Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದಿನಾಲು ಕಾಡುವ ನಿನ್ನ ನೆನಪುಗಳು

ಓ ನನ್ನ ಗೆಳತಿ ..ಎಲ್ಲಿರುವೆ ಹೇಗಿರುವೆ..
ನಿನ್ನ ನೆನಪು ಕಾಡುವ ಹೃದಯದಲ್ಲಿ..
ನನ್ನ ಹೃದಯದ ಬಡಿತವೇ ನಿಂತಹಾಗಿದೆ ಗೆಳತಿ...!

ನೀನು ಬಂದು ನೋಡು ವೊಮ್ಮೆ
ನನ್ನ ಜೀವ ಇದೆ ಇಲ್ಲಾ ಎಂದು..!

- PARAMANANDGALI

01 Aug 2020, 09:37 pm

ಹಾಗೆ ಪ್ರೀತಿಯೂ ಕೂಡ

..ಹಾಗೆ ಪ್ರೀತಿಯೂ ಕೂಡ..

ಆದಿ ಅಂತ್ಯ ಇಲ್ಲದ ನದಿಯಂತೆ
ಎಂದೂ ಅದು ಹುಟ್ಟಿಲ್ಲ
ಹುಟ್ಟಿಲ್ಲ ಅಂದ ಮೇಲೆ ಕೊನೆ ಇರಲು ಹೇಗೆ ಆದೀತು,
ಹರಿಯುತಿದೆ ನದಿ ನೀರು
ಹಾಗೆ ಪ್ರೀತಿಯೂ ಕೂಡ......

ಹಿಡಿದು ನಿಲ್ಲಿಸಕ್ಕಾಗದ ಸಮಯದಂತೆ
ಎಂದೂ ಅದು ಜಡವಾಗಿಲ್ಲ
ಜಡವಾಗಿಲ್ಲ ಅಂದ ಮೇಲೆ ಹಿಡಿದಿರಲು ಹೇಗೆ ಸಾಧ್ಯ ಆದೀತು,
ಬದಲಾಗುತ್ತಿದೆ ಸದಾ ದೇಹ
ಹಾಗೆ ಪ್ರೀತಿಯೂ ಕೂಡ...

ಎಲ್ಲಾ ಇದ್ದು ಏನೂ ಇಲ್ಲದ ಬಯಲಿನಂತೆ
ಎಂದೂ ಅದು ತುಂಬಿಕೊಳ್ಳಲಿಲ್ಲ
ತುಂಬಿಕೊಂಡಿಲ್ಲ ಅಂದ ಮೇಲೆ ಬರಿದಾಗಲೂ ಹೇಗೆ ಸಾಧ್ಯ ಆದೀತು,
ಅದು ಶೂನ್ಯತೆ
ಹಾಗೆ ಪ್ರೀತಿಯೂ ಕೂಡ....

ಕೂಡಿಸಿ ಕಳೆಸಿದ ಗುರುವಿನಂತೆ
ಅದು ಎಂದೂ ಕೂಡಲಿಲ್ಲ
ಕೂಡಲಿಲ್ಲ ಅಂದ ಮೇಲೆ ಕಳೆಯಲು ಹೇಗೆ ಸಾಧ್ಯ ಆದೀತು,
ಅದು ಸೊನ್ನೆ
ಹಾಗೆ ಪ್ರೀತಿಯೂ ಕೂಡ...

-..ಪ್ರವೀಣಸಿಂಗೋನಹಳ್ಳಿ..

- praveens singonahalli

01 Aug 2020, 12:17 pm

ಗಜಲ್..

ಕುಸುಮಕಿದೆ ಇರುಳಿನಲಿ ಉರುಳು ಜೋಕೆ
ಆಸೆಯ ಭೃಂಗದ ಬೆನ್ನೇರುವ ಇಂಗಿತವೇಕೆ?

ಕಣ್ತುಂಬಿದ ಚಂದ್ರಚಾಪ ಗಗನ ತೋರಿ ಮಾಸಿತು
ಕನಸ ಶೃಂಗಕೆ ಏಣಿ ಹಾಕಿ ನಲುಗುವುದೇಕೆ?

ಜೀನಿಲ್ಲದ ಕುದುರೆಯೇರಿ ಊರ ಸೇರಿದವನುಂಟೆ
ಆಸೆಯಲೆಗೆ ಹುಟ್ಟಾಕದೆ ತೀರ ಸೇರೀತೆ ಬಾಳನೌಕೆ?

ಮನದಿಡಿತಕೆ ಸಿಕ್ಕವನ‌ ಬಾಳದಾರಿಯಲಿ ನಟ್ಟಿರುಳು
ಭವಬಂಧನದ ಕತ್ತಲಲಿ ಕುರುಡಾಗಿ ಪಯಣಿಸುವುದೇಕೆ?

ಬಿದ್ದ ಹನಿಯೆಲ್ಲ ಹಿಂಗಲಿಲ್ಲ ಭುವಿಯ ಒಡಲಲಿ
ಏತಕೆ ಕಂಡ ಕನಸಿಗೆಲ್ಲ ಮಡಿಲಾಸರೆಯ ಬಯಕೆ?

ಕುಂಬಳಕೇಕೆ ಬಳ್ಳಿ, ಮರದಲಿ ನೆಲ್ಲಿ ತೂಗಿತು
ಬಂದದ್ದೆಲ್ಲ ಇರಲಿ ಬಾಳಲಿ, ಬೇಕೆ ಹೋಲಿಕೆ?

ಹೂವು ಅರಳಿ ಜಗ ಕಾಣಲು ಮುಳ್ಳಿನ‌ ಕಾವಲು
ಮನ ದಣಿದು ತಣಿದು ಕಾವ್ಯವಾಗದ ಬದುಕೇಕೆ?

- ಶ್ರೀಕಾವ್ಯ

01 Aug 2020, 07:03 am

ಸಾಹಿತ್ಯ ಸಂಜೀವಿನಿ -ಮುಕ್ತ - ವಿಮುಕ್ತ

ಎಂದಿಗಯ್ಯ ಎಂದಿಗೆ ಕಾಲ ಯಮನ ಅಟ್ಟಹಾಸ ಕೊನೆಯಾಗುವುದು ಎಂದಿಗೆ???

ಸಣ್ಣ ಜೀವಿ ಸೂಕ್ಷ್ಮಜೀವಿ ಅಣುವಿನಷ್ಟು ಗಾತ್ರ ನೀನು ನಿನ್ನ ಜನನ ಅದೇ ಚೀನಾ

ಇಂಥ ಶಕ್ತಿ ಉಂಟೆ ಒಂದು ಸಣ್ಣ ಜೀವಿಗೆ?
ದಿನದಿನವು ಸಹಸ್ರ ಸಂಖ್ಯೆ ಸೋಂಕಿಗೆ!

ಪ್ರಾಣ ಹರಣ ಮಾಡಿದ್ದೊಂದೇ ಸಾಲದೆ ನಿನ್ನ ಬಯಕೆ ತೃಪ್ತಿಗೆ?
ಬದುಕಿನಲ್ಲಿ ಬವಣೆ ತಂದು ತಂದೆ ಬಾಳ ಬಂಡಿ ದುಸ್ಥಿತಿಗೆ!


ಮರೆತ ಪಾಠ ಕಲಿವ ಪಾಠ ತಂದೆ ಮನುಜ ಮತಿಗೆ

ಏನು ಹೇಳಬಯಸಿದೆ? ಯಾವ ನೀತಿ ಕಲಿಸಿದೆ?
ಏನು ನಿನ್ನ ಸಿದ್ಧಾಂತ?
ಏನು ನಿನ್ನ ರಾದ್ಧಾಂತ


ಭವ್ಯ ದೇಶ ಕಟ್ಟುವಕನಸನು ನುಚ್ಚುನೂರು ಮಾಡಿದೆ
ಕನಸು ಕಾಣೋ ಕಣ್ಮನಗಳಿಗೆ ತಣ್ಣೀರೆರಚಿದೆ?

ಕುಣಿದು ನಲಿದು ಬೆಳೆದು
ಬರುವ ಮನೆ ಮನಗಳ
ಮುಗ್ಧ ಹೃದಯ ಕುಸುಮಗಳ
ಕುಡಿಯ ಚಿವುಟಿ
ಬೀಗಮುದ್ರೆ ಹಾಕಿದೆ

ಇದು ಕಾಲ ಒಡೆಯನ ಕೋವಿಡ್ ರೂಪ
ಜೀವನ ಏರುಪೇರಿನ ಪ್ರತಿರೂಪ ಈ ಬವಣೆ ಎಲ್ಲಾ ದೇಶಗಳ ಯಥಾರೂಪ

ಲಸಿಕೆಗಾಗಿ ಕಾಯೋಣ
ಅಂತರ ಪಾಲಿಸೋಣ ಸ್ಯಾನಿಟೈಸರ್ ಬಳಸೋಣ ಶುಚಿತ್ವ ಕಾಪಾಡೋಣ
ನಿರ್ಲಕ್ಷ ಬಿಡೋಣ
ಲಕ್ಷ್ಯ ಇಡೋಣ
ಈ ಸಂಕಲ್ಪ ಮಾಡೋಣ

✍️ ನವಿಲೆ ನಾಗರಾಜು
ಕನ್ನಡ ವಿಭಾಗದ ಮುಖ್ಯಸ್ಥರು

- Naga raju

31 Jul 2020, 10:02 pm

ನರಿ

ಕಾಡಿನ ಒಳಗೆ ನರಿಯದು
ಒಂದು ಪುಟ್ಟನೆ ಮನೆಯಿತ್ತು
ಜಿಮ್ಮಿ,ಕಮ್ಮಿ,ನಿಮ್ಮಿ ಅಂತಾ
ಮರಿಗಳ ಜೊತೆ ಗಿತ್ತು

ಆಲೆ- ಮೂಲೆ ಅಲೆದು
ಸವಿಯಲು ಜೆಣನು ತರುತಿತ್ತು
ಹಾಲನು ಉಣಿಸುತಾ ಮಕ್ಕಳ
ಹೊಕ್ಕಳ ನೆಕ್ಕುತ ಲಿರುತಿತ್ತು

ಅಮ್ಮನ ಮೇಲೆ ನಿಮ್ಮಿಯು
ಜಿಗಿದು ನೆಗೆಯುತ ಲಿರು ತಿತ್ತು
ಜಿಮ್ಮಿ,ಕಮ್ಮಿ ಅಮ್ಮನ ಕೆನ್ನೆಗೆ
ಮುತ್ತನು ಕೊಡುತಿದ್ವು

ಸುಮ್ಮನೆ ಮಲಗಲು ಬಿಡದೆ
ಅಮ್ಮನ ಕಾಡುತ ಲಿರುತಿದ್ವು
ಅಮ್ಮನ ಮಾತನು ಮೀರದೆ
ಮಕ್ಕಳು ಸುಮ್ಮನೆ ಇರುತಿದ್ವು

ಜೋಗುಳ ಹಾಡುತ ಮಕ್ಕಳ
ನಿದ್ರೆಗೆ ಕಳಿಸಿಯೆ ಬಿಡುತ್ತಿತ್ತು
ಆಕಳಿಸುತ್ತಲೆ ಅಮ್ಮನೂ
ನಿದ್ರೆಗೆ ಜಾರಿ ಯೇ ಬಿಡುತ್ತಿತ್ತು


ಕಲ್ಮೇಶ ಬಡಿಗೇರ
9743539657
.........ಬಾದಾಮಿ.....

- Kalmesh Badiger

31 Jul 2020, 06:17 pm

ಕೊಲ್ಲುವುದದ್ದಾರೆ ಕೊಂದುಬಿಡು

ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ

- ರಾಜು ಹಾಸನ

31 Jul 2020, 10:01 am

ಇಂತಿ ನಿನ್ನ ಗೆಳಯ

ನಾ ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ
ಇಂತಿ ನಿನ್ನ ಗೆಳಯ

- ರಾಜು ಹಾಸನ

31 Jul 2020, 01:10 am

ಮಾತು

ಮಾತಾಡೋ ಸಮಯದಿ..
ಮೌನಿಯಾದೆ..
ಮನದ ಮಾತು ಹೇಳೊ ಸಮಯದಿ ದೂರವಾದೆ..
ಕಾಣದ ಪ್ರೀತಿ ಮನದಲ್ಲೇ ಉಳಿದಿದೆ..
ಮರು ಮಾತಾಡುವಾಗ ಹಾದಿ ಬೇರೆಯಾಗಿದೆ..
ಕೊನೆಗೂ ಮನದ ಮಾತು ಹೇಳಿಕೊಂಡೆವು ಗೆಳೆಯರಾಗಿ..
ಇರಲಿ ನಿನ್ನ ಜೀವನ ಸುಖವಾಗಿ..
ಇದೇ ನನ್ನ ಹಾರೈಕೆ ಕೊನೆಯದಾಗಿ..

@ಮೇಘ ಗಣೇಶ್

- Megha s

30 Jul 2020, 03:31 pm

ಅರು(ಋ)ಣ ಅರು(ಋ)ಣ

ನಿತ್ಯ ನಿಯಮ ಮೀರದೆ
ಬೆಳಕು ನೀಡುವ ಅರುಣ
ಏಳೇಳು ಜನ್ನ ತಳೆದು ಬಂದರೂ
ತೀರಿಸಲಾರೆವು ನಿನ್ನ ಋಣ...!

- Sanganabasayya Hampasagaramath

29 Jul 2020, 06:03 pm

ಬಾಲ್ಯ

ನಿಸರ್ಗ ದ ಸೌಂದರ್ಯವ
ವಿವರಿಸಲು ಅಸಾಧ್ಯ..
ಹೊಲ ಗದ್ದೆ ನೋಡಿದಾಗ
ನೆನಪಾಗುವುದು ಬಾಲ್ಯ..
ಉಗಿ ಬಂಡಿಯಂತೆ ಹತ್ತಾರು ಪುಟಾಣಿ ಮಕ್ಕಳು..
ಹೊರಟ ಬಂಡಿ ನಿಲ್ಲುವುದು ಶಾಲೆಯ ಸಮೀಪ..
ಸ್ವರ್ಗಕ್ಕಿಂತ ಮಿಗಿಲು ಈ ಬಾಲ್ಯದ ಸುಖ
ಮನಸೋತೋದೆ ನಾನು
ಈ ದೃಶ್ಯವ ಕಂಡು..
ಪುನಃ ಆವರಿಸಿಕೊಂಡಿದೆ ಮನಸಿನ ಬುತ್ತಿಯಲ್ಲಿ
ಈ ಸುಂದರ ಸುಮಧುರ ನೆನಪುಗಳು...
@ಮೇಘ ಗಣೇಶ್

- Megha s

29 Jul 2020, 12:55 pm