ಮನವೆಂಬ ದೇಗುಲದಿ ಸುಂದರ ಮೂರ್ತಿ ನೀನು
ನಿನ್ನನ್ನೆ ಪೂಜಿಸುವ ಪ್ರೀತಿ ದಾಸ ನಾನು
ನಮ್ಮಿಬ್ಬರ ಜೀವನ ಹಾಲು ಜೇನು
ದುಃಖದ ಕಹಿಯು ನನಗಿರಲಿ ಸುಖದ ಸವಿಯು ನಿನಗಿರಲಿ ನಿನೆಂದು ಆಗಿರು ಜೇನಿನ ಹನಿ...
ಜೀವನದ ಈ ಪಯಣವು ಹೂ ಮುಳ್ಳುಗಳ ತೋಟ
ಇದರಲ್ಲಿ ಸುರಕ್ಷಿತವಾಗಲು ಅವಶ್ಯ ನಿನ್ನ ತೀಕ್ಷ್ಣವಾದ ನೋಟ
ಆಡದಿರು ಬದುಕಿನಲಿ ಚೆಲ್ಲಾಟ ನಿನಗೆ ಬರದಿರಲಿ ಯಾವುದೆ ಸಂಕಟ
ಜಂಜಾಟವಿಲ್ಲದೆ ಉಲ್ಲಾಸದಿಂದಿರು ನನ್ನ ಉಯಸಿರಿನ ಮರ್ಕಟ
ಮಾಯಾವಿ ಬರುವಳು ಕದ್ದೂಯಲು ನಮ್ಮ ನಗುವ
ಅವಳಿಗೆ ಕಲಿಸು ನೀ ಒಳ್ಳೆಯ ಪಾಠವ
ಹೆದರಿ ಓಡಬೇಕು ಅವಳು ನೋಡಿ ನಮ್ಮ ಧೈರ್ಯವ
ನಮ್ಮೊಲವೆ ನಮ್ಮ ಗೆಲುವಿನ ಕಾರಣ ಇದುವೆ ಸಂಸಾರದ ಹೊಂಗಿರಣ
ಬದುಕು ಬಿಡುತ್ತಿಲ್ಲ
ಸಾವಿನೊಂದಿಗೆ ಸೇರಲು
ಅಸಹನೀಯವಾಗುತ್ತಿದೆ
ಬದುಕಿನೊಂದಿಗೆ ಇರಲು
ಸದಾ ಕಲಿಸುತ್ತಿದೆ
ನಿಷ್ಠುರತೆ ಕಲಿಕೆಯ ತಿರುಳು
ಬದುಕಿನೊಂದಿಗೆ ನೀನಿರಲು
ಬೀಳುವುದು ನಿಸ್ಪ್ರಯೋಜಕತೆಯ ನೆರಳು
ನಿಮಗಿದು ತಿಳಿಯದು
ಇದುವೇ ಬದುಕು ನೀಡುವ ಸವಾಲು
ಗ್ರಹಚಾರ....
ಯಾವ ಜನ್ಮದ ಪಾಪದ ಫಲವೋ
ಈ ಜನ್ಮದಲಿ ಅನುಭವಿಸುತ್ತಿರುವೆ
ಎಲ್ಲಾ ಇದ್ದೂ ಇಲ್ಲದವನಂತೆ
ಹೀನ ಬದುಕ ಬದುಕುತ್ತಿರುವೆ
ಜನ್ಮ ನೀಡಿದವರು ನನ್ನಿಂದ ದೂರಾಗುವಂತೆ
ನೀ ಮಾಡಿರುವೆ
ನಿನ್ನ ಲೆಕ್ಕಾಚಾರ ಯಾರಿಗೂ ತಿಳಿಯದಂತೆ
ಅದು ನಿನ್ನ ಗ್ರಹಚಾರ ಎಂದು ತಿಳಿ ಹೇಳಿರುವೆ
ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....