Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪಿನ ಬುತ್ತಿಗೆ.....

ಮನಸ್ಸಿನ ತೀರಕ್ಕೆ ಮೌನದ ಅಲೆಗಳ
ಬಡಿತದ ಹಾನಿಯ ಉಲ್ಲಾಸದ ಕಾಣಿಕೆ!!

ಕಂಡ ಕನಸುಗಳು ಕೊಚ್ಚಿಹೋದಾಗ
ಹಾಗುವ ಸಂಕಟದ ನಡುವಿನ ಸಂತಸ!!

ನೆನೆಪಿನ ಬೆಗೆಗೆ ಬೆಂದ ಕಲ್ಲು ಮನಸ್ಸಿನ
ಬಿಸಿ ಕಾವಿನ ಬೆಚ್ಚನೆಯ ಸುಖ!!

ಒಂಟಿ ಮರಕಷ್ಟೇ ಹಾಗುವುದು ಬಿರುಗಾಳಿಯ
ಅಪ್ಪುಗೆಯ ಅನುಭವದ ಒಲವು!!

ಮಂಜು ಕವಿದ ಅವಳ ನೆನಪಿಗೆ
ಈ ಲಿಕಿತ ಬರವಣಿಗೆಯಷ್ಟೇ...........
ಏನಗುಳಿದಿಹ ಹಸಿವಿನ ಬುತ್ತಿಗೆ!!


...... ಮಂಜು

- ಮಂಜು

15 May 2020, 08:23 pm

ನೆನಹು

ಮರೆತು ಬಿಡಬಲ್ಲೆನೆಂಬ ಹಠ ನನ್ನದು
ಮರತೇ ಬಿಟ್ಟಿದ್ದೀನೆಂಬ ಭ್ರಮೆ ನಿನ್ನದು
ಮರವಿನೊಳಗಣ ನೆನಹು ಕಾಡುತಿಹುದೂ ಇಬ್ಬರನೂ!
ಏತಕೀ ಛಲ ನಮ್ಮೊಳಗೆ
ಕಳೆದುಕೊಂಡುದ ಮತ್ತೇ ಕಳೆದುಕೊಳ್ಳಲೋ ಅಥವಾ
ಪಡೆದುಕೊಳ್ಳಲೋ?

- Dima

15 May 2020, 12:18 pm

ನನ್ನ ಕುಟುಂಬ

ನಾನು ನನ್ನ ಭಾವನೆಗಳು
ನೋವನ್ನೇ ತುಂಬಿದ
ಕಾಗದದ ಹಾಳೆಗಳು
ಜೊತೆಗೊಂದು ಪೆನ್ನು
ಸಧ್ಯಕ್ಕೆ ಇಷ್ಟೇ ನನ್ನ ಕುಟುಂಬ..!
ಅಮ್ಮ ನಿನ್ನ ನೆನಪುಗಳೊಂದೆ ಅದರ ತುಂಬ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

15 May 2020, 09:35 am

ಹೆಣ್ಣು

ಹೆಣ್ಣು ನಗುತ್ತಾ ಮಾತನಾಡಿದಾಗ ನಿನ್ನ
ಪ್ರೀತಿಸುತ್ತಾಳೆ ಅಂತ ತಿಳಿಯಬೇಡ....
ಕಾಮ, ಪ್ರೇಮ ಬಿಟ್ಟು.ಮಮತೆ ಇಂದ
ನೋಡು ಅವಳು ನಿನ್ನ ಉತ್ತಮ ಸ್ನೇಹಿತ ಆಗುತ್ತಾಳೆ....

- Bhgyashree Kharvi

14 May 2020, 10:57 pm

ಅಮರ ಪ್ರೇಮಿ

ಅರಿಯದ ಸ್ನೇಹ
ಮರೆಯದ ಪ್ರೀತಿ...
ಹರಿದು ಹೋಗುವ ಹಾಳೆಯ ಮೇಲೆ
ಏನೆಂದು ಬರೆಯಲೀ ಹೇಳು
ಗೆಳತಿ......

- Manoj Patoli

14 May 2020, 07:42 pm

ಗಾಂಧಾರಿ...

ಅಂಧ ಧೃತರಾಷ್ಟ್ರನಿಗೆ
ಅಂದವಾದ ಮಡದಿ ಇದ್ದರೂ
ಹುಟ್ಟಿದ್ದು ವಕ್ರಬುದ್ಧಿಯ ಮಕ್ಕಳು..!
ಹೊಟ್ಟೆಯನೇ ಹಿಸುಕಿದಳು
ಹೊಟ್ಟೆಕಿಚ್ಚಲಿ ಗರ್ಭವನೇ
ಹೊರ ತೆಗೆದಳು, ಅದಕೆ
ನಾಶವಾದದ್ದು ಅವಳ ಒಕ್ಕಲು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

13 May 2020, 10:12 pm

ಹತಾಸೆ

ಜೀವನದ ಉಪಟಳದಲ್ಲಿ ಹುಚ್ಚೆದ್ದ ಮನಸ್ಸೆ!
ನೋವಿನ ಅಂತರಾಳದಲ್ಲಿ ಕೋಪಗೊಂಡ ಮನಸ್ಸೆ!
ಹಾದಿ ಕಾಣದೆ ನುಚ್ಚುನೂರಾದ ಕನಸ್ಸೆ!
ಅರಿವೇ ಇಲ್ಲದೆ ಸಮಯ ವ್ಯರ್ಥ ಮಾಡಿದ ವಯಸ್ಸೆ!
ಯಾವ ಕಾರ್ಯದಲ್ಲೂ ಕಾಣದ ಯಶಸ್ಸೆ!
ಜೀವನದುದ್ದಕ್ಕೂ ಕಂಡಿದ್ದು ನಿರಾಸೆ!
ಬೀಡದೆ ಕಾಡತೊಡಗಿದೆ ನೋವಿನ ಹತಾಸೆ!
ಜೀವನದ ಅರಿವು ಬರುವಷ್ಟರಲ್ಲಿ ಮುಗಿಯುವುದು ವಯಸ್ಸೆ!
ಭಗವಂತ ಈ ಆಟವಿದು ನಿನಗೆ ಸೊಗಸ್ಸೆ!

- Shivakumara S

13 May 2020, 11:24 am

ಇಷ್ಟೇ

ನಾವಿರೊದು ಭೂಮಿಲಿ
ಇಲ್ಲಿ ನಡೆಯೊದು ಎಲ್ಲ ದುಡ್ಡಲ್ಲಿ
ಬೆಳಿತ ಬೆಳಿತ ಬರೊದೊ ಗಾಂಚಲಿ
ಎದುರಾದವು ಎಲ್ಲ ಕಾಲಾಡಿಲಿ
ಇರುವರೆಗೆ ಮೇರಿತ ಇರಬೇಕು ಇಲ್ಲಿ
ಸತ್ತ ಮೇಲೆ ಶಾಂತಿಯಾಗಿ ಸೇರಬೇಕು ಮಣ್ಣಲ್ಲಿ

- Shivakumara S

13 May 2020, 10:07 am

ಬಾಂಧವ್ಯ

ಒಂದು ಕಣ್ಣು ಕಣ್ಣಲ್ಲ,ಬಂಧವೆಲ್ಲ ನಿಜವಲ್ಲ
ಅಂದ ಚಂದದ ಉಡುಗೆ ಅಂತರ್ಯವ ಬೆಳಗಲ್ಲ
ಔಂದಯ್ಯದ ಮಾತೆಲ್ಲ, ವಾತ್ಸಲ್ಯವ ತೋರಲ್ಲ
ಬೆಲ್ಲದ ಮಾತೆಲ್ಲ, ಒಳಿತು ಬಯಸುವುದಿಲ್ಲ
ನಗು ನಗುತಾ ಕೆಡುಕು ಬಯಸುವವರು ಬೇಕಿಲ್ಲ

- Shivakumara S

13 May 2020, 09:40 am

ಹೇ ಹುಡುಗಿ.. ❤❤

ಹೇ ಹುಡುಗಿ.. ❤❤ ನನ್ನ ಕಣ್ಣುಗಳ? ತುಂಬಾ❤ ನಿನ್ನದೇ ಪ್ರತಿಬಿಂಬ ನಿನ್ನ ಕಂಡ❤❤ ಕ್ಷಣದಿಂದ ಕನಸುಗಳ❤❤ ಆರಂಭ

- Hanumesh Yadav

13 May 2020, 09:28 am