ಹೇಗಿದೆ ಗೊತ್ತಾ ಪದವಿಯ ನಕ್ಷೆ
ಪಡೆಯ ಬೇಕು ದಾಖಲಾತಿ ದೀಕ್ಷೆ
ಇರಲೇ ಬೇಕು ಹಾಜರಾತಿ ರಕ್ಷೆ
ನಡೆಯುತ್ತೆ ಕಿರು ಪರೀಕ್ಷೆ
ಅದರಲ್ಲಿರಬೇಕು ನಿರ್ದಿಷ್ಟ ನೀರಿಕ್ಷೆ
ಅಂತರೀಕ ಅಂಕಗಳಿಗೆ ಬಳಸಬೇಕು ಬುದ್ದಿ ನಿಕ್ಷೆ
ನಡೆಯುವುದು ಮುಂದೆ ಪರೀಕ್ಷೆ
ಆನಂತರ ಫಲಿತಾಂಶದ ಸಮೀಕ್ಷೆ
ಅನುತಿರ್ಣವಾದರೆ ಮರುಪರೀಕ್ಷೆ
ಕೆಲಕಾಲ ಅದುವೆ ಮನಸ್ಸಿಗೆ ಶಿಕ್ಷೆ
ಏನೊ ಒಂದು ಆಗುವುದು ನೀರಿಕ್ಷೆ
ಹೇಗೂ ಬರುವುದು ಪದವಿ ನಕ್ಷೆ
ಕಲಿಯದಿದ್ದರೆ ಉದ್ಯೋಗಕ್ಕಾಗಿ ಭೀಕ್ಷೆ
ನನ್ನ ಮುದ್ದು ಹುಡುಗಿ ದೂರದಲ್ಲಿರಲಿ, ಹತ್ತಿರದಲ್ಲಿರಲಿ, ಒಂದೊಮ್ಮೆ ಬಂದೆನ್ನ ನೋಡಲಿ,
ಅವಳ ಹೃದಯದ ಗೂಡಿನಲ್ಲಿ,
ನನಗೊಂದು ಪುಟ್ಟ ಜಾಗವಿರಲಿ,
ಕಾದಿಹೇನು ನಾನಿಲ್ಲಿ,
ಅವಳನ್ನು ನಗಿಸಲು ,ಪ್ರೀತಿಸಲು ,ಮಾತನಾಡಲು,.
ಅವಳ ಮುದ್ದು ಮನಸ್ಸಾಗಲು,
ಅವಳಿಗಾಗಿ ಜೀವ ನೀಡಲು,
ಅವಳೇ ಜೀವವಾಗಿ❤️❤️❤️ 16vs7
ಮುಂಜಾವಿನ ಇಬ್ಬನಿಯ ತಂಪು
ಬೀರಿದೆ ಎಲ್ಲೆಡೆ ಅದರ ಕಂಪು
ಅದನೂಡಲು ಬಂದ ಹಕ್ಕಿಗಳು ಇಂಪಾದ
ಕಲರವ ಕಿವಿಗಳಿಗೆ ನೀಡಿದೆ ಇಂಪು
ಸೂರ್ಯನ ಅಪ್ಪುಗೆ ಕೈ ಚಾಚುವ ಸುಮಗಳು
ಹಸಿ ಬಿಸಿಲಿನ ಬೆಚ್ಚುಗೆ ಮೈ ಒಡ್ಡುವ ಶಿಶುಗಳು
ಹೊತ್ತು ಏರಿದಂತೆ ಸುಸ್ತಾಗುವ ಮನುಜರು
ನಮ್ಮೆಲ್ಲರ ಉರಿದುಂಬಿಸಿ ಪ್ರಚಲಿತವಾಗಿಸುವುದೆ ನಮ್ಮ ದಿನಕರನ ತಾಕತ್ತು
ರವಿಯ ಪ್ರಖರತೆಯಿಂದ ಪ್ರಜ್ವಲಿಸುವ ಶಶಿಯೇ
ನಿನ್ನ ಅಂದಕ್ಕೆ ಸಾಟಿ ಯಾರು
ಚಂದ್ರನ ಸೌಂದರ್ಯದ ಮುಂದೆ ಏನೂ ಇಲ್ಲ ಮಕ್ಕಳ ಮುದ್ದಿನ ಮಾವ..ಪ್ರೇಮಿಗಳ ಪ್ರೀತಿಯ ರಾಜ ಅವನೇ ಅರಸ ...
ಎತ್ತ ಸಾಗಿದೆ ಈ ನನ್ನ ಪಯಣ
ಎತ್ತ ನೋಡಿದರತ್ತ ಕತ್ತಲೆಯ ಕಾನನ
ಚಿರ ನಿದ್ರೆಗೆ ಜಾರ ಬಯಸಿವೆ ನನ್ನೆರಡು ನಯನ
ವಿದಾಯ ಹೇಳಬಯಸಿದೆ ದುಗುಡ ತುಂಬಿದ ಮನ
ಸಾಕಪ್ಪಾ ಸಾಕು ಈ ಹಾಳು ಜೀವನ!
ಓ ಬದುಕೇ ,
ವಿದಾಯದ ವೇಳೆಯಲ್ಲಿ ನಿನಗೊಂದು ಕಾವ್ಯ ನಮನ
ಬದುಕೆಂಬ ಹೊತ್ತಿಗೆಯ ಕೊನೆಯ ಕವನ!
ಓ ಬದುಕೇ,
ನೀನೇಕಿಷ್ಟು ಕ್ರೂರಿ?
ನೀನೇಕಿಷ್ಟು ನಿಷ್ಠೂರಿ?
ನಿರಾಸೆಯ ಕಡಲಲಿ ಇನ್ನೆಷ್ಟು ದೂರ ಈಜಲಿ ನಾ
ದಡ ಸೇರುವ ಭರವಸೆಯಿಲ್ಲ
ನಿರಾಸೆಯ ಕಡಲ ದಡದಲ್ಲಿ
ಭರವಸೆಯ ಬೆಳಕಿದೆಯೆಂದು
ಹೇಗೆ ನಂಬಲಿ ನಾ?
ನಂಬಿಕೆಗೆ ಆದ ಗಾಯ ಮಾಗಿಲ್ಲ!
ಆಲೋಚನೆಗಳ ನಾಗಾಲೋಟಕ್ಕೆ
ಭಾವನೆಗಳ ತೊಳಲಾಟಕ್ಕೆ
ಉತ್ತರವಿಲ್ಲದ ಪ್ರಶ್ನೆಗಳ ಸುರಿಮಳೆಗೆ
ತತ್ತರಿಸಿ ಹೋಗಿರುವೆ ನಾ
ಅಂದೂ... ನಾ ನಿನ್ನ ನೋಡಿದ ಮೊದಲು ನೋಟದಲ್ಲಿ ತನು, ಮನ, ಧನ, ಎಲ್ಲವೂ ನೀ.. ನೆಂದೂ ನಿಧ೯ರಿಸಿ ಆಯ್ತು ಗೆಳತಿ... ನೀ ನೋಟದಲ್ಲಿ... ನಾ.. ಹೇಗೆ ಕಳೆದ ದಶಕಗಳ ಕಾಲ ಯೋಚಿಸ್ತ ಹೋರಟ... ನನಗೆ ನಂತರ ಗೊತ್ತಾಯಿತ್ತು. ನೀ... ದಶಕ ಹಿಂದೇ ದಶಕ ರಾಜ ಕೈ ಹಿಡಿದಿಯಂತಹ.. ಆದರೂ ಪರವಾಗಿಲ್ಲ... ಪ್ರೀತಿ ಅಮರ್.. ತ್ಯಾಗ ಮಧುರ.. ಇನ್ನೂ ನಾ.. ನು ನಿನ್ನ ಪ್ರೀತಿ ಗುಂಗಿನಲ್ಲಿರುವ ದಶಕದ ಪ್ರೇಮಿ... .... .............
..
..........ನಾಗರಾಜ್
ಸುಖ ದುಃಖ ಬಿರುನುಡಿಗೆ ಹೆದರದೆ
ನವ ಮಾಸ ಹೊತ್ತು ಹೆತ್ತವಳು
ಕುಡಿಗೆ (ಮಗು) ಕೆಡುಕಾದರೆ
ಹಗಲಿರುಳು ಅತ್ತವಳು.
ನೋವು ನಲಿವು ಅನುಭವಿಸಿ
ನೀಡಿದಿ ನಮಗಾನಂದ...
ಕುಟುಂಬದ ಒಳತಿಗೆ ಬದುಕೇ ಮೀಸಲಿಟ್ಟು
ಸಂಸಾರದ ದೋಣಿ ಸಾಗಿಸುವುದೇ ಚಂದ.
ನಿನ್ನ ಪ್ರೀತಿ, ಸಹನೆ, ಸಹಕಾರ - ಸಂಸ್ಕಾರ
ಮೌಂಟ್ ಎವರೆಸ್ಟ್ಗಿಂತ ಎತ್ತರ
ನಿನ್ನ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವೇ? ನಮ್ಮಲಿ ಇಲ್ಲ ಉತ್ತರ.
...............................................