Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಖಿ

ತಂಪು ತಂಗಾಳಿ ತೇಲಿ ಬಂದು
ಸುಳಿ ಸುಳಿದು ಹೋಗುತಿತ್ತ
ಕಿಟಕಿಯ ಪರದೆ ಏರೆರಿ ಬಿದ್ದು
ನಿನ್ನ ನೆನಪುಗಳ ತರುತಲಿತ್ತ "ಪ"

ಕತ್ತಲೆಯ ರಾತ್ರಿ ಬೇಳ್ದಿಂಗಳಲ್ಲಿ
ಬಿಳಿ ಕುದುರೆ ಏರಿದಂಗಿತ್ತಾ
ಎತ್ತ ನೋಡಿದರತ್ತ ತ್ತಾ ನಿನ್ನ
ನಗು ಮುಖವ ತೋರುತಿತ್ತಾ. "ಚ"೧

ಆ ಚುಕ್ಕೆ ತಾರೆ ಚಂದ್ರಮರು
ಸೇರಿ ಜಗ ಬೆಳಗಿ ನಗುತ ಲಿದ್ರ
ಈ ನನ್ನ ಮನದ ಮಲ್ಲಿಗೆಯ ಹೂ
ನಿನ್ನ ನೇನೆ ನೆನೆದು ಅರಳುತಿತ್ತ. ೨

ಮನೆ ಗೋಡಿ ಮೇಲೆ ಬರಿದಂತ
ಚಿತ್ರ ಹೊಳೆ ಹೊಳೆದು ನಗುತಲಿತ್ತ
ಆ ನಗುವ ಒಳಗೆ ನಿನ್ನೆನಪು ಮಿಂಚಿ
ಮರೆಯಾಗಿ ಹೋಗುತ್ತಲಿತ್ತ . ೩

ನಡು ರಾತ್ರಿ ಕಳೆದು ಇಡೀ ರಾತ್ರಿ ಮುಗಿದು
ಬೆಳಕೊಂದು ಮೂಡುತ ಲಿತ್ತಾ
ಮುಂಜಾನೆ ಕೊಳಿ ನನ್ ಮರುಳ
ಕಂಡು ಕೇಕೆಯನು ಹಾಕುತಿತ್ತಾ. ೪


ಕಲ್ಮೇಶ ಬಡಿಗೇರ
9743539657
.........ಬಾದಾಮಿ......

- Kalmesh Badiger

26 Jul 2020, 10:33 pm

ಜಾನು

ಸ್ನೇಹ ಅಮರವಾಗಲು ಬೇಕೆಂದಿಲ್ಲ ಸಮಯ..
ಕಂಡ ಕ್ಷಣ ಮನ‌ ಉಲ್ಲಾಸದಾಯಕವಾಗುವುದು..
ಕೇಳಿದ ಮಾತು ಮುತ್ತಿನಂತಾಗುವುದು..
ಆಡಿದ ನುಡಿ ಜೀವನದ ಸಾರವಾಗುವುದು..
ಇವೆಲ್ಲಾ ಸ್ನೇಹ ದಿಂದಾಗಿದೆ..
ಮನದಲ್ಲಿ ಕವಿತೆಯಾಗಿ..
ಭಾವದಲ್ಲಿ ಪ್ರೀತಿಯಾಗಿ..
ನೋಟದಲ್ಲಿ ಪ್ರೇರೇಪಣೆಯಾಗಿ..
ಬಂದಿಹಳು ನನ್ನೀ "ಜಾನು"
ಕಾಣದ ತೀರ ಸೇರಲು ಅಸಾಧ್ಯ..
ಹಾಗೆ ನಮ್ಮೀ ಗೆಳೆತನ ಅನಂತ..
ಏಳೇಳು ಜನುಮ ಹೀಗೇ ಇರಲಿ ಈ ಸಂಬಂಧ..
ಮರೆಯದಿರು ಈ ಅನುಬಂದ..
@ ಮೇಘ ಗಣೇಶ್

- Megha s

26 Jul 2020, 02:28 pm

ನಿನ್ನ ಪ್ರೀತಿಯ ಅಲೆಯಲ್ಲಿ

ಮುತ್ತಿಟ್ಟೆನು
ನಿನ್ನ ನಗು ತುಂಬಿದ
ಮುದ್ದು ಮುಖದ,
ಪೆದ್ದು ಮನಸ್ಸಿಗೆ

ಬಚ್ಚಿಟ್ಟೆನು
ನಿನ್ನ ಸೌಂದರ್ಯವ
ನನ್ನ ಕಣ್ಣ್ ಗಳಲ್ಲಿ
ತೇಲಿ ಹೋದೆನು
ನಿನ್ನ ಪ್ರೀತಿಯ ಅಲೆಯಲ್ಲಿ

- ರಾಜು ಹಾಸನ

26 Jul 2020, 02:25 pm

ಹೊಸತು

ಯಾರು ಕದ್ದುಕೊಂಡು ಹೋದರು
ನನ್ನ ಸುಂದರ ಸಾಲುಗಳನ್ನು
ಸರಳ ಸುಮಧುರ ಸತ್ಯವಾದ
ನುಡಿಗಳ ಶಬ್ದ ಮಾಲೆಯನ್ನು

ನನ್ನ ಮನದಾಳದ ಭಾವನೆಗಳ
ಪ್ರತಿಫಲಿಸುವ ಕನ್ನಡಿಯ
ಇದ್ದ ಹಾಗೆ ಹೇಳುವ ಕಥೆಯ
ನಿರೂಪಿಸುವ ಎದೆಗಾರಿಕೆಯ

ಕಳೆದುಕೊಂಡ ಸಾಲುಗಳ ನೆನಪು
ಮಸಕಾಗಿರುವ ಬಿಂಬಗಳು
ಬಾರದಂತೆ ಗರಿಗೆದರಿವೆ ಹೊಸ
ಕನಸುಗಳು ಬೀರುತ ಹೊಸ ಕಂಪು

ಕವಿರಾಜ

- kavita Rajesh

26 Jul 2020, 02:15 pm

ತಂದೆ ತಾಯಿಯೇ ದೇವರು

ಕಣ್ಣಿಗೆ ಕಾಣುವ ದೇವರು
ತಂದೆ ತಾಯಿ ಬಿಟ್ಟು
ಕಾಣದ ಕಲ್ಲು ದೇವರುಗಳ
ಆರಾಧಿಸುವರು

ಒಂಬತ್ತು ತಿಂಗಳು
ಹೊತ್ತು ಹೆತ್ತು ಸಾಕಿದ
ತಂದೆ ತಾಯಿಯ ಬಿಟ್ಟು
ಸುತ್ತುವರು ಗುಡಿ ಗುಂಡಾತರವ

ತನ್ನ ಎದೆಯ ಪಂಚಾಮೃತ ಕುಡಿಸಿ
ಕೈ ತುತ್ತು ತಿನ್ನಿಸಿ ಸಾಕಿದ
ತಾಯಿ ಪ್ರೀತಿ ಮರೆತು
ಕಲ್ಲನು ದೇವರೆಂದು ಪೂಜಿಸುವರು

ಸೆರಗು ತೊಟ್ಟಿಲು ಕಟ್ಟಿ
ಜೋಗುಳ ಹಾಡಿ ಮುದ್ದಿಸಿದ
ತಾಯಿ ಒಲವು ಮರೆತು
ಕಟ್ಟುವರು ಕಲ್ಲು ದೇವರುಗಳಿಗೆ ಗುಡಿಗಳನ್ನು

- ರಾಜು ಹಾಸನ

26 Jul 2020, 11:30 am

ನನ್ನ ಪ್ರೀತಿಯ ಹುಡುಗಿ

ನಾ ಬರೆದೆನು ನಿನ್ನ ಹೆಸರ
ನನ್ನೇದೆಯ ಗುಡಿಯ ಮೇಲೆ
ನೀ ತಿರುಗಿ ನೋಡದೆ ಹೋದೆಯ
ನನ್ನ ಪ್ರೀತಿಯ ಹುಡುಗಿ

ನಾ ಕಾದಿರುವೆ ನಿನಗಾಗಿ
ನೀ ಬರುವ ದಾರಿಯಲಿ
ನೀ ನೋಡಿದರೂ ನೋಡದಂತೆ
ಮರೆಯಾಗಿ ಹೋದೆಯಾ
ನನ್ನ ಪ್ರೀತಿಯ ಹುಡುಗಿ

- ರಾಜು ಹಾಸನ

26 Jul 2020, 12:28 am

ಗುಬ್ಬಿ ಮರಿ

ಕಣ್ಣಲ್ಲಿ ಕಣ್ಣಿಟ್ಟು
ಪ್ರೀತಿಸಿ, ಮುದ್ದಿಸಿದ
ಗುಬ್ಬಿ ಮರಿ
ನೀ ಹಾರಿ ಹೋದೆಯಾ
ನನ್ನ ಪ್ರೀತಿಯ ಮರೆತು

- ರಾಜು ಹಾಸನ

26 Jul 2020, 12:25 am

ನಾ ಕವಿಗಾರನಲ್ಲ,ನಾ ಕನಸುಗಾರ

ಮುತ್ತಿಟ್ಟೆನು
ನಿನ್ನ ನಗು ತುಂಬಿದ
ಮುದ್ದು ಮುಖದ,
ಪೆದ್ದು ಮನಸ್ಸಿಗೆ

ಬಚ್ಚಿಟ್ಟೆನು
ನಿನ್ನ ಸೌಂದರ್ಯವ
ನನ್ನ ಕಣ್ಣ್ ಗಳಲ್ಲಿ
ತೇಲಿ ಹೋದೆನು
ನಿನ್ನ ಪ್ರೀತಿಯ ಅಲೆಯಲ್ಲಿ

- ರಾಜು ಹಾಸನ

25 Jul 2020, 11:19 pm

ರೈತ

ಅನ್ನಕ್ಕಾಗಿ ಸನ್ನಾಗಿ ಹೋದ
ಬಡವ ರೈತನ ನೋಡಿರಣ್ಣ
ಹರಕ ದೋತರ ಊಟಗೊಂಡು
ಹೊಲದಲಿ ಗಿರಕಿ ಹೊಡಿತಾನಲ್ಲ . "ಪ"

ಬಿಸಿಲಿನ ಒಳಗ ಎತ್ತಿನ ಜೋಡಿ
ಕತ್ತಿಯಾಗಿ ದುಡಿತಾನಲ್ಲ
ಹೊತ್ತು ಮುಳುಗುವ ತನಕ
ಉತ್ತುತ ಬೆವರ ಸುರಿಸುವನಲ್ಲ. ಚ(೧)

ಅಜ್ಜನು ಮಾಡಿದ ಸಾಲವ ಕೀಳಲು
ಜೀತವ ದುಡಿದಾನಲ್ಲ ,ಅಪ್ಪ
ಮನೆಗೆ ಬಂದರೆ ಕಟಗ ರೊಟ್ಟಿ
ಕಡಿದು ತಿನ್ನುತಾನಲ್ಲ (೨)

ಬಣ್ಣವು ಸುಟ್ಟು ಬಿಳಿಯ
ಕಣ್ಣುಗಳು ಕುಕ್ಕುತ ಲಿಹುದಲ್ಲ
ಪಕ್ಕಡೆ ಯೊಳಗಿನ ದಪ್ಪನೆ ಎಲುಬು
ಕಿತ್ತು ಬರುತಿಹುದಲ್ಲ ,ಅಯ್ಯೋ..! (೩)

ಹೊತ್ತ ಹೊಂಟರ ಜತ್ತಗಿ
ಬಾರಿಕೊಲ ಹೆಗಲಿಗೆ ಬಂತಲ್ಲ
ಶಿವನ ನೆನೆಯುತ ಹೋಲಕಡೆ
ಸಾಗಿ ಕಾಯಕ ಮೇರಿಯುತಾನಲ್ಲ. (೪)

ಕಲ್ಮೇಶ ಬಡಿಗೇರ
9743539657
..........ಬಾದಾಮಿ.....

- Kalmesh Badiger

25 Jul 2020, 02:18 pm

ಸತ್ಯ ದ ಬೆಲೆ

ಸುಳ್ಳಿನ ಬೆಲೆ ತಿಳಿದಾಗ.....,
ಅನ್ಯಯಾದ ಮರ ಉರುಳುವುದು.......
ಸತ್ಯ ದ ಬೆಲೆ ತಿಳಿದಾಗ.......,
ನ್ಯಾಯದ ಮರ ಚಿಗುರುಉದು.........

- BhoomikaDL

25 Jul 2020, 02:10 pm