Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವೈಫ್-ನೈಫ್

ಸಂತಸದಿಂದಿರೆ
ಕಮಲವದನೆ
ನನ್ನ ವೈಫ್
ಕೋಪಗೊಂಡರೊ
ಆಕೆ ಆಗುವಳು
ಹರಿತ ಬಾಯಿಯ ನೈಫ್!!

- AnithaAnu

22 May 2020, 12:16 pm

ಅರಸುತಿರುವ ಆ ರತಿ

ಅರಸುತಿರುವೆ ಹರಸು ಹರಿಯೆ
ಹೆಸರ ತಿಳಿಸು ಮನಸ ಕೊಡುವೆ...

ಕಾಲ ಕಳೆದೆ ಕಾಯುತಿರುವೆ
ಕರುಣೆ ಇರಲಿ ಕರವ ಮುಗಿವೆ
ಹುಟ್ಟಲಿ ಪ್ರೇಮ, ಅವನ ನನ್ನ ನಡುವೆ ...

ಇನ್ನೂ ಅರಸುತಲೇ ಇರುವೆ
ಸಿಗುವೆಯಾ ಅರಸ ಎoದೆoದೂ
ಜೊತೆಯಾಗಿ ಇರುವೆ...

- dvja

22 May 2020, 11:53 am

ಹೇ ಕೊರೋನಾ

ಹೇ ಕೊರೋನಾ
ದಿನೇ ದಿನೇ ಹೆಚ್ಚಾಗುತ್ತಲೇ ಇದೆ
ನಿನ್ನ ರೌಧ್ರ ನರ್ತನ,
ಕೇಳಲಿಲ್ಲವೇ ನಿನಗೆ ಈ ಬಡ ಮಕ್ಕಳ ಆಕ್ರಂದನ,

ಹಸಿವಿನಿಂದ ಮಕ್ಕಳ ಚಿರಾಟ ನರಳಾಟ,
ನಿನ್ನಿಂದ ಪ್ರಾಣಾ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ
ಪ್ರತಿ ನಿತ್ಯ ಹೋರಾಟ,

ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಳ್ಳಲು
ಬಂದಿದ್ದರು ನಗರಗಳತ್ತ,
ಬದುಕುಳಿದರೆ ಸಾಕು ಎಂಬಂತೆ
ಹೋಗುತ್ತಿದ್ದಾರೆ ಇಂದು ತಮ್ಮ ಊರುಗಳತ್ತ,

ಏನು ತಪ್ಪು. ಮಾಡಿದೆವೆಂದು ಈ ತರ ಶಿಕ್ಷೆ,
ಮಾಡಬೇಡ ನಮ್ಮ ತಾಳ್ಮೆ ಪರೀಕ್ಷೆ,

ಹೇ ಕೊರೋನಾ ಇನ್ನಾದರೂ ನಿಲ್ಲಿಸು
ನಿನ್ನ ಅಟ್ಟಹಾಸ,
ಮೂಡಿಸು ಇನ್ನಾದರೂ ಈ ಬಡಮಕ್ಕಳ ಮುಖದಲ್ಲಿ ಮಂದಾಹಾಸ,

:-ವೀಣಾ ಲಿಂಗಣ್ಣ
ರಾಯಚೂರು

- Veena

22 May 2020, 08:48 am

ಬರಿ ಎರಡಕ್ಷರ......

ಪ್ರೇಮ.... ಬರಿ ಎರಡಕ್ಷರ

ತಿಳಿದಿದೆಯಾ ಅದರಾಳದ ಅಂತರ
ಕಲ್ಪನಾ ಲೋಕದ ಮಧುರ ಆಗರ

ಮನಗಳ ಮಿಲನದ ಆ ವರ
ಅದೊ೦ದು ಅದ್ಭುತ ಸಾಗರ

ಅಲೆ ಅಲೆಯೂ ಕರದಂತೆ ಅಂಬರ
ಕ್ಷಣ ಕ್ಷಣವೂ ಮನೋಹರ

ಆಹಾ ..ಎಷ್ಟು ಸುOದರ
ಪ್ರೇಮ ಮನಸುಗಳ ಕನ್ನಡಿ ಪರಸ್ಪರ ......

- dvja

21 May 2020, 11:09 pm

ಸ್ನೇಹ

ಹಾಲಿನಲ್ಲಿ ಉತ್ತಮ ಹೈನು
ಸಿಹಿಯಲ್ಲಿ ಉತ್ತಮ ಜೇನು
ವಿಶ್ವದಲ್ಲಿ ಉತ್ತಮ ಭಾನು
ಭಕ್ತಿಗೆ ಸರ್ವೊತ್ತಮ ದೇವನು
ವಿಶ್ವಾಸಕ್ಕೆ ಉತ್ತಮ ನೀನು
‌ಸಹಕಾರಕ್ಕೆ ಉತ್ತಮ ನೀನು
ಪ್ರೀತಿಗೆ ಉತ್ತಮ ನೀನು
ಸಹಬಾಳ್ವೆಗೆ ಉತ್ತಮ ನೀನು
ಸ್ನೇಹಕ್ಕೆ ಅತ್ಯುತ್ತಮ ಗೆಳೆಯ ನೀನು

- Shivakumara S

21 May 2020, 03:55 pm

ನೋಟಿನ ಜಗತ್ತು

ಇರುವುದು ಸಂಬಂಧ ,ಬಂಧಗಳ ನಂಟು
ಅದುವೆ ಇರುವವರೆಗೂ ಮಾತ್ರ ಗಂಟು!

ಈ ಜಗದಲ್ಲಿ ಹಲವು ಕಟ್ಟು‌ಪಾಡುಗಳು ಉಂಟು
ಆ ಕಟ್ಟುಪಾಡುಗಳ ಮೌಲ್ಯವೆಲ್ಲ ಬರಿ ನೋಟು!

ನ್ಯಾಯ,ನಿಷ್ಟೆ, ನೀತಿ, ಸಹಬಾಳ್ವೆ, ಪ್ರೀತಿ ನೆಪ ಮಾತ್ರಕ್ಕೆ ಉಂಟು
ಇವುಗಳೆಲ್ಲ ನೋಟಿನ ಚಂದದ ಬೂಟು
ಆದರೂ ಧರಿಸಬೇಕು ಇವುಗಳ ಸೂಟು!

ಎಂತಾ ಕಾನುನಿನ ಕಠಿಣ ಶಿಕ್ಷೆಯ ಏಟು
ಆ ಏಟು ತಪ್ಪಿಸಲು ಇದ್ದರೆ ಸಾಕು ನೋಟು!

ಚುನಾವಣೆ ಗೆಲ್ಲಲು ಬೇಕು ವೋಟು
ಆ ವೋಟು ಪಡೆಯಲು ಇದ್ದರೆ ಸಾಕು ನೋಟು!

ಜೀವನದ ಸಮುದ್ರದಲ್ಲಿ ನಡೆಸಲು ಸಂಸಾರದ ಬೋಟು
ಇರಲೆ ಬೇಕು ಕಂತೆ ಕಂತೆ ನೋಟು!

ಹೇಗಾದರೂ ಬದುಕುವುದು ಉಂಟು
ಅದುವೆ ಇದ್ದರೆ ಮಾತ್ರ ನೋಟು!

ಎಲ್ಲವನ್ನು ಬದಿಗೆ ಇಟ್ಟು
ಸಹಿಸಿ ನೀನು ಎಲ್ಲ ತರದ ಪೆಟ್ಟು
ಸಂಪೂರ್ಣ ಇಷ್ಟಪಟ್ಟು
ಬೀಡದೆ ಕೋನೆವರೆಗೂ ಪಟ್ಟು
ಸಂಪಾದಿಸಿದರೆ ನೀನು ನೋಟು
ಮಾಡಿಡು ಕಂತೆ ಕಂತೆ ಗಂಟು
ಜಗತ್ತು ಗೌರವಿಸುವುದು ಸನ್ಮಾನ ಕೊಟ್ಟು
ಇದ್ದನ್ನು ಕೋನೆಯವರೆಗೂ ನೆನಪ್ಪಿಟ್ಟು
ಎಲ್ಲೂ ಬೀಡದೆ ನಿನ್ನ ಗುಟ್ಟು
ನಡೆದರೆ ಮಾತ್ರ ನಿನಗೆ ಯಶಸ್ಸುವುಂಟು!

- Shivakumara S

21 May 2020, 10:45 am

ತಂಗಿ

ನನ್ನ ತಂಗಿ ಮಾಡುವಳು ಮೋಡಿ.
ತನ್ನ ಹೃದಯ ಬಡಿತದ ಜೊತೆಗೂಡಿ.
ಅವಳು ಓದುತ್ತಾಳೆ ನನ್ನ ಅಕ್ಕನ ಜೊತೆ ಕೂಡಿ.
ಅವಳು ರಂಜಿಸುತ್ತಾಳೆ ತನ್ನ ನೃತ್ಯ ಮಾಡಿ.
ಅವಳು ಮುಂದೆ ಎರುವಳು ಸಾಧನೆಯ‌‌ ಮಹಡಿ.
ಅವಳು ಕಂಡ ನಾನೊಂದು ಅದ್ಬುತ ಕನ್ನಡಿ.
ಇದು ನನ್ನ ತಂಗಿಯ ಕಿರು ಪರಿಚಯದ ಮುನ್ನುಡಿ....

..... ರಾಜು....

- Raju Baireddy

21 May 2020, 09:33 am

ಅಳುತ್ತಿರುವೆ ಏಕೆ?

ನನ್ನ ಭಾವನೆಗಳನ್ನು
ನೋಡುತ್ತಿರುವೆ ಏಕೆ ಕೆಣಕಿ,
ಆ ಭಾವಗಳಡಿಲ್ಲಿ ಒಮ್ಮೆಯಾದರೂ
ನೋಡು ಇಣುಕಿ,
ಹಾಳು ನಿನ್ನತನದಲ್ಲಿ ನನ್ನ
ಪ್ರೀತಿಯನ್ನು ಹಾಕಿದೆ ಹೊಸಕಿ.
ಎಲ್ಲಾ ಮುಗಿದ ಮೇಲೆ ಈಗಾ
ಅಳುತ್ತಿರುವೆ ಏಕೆ ಬಿಕ್ಕಿಬಿಕ್ಕಿ.

- VijaypratapRana

21 May 2020, 08:31 am

ಹಸಿವಿನ ರುಚಿ

ಹಸಿಯದಲ್ಲವನಿಗೇನು ಇತ್ತರೆ ತುಪ್ಪವ
ಬಾಯಿ ಚಪ್ಪರಿಸಿ ಇನ್ನುವನೇನು.....
ಹಸಿದವನಿಗಿತ್ತರೆ ಸಾಕು ಹಲಸಿದನ್ನವ
ಸೊಲ್ಲೆತ್ತದೆ ತಿನ್ನುವನಲ್ಲವೇ
ರುಚಿ ರುಚಿ ಎಂದು........ಮರಕುಟಿಗ!

ದಿನಕ್ಕೆ ಮೂರೋತ್ತು ಮೃಷ್ಟಾನ್ನ
ತಿನ್ನುವ ಜಮೀನ್ದಾರನಿಗೇನು ಗೊತ್ತು.
ಹಬ್ಬ ಹರಿದಿನಗಳಿಗೊಮ್ಮೆ ಮಾಡುವ.
ಬಡವನ ಮನೆಯ ಹೋಳಿಗೆಯ
ರುಚಿಯ ಸ್ವಾದ.............ಮರಕುಟಿಗ!

ಬಂಗಾರದ ತೂಗುಯ್ಯಾಲೆಯಲ್ಲಿ...
ಬೆಳ್ಳಿ ತಟ್ಟೆ ಹಿಡಿದು ಬೇರೊಬ್ಬರು
ತಿನ್ನಿಸುವ ಅನ್ನದ ರುಚಿಗಿಂತ.......
ಗುಡಿಸಲ ಮನೆಯಲ್ಲಿ ಚಂದಿರನ
ತೋರಿಸಿ ತಾಯಿ ತಿನ್ನಿಸುವ ಗಂಜಿಯ
ರುಚಿ ಮೇಲಲ್ಲವೇ.......ಮರಕುಟಿಗ!

ಒಂಟಿಯಾಗಿ ದೂರದ ಪರದೇಶದಲ್ಲಿ
ದುಡಿದು ಕುಂತು ತಿನ್ನುವ ತಿನಿಸಿನ
ರುಚಿಗಿಂತ ತನ್ನದೇ ಹೊಲದಲ್ಲಿ ದುಡಿದು ಸಂಸಾರದೊಟ್ಟಿಗೆ ಕುಳಿತು ತಿನ್ನುವ
ಕೂಳಿನ ರುಚಿ ಮೇಲು..... ಮರಕುಟಿಗ!

ಹಸಿವಿಲ್ಲದವನು ಅದ್ದು ಮೀರಿ ತಿನ್ನುವುದಕ್ಕಿಂತ
ಸ್ವಲ್ಪವಾದರೂ ಇಲ್ಲದವನಿಗಿತ್ತರೆ
ಅದೇ ಮಾನವ ಧರ್ಮ ..... ಮಾರಕುಟಿಗ!!

✍️ ಮಂಜು

- ಮಂಜು

20 May 2020, 08:31 pm

ಮುದ್ದು ಮನಸ್ಸು ..

ಓ ನನ್ನ ಪ್ರೀತಿಯ ಹುಡುಗಿ...
ನೀ ಕಾಣುವೆ ನನ್ನ ಕನಸಲ್ಲಿ .
ನೀ..ಪ್ರಿತಿಸುವೆಯೋ ದ್ವೇಷಿಸುವೆಯೋ.
ನನಗೆ ತಿಳಿಯದು ,
ನಾ ಕಂಡ ಕನಸಿನಲಿ ,
ನನ್ನವಳ ಕಾಲ್ಗೆಜ್ಜೆ ಸಪ್ಪಳ ಕೇಳಿಬಂತು ಆದರೆ ಆಗ ಮತ್ತೆ ಮಳೆ ಬಂದರೆ ಅಲ್ಲಿ ಅವಳ ದರ್ಬಾರು ,.,

- Krishnamurthy. A.P. Ajjampura

20 May 2020, 08:16 pm