Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರವನು...

ಯಾರೆ ಸಖೀ
ನಿನ್ನ ನಲ್ಲೆ ಎಂದವ..
ನಿನ್ನ ಬಳಿಗೆ ಬಂದು
ಮೆಲ್ಲ ಲೊಲ್ಲೆ ಹೊಡೆದವ..
ನೀಳ ಜಡೆಯ ಕೇಶದಲ್ಲಿ
ಮೊಲ್ಲೆಯನ್ನು ಇಟ್ಟವ...
ಹೇಳು ಸಖೀ ಯಾರವ
ನಿನ್ನ ಮನವ ಕದ್ದವ...

- - ಸಿದ್ದು ಕನ್ನಡಿಗ

09 May 2020, 08:59 pm

ಮತ್ತೆ ನಾಳೆ ಬಾ

ಮತ್ತೆ ನಾಳೆ ಬಾ
ಆ ಬಿಂಕ ಬಿನ್ನಾಣಗಳ
ನಡುವೆ ಕಳೆದು ಹೋಗಬೇಡ
ಕಣ್ಣೀರಿನ ಪನೀರಿನಲ್ಲಿ
ಮೈತೊಳೆದು ಮಲಗಬೇಡಾ
ಮತ್ತೆ ನಾಳೆ ಬಾ
ನಿನಗಾಗಿ ಕಾಯುತ್ತಿರುವೆ
ಕ್ಷಣಕ್ಷಣಕ್ಕೂ ಸಾಯುತ್ತಿರುವೆ
ನಿನ್ನ ನೆನಪಿನಲ್ಲಿಯೇ
ಆದರೆ ಬಂದು ಹೀಗೆ
ಕಾಡಬೇಡ.

- VijaypratapRana

09 May 2020, 08:39 pm

ಇಂತಿ ನಿನ್ನ ನೆನಪು

ಇಂದೇತಕೊ ಆ ಬರೆದ
ಕವಿತೆ ಹಾಡಾಗಿದೆ
ಬರೆದ ಪದಗಳೆಲ್ಲಾ ಒಂದಾಗಿ
ನನ್ನ ಹೃದಯ ಹಾಳಾಗಿದೆ
ನಿನ್ನ ನೆನಪಿನಲ್ಲಿಯೇ..

- VijaypratapRana

09 May 2020, 08:34 pm

ಬದುಕು

ಜಗತ್ತಿನಲ್ಲಿ ಪ್ರೀತಿ ಪ್ರೇಮ ಸಹಜ
ಆಕರ್ಷಣೆಎಂಬುದು ಪ್ರಕೃತಿ ಬಿತ್ತಿದ ಬೀಜ!

ಸೌಂದರ್ಯವೆಂಬುದು ಕಣಜ
ವರ್ಣಿಸಲು ಸಾಲದು ಪದ ಪುಂಜ!

ಬಣ್ಣಿಸಲು ಆಗುತ್ತಿಲ್ಲ ಸತ್ಯ ಅಸತ್ಯದ ನಿಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಮಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಸಜಾ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ನೈಜ
ನಾ ಕಾಣೆ ಇದರ ಸತ್ಯಂಸದ ನಿಜ!

ಇವುಗಳಿಗೆ ನೀಡಿದರೆ ನೀನು ರಜಾ
ನಿನ್ನ ಸುಂದರ ಬದುಕಿಗೆ ನೀನು ರಾಜ!

- Shivakumara S

09 May 2020, 06:32 pm

ಪ್ರೀತಿ ಪ್ರೇಮ

ನಿನಗೆ ಬಹಳ ಕಡು ಕೋಪ
ಆ ಕೋಪದಲ್ಲು ನೀನು ಮಿನುಗುವ ದೀಪ
ಚಂದ ನಿನ್ನ ಲಾವಣ್ಯ,ರೂಪ
ಈ ಚೆಲುವು ಬಹಳ ಅಪರೂಪ
ಗುಣದಲ್ಲಿ ನೀನು ಅಚ್ಚರಿಯ ದ್ವೀಪ
ಆ ಗುಣವೆಂಬ ದ್ವೀಪ ಕಂಡು ಬೆರಗಾದ ಈ ಭೂಪ
ನೀನು ಗಂಧರ್ವ ಕನ್ಯೆ ಸ್ವರೂಪ
ನೀನು ಇಲ್ಲದೆ ಇಂದು ನನ್ನ ಸಮೀಪ
ಪ್ರತಿ ಕ್ಷಣವು ನನ್ನೆದೆಯಲ್ಲಿ ಭೂಕಂಪ.

- Shivakumara S

09 May 2020, 05:34 pm

ರೈತ

ನಮ್ಮದೇಶದ ಬೆನ್ನೆಲುಬು ಇತ. ‌ ‌ ಸಕಲ ಜೀವ ರಾಶಿಗಳಿಗೆ ಅನ್ನ ನೀಡುತ. ಕೋಟಿ ಕೋಟಿ ಕೈ ಇಡಿದ‌ ಯೋಗಿ ಇತ‌. ‌
ಹಗಲಿರುಳು ಎನ್ನದೆ ದುಡಿಯುವಾತ. ‌‌ ಪ್ರೀತಿಯಿಂದ ‌ಎಲ್ಲರ ಹೂಟ್ಟೆ ತುಂಬಿಸುವಾತ‌ ಅವನೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಅನ್ನದಾತ‌ ರೈತ.......,.

- Ramesh Myakal

09 May 2020, 05:01 pm

ಅಮ್ಮ ಎಂದು ಹೆಸರು..

ನಾವು ನಕ್ಕೆವು ಅವಳು ನಕ್ಕಳು
ನಾವು ಅತ್ತೆವು ಅವಳು ಅತ್ತಳು
ಹಸಿವಾದಾಗ ಹಾಲುಣಿಸುತ್ತಿದ್ದಳು
ತನ್ನ ಕೈಯ ತುತ್ತ ತಿನಿಸುತ್ತಿದ್ದಳು..!

ಅವಳೇನು ಯಕ್ಷಿಣಿಯಲ್ಲ
ಅವಳೇನು ಸಂಗೀತ ಕಲಿತಿಲ್ಲ
ಸ್ವರ ಸಂಗತಿಗಳಂತೂ ಗೊತ್ತಿಲ್ಲ
ಆದರೂ ಹಾಡುತ್ತಿದ್ದಳು..!
ನಮಗಾಗಿ ಹಾಡುತ್ತಿದ್ದಳು, ಲಾಲಿಸಿ
ಚಂದಮಾಮನ ತೋರಿಸಿದಳು..!
ಹಾಗೇ ತಲೆಯ ನೆವರಿಸಿ ಹುಚ್ಚಿಯಂತೆ
ತಾರೆಗಳೊಂದಿಗೆ ಮಾತಾಡುತ್ತಿದ್ದಳು..!
ನಮಗಾಗಿ ಕೇವಲ ನಮಗಾಗಿ..!

ಅವಳು ಅಂಬಾನಿಯ ಮಗಳಲ್ಲ
ಟಾಟಾರ ಸಂಬಂಧಿಯೂ ಅಲ್ಲ
ಬಡತನದಲ್ಲೇ ಮಿಂದೆದ್ದವಳು
ಆದರೂ.. ನಾವು ಕೇಳಿದ್ದು
ಎಂದಿಗೂ ಇಲ್ಲ ಎನ್ನುತ್ತಿದ್ದಿಲ್ಲ
ಕಾಸಿಗೆ ಕಾಸು ಕೂಡಿಡುತ್ತಿದ್ದಳು
ತನಗಾಗಿ ಅಲ್ಲ ನಮ್ಮೆಳಿಗೆಗಾಗಿ
ನಮಗಾಗಿ ಕೇವಲ ನಮಗಾಗಿ..!

ಅವಳು ಯಾವ ವಿದ್ಯಾಲಯದಲ್ಲೂ
ಓದಿಲ್ಲ ಹಾಗೇ ಪಧವಿಯೂ ಪಡೆದಿಲ್ಲ
ಆದರೆ ಅಕ್ಷರಭ್ಯಾಸ ಮಾಡಿಸುತ್ತಿದ್ದಳು
ನಮಗೆ ಬೇಕು ಬೇಡ ಹೇಳುತ್ತಿದ್ದಳು
ಪ್ರೀತಿಯ ಮೌಲ್ಯವನು ಹೇಳುತ್ತಿದ್ದಳು
ಮೊದಲ ಗುರುವಾಗಿ ನಿಂತಿದ್ದಳು
ನಮಗಾಗಿ ಕೇವಲ ನಮಗಾಗಿ..!

ಅವಳೇ ಇಡೀ ಜಗದ ಉಸಿರು
ಅವಳಿಗೆ ಅಮ್ಮ ಎಂದು ಹೆಸರು..!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

09 May 2020, 07:24 am

ಭಗ್ನಪ್ರೇಮಿ

ನನ್ನವಳು ನನ್ನ ದೇವತೆ..!
ಬರೆಯುತ್ತಿರುವೆ ಅವಳ ಕುರಿತೆ..!
ಅವಳಿಂದ ಕವಿತೆ ಬರೆಯುವುದ ನಾ ಕಲಿತೆ..!!

ಅನೂಷ ಎಂಬ ಹುಡುಗಿ...!
ನನ ಹೃದಯ ಕದ್ದ ಬೆಡಗಿ....!
ಕುಳಿತಿಹಳು ನನಮಸಲಿ ಅಡಗಿ...!!

ಇಂದು ಆಗಿದೆ ಅವಳ ಮದುವೆ..!
ಆದರೂ ಅವಳ ನೆನಪಲೆ ನಾ ಇರುವೆ...!!

ಇಂತಿ ಭಗ್ನ ಪ್ರೇಮಿ

- Harish Gowda

09 May 2020, 12:35 am

ನಗುವಿಗಾಗಿ

ಬದುಕೆಲ್ಲ ಸವಿದು ಹೋಯಿತು
ಮತ್ಯಾರದೋ ನಗುವಿಗಾಗಿ
ಉಳಿದ ಬದುಕು ಬರುಡಾಯಿತು
ನಾಳೆಯ ಚಿಂತೆಯಲ್ಲಿ.
ಇಂದುಗಳೆಲ್ಲಾ ಕೆರಳುತ್ತಿವೆ
ಮತ್ಯಾರದೋ ಗುಂಗಿನಲ್ಲಿ

- VijaypratapRana

08 May 2020, 06:41 pm

ಶಾಯೇರಿ

ನೀ ಮೊಗದ ಮುಸುಕನ್ನು
ತೆರೆದು ನೋಡು
ಕಾದು ಕುಳಿತಿದ್ದನೊಬ್ಬ ದೇವದಾಸ
ಪ್ರೀತಿಯ ದಾಸನಲ್ಲನಿತ
ಆದರೂ ಈತನೊಬ್ಬ ದೇವಿದಾಸ.

- VijaypratapRana

08 May 2020, 06:34 pm