Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಿಹಿ ನೋಡಿದರೆ ತಿನಬೇಕು ಅನಸತೈತಿ
ಹೂವು ನೋಡಿದರೆ ಹರಿಬೇಕು ಅನಸತೈತಿ
ಹುಡುಗಿಯರ ನೋಡಿದರ ಕಾಡಿಸಬೇಕು ಅನಸತೈತಿ
ನಿನ್ನ ನೋಡಿದರೆ ಲವ್ ಮಾಡಬೇಕು ಅನುಸತೈತಿ
- shivu Biradar
06 Oct 2024, 09:41 pm
ಕತ್ತಿ ಅಂತ ಬೈತಾಳ
ಮತ್ತೆ ನನ್ನ ಕರಿತಾಳ
ಸುತ್ತಮುತ್ತ ನೋಡ್ತಾಳ
ಮುತ್ತು ಕೊಟ್ಟ ನಗುತಾಳ
- shivu Biradar
06 Oct 2024, 09:28 pm
ನೋವು ಗಳಿಗಿಂತ ಸಾವು ಚೆಂದ.
ನೋವುಗಳು ಪ್ರತಿ ದಿನ ಕೊಲ್ಲುತ್ತವೆ ಆದರೆ ಸಾವು ಒಂದೇ ಸಲ ಇಡೀ ಜನುಮದ ನೋವುಗಳನ್ನು ಮರೆಸುತ್ತದೆ.
ನೊಂದ ಮನಸ್ಸಿಗೆ ಸಾವು ಶಾಶ್ವತ ಸಮಾಧಾನ.
ನೋವು ಮನಸ್ಸು , ಕಣ್ಣುಗಳನ್ನು ನೋಯಿಸಿ ತಾನು ನಗುತ್ತಿರುತ್ತದೆ.
ಆದರೆ ಸಾವು ಎರಡಕ್ಕು ನೆಮ್ಮದಿ ನೀಡುತ್ತದೆ.
- Mamatha Achar
04 Oct 2024, 10:22 pm
ನಿಷ್ಕಲ್ಮಷ ಪ್ರೀತಿಗೆ ಸೋಲದವರಿಲ್ಲ
ಸೋತವರೆಲ್ಲ ಬದುಕಲ್ಲಿ ಜಯ ಗಳಿಸಿದರಲ್ಲ.
ದ್ರೋಹ ಬಗೆದವರೆಲ್ಲ ಬೆದರಿದರಲ್ಲ.
ಮೆರೆದವರೆಲ್ಲ ಒಂದಿನ ಮಣ್ಣಾಗಲೇಬೇಕಲ್ಲ.
ನಂಬಿ ನಡೆದರೆ ಕೆಟ್ಟವರಿಲ್ಲ
ಕೆಟ್ಟವರಿಗೆ ಉಳಿಗಾಲವಿಲ್ಲ
ಉಳಿದವರೆಲ್ಲ ಮಣ್ಣಾಗಲೇಬೇಕಲ್ಲ
ಮಣ್ಣಲ್ಲಿ ಮಣ್ಣಾಗಿ, ಆತ್ಮವಾಗಿ
ಪರಮಾತ್ಮನ ಪಾದ ಸೇರಲೇಬೇಕಲ್ಲ
ಪರಮಾತ್ಮನಿಗೆ ತಲೆಬಾಗಲೇಬೇಕಲ್ಲ.
- ಶ್ರದ್ಧಾ ಹಂಡಿಗಿ✍️
- Shraddha H
02 Oct 2024, 07:47 pm
ತುಂತುರು ಮಳೆಯಲ್ಲಿ
ತುದಿಗಾಲಲ್ಲಿ ಹೆಜ್ಜೆಯನಿಟ್ಟು
ತುಸುದೂರ ಕಾಲ್ಗೆಜ್ಜೆ ಸದ್ದಿನಲ್ಲಿ
ತುಂಟಾಟದಿ ನಡೆವವಳು.....
- Sandeep SG
01 Oct 2024, 11:48 pm
ಗೋಡೆಯ ಹಿಂದೆ ನಾನು ಕುಳಿತಿರುವೆ
ನನ್ನ ನೋವನ್ನು ನುಂಗುತ ಅಂತರ್ಯವನ್ನು ಮರಿಮಾಚುತ ಕುಳಿತಿರುವೆ
ಅಂತರಾವಲೋಕನ ಮಾಡಲು ಪ್ರಯತ್ನಿಸಿರುವೆ
ಗೋಡೆಯ ರಚನೆಯನ್ನು ನೋಡುತ್ತಾ ಕುಳಿತಿರುವೆ
ನನ್ನ ರಚನೆಯನ್ನೇ ಮರೆಯುತ
ನನ್ನ ಕಹಿಯನ್ನು ಕೈ ಬಿಡಲು ಪ್ರಯತ್ನಿಸಿರುವೆ
ಧೂಳು ಮಿಶ್ರಿತ ಖಾಲಿ ಕೋಟೆಯಲ್ಲಿ ಕುಳಿತಿರುವೆ
ನನ್ನ ಉಸಿರಾ ಗಾಡಿಯನ್ನೇ ಮರೆತಿರುವೆ
ನನ್ನ ಕೆಟ್ಟ ಉಸಿರನ್ನು ಮರೆಯಲು ಪ್ರಯತ್ನಿಸಿರುವೆ ಮರೆಯಲು ಪ್ರಯತ್ನಿಸಿರುವೆ
ಕಿಟಕಿಯ ಹೊರಗೆ ಬದುಕುವ ಬಯಕೆಯೊಂದಿಗೆ ನೋಡುತ್ತಿರುವೆ
ನನ್ನ ಬಾಳ ಬಯಕೆಯನ್ನೇ ಅದುಮಿರುವೆ
ನನ್ನ ಕ್ಷಮಾಪಣೆಯನ್ನು ಎದುರು ನೋಡುತ್ತಾ ಕುಳಿತಿರುವೆ
ಜಗತ್ತಿನ ನಿಜ ಬಣ್ಣವನ್ನು ಒಳಗಿನಿಂದಲೇ ನೋಡುತ್ತಾ ಕುಳಿತಿರುವೆ
ನನ್ನ ಕಹಿ ಬಣ್ಣವನ್ನೇ ಮರೆತಿರುವೆ
ನಿರ್ಲಕ್ಷತನದ ಕಂದಕವನ್ನು ಮುಚ್ಚಲು ಪ್ರಯತ್ನಿಸಿರುವೆ
ಕೊಳಕು ತುಂಬಿದ ಮನಗಳನ್ನು ನೋಡುತ್ತಿರುವೆ
ನನ್ನ ಮನದ ಕೊಳಕನ್ನೇ ಮರೆತಿರುವೆ
ಸುಭ್ರತೆಯನ್ನು ಸುಣ್ಣದ ಗೋಡೆಯಲ್ಲಿ ಕಾಣಲು ಪ್ರಯತ್ನಿಸಿರುವೆ
ಜಗತ್ತಿನ ಬೆಳಕನ್ನು ಒಳಗಿನಿಂದಲೇ ನೋಡುತ್ತಾ ಕುಳಿತಿರುವೆ
ನನ್ನ ಅಂಧಕಾರವನ್ನೇ ಮರೆತಿರುವೆ
ಹೃದಯದ ಕತ್ತಲೆಯನ್ನು ಹೋಗಲಾಡಿಸಲು ಪ್ರಯತ್ನಿಸಿರುವೆ
ಜಗತ್ತಿನ ಸ್ವಾತಂತ್ರ್ಯವನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಸ್ವಾತಂತ್ರ್ಯವನ್ನೇ ಮರೆತಿರುವೆ
ಬಿಡುಗಡೆಯ ಪಕ್ಷಿಯಾಗಿ ಹಾರಲು ಕಾಯುತ್ತಿರುವೆ
ಲೋಕದ ನಿಜ ಮುಖವಾಡವನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಮುಖವನ್ನೇ ಮರೆತಿರುವೆ
ನೈಜ ಮುಖದ ವ್ಯಕ್ತಿಯಾಗಲು ಪ್ರಯತ್ನಿಸಿರುವೆ
ನಿಜ ಸಂಬಂಧಗಳನ್ನು ಒಳಗಿನಿಂದಲೇ ನೋಡುತ್ತಿರುವೆ
ನನ್ನ ಸಂಬಂಧವನ್ನೇ ಮರೆತಿರುವೆ
ಹೊಸ ಅನುಭವದ ವ್ಯಕ್ತಿಯಾಗಲು ಪ್ರಯತ್ನಿಸಿರುವೆ
-ಕಾವ್ಯಪ್ರಿಯ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 09:27 am
ಆಸೆ
ಇಳಿಗೆ ಮಳೆಯ ಆಸೆ
ಮಳೆಗೆ ಮೋಡದಾಸೆ
ಮೋಡಕ್ಕೆ ಆವಿಯ ಆಸೆ
ಆವಿಗೆ ಸಮುದ್ರದ ಆಸೆ
ಸಮುದ್ರಕ್ಕೆ ಮಂಜಿನ ಆಸೆ
ಮಂಜಿಗೆ ಗಾಳಿಯ ಆಸೆ
ಗಾಳಿಗೆ ಮರದಾಸೆ
ಮರಕ್ಕೆ ಕೋಗಿಲೆ ಆಸೆ
ಕೋಗಿಲಿಗೆ ವಸಂತ ದಾಸೆ
ವಸಂತಕ್ಕೆ ತುಂತುರು ಹನಿಗಳ ಆಸೆ
ತುಂತುರು ಹನಿಗೆ ಕಾಮನಬಿಲ್ಲಿನ ಆಸೆ
ಕಾಮನಬಿಲ್ಲಿಗೆ ಬಿಂಬದ ಆಸೆ
ಬಿಂಬಕ್ಕೆ ಮೂಲದ ಆಸೆ
ಮೂಲಕ್ಕೆ ಜ್ಞಾನದಾಸೆ
ಜ್ಞಾನಕ್ಕೆ ಆಳದ ಆಸೆ
ಆಳಕ್ಕೆ ಅನುಭವದಾಸೆ
ಅನುಭವಕ್ಕೆ ಅನುಭಾವದಾಸೆ
-ಕಾವ್ಯಪ್ರೀಯ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 09:02 am
ಎಲ್ಲವೂ ಸರಿ
ಅದು ಅದರ ದೃಷ್ಟಿಯಲ್ಲಿ
ಆದರೆ ಅಂದುಕೊಂಡರೆ ತಪ್ಪು
ಬೇರೆಯವರ ದೃಷ್ಟಿಯಲ್ಲಿ
ಎಲ್ಲರೂ ಸರಿ
ಅದು ಅವರ ದೃಷ್ಟಿಯಲ್ಲಿ
ಅಂದುಕೊಂಡವರೇ ತಪ್ಪು ಇತರರು ದೃಷ್ಟಿಯಲ್ಲಿ
ಎಲ್ಲಾ ಸಮಯವೂ ಸರಿ
ಅದು ಅದರ ದೃಷ್ಟಿಯಲ್ಲಿ
ಅಂದುಕೊಂಡರೆ
ಅಂದುಕೊಂಡ ಸಮಯವೇ ತಪ್ಪು ಇತರರ ದೃಷ್ಟಿಯಲ್ಲಿ
ಎಲ್ಲಾ ಕೆಲಸವೂ ಸರಿ
ಮಾಡಿದವರ ದೃಷ್ಟಿಯಲ್ಲಿ
ಆದರೆ ತಾನು ಮಾಡಿದ ಕೆಲಸವೇ ತಪ್ಪು ಇತರರು ದೃಷ್ಟಿಯಲ್ಲಿ
ಎಲ್ಲಾ ಮಾತುಗಳೂ ಸರಿ
ಆಡಿದವರ ದೃಷ್ಟಿಯಲ್ಲಿ
ಆದರೆ ಇತರರ ಮಾತು ತಪ್ಪು ಬೇರೆಯವರ ದೃಷ್ಟಿಯಲ್ಲಿ
ಎಲ್ಲಾ ರೂಪ ಸರಿ
ಅವರ ದೃಷ್ಟಿಯಲ್ಲಿ
ಆದರೆ ಬೇರೆಯವರ ರೂಪ
ಮಾತ್ರ ಸರಿಯಲ್ಲ ಅವರು ದೃಷ್ಟಿಯಲ್ಲಿ
ಎಲ್ಲಾ ಅವರ ಕರ್ಮ ಸರಿ
ಅವರ ದೃಷ್ಟಿಯಲ್ಲಿ
ಆದರೆ ಬೇರೆಯವರ ಕರ್ಮ ಸರಿಯಲ್ಲ ಅವರು ದೃಷ್ಟಿಯಲ್ಲಿ
ಅವರ ವರ ಭಾವನೆ
ತಿದ್ದಿಕೊಂಡರೆ
ಕಈಳಆಗಉವ ಅವಕಾಶವಿಲ್ಲ
ಬೇರೆಯವರ ದೃಷ್ಟಿಯಲ್ಲಿ
-ಶಹಾಬುದ್ದೀನ್. ಕಾಲೇಖಾನ್
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 08:45 am
ಅವಳ ಅಂದವೇ ಹಾಗೆ!
ಪರಿಮಳ ಸುಸುವ ಹೂವಿನ ಹಾಗೆ!!
ಅವಳ ಕಣ್ಣೋಟವೆ ಹಾಗೆ!
ಹುಣ್ಣಿಮೆಯ ಚಂದಿರ ಹೊಳೆಯುವ ಹಾಗೆ!!
ಅವಳ ಸಿಹಿ ಮಾತುಗಳೇ ಹಾಗೆ!
ನನ್ನೆದೆಗೆ ತಾಕುವ ಬಾಣದ ಹಾಗೆ!!
ಅವಳ ಸ್ಪರ್ಶವೇ ಹಾಗೆ!
ಭೂಮಿಗೆ ಮೊದಲ ಮಳೆ ಸುರಿದ ಹಾಗೆ!!
ಅವಳಿಡುವ ಕುಂಕುಮವೇ ಹಾಗೆ!
ರಂಗೇರಿ ಹೊಳೆಯುವ ಸೂರ್ಯನ ಹಾಗೆ!!
ನನ್ನವಳೆ ಹಾಗೆ!
ಗಂಧರ್ವ ಲೋಕದ ಕನ್ನೆಯ ಹಾಗೆ!!
Saleem md...✍️
- saleem Dalawai
29 Sep 2024, 09:16 pm
ಅವಳ ಅಂದವೇ ಹಾಗೆ!
ಪರಿಮಳ ಸುಸುವ ಹೂವಿನ ಹಾಗೆ!!
ಅವಳ ಕಣ್ಣೋಟವೆ ಹಾಗೆ!
ಹುಣ್ಣಿಮೆಯ ಚಂದಿರ ಹೊಳೆಯುವ ಹಾಗೆ!!
ಅವಳ ಸಿಹಿ ಮಾತುಗಳೇ ಹಾಗೆ!
ನನ್ನೆದೆಗೆ ತಾಕುವ ಬಾಣದ ಹಾಗೆ!!
ಅವಳ ಸ್ಪರ್ಶವೇ ಹಾಗೆ!
ಭೂಮಿಗೆ ಮೊದಲ ಮಳೆ ಸುರಿದ ಹಾಗೆ!!
ಅವಳಿಡುವ ಕುಂಕುಮವೇ ಹಾಗೆ!
ರಂಗೇರಿ ಹೊಳೆಯುವ ಸೂರ್ಯನ ಹಾಗೆ!!
ನನ್ನವಳೆ ಹಾಗೆ!
ಗಂಧರ್ವ ಲೋಕದ ಕನ್ನೆಯ ಹಾಗೆ!!
Saleem md...✍️
- saleem Dalawai
29 Sep 2024, 03:44 pm