು ಹೊಮ್ಮಲು ದಾರಿಯಿಲ್ಲ.

ಕಣ್ಣುಗಳು ಹೇಳಲು ಬಯಸುತ್ತಿವೆ ಸಾವಿರ ಕಥೆಗಳು,
ಆದರೆ ನೋಟದಲ್ಲಿ ಮಾತ್ರ ಮೌನದ ಹಚ್ಚೆ.
ಕಿವಿಗೆ ಹತ್ತಿರ ಬಂದು ಹೇಳಬೇಕೆನಿಸುವುದೂ,
ಓಸೆಯಾಗಿ ಹಾರಿ ಹೋಗುತ್ತಿದೆ.

ಮನಸಿನಲ್ಲಿ ಬರೆಯುತ್ತಿದ್ದೇನೆ ಅಕ್ಷರಗಳ ಸಾಲು,
ಆದರೆ ಲೋಕಕ್ಕೆ ಅದು ಕಾಣಿಸುವುದಿಲ್ಲ.
ಹೇಳಲು ಬಹಳಿದೆ, ಹೇಳಲಾಗುತ್ತಿಲ್ಲ…
ಮೌನವೇ ನನ್ನ ಭಾಷೆ, ಭಾವನೆಗಳೇ ನನ್ನ ಪದ್ಯ.

ಸಂಜಯ್?

- Sanjay

21 Aug 2025, 10:54 pm

- ಅನುಷಾ.ರೈ

19 Aug 2025, 07:30 pm

ಕಳೆದೋದೆ ನಾ ನಿನ್ನ ಇಳಿ ಸಂಜೆ ಕೆನ್ನೆಯಲಿ
ಸೆಳೆದೋದೆ ನಾ ನಿನ್ನ ನೆರಿಗೆಯ ಅಂಚಿನಲ್ಲಿ
ಅರಳಿದ ಎದೆಯಲ್ಲಿ ನಿನದೇ ನಗು
ಹುಚ್ಚೇದ್ದ ಕನಸೀನ ಸೋಗು
ನಾ ನಿನಗೆ ನೀ ನನಗೆ ಮಡಿಲಾ ಮಗು
ಪ್ರೀತಿಯ ಜೋಗುಳಲಿ ತೂಗು
ತುಟಿ ನನ್ನಲ್ಲಿ ತಡವರಿಸಲು
ಮುತ್ತಿಂದ ಮಾತಾಡಿ ಹೋಗು......
ಕಳೆದೋದೆ ನಾ ನಿನ್ನ ಇಳಿ ಸಂಜೆ ಕೆನ್ನೆಯಲಿ.

- ANIL.R.C

19 Aug 2025, 12:28 pm