ನಿಯಂತ್ರಣದಲ್ಲಡಬಹುದಿತ್ತು ಕೋರೋನ ವೈರಸ್ ನನ್ನು
ಆದರೆ ಸಡಿಲಿಸಿದರು ಲಾಕ್ ಡೌನ್ ನನ್ನು
ಇದರಿಂದ ಹಸಿರು ಕೂಡ ಕೆಂಪಾಯಿತು
ಮಾಡಿದ ಪ್ರಯತ್ನಗಳು ವಿಫಲವಾಯಿತು.
ಆದಾಯಕ್ಕಾಗಿ ಕಂಡು ಹಿಡಿದರು ಉಪಾಯ
ತೆರೆದರು ಮದ್ಯದಂಗಡಿಯ ಬಾಗಿಲ
ಕರೆತಂದರು ಸಾವಿರಾರು ಪ್ರವಾಸಿ ಕಾರ್ಮಿಕರನ್ನು
ಜೊತೆಯಲ್ಲಿ ತರಿಸಿದರು ಕೋರೋನ ವೈರಸ್ ಅನ್ನು
ಅಗತ್ಯವೇ ಇರಲಿಲ್ಲ ಇಂತಹ ಕಿತಾಪತಿ
ಅನುಷ್ಠಾನ ಗೊಳಿಸಿದ್ದರೆ ಘೋಷಿಸಿದ್ದ ಪರಿಹಾರ ಪೂರ್ತಿ
೨೧ ಲಕ್ಷ ಕೋಟಿ ಅನುದಾನದ ಘೋಷಣೆ ಮಾಡಿದ ಮೋದಿ
ಯೋಚಿಸಲ್ಲಿಲ್ಲ ಹೇಗೆ ಕಾರ್ಯರೂಪಕ್ಕೆ ತರುವುದು ಪೂರ್ತಿ.
ಕಾರ್ಖಾನೆ ತೆರೆಯಲು ಅನುಮತಿ ನೀಡಿದೆ ಸರಕಾರ
ಆದರೆ ಇಲ್ಲಿ ಆಗಿದೆ ಕೆಲಸಗಾರರ ಬರವೋ ಬರ
ಹೇಳುವುದಕ್ಕೆ ಬಲು ಸುಲಭ
ಆತ್ಮ ನಿರ್ಭರ್ ಭಾರತ
ಆದರೆ ಅವರಿಗೇನು ಗೊತ್ತು ಅದರ ಒಳ ಅರ್ಥ.......
ಮುಂಜಾನೆ ತಂಪಲ್ಲಿ ನಾ ನಿನ್ನ ಕಂಡೆ
ನಿನ್ನ ಅಂದ ನೋಡಿ ಬಲು ಮೋಹಗೊಂಡೆ
ಮನದ ಮಾತು ಹೇಳಲು ನಿನ್ನ ಬಳಿ ಬಂದೆ
ಆದರೆ ನಿನ್ನನು ನೋಡುತ ನಾ ಮಂಜಿನತ್ತೆ ಕರಗಿಹೊದೆ
ನನ್ನ ಮನಸು ನೀನೇ ಬೇಕೆಂದು ಬೇಡುತ್ತಿದೆ
ನಿನ್ನ ಆ ಕಣೋಟ್ಟಕ್ಕೆ ಮತ್ತೆ ಮತ್ತೆ ನನ್ನ ಹೃದಯ ಸೋಲುತ್ತಿದೆ
ನೀನು ನನ್ನ ಪ್ರೀತಿಯ ಎಂದು ಒಪ್ಪುವೆಯೋ ಎಂದು ನನ್ನ ಹೃದಯ ಕಾಯುತ್ತಿದೆ
ಈ ಚಿಂತ್ತೆಯಲ್ಲೆ ನನ್ನ ದಿನಗಳು ಮುಂದೆ ಮುಂದೆ ಸಾಗುತ್ತಿದೆ ..............