Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆಯಲಾಗದ ನೆನಪು ನೀನು

ನನ್ನ ಹೃದಯದಲ್ಲಿ ಉಳಿದಿರುವೆ ಆಕಾಶದ ಚುಕ್ಕಿಯ ಹಾಗೆ,,,
ನಿನ್ನ ಪ್ರೇಮದಕಡಲಲ್ಲಿ ನಾನೆಂದು ಜೀವಂತವಿರುವ,,
ನೀ ಬರುವೆಯೆಂದು,,ಈ
ಹೃದಯವ ಅಪ್ಪುವೆಯ ಎಂದು,, ನನ್ನುಸಿರಿನ ಕೊನೆಕ್ಷಣದಲ್ಲು ನಾ ಕಾಯುವೆ ನಿನ್ನ ಹಿಡಿ ಪ್ರೀತಿಗಾಗಿ,,,,
,,,,,,,,,,,,,ಗೆಳತಿ ( ˘ ³˘)♥

- Parashuram2337

01 Jul 2020, 08:14 pm

ಅಂತರ

ನೋಟದಲ್ಲೆ
ಭಾವನೆಗಳ ಕೆರಳಿಸೋ
ನನ್ನ ಮನದರಸಿ
ಮೈದುಂಬಿಕೊಂಡು
ಮನೆತುಂಬಾ ಅಡ್ಡಾಡುತ್ತಾ
ಮಾದಕವಾಗಿ ಎನ್ನ
ಸೆಳೆಯುವಾಗ
ಎಲ್ಲಿಹುದು ಅಂತರ...!

- Yashaswi Gowda

01 Jul 2020, 06:08 pm

ಬದುಕು

ಒಬ್ಬ ವ್ಯಕ್ತಿ ಎಷ್ಟು ಕಷ್ಟಪಟ್ಟು ದುಡಿತ ಇರುತ್ತಾನೆ.
ಆದರೆ ಹೊರಗಿನ ಜನಕ್ಕೆ ಅವನ ಕಷ್ಟಗಳ ಅರ್ಥ ಆಗೋದಿಲ್ಲ.
ಆದರೆ ಕಷ್ಟಪಟ್ಟು ಮುಂದೆ ಬಂದಿರುತ್ತಾನೆ.
ಜನರು ಅವರನ್ನು ನೋಡಿ ಹೊಟ್ಟೆ ಉರಿ ಕೊಳ್ಳುತ್ತಾರೆ.

ದೊಡ್ಡವರು ಹೇಳಿದ್ದಾರೆ . ಕೈ ಕೆಸರಾದರೆ ಬಾಯಿ ಮೊಸರು.
ಕಷ್ಟಪಟ್ಟು ದುಡಿ ಮುಂದೆ ಬರುತ್ತೀಯ.
ಇಷ್ಟಪಟ್ಟು ದುಡಿ ಮುಂದೆ ಸಾಧನೆ ಮಾಡುತಿಯ.
ಬದುಕು ಎಷ್ಟು ಕಷ್ಟ.
ನೀವು ದುಡಿಯಿರಿ . ಬೇರೆಯವರನ್ನು ಬದುಕಲು ಬಿಡಿ.
ಬದುಕು .


ಇದು ಕವನ ಅಲ್ಲ . ಇದು ಜೀವನದ ಬದುಕು.

ಇಂತಿ ನಿಮ್ಮ ಪ್ರೀತಿಯ
Sri

- Srikanth A

01 Jul 2020, 09:32 am

ಪ್ರೀತಿ ತಂತಿ ನಾ ಶ್ರುತಿ

ನೀ ಮಿಡಿಯುವ ತಂತಿಗೆ
ನಾ ಶ್ರುತಿಯಾಗಿ
ಭಾವನೆಗಳನು ಮೈಗೂಡಿಸಿ
ಹಾಡುವೆ ರಾಗದಿ ಅನುದಿನ

ನಿನ್ನಯ ನೋಟಕೆ
ಸೋತಿತು ಈ ಮನ
ಕದಡಿತು ಚಿತ್ತ ಚಂಚಲ
ನಿನ್ನಯ ಒಲವು ತಂದಿದೆ ನೂರು
ಕನಸಿನ ಮಹಲಿನ ಹಂದರ

ಏನನು ನುಡಿವೆ ನುಡಿಯೋ ನಲ್ಲ
ಕಾಯ್ದಿರುವೆ ನಿನ್ನ ನುಡಿಗಾಗಿ
ನುಡಿಯದೆ ನೀನು ಮೌನಿಯಾದರೆ
ಒಡೆವುದು ಹೃದಯ ಚೂರಾಗಿ

-ಇಂದಿರಾ ಸಾತನೂರ

- IndiraSatnoor

01 Jul 2020, 07:45 am

ಸಾವು.....ಪ್ರೀತಿ

ಸಾವು ನನ್ನನ್ನು ಕೇಳಿತು
ನಾನು ನಿನ್ನನ್ನು ಆವರಿಸಲೇ ಎಂದು
ಅದಕ್ಕೆ ನಾನು ಹೇಳಿದೆ
ತಾಳು ನನ್ನನ್ನು ನಾನು ಸಾಯಿಸುವವರೆಗೂ ನೀನು ನನ್ನನ್ನು ಆವರಿಸದಿರು
ಸಾರಾಂಶ ಇಷ್ಟೇ....
ನಿನ್ನನ್ನ ನೀನು ಎಲ್ಲಿಯವರೆಗೂ ಪ್ರೀತಿಸುವುದಿಲ್ಲವೋ
ಸಾವು ಯಾವ ದಾರಿಯಿಂದಲಾದ್ರು ಬರ್ಬೋದು
-ಇಂದಿರಾ ಸಾತನೂರ

- IndiraSatnoor

01 Jul 2020, 07:36 am

ವರದಕ್ಷಿಣೆ

ಹುಡುಗಿಯ ನೋಡಲೋಗಿದ್ದೆ ಪರ ಊರಿಗೆ
ಮದುವೆ ಮಾಡಿಸಿಕೊಳ್ಳಬೇಕಾಗಿದ್ದು ನನ್ನ ಗೆಳೆಯನಿಗೆ
ಮನೆಯಲ್ಲಿ ಕಡು ಬಡತನವಿದ್ದರೂ
ಮನೆ-ಮನ ನಂದಗೋಕುಲ
ಮಲ್ಲಿಗೆಯ ಮೊಗದಿಂದ ಕರೆದಾದರಿಸಿ ಉಪಚರಿಸಲು
ಆ ವೃದ್ಧ ತಾಯ್ತಂದೆಗಳ ವಿನಃ ಇರಲಿಲ್ಲ ಬೇರಾರು
ಕಾಫಿಯ ಬಟ್ಟಲನಿಡಿದು ಹೂರಬಂದಳು ನಾಚುತ್ತಾ ಹುಡುಗಿ
ರೂಪವತಿಯಾದ ಅವಳ ನೋಟಕ್ಕೆ ಮನಸೋತು
ತಲೆದೂಗಿದ ನನ್ನ ಗೆಳೆಯ
ಸಂಬಂಧ ಬೆಳೆಯಿತೆನ್ನುವಷ್ಟರಲ್ಲಿ ಶಿವಪೂಜೆಗೆ ಹೂಕ್ಕ
ಕರಡಿಯಾಗಿದ್ದು ವರದಕ್ಷಿಣೆ
ಕೂಡಲಷ್ಟು ಸಾಧ್ಯವಾಗದು ನನ್ನಿಂದ ನುಡಿದ
ಆ ವೃದ್ಧ ತತ್ತರಿಸಿ ತೊದಲುತ್ತಾ
ಮಾತನಾಡಲು ಅಲ್ಲಿ ಇರಲಿಲ್ಲ ಅವಕಾಶ
ಸಾವಿರವಿರಲಿ, ಲಕ್ಷದ ಒಳಗೆ!
ಹೊರಟೇಬಿಟ್ಟ ಮಿತ್ರ ಕತ್ತಲೆಯ ಮಡುವಿಗಟ್ಟಿ
ಪಶ್ಚಿಮಾಂಬದಿಯ ಕಡೆಗೆ
ಅವನ ಕಣ್ ಮನಗಳಲಿದ್ದದು ಗುಣವಾಗಿರದೆ ಹಣ! ಹಣ! ಹಣ!
ಆವರೆಗೂ ನಂದಗೋಕುಲವೆನಿಸುತ್ತಿದ್ದ
ಮನೆ-ಮನ ಒಮ್ಮಿಗೆ ಆವರಿಸಿದ್ದು ಮೌನ!
ಕಿಕ್ಕಿರಿದು ಮೋಡಗಳು ಹನಿಯಾದವು
ಅವಳ ಕಣ್ಗಳಲಿ ಆ ತನಕ ಮೌನಿಯಾಗಿದ್ದ ನನ್ನ ಮನ
ಅನ್ಯಾಯವೆಂದು ಸಾರಿ ಸಾರಿ ಹೇಳುತ್ತಿದ್ದರೂ
ವರದಕ್ಷಿಣಾ ನಿರ್ಮೂಲನಾ ದಿನವನ್ನು ಎದುರು ಸ್ವಾಗತಿಸಿ
ಬಲು ಭಾರವಾದ ಮನವಹೊತ್ತು ನಿಸ್ಸಾಹಾಯಕನಾಗಿ
ಹೆಜ್ಜೆಗಳ ಕಿತ್ತೆ ನನ್ನೂರಿನತ್ತಾ

- ಕುಂತೂರು ತ ಸುಬ್ರಹ್ಮಣ್ಯ
9482119447

- Subramanya K T

30 Jun 2020, 08:25 pm

ಮಾಯಾಮೃಗ

ಕಣ್ಣಿಗೆ ಕಾಣದ ಮಾಯಾಮೃಗ
ತಣಿಸಿದೆ ನನ್ನ ಮನದೂಡಲ
ಮನಸ್ಸನಲ್ಲೀಗ ಹಾಲಾಹಲ
ಓ ನನ್ನ ಮಾಯಾಮೃಗ ಬಾ ಸೇರು ನನ್ನೂಡಲ..

ಪ್ರಕೃತಿಗಿಲ್ಲ ಯಾವ ಚೆಲುವಿನ ಸರಿಸಾಟಿ
ನಿನ್ನ ಪ್ರೀತಿಗೆ ಯಾರು ನೀಡಬಲ್ಲರು ಪೈಪೋಟಿ
ಎಲ್ಲರೊಂದಿಗೆ ತರಲೆ ಮಾಡುವ ನೀನು ತುಂಟಿ
ನಿನ್ನ ನೋಡಿ ನನಗನಿಸಿದೆ ಆಗಬೇಕೆಂದು ನಿನ್ನ ಜಂಟಿ....

ಸಂಸಾರದ ಸಾಗರದಲ್ಲಿ ಈಜುತಿರುವ ಮನುಜ
ತೇಲು ಮುಳುಗುಗಳು ಸಾಗರದ ಅಲೆಯಂತೆ ಜೀವನದಲ್ಲು ಸಹಜ
ಎಲ್ಲವನ್ನು ಬಂದಂತೆ ಸ್ವೀಕರಿಸಿದರೆ ಸಿಗುವುದು ಸಂಬಂಧ ಖಚಿತ
ಮನ ಬಂದಂತೆ ನಡೆಯಲು ಅನುಚಿತವಾದರೆ ಮುಳ್ಳಿನಂತ ಚುಚ್ಚುಮಾತು ಉಚಿತ...

- RoopaGowtham

29 Jun 2020, 04:50 pm

ಅವಳಿರುವಳೆಂದು

ಕನಸ್ಸಿನಲ್ಲಿ ಬಂದವಳ ಕಾಣಲು
ಪರಿ ತಪಿಸುತ್ತಿರುವ ಮನಸ್ಸಿಗೆ!
ಕನಸಲ್ಲಿ ಬದವಳು ವಾಸ್ತವವಲ್ಲವೆಂದು
ತಿಳಿಯದೇಕೆ.......?

ಅವಳು ಬಂದೆ ಬರುವಳೆಂಬ ಗೋಜಿಗೆ
ಈ ಹುಚ್ಚು ಮನಸ್ಸು ಸಿಲಿಕಿರುವುದಾದರುಯೇಕೆ
ಬಿಡಿಸಿದ ಚಿತ್ರ ಬರೀ ಹಾಳೆಯ ಮೇಲೆ..
ಚಿತ್ರಿಸಿದ ಕಲ್ಪನೆಯಸ್ಟೆ. ನಿಜವಲ್ಲವಲಲ್ಲ

ಆದರೂ ಕಾಣದ ಒಲವೊಂದು.....
ಚುಚ್ಚುತ್ತಿದೆ ನನ್ನೆದೆಯ ಅವಳಿರುವಳೆಂದು!!


ಮಂಜು

- ಮಂಜು

29 Jun 2020, 09:57 am

ದೇವರ ವಿಳಾಸ...??!

ನನ್ನ ಅಮ್ಮನನ್ನು ಮನೆಗೆ
ಮರಳಿ ಕರೆತರಬೇಕಿದೆ..!
ಅವಳ ಇಂಪಿನ ಧ್ವನಿಯಲಿ
ಜೋಲಾಲಿ ಕೇಳಬೇಕಿದೆ..!
ದಿನವೂ ಕಂಬನಿಯನೇ
ಕಂಡಿರುವ ಈ ಕೆನ್ನೆಗೆ ಅವಳ
ಕೈಯೊಮ್ಮೆ ತಾಕಬೇಕಿದೆ..!
ಯಾರಾದರೂ ದಯವಿಟ್ಟು
ತಿಳಿಸಿಕೊಡಿ ಆ ದೇವರ ವಿಳಾಸ..!
ಇಂದೇ ಹೋರಡುವೆ ನಾನು
ಹುಡುಕಲು ಅವನ ನಿವಾಸ..!!

ನನ್ನ ಅಮ್ಮನನ್ನು ಮನೆಗೆ
ಮರಳಿ ಕರೆತರಬೇಕಿದೆ..!
ಅಮ್ಮ ನನ್ನನ್ನು ಮತ್ತೊಮ್ಮೆ
ಲಾಲಿಸುತಲಿ ಮುದ್ದಿಸಬೇಕಿದೆ..!
ಅಮ್ಮನ ಮಡಿಲಲಿ ನಾನು
ಮಗದೊಮ್ಮೆ ನಿದ್ರಿಸಬೇಕಿದೆ..!
ಅಮ್ಮ ಹೇಳಿಕೊಟ್ಟಿರುವ
ಆಕಾಶದಲ್ಲಿನ ನಕ್ಷತ್ರಗಳ
ರಂಗೋಲಿಯನು ನನ್ನಯ
ಕೈಯಿಂದ ಮತ್ತೆ ತಿದ್ದಬೇಕಿದೆ..!

ನನ್ನ ಅಮ್ಮನನ್ನು ಮನೆಗೆ
ಮರಳಿ ಕರೆತರಬೇಕಿದೆ..!
ಅವಳ ಸುಂದರ ಮೊಗದಲಿ
ತುಸು ನಗುವ ಕಾಣಬೇಕಿದೆ..!
ಎದೆಯಮೃತ ಉಣಿಸಿದವಳಿಗೆ
ನಾ ಕೈ ತುತ್ತು ತಿನಿಸಬೇಕಿದೆ..!
ನವಮಾಸ ಹೊತ್ತು ಹೆತ್ತವಳ
ಸೇವೆಯನು ನಾ ಮಾಡಬೇಕಿದೆ..!
ಅವಳ ಪವಿತ್ರ ಚರಣಕಮಲಗಳಲಿ
ಸ್ವರ್ಗವನು ನಾ ನೋಡಬೇಕಿದೆ.!
ಯಾರಾದರೂ ದಯವಿಟ್ಟು
ತಿಳಿಸಿಕೊಡಿ ಆ ದೇವರ ವಿಳಾಸ..!
ಇಂದೇ ಹೋರಡುವೆ ನಾನು
ಹುಡುಕಲು ಅವನ ನಿವಾಸ..!!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

28 Jun 2020, 07:13 pm

ದಿಟ್ಟತನ...

ದಿಟ್ಟತನವಿದ್ದರೆ ಮಾತ್ರ
ಈ ದಿನಗಳಲ್ಲಿ
ಗಟ್ಟಿಯಾಗಿ ನೆಲೆಯೂರಲು ಸಾಧ್ಯ..
ಇಲ್ಲವೆಂದರೆ..
ತೊಟ್ಟಿಗೆ ಕಸದಂತೆ ತುಳಿಯುವರು..
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

28 Jun 2020, 12:04 pm