Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೊಂದ ಜೀವಾ

ಹೇಳಲು ಕೇಳಲು
ಬಲು ಅಂದ ಚೆಂದ
ಪ್ರೀತಿಯ ಪಿಸುಮಾತು
ಸಹಿಸಲು ಬಲುಕಷ್ಟ
ದೂರವಾದ ಮನಸುಗಳ
ಚುಚ್ಚುಮಾತು
ನೋಡಲಾಗದು
ಕಣ್ಣೀರು ತುಂಬಿದ
ಒಂಟಿ ಹೃದಯಾದ
ಮನಸ್ಸಿನ ಗೋಳಾಟ

- ರಾಜು ಹಾಸನ

29 Jul 2020, 01:23 am

ನನ್ನ ಕನಸು...

ಭಾರತಕೆ ಜೈ....
ಕರ್ನಾಟಕಕೆ ಜೈ....
ನಾವು ಭಾರತೀಯರು....
ಕನ್ನಡಮ್ಮನ ಪುತ್ರರು....
ಮುಗಿದದಿನದ ಮೆಲುಕು ಹಾಕಿ....
ಬರುವದಿನದ ಭರವಸೆಯಲಿ....
ತ್ಯಾಗಸಹಿತ ಸ್ವಾರ್ಥರಹಿತ....
ಹೊಸ ನಾಡನು ಕಟ್ಟುವ....
ಸಫಲತೆಯ ಪಡೆಯುವ....
ಭಾರತೀಯರೆನ್ನುವ....
ಒಂದುಗೂಡಿ ಹಾಡುವ....
ದೇಶಕಾಗಿ ದುಡಿಯುವ....
ನಾವು ಒಂದೇ ಅನ್ನುವ....
ಭಾರತೀಯರೆನ್ನುವ....

- ಸಾಹಿತ್ಯಶ್ರೀ

28 Jul 2020, 10:54 pm

ಹಸಿರು

ಕಾಯುವಿಕೆಗಿಲ್ಲದಾಯ್ತು ಕೊನೆ ಮೊದಲು
ನಿನ್ನದೋ ಅದೇ ಭರವಸೆಯ ಸಾಲು
ಒಂದೇ ದಿನದಲ್ಲಿ ತೋರಿಸಿಬಿಡುವೇ ಚುಕ್ಕಿ ಚಂದ್ರಮರ
ಮರುದಿನವೇ ನಾನಾಗಿ ಬಿಡುವೆ ಒಂಟಿ ಮರ

ನಿನಗೆ ನನ್ನ ಅವಶ್ಯಕತೆ ಮುಗಿಯಿತು ಎನಿಸಿದರೂ
ನನ್ನ ಮನದ ಮೂಲೆಯಲ್ಲೆಲ್ಲೊ ಆಸೆಯ ಚಿಗುರು
ಕಾಯುತ್ತಲೇ ಇರುವೇ ನೀ ತಿರುಗಿ ಬರುವವರೆಗೂ
ನಿನ್ನ ನೆನಪುಗಳು ಮನದಲ್ಲಿ ಸದಾ ಹಸಿರು!!

- Dima

28 Jul 2020, 12:02 am

ಮಿಲನ

ನಲ್ಲ ನಲ್ಲೆಯ ಮಿಲನ
ನಡು ರಾತ್ರಿಯಲಿ ಇತ್ತು
ಬೆಳದಿಂಗಳ ಕಾರ್ಮೋಡ
ಕವಿದು ಕಂಗೆಡಿಸಿತ್ತು.

ಏನಾದ್ರೂ ಸರಿಯೇ
ಎಂತಾದರು ಸರಿಯೇ
ಸರ್ಹೊತ್ತಿನ್ಯಾಗ್ ಸರ್ರಂತ
ಸೇರ್ಬೇಕಿತ್ತವಳು ಅವನಲ್ಲಿ.

ಮುಸುಕಾಕಿ ಸಾಗಿದರ
ಮೆತ್ತಂಗ ಆಡುವ ಜನರು
ಮತ್ತ ಹ್ಯಾಂಗ ಸುಮ್ಮನಿರತಾರ
ದುಡ್ಡಿರದ ಡಂಗುರ ಸಾರ್ತಾರ.

ಉಟ್ಟ ಸೀರೆಯ ಬಿಚ್ಚಿ
ಪಂಚೆ ತೊಟ್ಟಳು ಆಕೆ
ಸುತ್ತಿದಳು ತಲೆಗೊಂದು
ರೇಶಿಮೆಯ ರುಮಾಲು.

ಅಂತೂ ಸೇರಿದಳು ಅವಳು
ಅರಮನೆಯ ಸರದಾರನ
ನಗು ಮುಖದ ಚಲುವೆ
ಚಲುವಾಂಬ ಕುವರ ನನ್ನ.

ಹಾಲು ಹರಿಯುತ್ತಿತ್ತು
ಜೇನು ಸುರಿಯುತ್ತಿತ್ತು
ಬೆಳದಿಂಗಳ ಕಾರ್ಮೋಡ ಅದು
ಸರಿಯುತ್ತಿತ್ತು ಕರಗುತ್ತಿತ್ತು.

ಕೆನ್ನೆಗಳು ಕೆಂಪೇರಿತ್ತು
ತುಟಿಯು ರಂಗಾಗಿತ್ತು
ಕಣ್ಣ ಕಾಡಿಗೆ ಕರಗಿ ನೀರಾಗಿತ್ತು
ಸಣ್ಣ ಪಿಸು ಮಾತಿನ್ನು ನಡೆದೇ ಇತ್ತು.


ಕಲ್ಮೇಶ ಬಡಿಗೇರ
9743539657
........ಬಾದಾಮಿ......

- Kalmesh Badiger

27 Jul 2020, 07:30 pm

ಗರ್ದಿ ಗಮ್ಮತ್ತು

ಗರ್ದಿ ಗಮ್ಮತ್ತು ಬಂದಿತ್ತೊಮ್ಮೆ
ನಮ್ಮಯ ಊರಿನ ಜಾತ್ರೆಯಲಿ
ಚಿಲ್ಲಂಗ - ಚಿಚ್ಚಂಗ ತಾಳದ ದ್ವನಿಯು
ಮೊಡಿಯ ಮಾಡಿತ್ತು ಜನರಲ್ಲಿ. "ಪ"

ಚೆಂದದ ಡಬ್ಬೆಯ ಮೆಗಡೆ ಒಂದು
ಚಿನ್ನದ ಗೊಂಬಿಯು ಕುಣಿತಿತ್ತು
ಕಣ್ಣು ಮಿಟುಕಿಸಿ ಕೈಯ್ಯನು ಬೀಸಿ
ಜನರನು ತನ್ನೆಡೆ ಕರಿತಿತ್ತು. "ಚ"೧

ಕೆಳಗಡೆ ತಗಡಿನ ಡಬ್ಬಿಯ ಒಳಗಡೆ
ಬಣ್ಣದ ಸಿನೆಮಾ ನಡೆದಿತ್ತು
ನೋಡಲು ಮುಂದೆ ಸಾಗಿದರಲ್ಲಿ
ನಾಲ್ಕಾಣೆ - ಎಂಟಾಣೆ ದರವಿತ್ತು. ೨

ಮಂಡಿಯ ಊರಿ ನೋಡಲು ಅಲ್ಲಿ
ಚಿಣ್ಣರ ದಂಡೆ ನೆರೆದಿತ್ತು
ಅಬ್ಬಬ್ಬಾ ರಾಜ ಮಹಲ್ಲು
ಮುತ್ತಿನ ಬಂಡಿಯು ಜೊತೆಗಿತ್ತು. ೩

ಹಲ್ಲನು ತಿಕ್ಕುವಾತನ ಜೊಲ್ಲು
ಚಿಣ್ಣರ ನಗೆ ಗೀಡು ಮಾಡಿತ್ತು
ಹೊಟ್ಟೆ ಹಿಡಿದು ಕೊಂಡು ದಂಡು
ಎಂಟಾಣೆ ಮುಟ್ಟಿತು ಎಂದು ನಡೆದಿತ್ತು. ೪


ಕಲ್ಮೇಶ ಬಡಿಗೇರ
9743539657
......ಬಾದಾಮಿ........

- Kalmesh Badiger

27 Jul 2020, 06:51 pm

ನಿನ್ನ ನೆನಪಲ್ಲೇ

ಮನದ ನೋವಲ್ಲೇ ಖುಷಿಯಕಂಡೆ
ನಿನ್ನ ನೆನಪಲ್ಲೇ ನಾನು ಕಾದುಕುಳಿತುಕೊಂಡೆ
ಇಲ್ಲದ ನಿನ್ನನ್ನು ನೆನೆದು ನೆನೆದು
ಸೋತು ಹೋಗಿರುವೆ ನಿನಗಾಗಿ ಕಾದು

ಅತ್ತು ಸೊರಗಿಹೋಗಿವೆ ನನ್ನ ಕಂಗಳು
ಮೌನದಲ್ಲಿ ಕಳೆದುಹೋದವು ಹಲವು ದಿನಗಳು
ಹಗಲೆಲ್ಲಾ ರಾತ್ರಿಯಾಗಿದೆ
ರಾತ್ರಿಯೆಲ್ಲಾ ಮಲಗದೆ ನನ್ನ ಕಂಗಳು ನಿನಗಾಗಿ ಕಾದಿದೆ

ನಿನ್ನ ಆ ಮಧುರ ಮಾತುಗಳು ಯಾಕೋ
ತುಂಬಾ ನೆನಪಾಗಿವೆ,ಒಮ್ಮೆ ನನ್ನ ಕೇಳಿಸಿಕೋ
ತುಂಬಾ ಭಯವಾಗುತ್ತಿದೆ ನನಗೆ
ನಿನ್ನೊಂದಿಗೆ ಹೊರಟುಹೋಗಿದೆ ನನ್ನ ಕಿರುನಗೆ

ಮೊದಲ ಪ್ರೀತಿ ನೀನೇ ತಾನೇ
ಕೊನೆಯ ಪ್ರೀತಿ ಆಗು ನೀನೇ
ಬೇಕಿಲ್ಲ ಬೇರೆಯಾರೊಂದಿಗೂ ಜೀವನ
ನಿನ್ನ ನೆನಪಲ್ಲೇ ಕಳೆಯುವೆ ನನ್ನ ಪ್ರತೀ ದಿನ.

- RoshniDsouza

27 Jul 2020, 11:42 am

ಇಷ್ಟೇ ಜೀವನ

ಹಾಸಿಗೆ ಕೊಳ್ಳಬಹುದು.
ನಿದ್ರೆ ಕೊಳ್ಳಲಾಗದು
ಪುಸ್ತಕ ಕೊಳ್ಳಬಹುದು
ಬುದ್ಧಿ ಕೊಳ್ಳಲಾಗದು .
ಮನೆ ಕೊಳ್ಳಬಹುದು
ಕುಟುಂಬ ಕೊಳ್ಳಲಾಗದು
ಔಷಧಿ ಕೊಳ್ಳಬಹುದು
ಆರೋಗ್ಯ ಕೊಳ್ಳಲಾಗದು.

- ಕರ್ನಾಟಕದ.ಕಂದ ಅಚ್ಚು.

27 Jul 2020, 11:21 am

ಬಣ್ಣ ಬಣ್ಣದ ಲೋಕ

ಕ್ಷಣಕ್ಕೊಂದು ಬಣ್ಣ
ದಿನಕ್ಕೊಂದು ಮಾತನಾಡುವ
ಈ ಬಣ್ಣ ಬಣ್ಣದ
ಲೋಕದಲ್ಲಿ ಹುಟ್ಟಿನಿಂದ
ಸಾಯುವ ತನಕ
ಬದಲಾಗದೆ ಅಳಿಯಾದೆ
ಉಳಿಯೋದು ಒಂದೇ
ಅಪ್ಪ ಅಮ್ಮನ ಪ್ರೀತಿ

- ರಾಜು ಹಾಸನ

27 Jul 2020, 08:48 am

ಬದಲಾಗುವ ಜೀವನ

ಎಲ್ಲರೂ ಬದಲಾಗುವುದು ಯಾರಿಂದಲೋ.. ಯಾರಿಗಾಗಿಯೋ.. ಯಾರಿಗೋಸ್ಕರನೋ.. ಅದರಿಂದ ಮತ್ತೊಬ್ಬರಿಗೆ ನೋವಾಗುತ್ತದೆ..
ಎಂಬ ಸಣ್ಣ ವಿಷಯವು ಅವರಿಗೆ ಅರಿಯುವುದಿಲ್ಲ.. ಜೀವನವೆಂದರೆ ಹೀಗೆ ಯಾರೋ ಬರ್ತಾರೆ..
ಮತ್ಯಾರೋ ಹೋಗುತ್ತಾರೆ...
ಆದರೆ ಬಂದು ಹೋಗೋರ ನಡುವೆ ಇರುವವರು ಅಳುತ್ತಾರೆ ಅಷ್ಟೇ...

- nandini

26 Jul 2020, 11:49 pm

ಕನಸಿನ ರಾಣಿ

ಬೆಳ್ಳಿ ಚುಕ್ಕಿಯಂತೆ
ಹೊಳೆಯುವ
ನಿನ್ನ ಕಣ್ಣ್ ನೋಟಕ್ಕೆ
ಕರಗಿ ಹೋದೆನು ನಾ
ನಿನ್ನ ಮುದ್ದು ಮನಸ್ಸಿನ
ಮುದ್ದು ಮಾತ್ತಿಗೆ
ನಾಚಿದೆ ಈ ನನ್ನ ಮನಸು
ನಿನ್ನ ಮಿಂಚುಳ್ಳಿ
ನಗುವ ನೋಡುತ್ತಾ
ಕಳೆದು ಹೋದೆನು ನಾ

- ರಾಜು ಹಾಸನ

26 Jul 2020, 11:06 pm