Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಗಲು ಕನಸು

ಮುಸಂಜೆ ಹೊತ್ತಲ್ಲಿ
ಸೂರ್ಯ ಮುಳುಗುವ ಸಮಯದಲ್ಲಿ
ಕುಳಿತಿದ್ದೆ ಊರ ಮುಂದಿನ ಕೆರೆಯ ಕಟ್ಟೆಯಮೆಲೆ ನಿನ್ನ ಬಿಂಬವು ನೀರಿನಲ್ಲಿ
ಕಂಡಾಗ ಹಾರಿದೆ ನೀರಿನಲ್ಲಿ ಆಗ ತಿಳಿಯಿತು ನಾ ಕಂಡದ್ದು ಹಗಲು ಕನಸೆಂದು ಯಾಕೆ ಕಾಡುವೆ ಎಡೆಬಿಡದೆ ಒ ನನ್ನ ಮುದ್ದು ಚಲುವೆ

- ರಾಮು ಎಸ್

23 Jun 2020, 05:02 am

ಹೈಕುಗಳು...

ಹೈಕುಗಳು...

-1-
ಹುಟ್ಟಿ ಬಂದನು
ಜಗದೋದ್ಧಾರಕ್ಕಾಗಿ
ದೇವಕಿ ಕಂದ..

-2-
ಮೆಟ್ಟಿ ನಿಂದನು
ಸಕಲ ಕರ್ಮಗಳ
ಒಲವಿನಿಂದ..

-3-
ಗೋಪಿಕೆಯರ
ಮನವನು ಕದ್ದನು
ಮುರಳಿಯಿಂದ..

-4-
ಪ್ರೇಮಿಸಿದನು
ರಾಧೆಯ ಮನವ
ಕರುಳಿನಿಂದ...

- ಸಿದ್ದುಕನ್ನಡಿಗ

- - ಸಿದ್ದು ಕನ್ನಡಿಗ

22 Jun 2020, 09:19 pm

ನಿನ್ನೋಟ್ಟಿಗೆ ಬದುಕುವಾಸೆ

ಕಡಲ ಒಡಲೊಳಗೆ ಚಿಪ್ಪೊಡದ ಮುತ್ತಿನಂತೆ, ನನ್ನ ಎದೆಯ ಕಡಲಲ್ಲಿ ನೀ ಮುತ್ತಾದೆ.
ಕನಸ್ಸಿನಲ್ಲೂ ನನ್ನ ಮನವು ಪ್ರತಿ ಕ್ಷಣವು ನಿನ್ನನ್ನೇ ಜಪಿಸುತ್ತಿದೆ..!

ನನ್ನ ಎದೆಯ ತುಂಬಾ ನಿನ್ನ ಭಾವ ಚಿತ್ರ ಬಿಡಿಸಿ,
ಮುಗಿಲನ್ನೇ ತಂದು ನೀಡಿ, ಮುದ್ದು ಮುದ್ದಾಗಿ ಮುತ್ತಿಡುವಾಸೆ,
ರಂಗು ರಂಗಿನ ಕಾಮನಬಿಲ್ಲನ್ನು ಉಡುಗೊರೆಯಾಗಿ ನೀಡುವಾಸೆ,
ನಿನ್ನ ಕೈ ಹಿಡದು ಅನುಗಾಲ ಕೂಡಿ ಬಾಳುವಾಸೆ,
ಬಾನಿನ ಎತ್ತರಕ್ಕೂ ಕೈಚಾಚಿ ಹೇಳುವಾಸೆ.

ಕೊನೆಯವರೆಗೂ,,,, ನೀನ್ನೋಟ್ಟಿಗೆ ಬದುಕುವಾಸೆ, ನೀನ್ನೋಟ್ಟಿಗೆ ಬದುಕುವಾಸೆ....!

- Ranjan Ranjan

22 Jun 2020, 04:15 pm

ಲಗ್ಗೆ ಇಟ್ಟಳು ಒಂದೇ ಏಟಿಗೆ...!

ನೀ ಪರಿಚಯವಾದ ಮೇಲೆ ನಲ್ಲೆ.
ಎಲ್ಲಾರಿಗೂ ಅಪರಿಚಿತನದನಲ್ಲೇ.

ಈ ಕಣ್ಣಾ ಬೇಟೆಗೆ, ಯಾರಿಹರು ನಿನ್ನ ಕಣ್ಣಾ ಸಾಟಿಗೆ.
ಮನಸ್ಸೆಂಭ ಕೋಟೆಗೆ, ಲಗ್ಗೆ ಇಟ್ಟಳು ಒಂದೇ ಏಟಿಗೆ.

ಅನುರೀಕ್ಷಿತ ಬೆಳವಣಿಗೆಗೆ, ಘೋಷಿತವಾಗಿ ತೆರೆ ಎಳೆದವಳೇ.
ಆಕರ್ಷಿತ ಕಣ್ಣಾ ಕರೆಗೆ, ದೇವತೆಯಾಗಿ ಮನ ಹೊಕ್ಕವಳೇ.

- NaveenkumarK

22 Jun 2020, 10:34 am

ಮಳೆ ಕವನ

ಮುಂಗಾರು ಮಳೆ ಹನಿಯ ಸಿಂಚನ
ಭುವಿಗೆ ಆಗಮಿಸಿದ ಮಳೆರಾಯನ
ಪಯಣ.........

ಭುವಿಗೆ ತಂಪಾದ ವಾತಾವರಣ
ಎಲ್ಲಾ ಮನಸುಗಳ ರೋಮಾಂಚನ
ತಲೆದೂಗಿದ ಮರ ಬಳ್ಳಿಯ ತೋರಣ
ಅಂಗಳದಲ್ಲಿ ನೀರು ಗುಳ್ಳೆಗಳ ಚೆಲ್ಲಾಟ
ನಲ್ಲೆ ನಲ್ಲೆಯರ ಜೊತೆ ಪ್ರೇಮದಾಟ

ಮುಂಗಾರುಮಳೆ ಏನು ವರ್ಣಿಸಲಿ
ನಿನ್ನ ಬರುವಿಕೆಗೆ, ಅಂದಕೆ ಬೆರಗಾದೆ
ಎಲ್ಲರಿಗೂ ಬೇಕಾಗುವ ಉತ್ಸಾಹದ ಚಿಲುಮೆಯಾದೆ.....
ಬದಲಾವಣೆಯ ಸಂಕುಲಕ್ಕೆ ಸಾಕ್ಷಿಯಾದೆ

- M S Yadav

22 Jun 2020, 09:06 am

ನಿನ್ನ ನಾ ಮರೆಯಲೆಂದು ನನ್ನ ಎದೆಯ ಕಲ್ಲಾಗಿ ಮಾಡಿ ಕೊಂಡರೆ..

ನಿನ್ನ ನಾ ಮರೆಯಲೆಂದು
ನನ್ನ ಎದೆಯ ಕಲ್ಲಾಗಿ ಮಾಡಿ ಕೊಂಡರೆ
ಕಲ್ಲೇ ಶಿಲೆಯಾಗಿ ಶಿಲೆಯೇ
ನಿನ್ನ ಪ್ರತಿ ರೂಪವಾದರೇ
ನಾ ಹೇಗೆ ಮರೆಯಲಿ ಗೆಳತಿ
ನಿನ್ನ ಆ ನೆನಪುಗಳನ್ನಾ....

- Jaya Kumar

22 Jun 2020, 08:41 am

ಕಾದು ಕುಳಿತಿರುವೆ ನಿನ್ನ ನೋಡಲು

ಕಾದು ಕುಳಿತಿರುವೆ ಗೆಳತಿ
ನಾನು ನಿನ್ನ ನೋಡಲು ಅಲ್ಲ
ಸಿಗದ ನಿನ್ನ ಪ್ರೀತಿಯ ತುಸು ಮಾತಿಗೆ
ಹುಚ್ಚು ಪ್ರೀತಿಯ ಪೆದ್ದು ಮನಸ್ಸು
2337

- Parashuram2337

21 Jun 2020, 09:16 pm

ದಿನಕ್ಕೊಂದು ಕವನ

ದಿನಕ್ಕೊಂದು ಕವನ
ನಿನ್ನ ನೆನಪೇ ಅದಕ್ಕೆ ಕಾರಣ,
ಬರೆದು ಹೇಳುವೇ ನಮನ,
ನಿನ್ನ ಪ್ರೀತಿಸುವುದು ನನ್ನ ಮನ,
ನನ್ನ ಪ್ರತಿ ಕ್ಷಣ ನಿನದೇ ಗಮನ

- Ananda J U

21 Jun 2020, 08:23 pm

ನೋವು

ನೀನು ಕಾಣದೆ
ಏಕೆ ಮರೆಯಾದೆ
ಸದ್ದಿಲ್ಲದೆ ನಾನು ಮೌನವಾದೆ
ನೋವಿನ ಅಂಚಿನಲ್ಲಿ ಸೆರೆಯಾದೆ
ಪ್ರತಿ ಕಾರ್ಯದಲ್ಲೂ ನಿಶಕ್ತನಾದೆ
ಪ್ರತಿನಿತ್ಯವೂ ಚಂಚಲಾನಾದೆ
ಏಕೆ ಹೀಗೆ ಆದೆ
ನಿಜಕ್ಕೂ ನಾನು ಇದ್ದು ಕಾಣೆಯಾದೆ
ಬದುಕಲ್ಲಿ ನಿಷ್ಕ್ರಿಯವಾದೆ

- Shivakumara S

21 Jun 2020, 06:42 pm

ಅಪ್ಪ

ಸಿರಿವಂತನಲ್ಲ‌ ಎನ್ನ ತಂದೆ
ಇದ್ದುದರಲ್ಲಿ ಬದುಕಲು ಹೇಳಿಕೊಟ್ಟ ಧೀಮಂತನು
ಸ್ವಾಭಿಮಾನಿತ್ವ ಮನದಲ್ಲಿ ಬೆಳೆಸಿದ ಮಹನೀಯನು

ಕನಸುಗಳ ರೂವಾರಿಯಾದವನು
ಪ್ರಥಮ ಹೆಜ್ಜೆ ಗುರುತಿನ ಜೊತೆ ನಿಂತವನು
ಅತ್ತು ಸೋತಾಗ ಧೈರ್ಯ ತುಂಬಿದ ಅಗಾಧ ಶಕ್ತಿ

ಆಕಾಶ ಚುಂಬನ ಪ್ರೀತಿಯಿರೆ
ಮೊಗದಲ್ಲಿ ಗಂಭೀರತೆಯ ಪರದೆ ಇರಿಸಿದವರು
ಮೌನವಾಗಿ ನೋವನ್ನೆಲ್ಲ ತನ್ನ ಮನದಲ್ಲಿ ಇಟ್ಟವನು

ಕಂಡು ಕಾಣದ ತ್ಯಾಗಮಯೀ
ಜೀವನವೆಲ್ಲ ತನ್ನವರಿಗಾಗಿ ದುಡಿದ ಕಾಯಕಯೋಗಿ
ಶಿಸ್ತಿನ ಪಾಠದ ಮೊದಲ ಗುರು ಅಪ್ಪ......!!

- Yashaswi Gowda

21 Jun 2020, 03:33 pm