Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರದ್ದಾಗಿದೆ ನನ್ನಯ ದಿನಚರಿ...

ರದ್ದಾಗಿದೆ ನನ್ನಯ ದಿನಚರಿ.
ನೀ ಖುದ್ದಾಗಿ ಕೊಟ್ಟೆ ನನ್ನ ಹೃದಯಕೆ ಹಾಜರಿ.
ಬದಲಾಯಿತು ನನ್ನಯ ವೈಖರಿ.
ತಿಳಿಯಲಾಗುತಿಲ್ಲ ಏನಿದು ಅಚ್ಚರಿ...

ನನ್ನ ಮನಸ್ಸು ಅಧಿಸೂಚನೆ ಕೊಟ್ಟಯ್ತು. 
ನೀ ನನ್ನವಳು ಎಂದು ಈ ಹೃದಯ ಒಪ್ಪಯ್ತು.
ನಿನ್ನ ನೋಡಲು ನನ್ನ ಕಣ್ಣು ನೆಪ ಹುಡುಕಿತು.
ನಿನ್ನ ಮೆರಸಲು ಮನಸ್ಸು ತನ್ನ ತಾನೇ ಮರೆಯಿತು...

- NaveenkumarK

04 Jul 2020, 10:43 pm

ಇಂತಿಪ್ಪ ಗದ್ದಲದಲ್ಲಿ...

ದೀಪಾ.. ಕತ್ತಲೆಯಲ್ಲಿ ಬಿಕ್ಕಳಿಸಿ ಅಳುತ್ತಿತ್ತು.
ಇನ್ನು ಕತ್ತಲೆ... ದೀಪದ ಸುತ್ತ ವಿಕೃತ ನಗೆ ಬೀರಿ ಕುಣಿಯುತ್ತಿತ್ತು.
ಮಾತುಗಳು... ಮೌನದ ಸಂಧೂಕದ ಸಂಧಿಯಲ್ಲಿ ಬಿಕ್ಕಳಿಸುತ್ತಿದ್ದವು.
ಮೌನದ ಕುಹಕದ ಮಾತುಗಳು ಗಂಟಲನ್ನು ಹಿಚಕುತ್ತಿದ್ದವು.
ದು:ಖವು.. ಸಂತೋಷದ ಒಡಲು ಬಗೆದು ದುಃಖದ ಘೋರಿ ಕಟ್ಟುತ್ತಿತ್ತು.
ಸಂತೋಷವು ತೀರ ತಲುಪಲು ಆಗದೇ ಕೈ ಸೋತು ದುಃಖದ ಸುಳಿವಿನಲಿ ಸಿಲುಕಿ ಒದ್ದಾಡುತ್ತಿತ್ತು.
ನಿಜ ಮತ್ತು ಸುಳ್ಳುಗಳ ಹೋರಾಟದಲ್ಲಿ ಸುಳ್ಳು ತನ್ನ ಬಗ್ಗೆ ಎದೆ ಎದೆ ಬಡೆದುಕೊಂಡು ಕರಪತ್ರ ಹಂಚುತ್ತಿತ್ತು‌.
ಸುಳ್ಳು.. ನಿಜದ ನೆತ್ತಿಯ ಮೇಲೆ ಕುಳಿತು ಸುಳ್ಳೆಂಬ ಸುತ್ತಿಗೆಯಿಂದು ಹೊಡೆಯುತ್ತಿತ್ತು.
ಇಂತಿಪ್ಪ ಗದ್ದಲದಲ್ಲಿ.....
ಬೆಟ್ಟ-ಗುಡ್ಡ ಗಳ ಮೌನದ ರಾಗ ಕೇಳುವವರಾರ?
ಜುಳು- ಜುಳು ಹರಿಯುವ ನದಿಗಳ ನೀನಾದ ಕೇಳುವವರಾರು?
ಗಿಡ-ಗಂಟೆ, ಟೊಂಗೆ- ಎಲೆಗಳ, ಹೂ-ಬಳ್ಳಿಗಳ ಪಿಸುಮಾತು ಕೇಳುವವರಾರು?
ಹಕ್ಕಿ-ಪಿಕ್ಕಿಗಳ ಗುಜು ಗುಜು ಮಾತಗಳ ಕೇಳುವವರಾರು?
ಕತ್ತಲು- ಬೆಳಕಿನ ಜೊತೆ ಲಗೋರಿ ಆಟ ಆಡುವವರಾರು?.

- Siddugouda

04 Jul 2020, 09:02 pm

ಸುಂದರ ಮಸ್ಸಂಜೆ..

ಕಾಲದ ಹಿಂದೆ ಓಡಿತು ಮುಗಿಲು
ಸುಂದರ ಮುಸ್ಸಂಜೆ ವೇಳೆಯಲಿ|
ಅಲೆಗಳ ಚೆಲ್ಲುತ ಸ್ಪಂದಿಸಿತು ಕಡಲು
ಇಂತಹ ಗೋಧೂಳಿಯ ಸಮಯದಲಿ||

ಹಕ್ಕಿಯು ಹಾರಿತು ಗೂಡಿನ ಬಳಿಯೇ
ಒಲವಿನ ಗುಟುಕನು ನೀಡಲು|
ಕೋಗಿಲೆ ಬೆರೆಸಿತು ಇಂಪಾದ ಧ್ವನಿಯ
ಮನುಜರ ಒತ್ತಡ ತಣಿಸಲು||

ಹರಡಿತು ಸುತ್ತಲು ದೀಪದ ಕಾಂತಿ
ಅಷ್ಟಲಕ್ಷ್ಮಿಯರ ಬರಮಾಡಲು|
ಉಳಿಯಿತು ಸಂಸ್ಕೃತಿ, ನೆಲೆಸಿತು ಶಾಂತಿ
ಭಾರತೀಯರ ರಕ್ಷಣೆ ಮಾಡಲು||

- AnanyaHegde

03 Jul 2020, 05:36 pm

ರೋಮಾಂಚನ.

ಹೊಸದೊಂದು ಸುರು ಮಾಡಿದೆ ಕವನ.
ಬರೆಯಲು ಕುಳಿತಿರುವೆ ಈ ಕ್ಷಣ.
ಪದಗಳೆಲ್ಲವು ರೋಮಾಂಚನ...
‌‌‌‌
ಶ್ರೀ ಕಿರಣ್

- KIRAN SIDDANATH

03 Jul 2020, 12:17 pm

ವರ್ಣಮಾಲೆ ಜೀವನ

ಒಲವೇ ಜೀವನ ಒತ್ತುಅಕ್ಷರ
ಗೆಲುವು ಬಾಳಿನ ದೀರ್ಘ ಅಕ್ಷರ
ಸುಖದುಖಃಗಳು ಯೋಗವಾಹಕಗಳು
ನೆಮ್ಮದಿಗೂಂದೆ ಅನುನಾಸಿಕವದು

ಕಖಗಘಙ ಜೀವನದಲ್ಲಿನ ಕಯ್ಯಪಿಯ್ಯ
ಸಾಕು ಸಾಕಯ್ಯ
ಚಛಜಜಞ ಹೊಂದವಣಿಕೆಯೇ ನೆಮ್ಮದಿಯ ಬಾಳಿಗೆ ಇದು ನ್ಯಾಯವಯ್ಯ
ಟಠಡಢಣ ಝಣಝಣ ಕಾಂಚಣ ಬದಲಿಸಿದೆ ಮನುಜನ ಬಣ್ಣ
ತಥದಧನ ಧನಗಕಾಗಿಯೇ ಕದನ ಓ ಮನುಜ ಅದರಿಂದಲೇ ಮರಣ
ಪಫಬಭಮ ಮನಸ್ಸಿಗೆ ಬೇಕು ಪ್ರೀತಿಯ ಅನಾವರಣ
ಯರಲವಶ ಸುತ್ತುವ ಜೀವನ ಪರಿಧಿಯಲ್ಲಿ ಪರಿಚಿತ ಶರ ವೇಗದಿ ಆಗುವ ಅಪರಿಚಿತ
ಷಸಹಳ ನರ ನಾರಿ ಮಣಿಯರ ಸರಪಳಿಯ ಸಲ್ಲಾಪ ಈ ಜೀವನ.....

- RoopaGowtham

02 Jul 2020, 11:08 pm

ಮನಸ್ಸಿನ ಕರೆ....

ನನಗರಿಯದೇ, ನಾ ನಿನ್ನ ಅರಿತೆನು.
ನನ್ನಗೆ ತಿಳಿಯದೆ, ನನ್ನ ನಾನೇ ಮರೆತನು.
ನನ್ನ ಮನಸ್ಸಿಗೆ ಕರೆ ತಂದೆನು.
ನಿನ್ನ ಕಣ್ಣಲೇ ನಾ ಸೆರೆಯಾದೆನು...!

ಬರಲೇನು  ನಾ ನಿನ್ನ ಜೋತೆಗೆ.
ಕೊಡುತ್ತಿಯ ನಿನ್ನ ಕೈ ಹಿಡಿಯುವ ಸಲಿಗೆ.
ನನ್ನ ಕಣ್ಣಾಲ್ಲಿ ನಿನ್ನ ಕಣ್ಣಿಡು ಒಂದು ಘಳಿಗೆ.
ಸಮಯ ಕೈ ಜಾರಿಹೊಗುವದ್ರೋಳಗೆ ...!

- NaveenkumarK

02 Jul 2020, 07:04 pm

ಅನುರಾಗದ ಅಲೆಮಾರಿ...

ಅನುರಾಗದ..
ಆಕ್ರಮಣದ ಆರಂಭವೇ ಅತಿಯಾಗಿದೆ .
ಆಲೋಚನೆಯ ಆಗಮನವೇ ಆಹುತಿಯಾಗಿದೆ .
ಅದರಕ್ಕೆ ಅದರದ ಆಲಿಂಗನವೇ ಅಮಂತ್ರಣ.
ಆಕರ್ಷಿತ ಅನ್ವೇಷಣೆಯ ಅಪರೂಪದ ಆಲೋಚನೆ .
ಅತಿ ಆಳದಿ ಅಮಲೇರಿಸುವ ಅನುರಾಗದ ಅಲಪನೆ.
ಅನುರಾಗದ ಅವಲಂಬಿತ ಆದೇಶ.
ಆಶ್ಚರದಿ ಅನುಸರಿಸುವ ಆಕ್ರೋಶ.
ಅವರಿಸು ಅನುದಿನವು ಆಕ್ರಮಿಸು .
ಅನುಸರಿಸು ಅಗಾಗ  ಅಪಹರಿಸು .
ಆರಾದಿಸ್ಸು ಅನುಕ್ಷಣವೂ ಆಮೋದಿಸು.
ಅನುಕರಿಸು ಆಗಾಗ ಅವಲಂಂಬಿಸು...

- NaveenkumarK

02 Jul 2020, 05:33 pm

ಸರಳ ಬದುಕು...

ಲತೆಗಳ ನಡುವೆ ಅಂಕುರ ಮೂಡಲು
ಪರಿತಪಿಸಿತು ಕಣ್ಗಳ ತೆರೆಯಲು|
ಕಿಂಚಿತ್ತು ಸಮಯ ರಾತ್ರಿಯ ಕಳೆಯಲು
ಯೋಜನೆಯ ಹೂಡಿತು ಭವಿಷ್ಯವ ರಚಿಸಲು||

ಭೂಮಿಗೆ ತಲುಪಲು ಸೂರ್ಯನ ಕಿರಣವು
ಶೀಘ್ರದಿ ತಾಗಿತು ಹುರುಪಿನ ಸ್ಪರ್ಶವು|
ದಳಗಳ ತೆರೆಯುತ ಅರಳಿತು ಪುಷ್ಪವು
ವಿಸ್ಮಯವೆನಿಸಿತು ಸೃಜನಾತ್ಮಕ ಲೋಕವು||

ಕಂಪನು ಬೀರಿತು ಪತಂಗವ ಸೆಳೆಯಲು
ಸೌಂದರ್ಯವ ತೋರಿತು ಗುರುತಿಸಿಕೊಳ್ಳಲು|
ಸಜ್ಜಾಗಿ ನಿಂತಿತು ಹೂಮಾಲೆಯಾಗಲು
ಹರುಷದಿ ತೇಲಿತು ಶ್ರೀ ಚರಣವ ಸೇರಲು||

- AnanyaHegde

01 Jul 2020, 11:57 pm

ಖಾಲಿ ಬಾನಿನ ಚಂದಿರ ಅವಳು...

ಖಾಲಿ ಬಾನಿನ ಚಂದಿರ ಅವಳು , ನಾ ಕಾದುಕುಲಿತೆನಲ್ಲ .
ಕನಸು ಕಾಣೂ ಕಣ್ಣಿಗೆ ಯಾಕೊ ಕನಸು ಬೀಳಲಿಲ್ಲ . 
ಖಾಲಿ ಇರುವ ಮನಸ್ಸಿಗೆ ಯಾಕೊ ಅವಳು ಕಾಲು ಇಡಲಿಲ್ಲ .
ಅಮಾವಾಸ್ಯ ದಿನ ಚಂದ್ರನ ತೋರಿಸುವೆ ಎಂದು ಕೈಯ ಕೊಟ್ಟಳಲ್ಲ ... 

ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ...

- NaveenkumarK

01 Jul 2020, 10:53 pm

ಮರೆಯಲಾಗದ ನೆನಪು ನೀನು

ನನ್ನ ಹೃದಯದಲ್ಲಿ ಉಳಿದಿರುವೆ ಆಕಾಶದ ಚುಕ್ಕಿಯ ಹಾಗೆ,,,
ನಿನ್ನ ಪ್ರೇಮದಕಡಲಲ್ಲಿ ನಾನೆಂದು ಜೀವಂತವಿರುವ,,
ನೀ ಬರುವೆಯೆಂದು,,ಈ
ಹೃದಯವ ಅಪ್ಪುವೆಯ ಎಂದು,, ನನ್ನುಸಿರಿನ ಕೊನೆಕ್ಷಣದಲ್ಲು ನಾ ಕಾಯುವೆ ನಿನ್ನ ಹಿಡಿ ಪ್ರೀತಿಗಾಗಿ,,,,
,,,,,,,,,,,,,ಗೆಳತಿ ( ˘ ³˘)♥

- Parashuram2337

01 Jul 2020, 08:14 pm