ಪಾರಿಜಾತ ಪುಷ್ಪ ನೀನು, ಈಗ ಹೊರಟೆ ಎಲ್ಲಿಗೆ.
ಅಪಾರವಾದ ಪ್ರೀತಿ ಆಯ್ತು ಹೃದಯ ಒಡೆಯೋ ಮಟ್ಟಿಗೆ.
ನೀನು ಬರುವ ದಿಕ್ಕಿನಲ್ಲಿ ಕಾದು ಕುಳಿತಿತ್ತು ಗಾಳಿ ಕೂಡ ಅಲ್ಲೇ ಮೆಲ್ಲಗೆ.
ನಿನ್ನ ನಡಿಗೆ ನೋಡಿ ನೋಡಿ,ನವಿಲು ಕೂಡ ನಾಟ್ಯ ಕಲಿಯಿತು ತಕ್ಕಮಟ್ಟಿಗೆ...
ಬೆಳ್ಳಕ್ಕಿಗಳು ಸಾಲುಕಟ್ಟಿ ನಿನ್ನ ನೋಡಲು ಬರುತಿರಲು.
ಆ ಮೋಡದ ಮರೆಯಲ್ಲಿ ಚಂದ್ರ ಕೂಡ ನಿನಗಾಗಿ ಕಾದಿರಲು.
ಹೂವು ಕೂಡ ಕಾಯುತವೇ ನಿನ್ನ ನೋಟ ತಾಕಿ ಅರಳಲು.
ಚುಕ್ಕಿ ಕೂಡ ಕಾಯುತವೇ ನಿನ್ನ ನಗು ನೋಡಿ ಮಿನುಗಲು...
ನನ್ನ ಹೃದಯದ ಅರಮನೆ ಇದು
ಇಂದು ಬಿಟ್ಟು ಎಂದು ಬರದಿರುವೆ
ಕಲ್ತೊಳೆದು ಬಿಳ್ಕೊಡುವೆ ದಯವಿಟ್ಟು ಹೋಗದಿರು ನೆನಪಿನ ಬುದ್ದಿ ನಾ ಸುಡುವೆ ನನ್ನನ್ನು ಮರೆಯದಿರು
ನನ್ನ ಹೃದಯ ತುಕ್ಕು ಹಿಡಿದಿದೆ
ಬದಲಿ ಹೃದಯ ನಿನದು ಕೊಡು
ನನ್ನ ಪ್ರೀತಿ ಸಾವಿನ ಗೋರಿಗೆ ನಿನ್ನ ಹೆಸರಿಡುವೆ ಅನುಮತಿ ಕೊಡು .....
ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ.
ಹಸುಗುಸು ಮನಸ್ಸಿದು, ಅಪವಾದ ಹೊತ್ತಿದೆ.
ಅಹವಾಲು ಕೇಳದೆ, ಅಪರಾಧಿಯಾಂದು ತೀರ್ಪು ನೀಡಿದೆ.
ನಿನ್ನ ಕಣ್ಣಸನೆಯ ತೀರ್ಪಿಗೆ, ನನ್ನ ಕಣ್ಣು ಎಡಬಿಡದೇ ಕಾದಿದೆ.
ನಿನ್ನ ಹೃದಯದ ಠಾಣೆಗೆ, ನನ್ನ ಮನಸ್ಸು ತನಗೆಯೇ ಹೊರಟು ಕೂತ್ತಿದೇ.
ನಿನಗೆ ಬಂಧಿಯಗಲು ನಾ ಬಂದೆ ಬರುವೆನು.
ಈ ಬಂಧದಿಂದ ಮುಕ್ತವಾಗದಂತ ಸಾಕ್ಷಿ ತಂದೆನು.
ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.
ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.
ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.
ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.
ಪ್ರೀತಿಸಲು
ನೂರಾರು ಮಾತುಗಳು ಬೇಕು
ದೂರಾಗಲು ಒಂದೇ ಮಾತು ಸಾಕು
ಪ್ರೀತಿಸುವಾಗ ಮಾತುಗಳೆ ಮುತ್ತಾಗುವುದು
ದೂರವಾದರೆ ಮಾತುಗಳೆ ಮುಳ್ಳಗುವುದು
ನೂರಾರು ಕನಸುಗಳು ಸಾವಿರರು ಆಸೆಗಳಿದ್ದರು
ಮೂಕನಾಗಿರುವೆ ಕೊಟ್ಟ ಮಾತು ಇಟ್ಟ ನಂಬಿಕೆ
ಸುಳ್ಳಗಾದಿರಲ್ಲಿ ಎಂದು ಈ ನನ್ನ ಪ್ರೀತಿಯಲ್ಲಿ