Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಆಸರೆ

ಚಿಂತೆ ಯಾಕೆ ರನ್ನ
ನಿತ್ಯ ನೋಡಿರುವೆ ಹಗಲು ಇರುಳನ್ನ
ನನ್ನಲ್ಲಿ ಇಲ್ಲ ಆಸ್ತಿ ,ಪಾಸ್ತಿ ಚಿನ್ನ
ಯಾಕೆ ಧ್ಯಾನಿಸುವೆ ನನ್ನ
ಯೋಚಿಸದೆ ಮರೆತುಬಿಡು ಇನ್ನ
ಆಗೂಯ್ತು ಅಂತ ತಿಳಿದಿಕೊ ಪ್ರೀತಿ ಮನ್ನ
ನಗುವಿನ ಸಾಗರದಲ್ಲಿ ನೋಡಬೇಕು ನಿನ್ನ
ಕಟ್ಟಿಕೊ ನೀನು ಸುಂದರ ಜೀವನವನ್ನ
ನಾ ಮರೆಯಾಗೊ ಮುನ್ನ

- Shivakumara S

09 Jul 2020, 11:42 pm

ಪಯಣಿಗ

ಸಮುದ್ರದಲ್ಲಿ ಒಂಟಿ ಪಯಣಿಗ ನಾನು
ದಿಕ್ಕಿಲ್ಲದಿದ್ದರು ಚಲಿಸಬೇಕು ಇನ್ನು!
ಹುಟ್ಟು ಇಲ್ಲದಿದ್ದರು ತೇಲಬೇಕು ನಾನು!
ತೇಲುವ ಪರಿಯಲ್ಲಿ ಚಿಂತೆ ಇದ್ದರು ನಗುತಾ ಇರಬೇಕು ನಾನು!
ಕಡೆಯವರೆಗೂ ದಿಕ್ಕಿಲ್ಲದೆ ಮೌನದಿ ತೆಲುತ್ತ ಇರುವ ದೋಣಿಯ ಪಯಣಿಗ ನಾನು!
ಬಿಸುವ ಬಿರುಗಾಳಿಗೆ ಇಷ್ಟ ಆಗುವೆನೆ ನಾನು
ತಬ್ಬಿ ಬಾಚಿ ದಡ ಸೇರಿಸುವುದೆ ಅದು ನನ್ನನ್ನು!
ಬೊರ್ಗರೆವ ಚಂಡಮಾರುತಕ್ಕೆ ಇಷ್ಟ ಆಗುವೆನೆ ನಾನು
ಇಡಿದು ಹೊತ್ತುವಯ್ದು ದಾರಿತೊರಬಹದೆ ನನಗಿನ್ನೂ!
ಕಲ್ಪನೆ ಪರಿಕಲ್ಪನೆಗಳಿಗೆ ರೂಪ ಕೊಡಬಾರದು ನಾನು!
ಪ್ರತಿ ಕ್ಷಣವನ್ನು ಸೃಷ್ಟಿಸಿವವನೂ ದೇವನೂ
ಅವನ ಅಣತಿಯಂತೆ ತೇಲುವ ಪಯಣಿಗ ನಾನು!
ಪರಿಸರ ಎಷ್ಟೆ ಕೊರೆದರೂ ನಿಟ್ಟುಸಿರಿನೊಂದಿಗೆ
ಚಲಿಸುವ ಪಯಣಿಗ ನಾನು!
ಮುಳುಗುವ ಕೊನೆಯಲ್ಲು ಶ್ರಮ ಪಟ್ಟು ತೇಲ ಬಯಸುವೆ ನಾನು!
ಶ್ರಮದ ನೆರಳೆ ಗೆಲುವು ಆಗ ಬೇಕು ಇನ್ನು!
ಆಸಿರ್ವಾದ ಮಾಡುವನೆ ಆ ಶಿವನು!

- Shivakumara S

09 Jul 2020, 11:14 pm

ಕಣ್ಣ ರೆಪ್ಪೆ ಮಿಟುಕಿಸಿದರೆ

ಕಣ್ಣ ರೆಪ್ಪೆ ಮಿಟುಕಿಸಿದರೆ ತಂಗಾಳಿ ಬಂದತೆ,ಆ ಶ್ವೇತ ವಣ೯ದ ಛಾಯೆ,ಶಾಂತಿಯ ಪ್ರತೀಕದಂತೆ,ಆ ನಯನದ ಹೊಳಪು ,ಕತ್ತಲಿನಲಿ ಹೊಳೆಯುವ ನಕ್ಷತ್ರದಂತೆ,ಆ ಕಣ್ಣೋಟ ಕ್ಷಮಿಸೋ ಗುಣವಿರುವ ಧರೆಯಂತೆ,ಆ ಕಣ್ಣುಗಳ ನೋಡುತ್ತಿದ್ದರೆ,ನೋಡುವ ಕಣ್ಣುಗಳಿಗೆ ದಾಹ ತೀರದು,ವಣ೯ನೆಗೆ ಪದಗಳೇ ಸಾಲದು ,ಈ ಕವನ ರಚಿಸುವ ಹೃದಯಕೆ,ಲೇಖನ ಮುಕ್ತಾಯ ಮಾಡಲು ಮನಸು ಒಪ್ಪದು,ಆ ಕಣ್ಣೋಟ ಕಂಡೊಡನೆ,ಸದ್ದಿಲ್ಲದೆ ಪದಗಳ ಜೋಡನೆಗೆ,ಸ್ಪೂತಿ೯ಯ ಸೆಲೆಯ ಅಲೆಯ ಮಿಂಚಿನ ನಯನ ಸಿಂಚನ.

- Chandru Hiremath

09 Jul 2020, 07:39 pm

-:ಮಳೆಗಾಲದ ಮಳೆರಾಯ:-

ಓ ಮಳೆಗಾಲದ ಮಳೆರಾಯ ನೇ
ಮೆಲನೋಟದ ನೀಲಿ ಬಾನಲಿ ಕರಿ ಬಿಳುಪಿನ
ಮೊಡವ ಹರಡಿಸಿ ಗಾಳಿಯ ಅಲೆಗೆ ಘಷ೯ಣೆ ಗುಡಿಸಿ
ಮಿಂಚು ಸಿಡಿಲಿನ, ಹೊಳಪಿನ ಗುಡುಗನು ಫಳಫಳಿಸಿ ಮಂಜಿನ ರೂಪದ ಮೊಡವ ಕರಗಿಸಿ ನೀರನು ಸುರಿವೆ
ಸನ-ಸನ, ಧನ-ಧನ, ಟಿಪ-ಟಿಪ, ಭರ-ಭರ, ಗಳ-ಗಳ
ಮಳೆರಾಯ ಅಲಂಕಾರದ ಹನಿಗಳಾಗಿ ಧರೆಗೆ ಬರುವೆ.

ಓ ಮಳೆಗಾಲದ ಮಳೆರಾಯ ನೇ
ಭೂಮಿಯಒಡಲ ಬೆರೆತು ನಿಸಗ೯ದ ತವಕವತಣಿಸುವೆ
ಭೂ-ಅಂತಜ೯ಲ ಹೆಚ್ಚಿಸಿ ವಿಕಾಲಕ್ಕೆ ನಿರಾಗಿಸುವೆ
ಭೂ- ವೈವಿಧ್ಯಮಯ ಜೀವಿಗಳಿಗೆ ನವಜಿವವಾಗುವೆ
ಭೂಮಿಯ ಉಳುವ ರೈತನಿಗೆ ಉಸಿರಾಗುವೆ ನೀರಾಗಿ,
ಭೂಮಿಗೆಬಿದ್ದಬಿಜ ಮೋಳಕೆಒಡೆಸಿ ಸಸಿ ಗಿಡವಾಗಿಸುವೆ ಭೂಮಿಪದರು ಹಸಿರಾಗಿಸಿ ಕಂಗೊಳಿಸುವಂತಾಗಿಸುವೆ

ಓ ಮಳೆಗಾಲದ ಮಳೆರಾಯ ನೇ
ವಾತಾವರಣದ ವನ- ಬನದ ಗಿಡ-ಮರ ಚಿಗುರಿಸುವೆ
ವಿವಿಧ ಸಸ್ಯಗಳ ಸವಿ ಹೂ-ಕಾಯಿ ಗೊಂಚಲಿಸುವೆ
ವಲಯ ವಿವಿಧ ಜೀವಿ ಪಾೃಣಿ-ಪಕ್ಷಿಗಳ ವಾಸವಾಗಿಸುವೆ
ಬೆಟ್ಟ ಗುಡ್ಡಗಳಿಂದ ಆ-ಇಕಡೆಯಿಂದ ನೀರು ಹರಿಸುವೆ
ಹರಿದು ಹಳ್ಳ-ಕೊಳ್ಳ ಕೇರೆ-ನದಿ ಸಾಗರಕೆ ಜಲ ಸೆರಿಸುವೆ
ಮಳೆರಾಯ ಭೂಮಿಯ ಹೊಗಳಿಕೆ ನೀ- ಬೆಳೆಸುವೆ
-:ಮಳೆಗಾಲದ ಮಳೆ ರಾಯ:
: -

- rajkumar

09 Jul 2020, 05:34 pm

ಗೆಳತಿ

-ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....

- Subhas Subhas

07 Jul 2020, 07:55 am

ಪ್ರೀತಿ

ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....

- Subhas Subhas

07 Jul 2020, 07:47 am

ನೋಡಿ ಹೃದಯ ಕಂಗಾಲು..

ಅವಳನ್ನು ನೋಡಿ ಯಾರು ಕೆಮ್ಮಾಗಿಲ್ಲ.
ಅವಳು ಯಾರಿಗೂ ಕಮ್ಮಿಯಿಲ್ಲ.
ಬಟ್ಟಲ ಕಣ್ಣವಳು, ನೋಡಿ ಇಟ್ಟೇನು ಬಲಗಾಲು.
ತಾವರೆ ಮೊಗದವಳು, ನೋಡಿ ಹೃದಯ ಕಂಗಾಲು..

ಸೂರೆಯಾದೆನು ನಿನ್ನ ನೋಡಿದ ದಿವಸ.
ನಿನ್ನ ನೋಡೋದು ಬಿಟ್ಟು ನನಗೆ ಬೇರೇನೂ ಕೆಲಸ.
ನನ್ನ ಪ್ರೀತಿ ನಿನಗೆ ಕಣ್ನಗಾವಲು, ನನ್ನಗೆ ನೀ ಮೀಸಲು.
ನನ್ನ ಎದೆಯ ಬಾಗಿಲು ತೆರೆದಿದೆ ನಿನಗೆ ಯಾವಾಗಲು.
ನನ್ನ ಮನಸ್ಸಿನ ಪುಸ್ತಕಕ್ಕೆ ಇಟ್ಟಿಹಯ್ತು ನಿನ್ನ ಶ್ರೀಷಿಕೇ.
ನನ್ನ ಕನಸಲು ಕೂಡ ನಿನ್ನದೇನೆ ಕನವರಿಕ್ಕೆ...

- NaveenkumarK

06 Jul 2020, 11:56 am

ಫೀಲ್ ಮೈ ಲವ್...

ನನ್ನ ಪ್ರೀತಿ  ಸಾಯೋದಿಲ್ಲ ,
ಪ್ರೀತಿಗೆ ಸಾವೇ ಇಲ್ಲ
ಹೇ ಹುಡುಗಿ ನನ್ನ ಪ್ರೀತಿ ನೀನು ಒಪ್ಪಲ್ವ..
ಫೀಲ್ ಮೈ ಲವ್..

ನನ್ನ ಪ್ರೀತಿ ಮೋಸವಲ್ಲ.
ಮೋಸಮಾಡೋದು ಪ್ರೀತಿ ಅಲ್ಲ.
ಹೇ ಹುಡುಗಿ ನನ್ನ ಮನಸ್ಸಿನ ದಾರಿ ನಿನಗೆ ಕಾಣ್ತಿಲ್ವ.
ಫೀಲ್ ಮೈ ಲವ್..

ನನ್ನ ಪ್ರೀತಿ ಸೋಲೊದಿಲ್ಲ.
ಪ್ರೀತಿಗೆ ಸೋಲೇ ಇಲ್ಲ.
ಸೋಲನ್ನು ಸೋಲಿಸೋದು ಪ್ರೀತಿನೇಅಲ್ಲ್ವಾ.
ಫೀಲ್ ಮೈ ಲವ್..

ಏನೋ ಒಂದು ರಾಗವು ಮೂಡಿದೆ ನನ್ನ ಬಾಳಲ್ಲಿ.
ನಿನ್ನ ಅನುರಾಗಕೆ ಕಾಯುತ್ತಿದೆ ನನ್ನ ಮನಸ್ಸಿಲ್ಲಿ.
ಓ ಪ್ರೇಮ , ಓ ಪ್ರೇಮ ಶಾಶ್ವತವಿಪ್ರೇಮ..

ನಿನಂದ್ರೆ ನನಗೆ ತುಂಬಾ ಇಷ್ಟ.
ನೀನಿದಾಗ ನನಗೆ ಬಂದರು ಕಷ್ಟ.
ಆ  ಕಷ್ಟವ ಕೂಡ ಇಷ್ಟವಾಗಿಸುವ ಗುಣವೇ ಈ ಪ್ರೇಮ.

- NaveenkumarK

06 Jul 2020, 11:07 am

ಗುರುಗಳು

ಗುರುವಿನ ಆರಾಧನೆ ನೀಡುವುದು ಮನಸಿಗಾನಂದ
ಗುರುವಿನ ಬೋಧನೆ ತಿಳಿಸುವುದು ಜೀವನದ ಅರ್ಥವನ್ನು
ಅವರ ಆರ್ಶೀವಾದ ವಚನಗಳು ಬಾಳಿಗೆ ದಾರಿ ದೀಪಗಳು
ಆ ದೀಪದ ಬೆಳಗಿನಿಂದಲೇ ಬೆಳಗಬೇಕು ಮನುಕುಲದ ಜೀವನ...

ಅಮ್ಮನೇ ಮೊದಲ ಗುರು ಮೊದಲ ದೈವ
ಶಿಕ್ಷಕರು ಬುನಾದಿ ಹಾಕುವರು ನಮಗೆ
ಆದರ್ಶ ವ್ಯಕ್ತಿಯಿಂದ ನಮಗೆ ಅಡಿಪಾಯಗಳು
ಗುರುವೇ ನಮ್ಮ ಪಾಲಿನ ಆಸ್ತಿ

- RoopaGowtham

05 Jul 2020, 03:26 pm

ಗುರುವಂದನೆ

ಬರಡು ಜೀವನದಲ್ಲಿ ಜ್ಞಾನ ಎಂಬ
ಬೀಜ ಬಿತ್ತಿ ಚಿಗುರು ಹೊಡೆಯುವಂತೆ ಮಾಡಿ, ಸಮಾಜಕ್ಕೆ ಹೂ,ಹಣ್ಣು, ನೆರಳು
ನೀಡುವಂತೆ ಮಾಡಿ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿದ
ಏಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.

- Mahesh Rk

05 Jul 2020, 08:50 am