ಕನಸಿನ ಚಿತ್ತಾರದಿಂದ ಮೂಡಿತು ಬೆಳ ಕೊಂದರಂತೆ ಸ್ನೇಹವೋ ಪ್ರೇಮವೋ ಪ್ರೀತಿಯೋ ಅದು ಗೊತ್ತಿಲ್ಲ
ಆದರೆ ಅದು ಅರಿವಾಗುವ ಮುನ್ನವೇ
ನಾ ಮುಳುಗಿ ಹೋದೆ...
ಅವಳ ಕಿರುನಗೆಗೆ, ಅವಳ ಕಣ್ಣೋಟಕ್ಕೆ, ಅವಳ ಮಧುರ ಮಾತುಗಳಿಗೆ, ಅವಳ ಸ್ನೇಹಕ್ಕೆ,,,
ಅವಳ ನಿಷ್ಕಲ್ಮಶವಾದ ಸ್ನೇಹದಿಂದಲೇ ನಾ ಶರಣಾದೇನು ಆಕೆಯ ಪ್ರೀತಿಗೆ...
ಅವಳ ಪ್ರೀತಿ ಪವಿತ್ರ, ಪರಿಪೂರ್ಣ, ಪರಮ್ಯ,,,
ಅದು ನನಗೆ ದೊರಕಿದ್ದು ಪೂರ್ವ ಜನ್ಮದ ಪುಣ್ಯವೋ ಇಲ್ಲ........ ಅದೇನೋ ಗೊತ್ತಿಲ್ಲ...
ಆ ಪ್ರೀತಿ ನನ್ನೆಲ್ಲ ದುಃಖಗಳ ಮರೆಮಾಡಿ
ಸಂತೋಷದಿಂದಿರಿಸಿದ ಪ್ರೇಮವದು
ಅವಳು ಸಿಗಲಿ ಬಿಡಲಿ,,,
ಆ ಪ್ರೀತಿ ಅದೆಂದಿಗೂ ನನಗೆ ಮಾತ್ರ
ನನ್ನವಳ ಪ್ರೀತಿಯು ನನಗೆ ಮಾತ್ರ...
ಅವಳ ನವಿರಾದ ಪ್ರೀತಿಗೆ ನನ್ನೆಲ್ಲಾ ನೋವುಗಳ ಮೆಲುಕುಹಾಕುತ್ತಾ ಅವಳೊಂದಿಗೆ ಆಗೆ ಇರುವೆ
ನಾ ಮರಳಿ ಮಣ್ಣಾಗುವವರೆಗೆ...
ಜೀವನದ ಸೋಲುಗಳೆ ಗೆಲುವಿನ ಮಜಲುಗಳು
ಭಾವನೆಯ ನೋವುಗಳೆ ನಗುವಿನ ಭರವಸೆಯು
ನಿನ್ನ ನೋವಿಗೆ ಇಲ್ಲಿ ಬೆಲೆಯೇನಿಲ್ಲ
ನಿನ್ನ ಪ್ರೀತಿಗು ಇಲ್ಲಿ ಬೆಲೆಯೇ ಇಲ್ಲ
ಪ್ರೀತಿ ಸ್ವಾರ್ಥಕೆ ಈಗ ಬಲಿಯಾಯಿತು
ಹುಚ್ಚು ಪ್ರೀತಿಗೆ ಕಣ್ಣು ಕುರುಡಾಯಿತು
ನಿನ್ನ ಛಲವೇ ನಿನಗೆ ನಂಬಿಕೆಯು
ಪ್ರೀತಿ-ಒಲವು ನಾಳಿನ ಬದುಕಿಗೆ ನಿನಗೆ ನೆರಳು||
ಕನಸುಕಾಣೊ ಕಂಗಳಲಿ ಆಸೆ ಉಂಟು ನೂರಾರು
ಮನಸು ಎಂಬ ಮಂದಿರದಿ ನೋವಿಗಿಲ್ಲ ತಕರಾರು
ಪ್ರೀತಿ ಎಂಬ ಭಾವನೆಗೆ ಆಸೆಗಳು ಹಲವಾರು
ಮೋಸವಿದ್ದ ನಿನ್ನಲ್ಲಿ ಸ್ವಾರ್ಥಬಿಟ್ಟು ಜೊತೆಯಾರು
ನಿನ್ನ ನಂಬಿದ ಈ ಜೀವಕೆ ಸಾವೊಂದೆ ಉತ್ತರವು
ನಿಷ್ಕಲ್ಮಷ ಈ ಪ್ರೀತಿಗೆ ನಿನ್ನ ಮೋಸದ ಉಡುಗೊರೆಯು
ಒಳ್ಳೇಕಾಲ ನಿನಗೆ ಬರಬೇಕು
ಅಲ್ಲಿವರೆಗು ಪ್ರೀತಿಯ ಹೆಸರಲಿ ಬದುಕಿರಬೇಕು||
ನನ್ನ ಕನಸಿನ ಬೀದಿಯಲ್ಲಿ
ಜಾಹೀರಾತಿನಂತೆ ನೀ ಕಂಡೆ,
ನನ್ನ ಒಬ್ಬಂಟಿಯ ಪಯಣದಲ್ಲಿ
ನನ್ನ ಜೊತೆಯಾಗಿ ನೀ ನಿಂತೆ,
ಅಂದೊಮ್ಮೆ ಅನಿಸಿತು ನೀ ಯಾರೋ
ದಾರಿಹೋಕನಂತೆ,
ಆದರೆ ಇಂದು ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವೇ ನಿನ್ನ ದಾರಿಯ ಕಾಯುವಂತೆ...!
ಮನದಿ ಮೂಡಿದೆ ಕವನ ಬರೆಯುವಾಸೆ..
ಬರೆದಿಹೆನು ಮನದಲ್ಲಿರೊ ಭಾವನೆಯ..
ಹಗುರವಾಗಿರಿಸಿದೆ ನನ್ನೀ ಮನವನು..
ಇನ್ನಷ್ಟು ಬರೆಯುವಾಸೆ ಮೂಡುತಿಹುದು..
ಅದೇಕೋ ಬೇರೆಯವರ ಮಾತ ಕೇಳಿ ಮನವು ಹಿಂಜರಿಯುತಿಹುದು..
ಪಯಣ ಯಾವ ಕಡೆ ಎಂದು ತಿಳಿಯದಾಗಿದೆ..
ನನ್ನ ಮನ ಶಾಂತವಾಗಿರುವುದು ನನ್ನಿಷ್ಟದ ಕಡೆಗೆ ಹೋದರೆ..
ಇನ್ನೊಂದು ಕಡೆ ಕಡೆಗಣಿಸುವುದು ಅನಿವಾರ್ಯತೆಯಾಗಿದೆ..
ಮನವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ..
ಮತ್ತೆ ಮನಃಶಾಂತಿಗಾಗಿ ಬರೆದಿಹೆನು ಈ ಕವನವನು..
@ಮೇಘ ಗಣೇಶ್
ಬಳಿ ಬಂದು ಸಹಾಯ
ಬೇಡಿದರು ಏನೂ
ಮಾಡಲಾಗದ ಅಸಹಾಯಕ ನಾನು
ನಿನ್ನ ಪ್ರೀತಿ ಸಿಕ್ಕ ಮೇಲೆ
ಕೈ ಕಟ್ಟಿ ಕುಳಿತಿರುವ ಅಸಹಾಯಕ ನಾನು
ಕಣ್ಣೀರು ಕಾರುಸಿತಿರು ನೀ.....ಕೊನೆವರೆಗೂ
ಕಾಣದೆ ಮಾಯಾವಾಗಿರುವೇನು ಮಣ್ಣಿನ ಕಣ ಕಣದಲ್ಲಿ ನಾನು.....