ಪ್ರೀತಿಸುವಾಗ ತಿಳಿಯಲಿಲ್ಲ
ನಿನ್ನ ಮಾತಿನ ಮೋಡಿ
ನಿನ್ನ ಮಾತಿಗೆ ಮರುಳಾಗಿ
ಸುತ್ತಿದೆ ನಿನ್ನ ಹಿಂದೆ ಹಿಂದೆ
ದುಂಡು ಮಲ್ಲಿಗೆಯೆಂದು
ಅಪ್ಪಿಕೊಂಡೆನು ನಿನ್ನ ಪ್ರೀತಿಯ
ಮುಳ್ಳಾಗಿ ಚುಚ್ಚಿದೆ
ಈ ನನ್ನ ಮನವ
ಪರರ ಸುಖ ನೋಡಲಾಗುವುದಿಲ್ಲ..
ತನ್ನ ಸಂತೋಷ ಹಂಚಲಾಗೋದಿಲ್ಲ..
ಇನ್ನೊಬ್ಬರ ಕೆಡುಕಿನೆಡೆಗೆ ಇವರ ಪಯಣ..
ಮನದಲ್ಲಿ ಯಾವಾಗಲೂ ಬೇಡದ ಚಿಂತೆ..
ಕೊಡಲು ಮನಸಾಗದು..
ಕೊಟ್ಟರೆ ಅವರ ಆಳಾಗಬೇಕೆಂಬ ದುರಾಸೆ..
ತಾನೇ ಎಲ್ಲಾ ತನ್ನಿಂದಲೇ ಎಲ್ಲಾ ಎಂಬ ಅಹಂಕಾರ..
ಇನ್ನೊಬ್ಬರ ಕಂಡು ಹಾಸ್ಯವಾಡೊ ಮಾತುಗಳು..
ಮನದ ತುಂಬಾ ಕಲ್ಮಷ..
ಬೇರೆಯವರ ಮಾತ ಕೇಳಲಾಗದು..
ತನ್ನನ್ನೇ ಎಲ್ಲರೂ ಗುರುತಿಸಬೇಕೆಂಬ ಕೆಟ್ಟ ಹಠ..
ಇದೆಲ್ಲಾ ತನ್ನ ಪಾಪದ ಕೊಡ ತುಂಬುವ ತನಕ..
ನಂತರ ಎಲ್ಲನೂ ದೇವರಿಚ್ಛೆ..
ಇವಾಗ ನಿನ್ನಿಚ್ಛ...
@ಮೇಘ ಗಣೇಶ್
ತಪ್ಪಿಸಿಕೊಳ್ಳಬಹುದು ನಾವು ಮನುಷ್ಯರ ಕಣ್ಗಳಿಂದ
ತಪ್ಪಿಸಿಕೊಳ್ಳಲಾರೆವು ನಮ್ಮ ನಮ್ಮ ಆತ್ಮಸಾಕ್ಷಿಗಳಿಂದ
ಸುಳ್ಳು ನಾಟಕಗಳಿಗೆಲ್ಲ
ಬೇರಾವ ಸಾಕ್ಷಿಯೂ ಬೇಕಿಲ್ಲ
ಆತ್ಮ ಸಾಕ್ಷಿಯೊಂದೆ ಸಾಕಲ್ಲ