Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುದ್ದು ಗೆಳತಿಯ ನೆನಪಲ್ಲಿ

ನನ್ನ ಮುದ್ದು ಹುಡುಗಿ ದೂರದಲ್ಲಿರಲಿ, ಹತ್ತಿರದಲ್ಲಿರಲಿ, ಒಂದೊಮ್ಮೆ ಬಂದೆನ್ನ ನೋಡಲಿ,
ಅವಳ ಹೃದಯದ ಗೂಡಿನಲ್ಲಿ,
ನನಗೊಂದು ಪುಟ್ಟ ಜಾಗವಿರಲಿ,
ಕಾದಿಹೇನು ನಾನಿಲ್ಲಿ,
ಅವಳನ್ನು ನಗಿಸಲು ,ಪ್ರೀತಿಸಲು ,ಮಾತನಾಡಲು,.
ಅವಳ ಮುದ್ದು ಮನಸ್ಸಾಗಲು,
ಅವಳಿಗಾಗಿ ಜೀವ ನೀಡಲು,
ಅವಳೇ ಜೀವವಾಗಿ❤️❤️❤️ 16vs7

- parashuramdoddamane

11 May 2020, 12:56 pm

ಸೂರ್ಯಚಂದ್ರ

ಮುಂಜಾವಿನ ಇಬ್ಬನಿಯ ತಂಪು
ಬೀರಿದೆ ಎಲ್ಲೆಡೆ ಅದರ ಕಂಪು
ಅದನೂಡಲು ಬಂದ ಹಕ್ಕಿಗಳು ಇಂಪಾದ
ಕಲರವ ಕಿವಿಗಳಿಗೆ ನೀಡಿದೆ ಇಂಪು

ಸೂರ್ಯನ ಅಪ್ಪುಗೆ ಕೈ ಚಾಚುವ ಸುಮಗಳು
ಹಸಿ ಬಿಸಿಲಿನ ಬೆಚ್ಚುಗೆ ಮೈ ಒಡ್ಡುವ ಶಿಶುಗಳು
ಹೊತ್ತು ಏರಿದಂತೆ ಸುಸ್ತಾಗುವ ಮನುಜರು
ನಮ್ಮೆಲ್ಲರ ಉರಿದುಂಬಿಸಿ ಪ್ರಚಲಿತವಾಗಿಸುವುದೆ ನಮ್ಮ ದಿನಕರನ ತಾಕತ್ತು

ರವಿಯ ಪ್ರಖರತೆಯಿಂದ ಪ್ರಜ್ವಲಿಸುವ ಶಶಿಯೇ
ನಿನ್ನ ಅಂದಕ್ಕೆ ಸಾಟಿ ಯಾರು
ಚಂದ್ರನ ಸೌಂದರ್ಯದ ಮುಂದೆ ಏನೂ ಇಲ್ಲ ಮಕ್ಕಳ ಮುದ್ದಿನ ಮಾವ..ಪ್ರೇಮಿಗಳ ಪ್ರೀತಿಯ ರಾಜ ಅವನೇ ಅರಸ ...

- RoopaGowtham

11 May 2020, 08:37 am

ಬೇಡಿಕೆ

 

ಎತ್ತ ಸಾಗಿದೆ ಈ ನನ್ನ ಪಯಣ
ಎತ್ತ ನೋಡಿದರತ್ತ ಕತ್ತಲೆಯ ಕಾನನ
ಚಿರ ನಿದ್ರೆಗೆ ಜಾರ ಬಯಸಿವೆ ನನ್ನೆರಡು ನಯನ
ವಿದಾಯ ಹೇಳಬಯಸಿದೆ ದುಗುಡ ತುಂಬಿದ ಮನ
ಸಾಕಪ್ಪಾ ಸಾಕು ಈ ಹಾಳು ಜೀವನ!

ಓ ಬದುಕೇ ,
ವಿದಾಯದ ವೇಳೆಯಲ್ಲಿ ನಿನಗೊಂದು ಕಾವ್ಯ ನಮನ
ಬದುಕೆಂಬ ಹೊತ್ತಿಗೆಯ ಕೊನೆಯ ಕವನ!

ಓ ಬದುಕೇ,
ನೀನೇಕಿಷ್ಟು ಕ್ರೂರಿ?
ನೀನೇಕಿಷ್ಟು ನಿಷ್ಠೂರಿ?
ನಿರಾಸೆಯ ಕಡಲಲಿ ಇನ್ನೆಷ್ಟು ದೂರ ಈಜಲಿ ನಾ
ದಡ ಸೇರುವ ಭರವಸೆಯಿಲ್ಲ
ನಿರಾಸೆಯ ಕಡಲ ದಡದಲ್ಲಿ
ಭರವಸೆಯ ಬೆಳಕಿದೆಯೆಂದು
ಹೇಗೆ ನಂಬಲಿ ನಾ?
ನಂಬಿಕೆಗೆ ಆದ ಗಾಯ ಮಾಗಿಲ್ಲ!

ಆಲೋಚನೆಗಳ ನಾಗಾಲೋಟಕ್ಕೆ
ಭಾವನೆಗಳ ತೊಳಲಾಟಕ್ಕೆ
ಉತ್ತರವಿಲ್ಲದ ಪ್ರಶ್ನೆಗಳ ಸುರಿಮಳೆಗೆ
ತತ್ತರಿಸಿ ಹೋಗಿರುವೆ ನಾ

ಆಶಾವಾದದ ಮುಖವಾಡ ತೊಟ್ಟ
ನಿರಾಶಾವಾದಿ ನಾ
ಮುಖವಾಡವಿಲ್ಲದ ಬದುಕ ಮತ್ತೇ ಬದುಕುವ ಬಯಕೆ
ಮತ್ತೇ ಗರ್ಭಕೆ ಹೋಗೋ ಬೇಡಿಕೆ

 

-ಅಚಿಸು, ತುಮಕೂರು

- ಅರೆಯೂರು ಚಿ. ಸುರೇಶ್

11 May 2020, 07:37 am

ದಶಕ ಗೆಳತಿ

ಅಂದೂ... ನಾ ನಿನ್ನ ನೋಡಿದ ಮೊದಲು ನೋಟದಲ್ಲಿ ತನು, ಮನ, ಧನ, ಎಲ್ಲವೂ ನೀ.. ನೆಂದೂ ನಿಧ೯ರಿಸಿ ಆಯ್ತು ಗೆಳತಿ... ನೀ ನೋಟದಲ್ಲಿ... ನಾ.. ಹೇಗೆ ಕಳೆದ ದಶಕಗಳ ಕಾಲ ಯೋಚಿಸ್ತ ಹೋರಟ... ನನಗೆ ನಂತರ ಗೊತ್ತಾಯಿತ್ತು. ನೀ... ದಶಕ ಹಿಂದೇ ದಶಕ ರಾಜ ಕೈ ಹಿಡಿದಿಯಂತಹ.. ಆದರೂ ಪರವಾಗಿಲ್ಲ... ಪ್ರೀತಿ ಅಮರ್.. ತ್ಯಾಗ ಮಧುರ.. ಇನ್ನೂ ನಾ.. ನು ನಿನ್ನ ಪ್ರೀತಿ ಗುಂಗಿನಲ್ಲಿರುವ ದಶಕದ ಪ್ರೇಮಿ... .... .............
..
..........ನಾಗರಾಜ್

- nagaraj Kattimani

10 May 2020, 08:47 pm

ಹನಿಗವನ

ನಾನೊಂದು ಪಡೆದೇ ಸರಕಾರಿ
ನೌಕರಿ ಅಲ್ಲಿ ಮಾಡೋನೂ
ಎಲ್ಲಾ ಅಧಿಕಾರಿ ನಾ ಮಾತ್ರ
ಅವನ ಆಧಿನಕಾರಿ,
ತಿಂಗಳ ಪೂರ್ತಿ
ಸಾಕಾಗುವುದಿಲ್ಲ ಶಾಲರಿ
ಅದಕ್ಕೀಗ ಮೈ ತುಂಬಾ ಸಾಲಾರಿ.

- VijaypratapRana

10 May 2020, 03:23 pm

ತಾಯಂದಿರಿಗೇಕೆ ಒಂದೇ ದಿನ

ತಾಯಂದಿರಿಗೇಕೆ ಒಂದೇ ದಿನ
ಅನುದಿನವು ಆಚಾರಿಸೋಣ ತಾಯಂದಿರ ದಿನ
ಹೊತ್ತಳಲ್ಲ ಗರ್ಭದಲ್ಲಿ ಇಟ್ಟು ನವಮಾಸ ನಮ್ಮನ್ನ,

ಕೊನೆವರೆಗೂ ಪ್ರೀತಿಸೋಣಾ
ಹೆತ್ತ ತಾಯಿಯ ಋಣವ ತೀರಿಸೋಣಾ,
ತನ್ನ ಕರುಳ ಚಿವುಟಿ ನೀಡಿದಳಲ್ಲ ನಮಗೆ ಜನನ
ನವಮಾಸ ಅನುಭವಿಸಿದಳಲ್ಲ ಅದೆಷ್ಟೋ ನೋವನ್ನ,

ತಾಯಂದಿರಿಗೇಕೆ ಒಂದೇ ದಿನ
ಅನುದಿನವು ಆಚಾರಿಸೋಣ ತಾಯಂದಿರ ದಿನ.

:- ವೀಣಾ ಲಿಂಗಣ್ಣ

- Veena

10 May 2020, 10:13 am

ತಾಯಿ ನಿನಗಿಲ್ಲ ಯಾರು ಸಮಾನ

ತಾಯಿ ನಿನಗಿಲ್ಲ ಯಾರು ಸಮಾನ
ನಿನಗೊಂದು ನನ್ನ ನಮನ
ತಾಯಿ ನಿನ್ನೊಡಲು ಆನಂದ ಸಾಗರ
ನಡೆ ನುಡಿ ಕಲಿಸಿದ ವಿದ್ಯಾ ಮಂದಿರ.

ಮಕ್ಕಳಾಗದಿದ್ದಾಗ ......
ಗುಡಿ ಗುಂಡಾರ ಸುತ್ತುತಿ
ಯಜ್ಞ - ಯಗಾದಿಗಳು ಮಾಡಿ
ಕೊನೆಗೆ ಆಸ್ಪತ್ರೆಗಳ ಮೆಟ್ಟಿಲು ಹತ್ತುತಿ.

ನಿನ್ನ ಒಡಲ ಒಳಗಿಂದ
ಕುಡಿ ಹೊರಬಂದಾಗ..... ನೀ
ಪಡುವ ಆನಂದ ಅಷ್ಟಿಷ್ಟಲ್ಲ..!
ಅದನ್ನ ಬಣ್ಣಿಸಲು ಪದಗಳೇ ಸೃಷ್ಟಿಯಲ್ಲಿಲ್ಲ.

ಸುಖ ದುಃಖ ಬಿರುನುಡಿಗೆ ಹೆದರದೆ
ನವ ಮಾಸ ಹೊತ್ತು ಹೆತ್ತವಳು
ಕುಡಿಗೆ (ಮಗು) ಕೆಡುಕಾದರೆ
ಹಗಲಿರುಳು ಅತ್ತವಳು.

ನೋವು ನಲಿವು ಅನುಭವಿಸಿ
ನೀಡಿದಿ ನಮಗಾನಂದ...
ಕುಟುಂಬದ ಒಳತಿಗೆ ಬದುಕೇ ಮೀಸಲಿಟ್ಟು
ಸಂಸಾರದ ದೋಣಿ ಸಾಗಿಸುವುದೇ ಚಂದ.

ನಿನ್ನ ಪ್ರೀತಿ, ಸಹನೆ, ಸಹಕಾರ - ಸಂಸ್ಕಾರ
ಮೌಂಟ್ ಎವರೆಸ್ಟ್ಗಿಂತ ಎತ್ತರ
ನಿನ್ನ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವೇ? ನಮ್ಮಲಿ ಇಲ್ಲ ಉತ್ತರ.
...............................................

- lakshman

10 May 2020, 09:56 am

ಅಮ್ಮನ ದಿನ ಪವಿತ್ರ ದಿನ

ಅಮ್ಮ ಎನ್ನುವ ಎರಡು ಪದಗಳು
ಕಷ್ಟ ನೋವು ಅರಿತ ಕಣ್ಣುಗಳು

ಅಮ್ಮ ಎನ್ನುವ ಈ ಎರಡು ಅಕ್ಷರ
ಪ್ರೀತಿ ಮಮತೆ ತೋರುವ ಚಿರಾಕ್ಷರ

ಅಮ್ಮ ಎನ್ನುವ ಈ ಶುದ್ಧ ನುಡಿಗಳು
ಸತ್ಯ ತ್ಯಾಗ ದ ಮತ್ತೊಂದು ರೂಪಗಳು

- Yesukumar

10 May 2020, 09:50 am

ಅಮ್ಮಾ......‌‌

ಅಮ್ಮ ಎಂದರೆ ಎಂತ ಆನಂದ ಮನಸ್ಸಿಗೆ
ಕೊನೆಯಾಗುವುದು ಹಲವಾರು ನೋವುಗಳಿಗೆ
ನಾ ಕಂಡಿಲ್ಲ ನಿಜವಾದ ದೇವರನ್ನು
ಇವಳಂತೆ ಇರಬಹುದು ಅವನು

ನಾವು ನೋಡಿದ ಮೊದಲ ಪದ ಇವಳು
ನಮ್ಮನ್ನು ಹೆತ್ತು ಹೊತ್ತು ಸಲುವವಳು
ನಮ್ಮ ನಗುವಿನಲ್ಲಿ ನಗುವಾಗುವಳು
ನಮ್ಮ ಕಣ್ಣೀರಿನಲ್ಲಿ ಕಣ್ಣೀರಾಗುವಳು

ನನ್ನವ್ವ ಅಂಬಾನಿಯ ಮಗಳಲ್ಲ
ನನ್ನವ್ವ ಟಾಟಾರ ಸಂಬಂದಿಯೂ ಅಲ್ಲ
ನಾವು ಕೇಳಿದ್ದು ಎಂದಿಗೂ ಇಲ್ಲ ಎಂದವಳಲ್ಲ
ಅವಾ ನಿನ್ನ ಪ್ರೀತಿಗೆ ಸರಿಸಾಟಿ ಯಾವುದಿಲ್ಲ

ತನ್ನ ಕಷ್ಟವನ್ನು ನಮ್ಮ ನಗುವಿನಲ್ಲಿ ಮರೆತಳು
ನಮ್ಮ ಮೇಲೆ ನೂರಾರು ಕನಸು ಕಟ್ಟಿ ಇಟ್ಟಳು
ನಾವು ಗೆದ್ದಾಗ ಖುಷಿಯಾಗುವಳು ಸೋತಾಗ
ಬೆನ್ನುತಟ್ಟುವಳು,,,,,
ಜನ್ಮದಾತೆ ನನ್ನ ಪಾಲಿನ ದೇವರಿವಳು.
Written By :- MS ಯಾದವ್.

- M S Yadav

10 May 2020, 08:06 am

ತಾಯಿ

ಮೊದಲು ತಾಯಿ ಅಳ್ತಾಇದ್ದಳು.‌‌ ‌ ಯಾಕೆ ಗೊತ್ತಾ ತನ್ನ ಮಗು. ‌ ‌ ‌‌ಊಟ ಮಾಡ್ತಾ ಇಲ್ಲ ಅಂತ. ಇವಾಗಲು ತಾಯಿ ಅಳ್ತಾನೆ ಇದ್ದಾಳೆ ‌ ‌ ‌ ‌ಯಾಕೆ ಗೊತ್ತಾ ತಾನು ಸಾಕಿದ ಮಗ. ಊಟ ಕೂಡ್ತಾ ಇಲ್ಲ ಅಂತ. ‌


‌‌

- Ramesh Myakal

10 May 2020, 07:29 am