Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಪ್ಪ

ಅಪ್ಪಾ ಅಪ್ಪ ನನ್ನ ಪಡೆದಪ್ಪ
ನಿನ್ನವರ್ಣಿಸಲ್ಹೆಗೆ ಹಡೆದ ಪ್ಪ
ಜನುಮವ ನೀಡಿದೆ ಜಗದಪ್ಪ
ಜಗವನು ತೋರಿದೆ ನನ್ನಪ್ಪ. "ಪ"

ಬೆಂಕಿಯ ಉಗುಳುವ ಕುಲುಮೆಯಲ್ಲಿ
ಬತ್ತದ ಹೊಗೆಯ ಕುಡಿಯುತಲಿ
ಕಬ್ಬಿನ ಕರಗಿಸಿ ಹೊಡೆದಪ್ಪ ಅಪ್ಪ
ರೈತರ ಪಾಲಿಗೆ "ದೇವರು" ಆದೆಪ್ಪ. ಚ(೧)

ಬೇವಿನ ಮರದ ಬುಡದಲ್ಲಿ ಅಪ್ಪ
ಬಿರು ಬಿಸಿಲಿನ ರಣ- ರಣ ಬಿಸಿಲಿನಲ್ಲಿ
ರಂಟೆ- ಕುಂಟೆಯ ಕಾಯಕ ಮಾಡ್ಡಪ್ಪ
ಪಶು,ಪಕ್ಷಿಗೆ ಜೀವವು ಆದೆಪ್ಪಾ. (೨)

ಸಂಸಾರವ ನಡೆಸಲು ನೀನಪ್ಪ
ಮಹಾ ತೆರನು ಎಳೆದೆ ನನ್ನಪ್ಪ
ಹೊಟ್ಟೆಗೆ ಹಿಟ್ಟಿನ ಗಂಜಿಯ ಕುಡಿದು
ಹೆಂಡತಿ ಮಕ್ಕಳ ಸಲುಹಿದೆ ಪಡೆದಪ್ಪಾ. (೩)

ಗೌಡ,ಕುಲಕರ್ಣಿ,ಸಾಹೇಬ್ ರಂತಾ
ಪುಗಸೆಟ್ಟಿ ದುಡಿದೆ ಹಡೆದಪ್ಪ..!
ಸಾಲದ ಮೇಲೆ ಬಡ್ಡಿಯೂ ಬೆಳೆಯಲು
ಹೊಲ, ಮನೆ ಮಾರಿದೆ ಪಡೆದಪ್ಪ. (೪)

ಕುಲುಮೆಯ ಸೇರಿ ಕೌದಿಯ ಹೊದ್ದು
ಕೊನೆಯುಸಿರೆಳೆದೆ ನನ್ನಪ್ಪಾ, ಅಪ್ಪ
ಸುಖ ಸಂಸಾರದ ಸವಿಯನು ಸವಿಯದೆ
ದ್ರುವತಾರೆ ಆದೆ ನನ್ನ ಹಡೆದಪ್ಪ . (೫)

ಕಲ್ಮೇಶ ಬಡಿಗೇರ
9743539657
............ಬಾದಾಮಿ........

- Kalmesh Badiger

25 Jul 2020, 01:37 pm

ನನ್ನ ಪ್ರೀತಿಯ ಹುಡುಗಿ

ನಾ ಬರೆದೆನು ನಿನ್ನ ಹೆಸರ
ನನ್ನೇದೆಯ ಗುಡಿಯ ಮೇಲೆ
ನೀ ತಿರುಗಿ ನೋಡದೆ ಹೋದೆಯ
ನನ್ನ ಪ್ರೀತಿಯ ಹುಡುಗಿ

ನಾ ಕಾದಿರುವೆ ನಿನಗಾಗಿ
ನೀ ಬರುವ ದಾರಿಯಲಿ
ನೀ ನೋಡಿದರೂ ನೋಡದಂತೆ
ಮರೆಯಾಗಿ ಹೋದೆಯಾ
ನನ್ನ ಪ್ರೀತಿಯ ಹುಡುಗಿ

- ರಾಜು ಹಾಸನ

25 Jul 2020, 12:11 am

ವರವ ನೀಡವ್ವ

ಬೇಡುವೆನು ಒಂದು ವರವ
ಕೊಡುವೇಯ ನನ ತಾಯಿ
ನೀಡಿದರ ನಿನಗೆ ನಾ ಕೊಡುವೆ!ನನ್ನನ್ನೆ
ಇದು ದಿಟವೇ ನನ್ನವ್ವ

ಆಳಾಗಿ ದುಡಿಬೇಕು
ಅರಸಾಗಿ ಬೆಳೆಬೇಕು
ನಡೆದ ಹಾದೀನ ನೆನಿಬೇಕು!ನನ್ನವ್ವ
ಇತರರಿಗಾಗಿ ಉಳಿಬೇಕು

ಹೆತ್ತೋರ ಮಡಿಲಲ್ಲಿ
ಮುತ್ತಿನ ಹೊಳಿಯಲ್ಲಿ
ಹವಳಾದ ಮುತ್ತು ನಾವಾಗಿ! ಜಗದಲ್ಲಿ
ಸಾರಥಿಯಂತೆ ಸಾಗಾಲಿ

ಗುರುಗಳ ನೆರಳಲ್ಲಿ
ಬೆಳೆಯೋರ ಬಗಲಲ್ಲಿ
ಬೆಳೆಯುವ ಬಳ್ಳಿ ನಾವಾಗಿ! ನಿನ್ನ ಡಿಯ
ಸೇರುವ ಹೂವಾಗಲಿ

ತೆಗಳೀಕೆ ಛಲವಾಗಿ
ಹೊಗಳಿಕೆ ಬಲವಾಗಿ
ಸೋಮಾರಿತನವ ಸುಟ್ಟಾಕಿ! ನಾವು
ಉಳಿಬೇಕು ಸಾಧಕರಾಗಿ.




ಶಾರಧ

- ಶಕುಂತಲಾ

24 Jul 2020, 07:25 pm

ನೀನೇ ನನ್ನ ಜೀವಾ

ನಿನ್ನ ಮುದ್ದು ಮನಸ್ಸಿನ ಲಜ್ಜೆ ಮಾತಿಗೆ
ನನ್ನನು ನಾ ಮರೆತು ಬಿಟ್ಟೆ
ನಿನ್ನ ಮುದ್ದು ಮುಖದ ನಗುವ ನೋಡುತ
ನಾ ಮರೆತು ಬಿಟ್ಟೆ ನನ್ನೆದೆಯ ನೋವನು
ನಿನ್ನ ಕಣ್ಣ್ ಸನ್ನೆಯ ಪ್ರೀತಿಯ ಮುತ್ತಿಗೆ
ಕರಗಿ ಹೋದೆವು ನನ್ನಯ ಕನಸುಗಳು
ನೀನೇ ನನ್ನ ಜೀವಾ ಜೀವಾ

- ರಾಜು ಹಾಸನ

24 Jul 2020, 10:16 am

ಪ್ರೀತಿಯ ಪಿಸುಮಾತು

ನೂರೆಂಟು ರೀತಿಯ ನೆನಪಿನ ಬಳ್ಳಿ ಮೆಲ್ಲಗೆ ಮೂಡಿದೆ ಎದೆಯಲ್ಲಿ..ಎಂದೆಂದು ಬಾಡದ ಕನಸಿನ ಹೂವು ನಿನ್ನ ಧ್ಯಾನದಲಿ ಅರಳೀ..ಕಣ್ಣಲೇ ಮಾತಾಡುತಾ ಸರಿಯಾಗಿ ಹೇಳು ಇದು ಎನು ಅಂತಾ...

- Sanket Kottalagi

24 Jul 2020, 07:42 am

ಮಾಯಾವಿ

ಮನವನು ಶಾಂತಗೊಳಿಸುವ ಗೆಳೆಯ..
ಪ್ರತಿ ವಿಷಯಕ್ಕೂ ಮುನಿಸುವ ಗೆಳತಿಯ ಇನಿಯ..
ಮರಳಿ ಪ್ರೀತಿ ಮಾತುಗಳನ್ನಾಡಿ ಸಮಧಾನ ಪಡಿಸುವ ಜೊತೆಗಾರ..
ಎಂದೂ ಎಂದೆಂದೂ ಶಾಶ್ವತವಾಗಿರಲಿ ನಮ್ಮೀ ಗೆಳೆತನ
ಬೀಳದಿರಲಿ ಯಾರ ದೃಷ್ಟಿಯೂ..
ಜನುಮ ಜನುಮವರೆಗೂ ಆಶಿಸುವೆ ನಮ್ಮೀ ಸವಿನಯ ಬಾಂಧವ್ಯವ..
ಆಗಲಿ ನಿನ್ನೀ ಜೀವನ ಸುಖ ಪ್ರೀತಿ ಸಂಪತ್ತಿನಿಂದ
ಹಾರೈಸುವೆ ನಾ ಶುಭಹಾರೈಕೆಯ..
ಸ್ವೀಕರಿಸುವೆಯ ಓ ನನ್ನ ಮನದ ಮಾಯಾವಿ
ಕಾದಿರುವೆ‌ ನಿನ್ನೀ ತುಸು ಮಾತಿಗಾಗಿ..

@ಮೇಘ ಗಣೇಶ್

- Megha s

23 Jul 2020, 01:46 pm

ಮನಸ್ಸಿನ ಮಾತು

ಮೌನವಾಗಿದೆ ಮನಸ್ಸು
ನಿನ್ನ ನಗುವಿನ ಸದ್ದಿಲ್ಲದೆ
ಕನಸುಗಳೇ ಕರಗಿವೆ
ನಿನ್ನ ಪ್ರತಿಬಿಂಬ ಕಾಣದೆ
ನಿನ್ನ ಪ್ರೀತಿ ಇಲ್ಲದ
ನನ್ನ ಹೃದಯ ಬರಿದಾಗಿದೆ
ದೇವರಿಲ್ಲದ ಗುಡಿಯಂತೆ

- ರಾಜು ಹಾಸನ

22 Jul 2020, 11:51 pm

ನೆನಪು

ಯಾಕೋ ಇಂದು ತುಂಬಾ ನೆನಪಾಗಿಬಿಟ್ಟೆ
ಶಾಂತ ಚಿತ್ತ ಮನಸ ಕದಡಿ ಮುಗುಳ್ನಗೆ ತರಿಸಿಬಿಟ್ಟೆ
ಚಿಟಿ ಪಿಟಿ ಮಳೆ ಹನಿಗಳ ಜೊತೆ
ನಿನ್ನಯ ಮೆಲು ಮಾತಿನ ಇಂಪು
ಮುಗ್ಧ ಕಂಗಳ ತುಂಟ ನೋಟ
ಗುಳಿಕೆನ್ನೆಯ ಆ ನಿನ್ನ ಸ್ವಚ್ಛ ನಗು
ನಿನ್ನ ಮುಂಗುರುಳ ಜೊತೆ ಆಡಿದ ಆ ಕ್ಷಣ
ಪ್ರೀತಿಯಿಂದ ಬಿಗಿದಪ್ಪಿದ ಮಧುರ ಸಂಜೆ
ಯಾಕೋ ಇಂದು ತುಂಬಾ ನೆನಪಾಗಿಬಿಟ್ಟೆ
ಶಾಂತ ಚಿತ್ತ ಮನಸ ಕದಡಿ ಮುಗುಳ್ನಗೆ ತರಿಸಿಬಿಟ್ಟೆ
ಒಂಟಿ ಕಾರು ಪಯಣದಲ್ಲಿ ಜೊತೆಯಾದೆ
ಉದ್ದನೆಯ ಪಯಣ ಚಿಗುರುಹೊಡಿಸಿದೆ ಮನದಲ್ಲಿ
ನಾವು ಒಂದು ಬಗೆದರೆ ವಿಧಿ ಬೇರೇನೋ ಬರೆದಿತ್ತು
ಹಿಂಗೆ ಹತ್ತಿ ಹಂಗೆ ಇಳಿದುಹೋದೆ ಮತ್ತೆ ಒಂಟಿಯಾಗಿಸಿ..
ಯಾಕೋ ಇಂದು ತುಂಬಾ ನೆನಪಾಗಿಬಿಟ್ಟೆ
ಶಾಂತ ಚಿತ್ತ ಮನಸ ಕದಡಿ ಮುಗುಳ್ನಗೆ ತರಿಸಿಬಿಟ್ಟೆ


snaik

- santhoshkumar

22 Jul 2020, 07:18 pm

ನನ್ನ ಪ್ರೀತಿಯ ಚಿಟ್ಟೆ

ನಿನ್ನ ಕಾಲ್ಗೆಜ್ಜೆ ನಾದಕ್ಕೆ
ಮರೆಯಾಗಿದೆ ನನ್ನೆದೆಯ ಬಡಿತ
ನೀ ನಗುವ ನೋಟಕ್ಕೆ
ಮಾಯವಾಗಿದೆ ಮನಸು
ನನ್ನೆದೆಯ ಗೂಡಲ್ಲಿ
ಬಿಡಿಸಿದೆ ನೀ ಬಣ್ಣ ಬಣ್ಣದ ಚಿತ್ತಾರವ
ನಿನ್ನ ಒಲವಿನ ಪ್ರೀತಿಗೆ
ಸೋತಿರುವುದು ನನ್ನ ಈ ಹೃದಯ
ನೀನೇ ನನ್ನ ಪ್ರೀತಿಯ ಚಿಟ್ಟೆ

- ರಾಜು ಹಾಸನ

22 Jul 2020, 05:48 pm

ನವೋಲ್ಲಾಸ

ನನ್ನ ಈ ಮನದಲ್ಲಿ ಚಿಗುರೊಡೆಯುತ್ತಿದೆ ಉಲ್ಲಾಸ..
ನನ್ನೀ ಮನಕೆ ಮುಗುಳು ನಗೆಯ ಝೆಂಕಾರ
ಆಸೆಗಳು ನೆರವೇರಿದಂತೆ
ಮನದಲ್ಲಿ ಮೂಡುತಿದೆ ಸಂತಸ..
ಕಾರಣವ ನಾ ಅರಿಯೆನು
ಭಾವನೆಯ ಬ‍ಂಧನದಲಿರುವೆ..
ಬಾನಂಗಳದಿ ಮಿನುಗೊ ನಕ್ಷತ್ರದಂತೆ
ಕಣ್ಣೊಳಗೆ ‌ಏನೋ ಮಿಡಿಯುತಿದೆ..
ಅಲ್ಪ ಸ್ವಲ್ಪ ಜಗಳ
ಬೆಟ್ಟದಷು ಪ್ರೀತಿ..
ಎದೆಯೊಳಗೆ ಅಲೆಗಳಂತೆ
ಮನವು ಹಾಯಾಗಿ ತೇಲುತಿಹುದು..
ಮುಂಜಾನೆ ಮುಸ್ಸಂಜೆ ಸಮಯದಂತೆ
ಅಲೆಗಳ ಅಬ್ಬರ ಏರುತಿಹುದು
ಈ ಪುಟ್ಟ ಹೃದಯದಲ್ಲಿ..
ನಿನ್ನೀ ನೋಟಕೆ ನಿನ್ನೀ ಮಾತುಗಳಿಗೆ
ನಿನ್ನ ತುಂಟ ಆಟಕೆ ತುಸು ಪ್ರೀತಿಗಾಗಿ
ಮಿಡಿಯುತಿದೆ ನನ್ನೀ ಹೃದಯವು..
ನಿಮ್ಮ ಈ ಬಂಧದಿಂದ ಕೃತಜ್ಞಾನಾಗಿರುವೆ ನಾ...


@ಮೇಘ ಗಣೇಶ್

- Megha s

22 Jul 2020, 05:39 pm