Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇವರೆಂದರೆ ಗುಡಿಯೋಳಗಿನ
ಕಲ್ಲಿನ ಮೂರ್ತಿಯಲ್ಲ
ಜನರ ಮನದಲ್ಲಿನ ಪ್ರೀತಿ
ದೇವಲಾಯವೆಂದರೆ
ಗುಡಿ ಗುಂಡಾಂತರಗಳಲ್ಲ
ಪ್ರೀತಿ ತುಂಬಿದ ಹೃದಯ
- ರಾಜು ಹಾಸನ
19 Jul 2020, 11:29 pm
ಪ್ರೀತಿ ತುಂಬಿದ ಹೃದಯದಲ್ಲಿ
ನಗು ತುಂಬಿದ ಮನಸ್ಸಿನಲ್ಲಿ
ಕಾರ್ಮೋಡ ಆವರಿಸಿದೆ
ನೀ ಇಲ್ಲದೆ ಗೆಳತಿ
ಕಾಡುತ್ತಿವೆ ನಿನ್ನ ನೆನಪುಗಳು
ಈ ನನ್ನ ಮನಸ್ಸಿನಲ್ಲಿ
ಈ ಜೀವಾ ಹೋಗುವ ಮುನ್ನ
ನಿನ್ನ ಕಣ್ಣ್ ತುಂಬಿಕೊಳ್ಳುವ ಆಸೆ ಗೆಳತಿ
- ರಾಜು ಹಾಸನ
19 Jul 2020, 02:13 pm
ಜೀವನದ ಪಯಣದಲ್ಲಿ
ಸಿಕ್ಕಿದ ಪ್ರೀತಿಯ ಮುತ್ತು ನೀ
ಬಚ್ಚಿಟ್ಟು ಪ್ರೀತಿಸಿದೆ
ನನ್ನೆದೆಯ ಗೂಡಲ್ಲಿ
ಗುಬ್ಬಚ್ಚಿ ಗೂಡು ಕಟ್ಟಿ......
ನಿನ್ನ ಪ್ರೀತಿಯೇ
ನನ್ನೆದೆಯ ಬೆಳಕಾಗಿದೆ
ನಿನಗೆ ನೀ ತಿಳಿಯದೆ ಮರೆತೆಯಾ
ಈ ಗೆಳೆಯನ ಹುಚ್ಚು ಪ್ರೀತಿಯನ್ನ.......
- ರಾಜು ಹಾಸನ
19 Jul 2020, 01:40 pm
ನಿನ್ನ ಮನಸ್ಸು ಕಾದಿಯುವ ಕಳ್ಳನಲ್ಲ
ನಿನ್ನ ಹೃದಯವ ಪ್ರೀತಿಸೋ ಕನಸುಗಾರ ನಾ
ನೀ ಸಿಗದಿರುವ ನಕ್ಷತ್ರವಾದರು
ನಿನ್ನೇ ಪ್ರೀತಿಸುವ ಹುಚ್ಚು ಪ್ರೇಮಿ ನಾ
- ರಾಜು ಹಾಸನ
18 Jul 2020, 09:33 pm
ಮಾತಡಲ್ವಾ ?ಅಂತ ಕೇಳೋ ಬದಲು ಮಾತಾಡಬಹುದಾಗಿತ್ತು ಒಂದು ವೇಳೆ ಮಾತಾಡೋ ಮನಸಿದಿದ್ರೆ ಅಲ್ವಾ ?
ನಾನು ನಿಂಜೊತೆ ಮಾತಾಡ್ಬೇಕಾಗಿರೋದು ಅಲ್ವಾ ?ನೀನು ನನ್ನ ಜೊತೆ ಕೇಳ್ಬೇಕು ಮಾತಾಡು ಅಂತ ಅದು ಬಿಟ್ಟು ,ಮೂರನೇ ವ್ಯಕ್ತಿ ಜೊತೆ ಹೇಳೋದಲ್ಲ ಮಾತಾಡ್ತಿಲ್ಲ ಅವಳು ಅಂತ.
ಯಾಕ್ ನೀನು ನನ್ನ ಅತ್ರ ಮಾತಾಡು ಅಂತನು ಹೇಳ್ದೆ ಇರೋ ಅಷ್ಟು ದೂರ ಅಗೋಗಿದಿನಾ ಹೇಳು?
ಮಾತಾಡೋ ಆಸೆ ಇಲ್ಲ ಅಂದ್ರೆ ಯಾಕ್ ಪ್ತಶ್ನೆಗಳನ್ನ ಹಾಕ್ತಿಯಾ ?
- Acchu love
18 Jul 2020, 03:51 pm
ನನ್ನ ಮೌನವನ್ನು ನೀನು ಅರಿಯಬೇಕಿತ್ತು.
ನೀನು ಒಮ್ಮೆ ತಿರುಗಿ ನೋಡಬೇಕಿತ್ತು.
ಆ ಗಾಂಧಿ ಬಜಾರ್ ನಲ್ಲಿ .
ನಿನ್ನೆಲ್ಲ ಮನಸ್ಸಿನ ಭಾವನೆಗಳಿಗೆ ಅರ್ಥ ಸಿಗುತ್ತಿತ್ತು..
ಶ್ರೀ ಕಿರಣ್....
- KIRAN SIDDANATH
18 Jul 2020, 12:06 pm
ಕದಿಯೊ ಆಸೆ ನಿನ್ನ ಮನಸ್ಸನ್ನ
ನೋಡೊ ಆಸೆ ನಿನ್ನ ನಗುವನ್ನ
ಸ್ಪರ್ಶಿಸೋ ಆಸೆ ನಿನ್ನ ಕೈಯನ್ನ
ಕಟ್ಟೋ ಆಸೆ ನಿನಗೆ ತಾಳಿ ನಾ
ಮುದ್ದಿಸೋ ಆಸೆ ನಮ್ಮ ಮಗುವನ್ನ
ಇಷ್ಟೆಕಣೇ ಲೇ ಗೆಳತಿ ನನ್ನ ಮನದಾಸೆ...
- Mahesh Rk
18 Jul 2020, 12:01 am
ಹುಚ್ಚುಚ್ಚಾಗಿ ಹಚ್ಚಿಕೊಂಡಿದ್ದೆ ,ನನ್ ತಪ್ಪು.ಹೊಸದಾಗಿ ಶುರುವದಾಗ ಕಾರಣಗಳೇ ಇಲ್ಲದ ಸ್ನೇಹ,ಪ್ರೀತಿ ಚೆನ್ನಾಗಿಯೇ ಇರುತ್ತೆ.
ಕಾರಣಗಳು ಇರುವಾಗ ಸ್ನೇಹ ,ಪ್ರೀತಿ ದೂರವಾಗುವಾಗ ಆಹಾ ಎಂತ ಚಂದ ಗುರು .
ಬೇಡ ಅಂದಾಗ ಎಲ್ಲರೂ ಸಿಗ್ತಾರೆ ಅದೇ ಬೇಕು ಅನ್ನುವಾಗ ಯಾರು ಸಿಗಲ್ಲ ಅಲ್ವಾ?
ಎಲ್ಲರೂ ಅಷ್ಟೇ ಯಾವುದೇ ಸಂಬಂಧ ಆಗ್ಲಿ ,ಪ್ರೀತಿ,ಸ್ನೇಹ ಆಗ್ಲಿ ಅವಶ್ಯಕತೆ ಇಲ್ಲದಿರುವಾಗ ನಮ್ಮನ್ನ ಬೇಡದ ವಸ್ತುಗಳಾಗಿ ನೋಡ್ತಾರೆ ವಿನಃ
ಅರ್ಥ ಮಾಡಿಕೊಂಡವರಿಲ್ಲ ಅಲ್ವಾ?
- Acchu love
17 Jul 2020, 08:48 pm
ಪ್ರೀತಿ ಇಲ್ಲದ ಹೃದಯ
ದೇವರಿಲ್ಲದ ಗುಡಿಯಂತೆ
ಸ್ನೇಹವಿಲ್ಲದ ಮನಸ್ಸು
ಆಸರೆ ಇಲ್ಲದ ಬಳ್ಳಿಯಂತೆ
- ರಾಜು ಹಾಸನ
17 Jul 2020, 05:21 pm
ನಿನ್ನ ನಾ ಮರೆಯಲೆಂದು
ನನ್ನ ಎದೆಯ ಕಲ್ಲಾಗಿ ಮಾಡಿಕೊಂಡರೆ
ಆ ಕಲ್ಲೆ ಶಿಲೆಯಾಗಿ, ಶಿಲೆಯೇ ನಿನ್ನ
ರೂಪವಾದರೇ,
ನಾ ಹೇಗೆ ಮರೆಯಲಿ
☆♡ಗೆಳತಿ♡☆
ನಿನ್ನ ಆ ನೆನಪುಗಳನ್ನಾ...
✒️ ~Uday S. Salian~
- UdayBedra
17 Jul 2020, 04:44 pm