Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನಸ್ಸಿಲ್ಲದ ಮದುವೆಯಲಿ ನಾನೊಬ್ಬ ಅತಿಥಿ,
ಮನಸಿರಲಿ ಇರದಿರಲಿ ಮುಂದೆ ಸಾಗುತ್ತಿರುವುದು ಜೀವನವೆಂಬ ಚಕ್ರ
ಮನಸೇ ಇಲ್ಲದ ಆ ಮದುವೆಗೆ ಆಡಂಬರವೇಕೆ
ಮನಸೆ ಇಲ್ಲದ ಆ ಅತಿಥಿಯ ಭಾವನೆಗೆ ಬೆಲೆಯೇ ಇಲ್ಲಾ.
- RakeshH
09 Jun 2020, 07:57 pm
ತೆರವಾದ ಮನಸ್ಸಿನ ಪುಟದಲ್ಲಿ
ತರವಾದ ಪದಗಳ ಕೂಟ್ಟದಲ್ಲಿ .
ತೆರೆಯ ಮರೆಮಾಡಿದೆ ಮನಸ್ಸಿನ ಭಾವನೆ .
ತೆರಿಗೆ ಕೇಳುತ್ತಿದೆ ಮನಸ್ಸು ಕುಳಿತು ಸುಮ್ಮನೆ ....!
ಅತಿರೇಖದಿ ಮಾತ್ತೆರಿಸುವ ಕಣ್ಣಾ ಕಲೆಗೆ ,
ಬಲಿಯಾದೆ ಬಾಲೆ ನಿನ್ನ ಕಣ್ಣ ಬಲೆಗೆ .
ಅಪರೂಪದಿ ರಂಗೇರಿಸುವ ನಿನ್ನ ನಗುವ ಸೆಲೆಗೆ ,
ತೆರಬೇಕೆ ನಾನು ನಿನ್ನಗೆ ಅ ನಗುವ ತೆರಿಗೆ ....!
- NaveenkumarK
09 Jun 2020, 10:55 am
ಮತ್ತೊಮ್ಮೆ
ರುಜುವಾಯ್ತ ದೇವನೇ..
ಈ ಜಗದಲಿ
ನೀನೇ ಶ್ರೇಷ್ಠ ಮಾಂತ್ರಿಕ
ನಿನ್ನ ಆಟಗಳೆಲ್ಲವೂ
ಬಲು ಮಾರ್ಮಿಕ...
ನಿನ್ನಿಚ್ಛೆಯಂತೆ
ಆಡುವುದೇ ನಮ್ಮ ಕಾಯಕ..
- - ಸಿದ್ದು ಕನ್ನಡಿಗ
08 Jun 2020, 06:22 pm
ದಾರಿ ದಾರಿ ಸಾಗಿದೆ , ಲೋಕದ ಪರೀವೆ ಇಲ್ಲದೆ .
ಕಣ್ಣಾ ಮುಚ್ಚಿ ನೋಡಿದೆ , ನಿನ್ನ ಕಣ್ಣು ಅಲ್ಲೂ ಕಾಡಿದೆ .
ಕಣ್ಣು ಸುತ್ತ ನೋಡಿದೆ, ನಿನ್ನ ಮನಸಿನ ದಾರಿ ಕಾಣದೆ .
ನಿನ್ನ ದಾರಿ ನಾನು ಕಾದಿದೆ , ನೀ ಬರುವ ದೀಕ್ಕು ನನಗೆ ತಿಳಿಯಾದೆ ....
- NaveenkumarK
08 Jun 2020, 02:56 pm
ನಿನ್ನ ಹೃದಯದ ಅಳದಲಿ ಇರುವವನು ನಾನೋಬನೆ ಪ್ರೇಮಿ ,
ನೀ ನನ್ನ ಬೇಡ ಎಂದರೆ ನನ್ನ ಹೃದಯ ಸಾಗರದಲ್ಲಿ ಹೇಳುವುದು ಸುನಾಮಿ ...!
ಪ್ರೀತಿಯಾಂಬ ಬರದ ದಾಹದ ಮೇರೆಗೆ ,
ಪ್ರೀತಿಯಾಗಿದೆ ನೀರು ತಂದ ನೀರೆಯ ಪಾಲಿಗೆ ...!
ಒಪ್ಪಿದೆ ನಿನ್ನ , ನಾ ಬದಲಾಗುವ ಮುನ್ನ ,
ಕಾಯಿಸದೆ ನೀನು ಸ್ವೀಕರಿಸು ನನ್ನ ...!
- NaveenkumarK
08 Jun 2020, 02:33 pm
ಬಾನಂಗಳದಿ ಹಾರಾಡುತ್ತಿರುವ ಖಗಗಳೇ
ಭುವಿಯಿಂದ ನೀಲಾಕಾಶದೆಡೆಗೆ ನಿಮ್ಮ ಪಯಣ
ಈ ಪಯಣದಲ್ಲಿ ನಿಮಗೆ ಸಿಕ್ಕ ಗೆಳೆಯರೂಡಣೆ
ಬನ್ನಿ ನಾ ಪರಿಚಯಿಸುವೆ ನನ್ನ ಕವನಾಲೋಕದ ಜಾಣ ಜಾಣೆಯರನು.....
ಜಾಣ್ಮೆಯ ಮೆರೆದ ಕನ್ನಡ ಸಾಹಿತಿಗಳು
ಹೆಮ್ಮೆಯ ನೀಡಿದ ವಿಜ್ಞಾನಿಗಳು ಮುದದೂಂದಿಗೆ ನೆಮ್ಮದಿ ನೀಡುವ ಕವನಗಳನ್ನು ಬರೆದ ಕವಿಗಳಿಗೆ ನಿಮಗೀದೊ ಹೆಮ್ಮೆಯ ನಮನ...
ಅಕ್ಷರ ಕಲಿಸಿದ ನನ್ನಮ್ಮ ಅದನು ಅನುಕರಿಸಿದ ಕಂದಮ್ಮ ಜೀವನದ ದಾರಿಗೆ ಗುರುಗಳು ಬೇಕಮ್ಮ
ಅವರೇ ನಮ್ಮ ನೆಚ್ಚಿನ ಶಿಕ್ಷಕರಮ್ಮ
ಶಿಕ್ಷಣವೇ ಕಲಿಸುವುದು ಬದುಕುವ ಲಕ್ಷಣ....
- RoopaGowtham
08 Jun 2020, 08:10 am
ನೂರು ನೋವ ನಡುವೆ
ಒಂದು ನಗುವ ಇಡುವೆ
ಒಂದೇ ನೋವ ಕೊಟ್ಟು
ಬದುಕ ನಗುವ ಅಳಿಸುವೆ
ನೋವ ನಲಿವ ನಡುವೆ
ನಮ್ಮ ದೇನಿದೆ
ನಿನ್ನ ಕರುಣೆ, ಕಲಾಪಗಳಿಗೆ
ನಾವೇ ದಾಳಗಳಲ್ಲವೆ...
- dvja
07 Jun 2020, 09:36 pm
ಒಡಲ ಹಂಚಿಕೊಂಡ ನಿನಗೆ ಉಸಿರಲ್ಲಿ ಪಾಲು ಕೊಟ್ಟಾಯ್ತು ನಿನ್ನ ಅಮ್ಮನ ಮಡಿಲಲ್ಲಿ ಕಂಡಾಗಲೇ.
ನೋವನಂಚಿಕೊಳ್ಳುವೆ ನಲಿವಲ್ಲಿ ನಾನು ನಗುವಾಗುವೆ ಮನದಲ್ಲಿ ಇನ್ನೂ ಪುಟ್ಟ ಮಗುವು ನೀನು ನನಗಿಂತ ಎತ್ತರ ಬೆಳೆದರೂನು.
ನಿನ್ನಾಸೆ ಕನಸೆಲ್ಲಾ ನನಸಾಗಲಿ,
ನೀ ಸಾಗುವ ಹಾದಿಯಲ್ಲಿ ಕಲ್ಲು ಮುಳ್ಳು ಪ್ರೀತಿಯ ಹೂವಾಗಲಿ.
ನೂರು ಜನುಮ ಕಳೆದರೂನು
ನನ್ನ ಮೊದಲ ಗೆಳೆಯ ನೀನು,
ತಮ್ಮನಾದರೇನೂ ಅಪ್ಪನ
ಇನ್ನೊಂದು ರೂಪ ನೀನು.
- ಚುಕ್ಕಿ
07 Jun 2020, 08:29 pm
ದೇವರ ಕನಸು ಸುಂದರ
ಧರಣಿ ನಿನ್ನ ಮಂದಿರ
ಕಣ್ಣಿಗೆ ಚೆಲುವಿನ ಚಿತ್ತಾರ
ಸಾಧ್ಯವೇ ಈ ಸೃಸ್ಟಿ ರಚಿಸಲು ಯಾರ
ಸುಖ ದುಃಖಗಳ ನಡುವೆ ಜೀವನ ಒಂದು
ಕಣ್ಣು ಸವಿಯದ ಕನಸು ನೂರೊಂದು
ಬಾಳಲಿ ನೋಡಿದೆ ವಿಚಿತ್ರ ಒಂದೊಂದು
ದುಃಖದ ಬಾಳಿಗೆ ಸುಖದ ಕನಸು
ಕನಸು ನನಸಾದರೆ ಬಾಳು ಸೊಗಸು
ಒಂಟಿ ಬಾಳಿಗೆ ಬೆಕೊಂದು ಆಸರೆ
ಕನಸು ನನಸು ಸೇರಿದರೆ
ಬರಡು ಜೀವನದಲಿ ಚಿಲುಮೆ ಪುಟಿದರೆ
ಸಾರ್ಥಕತೆ ಈ ಜನ್ಮದಾರೆ
ವಿನೋದ್ ಡಿಸೋಜ
- AAA little star
07 Jun 2020, 02:25 pm
ಹುಟ್ಟು ಸಾವಿನ ನಡುವೆ
ಮೂರು ದಿನದ ಬಾಳ್ವೆ
ಸತ್ಯ ಸುಳ್ಳು ಲೆಕ್ಕದ ನಡುವೆ
ಗೆಲ್ಲುವುದು ಯಾವಾಗಲು ಸತ್ಯವೇ
ಜೀವನಕೆ ಮಾಡುವರು ಹೋರಾಟ
ನನ್ನದು ನಿನ್ನದು ಎನ್ನುವ ಹೊಡೆದಾಟ
ಯಾಕೆ ಇಷ್ಟೊಂದು ಪರದಾಟ
ಯಾರಿಗೂ ಇಲ್ಲ ತಾಳ್ಮೆಯ ಪಾಠ
ಹುಟ್ಟಿದ ನಂತರ ಬರುವುದು ಸು:ಖದು:ಖಗಳು
ಸುಳ್ಳಿನ ಹಾದಿ ಯಾವಾಗಲು ಗೋಳು
ಸತ್ಯದ ಬದುಕಿಗೆ ಬರದು ಸೋಲು
ಇದನ್ನು ಅರಿತು ಯಾವಾಗಲು ಬಾಳು
ವಿನೋದ್ ಡಿಸೋಜ
- AAA little star
07 Jun 2020, 01:45 pm