Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

- ಹನುಮಂತ ಹೊನ್ನಪ್ಪ ಕುರಿ ಜುಮಲಾಪೂರ

15 Jul 2025, 04:06 pm

- ಹನುಮಂತ ಹೊನ್ನಪ್ಪ ಕುರಿ ಜುಮಲಾಪೂರ

15 Jul 2025, 03:08 pm

? ಪ್ರೀತಿ ಎನ್ನುವುದು ನಿಶ್ಶಬ್ದ ಚಂದ್ರನಂತೆ... ?

ಆಕಾಶದ ನಡುಭಾಗದಲ್ಲಿ, ನಕ್ಷತ್ರದ ನಿದ್ರೆ ನಡುವೆ,
ನೀನು ನಾನಾಗಿ ಬೆರೆದು ನಿಂತೆ — ಆ ಬೆಳಕು ಚಂದ್ರಮೆಯ ಹಾದಿಯಲ್ಲಿ.

ಒಂದೆಮಾತು ಇಲ್ಲ, ಕೇವಲ ಕಣ್ಣುಗಳ ಮಾತು,
ಆ ಬಣ್ಣಗಳ ನಡುವಣ ಪ್ರೇಮ — ನಡುಕಲ್ಲು ಮೇಲೆ ಹುಟ್ಟಿದ ಹೂವಂತು.

ಓಡುತಿರಲಿಲ್ಲ ಕಾಲ —
ಆ ಗಾಳಿಯ ಮೆಲ್ಲ ನಗೆಯಲ್ಲಿ ನಿನ್ನ ಕೂದಲು ಆಡಿದಾಗ,
ನನ್ನ ಹೃದಯ ಮೌನವಾಗಿತ್ತು, ನಿನ್ನ ಹತ್ತಿರವಾಗಿತ್ತು.

ಒಂದೆ ಬದಿ ಹಸುರು ಕನಸುಗಳು, ಮತ್ತೊಂದು ಬದಿ ಮೌನದ ನಿಶ್ಯಬ್ದತೆ,
ಆ ನಡುವೆ ನಾವಿಬ್ಬರು — ಪ್ರೀತಿಯ ನೆರಳಲ್ಲಿ ಮರದಡಿಯಲ್ಲಿ.

ನಿನ್ನೊಂದಿಗಿರುವ ಕ್ಷಣವೇ ಜೀವನದ ಶಾಶ್ವತ ರಾಗ,
ನಿನ್ನನ್ನು ನಂಬಿರುವ ನನ್ನ ಪ್ರೀತಿಯೇ ನನ್ನ ಧ್ಯಾನ, ನನ್ನ ಜಗ.

✍️ತಲ್ವಾರ್ ಹನುಮಂತ

- Vir Hanumanth

13 Jul 2025, 11:49 pm

ನಿನ್ನ ಮೇಲೊಂದು ಕವನ ಬರೆಯಲೇ

ಶೀರ್ಷಿಕೆ: ನಿನ್ನ ಮೇಲೊಂದು ಕವನ ಬರೆಯಲೇ

ನಿನ್ನ ಮೇಲೊಂದು ಕವನ ಬರೆಯಲೇ
ಹಾಡಿನಲ್ಲಿ ನಿನ್ನ ಅಂದವ ಹೊಗಳಲೇ

ಕಿಸಕ್ಕನೆ ನಗುವ ನಿನ್ನ ತುಟಿಯ ಹೊಗಳಲೇ
ಬಳ್ಳಿಯಂತೆ ಬಳುಕುವ ನಿನ್ನ ನಡಿಗೆಯ ಹೊಗಳಲೇ
ಗೆಜ್ಜೆಯಲ್ಲಿ ಹೆಜ್ಜೆ ಹಾಕುವ ಪಾದ ಹೊಗಳಲೇ
ಗಲ್ಗಲ್ ಎಂದು ಬಳೆಯ ತೊಡುವ ಕೈಗಳ ಹೊಗಳಲೇ

ಅಂದದ ತಿಲಕವಿಡುವ ಹಣೆಯ ಹೊಗಳಲೇ
ಬಣ್ಣಬಣ್ಣದ ತೊಡುವ ನಿನ್ನ ಉಡುಗೆಯ ಹೊಗಳಲೇ
ಮುತ್ತಿನ ಮೂಗುತಿ ತೊಡುವ ನಿನ್ನ ನಾಸಿಕ ಹೊಗಳಲೇ
ನಸುನಾಚುವ ನಿನ್ನ ವೈಯಾರ ಕಂಡು ಹೊಗಳಲೇ

ಯಾವ ರೀತಿ ಹೊಗಳಲಿ ಹೇಳು
ನಿನ್ನ ಅಂದ ಚಂದಕೆ
ಬಳ್ಳಿಯಂತೆ ಬಳುಕಿ ಬಂದು
ಸೇರು ಬಾ ನನ್ನ ಸನಿಹಕೆ

Girishachara S

- Girishachara S

12 Jul 2025, 11:24 pm

ಮಳೆ ಹನಿ

ಶೀರ್ಷಿಕೆ: ಮಳೆ ಹನಿ


ಜಿನುಗುತ್ತಿದೆ ಹನಿ ಹನಿ
ತಂಪೆರೆಯೆತು ಮಳೆಯ ಹನಿ
ಬಯಕೆಗಳ ನೂರು ಹನಿ
ಮೂಡಿತೊಂದು ಪ್ರೇಮ ಗಣಿ

ಉಕ್ಕಿತೊಂದು ಕಡಲ ದನಿ
ಅದರೊಳು ಮೂಡಿತು ನಿನ್ನ ದನಿ
ತಂಪೆರೆಯುವ ಈ ಹನಿಯಲಿ
ಜೇನನು ಸವಿ ಬಾ ಇಲ್ಲಿ

ಗಿರೀಶಾಚಾರ S

- Girishachara S

12 Jul 2025, 11:16 pm

ಅಗಲಿಕೆಯ ಕೊರಗು

ನನ್ನ ಬಾಳ ಕವಿತೆಯಲ್ಲಿ
ನೂರು ಕಥೆಗಳು ಮಿನುಗುತಿಹವು
ವಜ್ರದಂತೆ ಹೊಳೆಯುತಿಹವು.

ನೆಲದ ಒಳಗೆ ಅಡಗಿ ಕುಳಿತ
ಎನ್ನ ತಾಯಿಯ ಮಡಿಲು ಸೇರಿದೆ
ಸತ್ಯವನು ಹೊತ್ತು ಹೋದ
ಆಕೆಗೊಂದು ನಮನವು.

ಕೊಳೆಯ ತೆಗೆದು ಕಳಶವಿಟ್ಟು
ನನ್ನನಗಲಿದ ಧಾತೆಯೇ
ನೀನು ಇರದ ಬಾಳು
ಒಂದು ಜೀವವಿಲ್ಲದಂತಿದೆ .

ಎನ್ನ ಒಡಲು ಬರಿದು ಆಗಿ
ಮಮತೆ ಬಯಕೆ ಬೇಡಿದೆ
ನಿನ್ನ ನುಡಿಯುವ ಒಂದು ಸಾಕು
ಎನ್ನ ಹೃದಯ ಬಡಿತಕೆ.

✍️ಮೇಘಾ.L. B

- ಮೇಘಾ ಬೆಳಧಡಿ

12 Jul 2025, 10:58 pm

ಏನೆಂದು ವರ್ಣಿಸಲ್ಲಯ್ಯ
ವರ್ಣಿಸಲಾಗದ ವಜ್ರಕಣಯ್ಯ
ಕಷ್ಟವ ತಾ ನುಂಗಿ
ಪ್ರೀತಿಯ ಮಳೆ ಸುರಿಸಿ.
ಕಣ್ಣಲ್ಲಿ ಕಣ್ಣಿಟ್ಟು ಧೈರ್ಯವ ತುಂಬುತ
ಕೈಹಿಡಿದು ನಡೆಸಿದವಳು ನನ್ನವ್ವ
ನನ್ನವ್ವ,ನನ್ನವ್ವ.
.
.
.
.
.
.
.
.
.
.

.

.
.



- Kiran R

12 Jul 2025, 12:58 pm

31st march 2025.

life ಎಂಬ ದಾರಿಯಲ್ಲಿ P&L ಇದ್ದೆ ಇರುತ್ತದೆ.
profit ಬಂದಾಗ ಹೆಚ್ಚು ಸಂತೋಷ ಪಡಬೇಡ.
Loss ಆದಾಗಲೂ ಕೂಡ ಹೆಚ್ಚು ದುಃಖ ಪಡಬೇಡ...???
ಏಕೆಂದರೆ.
profit ಶಾಶ್ವತವಲ್ಲ
loss ಕೂಡ ಶಾಶ್ವತವಲ್ಲ.
Balance for P&L Life is beautiful

???
.
.
.
.
.
.
.

- Kiran R

12 Jul 2025, 09:04 am

ಅನಾಮಿಕ ಪ್ರೇಮಿ

ಮತ್ತೆಂದೂ. ಹಿಂದಿರುಗಿ. ನಾ ಬರಲಾರೇನು..!!

ಕೆಲವು. ದಿನಗಳ. ನಮ್ಮ. ಈ ನಿಷ್ಕಲ್ಮಶದ
ಪರಿಚಯಕ್ಕೆ. ಯಾವುದೇ. ಹೆಸರಿಡಬೇಡ. ಗೆಳತಿ..!!

ಇದೊಂದು. ಅಂದವಾದ. ಸುಂದರ ಅನುಭವವಷ್ಟೇ..!!

ಎಂದಾದರೂ. ನಿನಗೇ. ನನ್ನ. ನೆನಪಾದರೆ...!!

ನಿನ್ನ. ಮೊಗದಲ್ಲಿ ಪುಟ್ಟದೊಂದು ಮಂದಹಾಸದ ನಗು. ಮೂಡಲಿ...!!

ನೀನು. ನಕ್ಕರೆ. ಬಹಳ. ಚೆಂದವಾಗಿ. ಕಾಣುತ್ತಿಯ ...!!

ಆದೆ. ನನಗಿಷ್ಟ...!!

ಆ. ನಗುವಿನಲ್ಲೇ. ನಾ. ನಿನ್ನ ಜೊತೆಯಾಗಿರುವೇ ಎಂದೆಂದೂ ...!!

ಅನಾಮಿಕ ಪ್ರೇಮಿ. ನಾ .,,✍?✍?

- Bhimashankar Nelogi

11 Jul 2025, 09:30 pm

??MY WORLD IS MOM.

ಆಕಾಶದಲ್ಲಿ ಹೊಳೆಯುವ ನಕ್ಷತ್ರ ನೀನು
ನಿನ್ನ ಮಡಿಲಲ್ಲಿ ಬೆಳೆದು ಬಂದೆ ನಾನು.
ತಾನುರಿದು ಮನೆಗೆ ಬೆಳಕು ಕೊಡುವವಳು ನೀನೂ
ಆ ಬೆಳಕಲೇ ಬೆಳೆದು ಬಂದೆ ನಾನು.

ನಾ... ಸಾಯುವವರೆಗೂ ನೆರಳಾಗಿರುವೆನು
ಇಂದು ಮುಂದೆ ಎಂದೆಂದೂ......
.
.
.
.
.
.
.

- Kiran R

10 Jul 2025, 08:02 pm