Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸವಿ ನೆನಪು

ನೀ ಬಂದೆ ಗೆಳತಿ ಚಿತ್ತ ಮಳೆಯಂತೆ
ಪ್ರತಿ ಹನಿಯಲ್ಲಿ ಸಿಹಿ ಮುತ್ತಿನಂತೆ
ನಾ ಸವಿಯುತ್ತಿದೆ ಹುಚ್ಚನಂತೆ
ಚಿತ್ತ ಮಳೆ ಬಂದಾಗಲೆಲ್ಲ ನಿನ್ನ ಚಿಂತೆ
ಈಗ ಪ್ರತಿ ಹನಿ ಸವಿಯುತ್ತಿರಲು
ಕಂಡದೆಲ್ಲಾ ಹಾಲು ಎನ್ನಬೇಡ ಹುಚ್ಚಎಂದು
ದಬದಬನೇ ಸುರಿಯುತ್ತಿವೆ ಹನಿಗಳು ಹಾಸ್ಯಮಯವಾಗಿ......
ಬರಿ ಸವಿ ನೆನಪು ಮಾತ್ರ ಗೆಳತಿ

- ಬಾಲು ಶಿರಗುಂಪಿ

13 Jul 2020, 03:14 pm

ಪ್ರಕೃತಿ

ನನ್ನ ಮೌನವು ಮಾತನಾಡಿದೆ ಇಂದು ನಿನ್ನ ಕಂಡು
ಮನವಿಂದು ತಂಪಾದ ಗಾಳಿಯ ಸಿಹಿಯ ಉಂಡು
ಬರೆಯಲು ಪದಗಳು ಸಾಲದು ನಿನ್ನ ಕಂಡು
ಬರೆಯಬೇಕೆನಿಸಿದೆ ನಿನ್ನ ಸೌಂದರ್ಯ ಕಂಡು

ಈ ಪ್ರಕೃತಿ ಸೌಂದರ್ಯದ ಗಣಿ
ರೆಕ್ಕೆ ಪುಕ್ಕವಿಲ್ಲದ ಬಂಗಾರದ ಗಿಣಿ
ನೋಡಲು ಸಾಲದು ಎರಡು ನಯನ
ಓ ವಸುಂದರೆ ನಿನ್ನ ನೋಡಲು ಶಾಂತವಾಗುವುದು ಮನ

ಜಾರಿಬಿದ್ದ ಕೂಡಲೆ ಹಾರಿಹೋಗುವ ಹಕ್ಕಿಗಳು
ಹಚ್ಚಹಸಿರಾಗಿ ತೂಗಾಡುತ್ತಿರುವ ಗಿಡಮರಗಳು
ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು
ನಾದಸ್ವರದಿ ಹಿತನೀಡುವ ಕೋಗಿಲೆಗಳು
ಓ ಮನುಕುಲವೇ ನಾಶವಾಗುತ್ತಿದೆ ಪ್ರಕೃತಿ ನಿನ್ನ
ಹುಚ್ಚಾಟತನದಿಂದ

ಮುರುಕಲು ಮನಸ್ಸಿನ ಹರಕು ಮಾನವರೆ
ಉಸಿರು ಕೊಡುವ ಹಸಿರಿಗೆ ಕೊಡಲಿ ಏಟು ಹಾಕುವಿರಿ
ಜೀವಜಲಕ್ಕೆ ವಿಷವ ಬೆರಿಸಿ ಸಾಧನೆಯೆಂದು ಮೆರೆವಿರಿ
ಸಹನಾಮೂರ್ತಿ ವಸುಂದರೆ ವಿಷವನುಂಡು ಅಮೃತ ನೀಡುವಳು ತಿಳಿಯಿರಿ
ಸಮೀಪಿಸುತ್ತಿದೆ ಕೇಡುಗಾಲ ಇದನ್ನರಿತು ನಡೆಯಿರಿ
Written By :- M.S Yadav

- M S Yadav

13 Jul 2020, 02:32 pm

ನೋಂದಮನಸ್ಸಿನ ಮುಗ್ದಮಾತು

ನನ್ನತ್ತ ನಾ ಹೊರಟಾಗ
ಗುಲಾಬಿ ಹೂ ಒಂದಕಂಡೆ
ಗುಲಾಬಿ ಸುತ್ತಲೂ ಮುಳ್ಳುಗಳಿರುವದನ್ನ ಲೆಕ್ಕಿಸದೆ
ಮೈ ಮರೆತು ಮಂಕಾದೆ
ಗುಲಾಬಿ ಮುಳ್ಳು ಚುಚ್ಚಿ ಚುಚ್ಚಿದಾಗಲೊಮ್ಮೆ
ರಕ್ತದ ಕಣಗಳು ಪ್ರಶ್ನಿಸುತ್ತಿವೆ
ಉತ್ತರಿಸದೇ ಮೂಖನಾಗಿ ಸುಮ್ಮನೆ ಕೂಳಿತಿರುವೆ

- ಬಾಲು ಶಿರಗುಂಪಿ

12 Jul 2020, 09:48 pm

ಬಾನಂಗಯ ಬಾನಂಗಳು

ಬಾನಲ್ಲಿ ಹಾರುವ ಬಾನಾಲಿಗಳೆ
ಬನ್ನಿರಿ ನಮ್ಮಯ ಅಂಗಳಕೆ
ನೀಡುವೆ ನಿಮಗೆ ಸಿರಿದಾನ್ಯೆಗಳನು
ತೋರಿಸಿ ನಿಮ್ಮ ನೃತ್ಯವ ನಮಗೆ

ಪುಟ್ಟ ಕಂದಮ್ಮಗಳ ಕಾದಿವೆ ನಿಮಗಾಗಿ
ಬನ್ನಿ ಮುದ್ದಿಸಿ ಮುದನೀಡಿ ಅವರಿಗೆ
ಅವರು ಹಾಡಿಕುಣಿವರು ನಿಮ್ಮೊಟ್ಟಿಗೆ
ಎಲ್ಲರು ಮೈ ಮರೆಯಿರಿ ಒಟ್ಟೂಟ್ಟಿಗೆ

ನಿಮಗಾಗಿ ಮಾಡಿದೆ ಪುಟ್ಟ ಗೂಡೂಂದನ್ನು
ಇಣುಕಿ ನೋಡು ಅದರಲ್ಲಿ ಇದೆ ಸಿಹಿಜೇನು
ನಿನಗಿಷ್ಟವಾದರೆ ಸವಿ ಇರು ಬೆಚ್ಚಗೆ ಅಲ್ಲಿಯೇ
ಮಾಡಿದೆ ಇದನೆಲ್ಲವ ನಿನಗಾಗಿಯೇ

ಬಾ ನನ್ನ ಪುಟ್ಟ ಹಕ್ಕಿ ಮುದ್ದು ಪಕ್ಕಿ
ನನಗು ಕೊಡು ನಿನ್ನ ರೆಕ್ಕೆ
ನಾ ಬರುವೆ ನಿನ್ನ ಜೊತೆ ಹಾರಲಿಕ್ಕೆ
ಕರೆದೊಯ್ಯು ನನ್ನನ್ನು ಬಾನಂಗಗಳಕೆ

- RoopaGowtham

12 Jul 2020, 10:24 am

ನನ್ನ ಅವಳ ಪ್ರೀತಿ

ಆಕಾಶದಷ್ಟು ನಿರ್ಮಲ ನನ್ನ ಅವಳ ಪ್ರೀತಿ

ಸಾಗರದ ಆಳದಷ್ಟು ನನ್ನ ಅವಳ ಪ್ರೀತಿ

ಪ್ರಕೃತಿಯ ಸೊಬಗಿನಷ್ಟು ನನ್ನ ಅವಳ ಪ್ರೀತಿ

ಪಂಚಭೂತಗಳಿಗೆ ಸಮ ನನ್ನ ಅವಳ ಪ್ರೀತಿ

ಹಾಲಿನಷ್ಟು ಪರಿಶುದ್ಧ ನನ್ನ ಅವಳ ಪ್ರೀತಿ

ಜೇನಿನಷ್ಟು ಸಿಹಿ ನನ್ನ ಅವಳ ಪ್ರೀತಿ

ಭಗವಂತನ ಕೃಪೆ ಹೀಗೆ ಇರಲಿ

ನನ್ನ ಮತ್ತು ಅವಳ ಪ್ರೀತಿಗೆ....

- Mahesh Rk

12 Jul 2020, 08:51 am

ಎದೆಯ ಕದವ ತಟ್ಟಿ

ಎದೆಯ ಕದವ ತಟ್ಟಿ
ನೋವು ನಲಿವುಗಳ ಮೀಟಿ
ಹೋದದ್ಯಾಕೆ ಬಾಳ ಕಡಲ ದಾಟಿ
ಹೇಳ್ಯಾರಿಲ್ಲಿ ಜಗದಲಿ ನಿನಗೆ ಸಾಟಿ

ಕಳೆದು ಹೋದ ಸವಿ ಘಳಿಗೆಗಳು
ಯಾವ ಸರ್ಪ ಕಕ್ಕಿದ ಉಗುಳು
ನೆನಪಲಿ ಸೋಲುತಿವೆ ನರನಾಡಿಗಳು
ನಿನ್ನೀರಿಕ್ಷೆಯೇ ಜೀವಕೀಗ ನೆರಳು

ನಿನ್ನೊಲವಿರದ ನಾ ಏಕಾಂಗಿ
ಬಂದು ಬಿಡು ಒಮ್ಮೆ ತಿರುಗಿ
ಕಳೆದೋಗುತ್ತಿರುವೆ ಕತ್ತಲೊಳಗೆ ಕರಗಿ
ನಿನ್ನ ನೆನೆ ನೆನೆದು ಮರುಗಿ

ತಲೆಯಿರಿಸಿ ಮಡಿಲೊಳಗೆ ಅತ್ತು
ತುಂಬುವೆ ಬೊಗಸೆ ತುಂಬಾ ಮುತ್ತು
ಕಷ್ಟಸುಖವೋ ಹಂಚಿ ತಿಂದು ಕೈತುತ್ತು
ಬಾಳ ಗಂಧ ಸವೆಸುವ ನಗುವ ಹೊತ್ತು

- ಶ್ರೀಕಾವ್ಯ

11 Jul 2020, 07:11 pm

ಚೆಂದದ ಬದುಕು......

ನಕ್ಕಾಗ ನೋಡಿ ಖುಷಿ
ಪಡುವ ಮನಸೊಂದಿದ್ದರೆನೆ ಚೆಂದ
ಅತ್ತಾಗ ನೊಂದು ತಬ್ಬಿ ಸಾಂತ್ವನ ಹೇಳುವ ಮನಸೊಂದಿದ್ದರೆನೆ ಚೆಂದ
ಅಸಿವಾದಗ ಮುದ್ದಿಸಿ
ತಿನ್ನಿಸುವ ಕೈಗಳಿದ್ದರೇನೆ ಅಂದ
ಯಾರು ಬೇಡವೆನಿಸಿದಾಗ ನಾನಿರುವೆ ಹೆದರದಿರು ಎಂದು ನಿನಗಾಗಿ ಎಂದು ಹೇಳುವ ಒಂದು ಪ್ರೀತಿ ಇದ್ದರೇನೆ
ಈಡಿ ಜೀವನಕ್ಕೆ ಬಲು ಚೆಂದ......

- ರಾಗಸಿರಿ....

11 Jul 2020, 05:15 pm

ಅಂತರ

ಅಂತರ ಅಂತರ ಅಂತರ
ಅವಳಿಗೂ ನನಗು ಅಜ ಗಜಾಂತರ
ಮುದ್ದು ಪ್ರೀತಿಗೆ ಅಡ್ಡ ಬಂದಿತ್ತು
ದೆವ್ವದಂತ ಜಾತಿ ಅಂತರ

manju

- ಮಂಜು

11 Jul 2020, 10:47 am

ಮುಂಜಾವು

ಮುಂಜಾವಲಿ ನಗುವ ಹೂವಿನ ಅಂದ,
ಇಬ್ಬನಿ ತಾ ಕರಗಿ ಅದರಲಿ ಬೆರೆತದಕೆ..

ಮೈಮನ ಮರೆತು ತೆನೆಯೆಲ್ಲ ನರ್ತಿಸಿತು,
ತಂಗಾಳಿ ಹಾಡಿದ ಮಧುರ ಗಾಯನಕೆ..


ಕಲರವ ಚೆಲ್ಲುತ ಸಾಗಿದೆ ಬೆಳ್ಳಕ್ಕಿ ಹಿಂಡು
ಹೊಂಬಣ್ಣದಿ ಹೊಳೆವ ಭುವಿಯ ಕಾಣುತ.

ಹೂಗಳ ಸುಗಂಧ ಕೈಬೀಸಿ ಕರೆದಿದೆ
ಪುಷ್ಪಪ್ರಿಯ ನಾರಿಮಣಿಗಳ ತನ್ನೆಡೆಗೆ.




- Kavana

10 Jul 2020, 07:43 pm

ಪ್ರೀತಿ

ಕಣ್ಣ ಮುಚ್ಚಿದರು ನಿಮ್ಮ ಕಾಣುವೆ
ಕಾದಿರುವೆ ನಿಮಗಾಗಿ ಎಂದು ಬರುವಿರಿ?
ನವಮಾಸ ಸಾಗುವುದೆಂತೋ..
ನಿಮ್ಮ ತೋಳಲಿ ಪಡೆಯುವೆನೆಂತೋ..
ಇಬ್ಬರ ಪ್ರೀತಿಯ ಪ್ರತೀಕ
ಮನೆಯವರೆಲ್ಲರ ಸಂತಸದ ದ್ಯೋತಕ






ಇಂತೀ ..
ಮಾತೃಹೃದಯ

- Kavana

10 Jul 2020, 06:42 pm